News

ಎಐ- ಚಾಲಿತ ಕೂಲಿಂಗ್ ಕ್ರಾಂತಿ ಆರಂಭಿಸುವ ಮುನ್ಸೂಚನೆ ನೀಡಿದ ಸ್ಯಾಮ್‌ ಸಂಗ್ ಇಂಡಿಯಾ

ಬೆಂಗಳೂರು:  ಎಐ ತಂತ್ರಜ್ಞಾನವು ಎಲ್ಲ ಕ್ಷೇತ್ರವನ್ನು ಆವರಿಸುತ್ತಿದ್ದು, ಇದೀಗ ಇದನ್ನು ಬಳಸಿಕೊಂಡು ಸ್ಯಾಮ್ ಸಂಗ್ ಕೂಲಿಂಗ್ ಉತ್ಪನ್ನಗಳನ್ನು ತಯಾರಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕ್ರಾಂತಿಗೆ ಸಜ್ಜಾಗಿದೆ. ಇದರ ಟೀಸರ್ ನ್ನು  ಬಿಡುಗಡೆ ಮಾಡಿದೆ. ಟೀಸರ್ ನೋಡಿದವರಿಗೆ ಆಧುನಿಕ ಮನೆಗಳಲ್ಲಿ ಆರಾಮದಾಯಕತೆ, ಬುದ್ಧಿವಂತ ತಂತ್ರಜ್ಞಾನ ಮತ್ತು ಇಂಧನ ದಕ್ಷತೆಯು ಹೇಗೆ ಹೊಸ ರೂಪ ಪಡೆಯಲಿವೆ ಎಂಬುದನ್ನು ತೋರಿಸಿಕೊಡುತ್ತಿದೆ.

ಇದು ಭವಿಷ್ಯದ ಎಐ ಎಸಿಗಳು ಬರಲಿವೆ ಎಂಬ ಸಂದೇಶದೊಂದಿಗೆ ಸ್ಯಾಮ್‌ಸಂಗ್ ಸಾಮಾನ್ಯ ಕೂಲಿಂಗ್ ವ್ಯವಸ್ಥೆಗಿಂತ ಭಿನ್ನವಾದ ಅತ್ಯಾಧುನಿಕ ಎಸಿ ತಂತ್ರಜ್ಞಾನವನ್ನು ಒದಗಿಸುವ ನಿರೀಕ್ಷೆಯನ್ನು ಮೂಡಿಸಿರುವುದರಲ್ಲಿ ಎರಡು ಮಾತಿಲ್ಲ. ಈ ಟೀಸರ್ ಸ್ಯಾಮ್‌ ಸಂಗ್‌ ನ ‘ಬೀಸ್ಪೋಕ್ ಎಐ ವಿಂಡ್‌ಫ್ರೀ’ ಏರ್ ಕಂಡಿಷನರ್ ಸರಣಿಯ ಮೇಲೆ ಬೆಳಕು ಚೆಲ್ಲುತ್ತಿದ್ದು, ಇದು ಸುಧಾರಿತ ಎಐ ತಂತ್ರಜ್ಞಾನ, ಪ್ರೀಮಿಯಂ ವಿನ್ಯಾಸ ಮತ್ತು ಸ್ಮಾರ್ಟ್ ಕನೆಕ್ಟಿವಿಟಿಯನ್ನು ಸಂಯೋಜಿಸಿ, ಭಾರತೀಯ ಹವಾಮಾನಕ್ಕೆ ತಕ್ಕಂತೆ ಅತ್ಯುತ್ತಮ ಕೂಲಿಂಗ್ ಅನುಭವವನ್ನು ನೀಡಲಿದೆ.

ವಿಂಡ್‌ಫ್ರೀ ಕೂಲಿಂಗ್ ಜೊತೆಗೆ, ಎಐ ಫಾಸ್ಟ್ ಮತ್ತು ವಿಂಡ್‌ ಫ್ರೀ ಕೂಲಿಂಗ್+, ಎಐ ಎನರ್ಜಿ ಮೋಡ್, ಪ್ರಿವೆಂಟಿವ್ ಮೇಂಟೆನೆನ್ಸ್ ಮತ್ತು ಸ್ಮಾರ್ಟ್‌ ಥಿಂಗ್ಸ್ ಸಂಯೋಜನೆಯನ್ನು ಹೊಂದಿರಲಿದೆ. ಇವೆಲ್ಲವೂ ಅತ್ಯುತ್ತಮ ಕಾರ್ಯಕ್ಷಮತೆ, ಉತ್ತಮ ಇಂಧನ ನಿರ್ವಹಣೆ ಮತ್ತು ಸುಲಭ ನಿಯಂತ್ರಣ ಸೌಕರ್ಯವನ್ನು ಒದಗಿಸಲಿವೆ. ಮುಂದಿನ ದಿನಗಳಲ್ಲಿ ಇನ್ನೇನೆಲ್ಲ ಕ್ರಾಂತಿ ಆಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

admin
the authoradmin

ನಿಮ್ಮದೊಂದು ಉತ್ತರ

Translate to any language you want