ಮೈಸೂರು: ಕಬಿನಿ, ಬಂಡಿಪುರ, ನಾಗರಹೊಳೆ ವ್ಯಾಪ್ತಿಯಲ್ಲಿ ಅಕ್ರಮ ಕಟ್ಟಡಗಳ ತೆರವಿಗೆ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿ ಎದರು ಕರ್ನಾಟಕ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಹಳ್ಳಿ ಕೆರೆ ಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ಚುನಾಯಿತ ಪ್ರತಿನಿಧಿಗಳ. ಭ್ರಷ್ಟ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಅರೆಬೆತ್ತಲೆ ಪ್ರತಿಭಟನೆ ನಡೆಸಲಾಯಿತಲ್ಲದೆ, ಉಳಿಸಿ ಉಳಿಸಿ ಕಬಿನಿ ಬಂಡಿಪುರ ನಾಗರಹೊಳೆ ಉಳಿಸಿ.. ಕಾಡನ್ನು ಉಳಿಸಿ, ನಾಡನ್ನು ರಕ್ಷಿಸಿ ಘೋಷಣೆಗಳನ್ನು ಕೂಗಿ ಗಮನಸೆಳೆಯಲಾಯಿತು.
ಈ ವೇಳೆ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಹಳ್ಳಿ ಕೆರೆ ಹುಂಡಿ ಭಾಗ್ಯರಾಜ್ ಅವರು, ಕಳೆದ ಒಂದು ತಿಂಗಳ ಹಿಂದೆ ಅಕ್ರಮ ಕಟ್ಟಡಗಳು ಮತ್ತು ಬಾರ್ ರೆಸ್ಟೋರೆಂಟ್ ಮತ್ತು ಹೋಟೆಲ್ ಗಳನ್ನು ರೈತ ಮುಖಂಡರು ಮತ್ತು ಅಧಿಕಾರಿಗಳ ಜಂಟಿ ಸರ್ವೆ ಮೂಲಕ ಅಕ್ರಮಗಳನ್ನು ಕಂಡುಹಿಡಿಯಬೇಕೆಂದು ಒತ್ತಾಯಿಸಿ ಸದರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಹಕ್ಕು ಒತ್ತಾಯವನ್ನು ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಸಲಾಗಿತ್ತು.
ಈ ಒತ್ತಾಯಕ್ಕೆ ಮಣಿದ ಪ್ರಾದೇಶಿಕ ಆಯುಕ್ತರು ಚಾಮರಾಜನಗರದ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಕಳೆದ 25 ದಿನಗಳ ಹಿಂದೆ ಸಭೆ ನಡೆಸಿ ಎಲ್ಲಾ ಅಧಿಕಾರಿಗಳಿಗೂ ಸೂಚನೆ ನೀಡಿ 10 ದಿನಗಳವರೆಗೆ ಸಮರ್ಪಕ ವರದಿ ನೀಡಬೇಕೆಂದು ಸೂಚಿಸಿದ್ದರು. ಆದರೂ ಕೂಡ ಇಲ್ಲಿಯ ತನಕ ಯಾವುದೇ ವರದಿಯನ್ನು ಬಹಿರಂಗಪಡಿಸದೆ ಯಾವುದೇ ಅಕ್ರಮಗಳ ಬಗ್ಗೆ ಬಹಿರಂಗವಾಗಿ ತೆರವುಗೊಳಿಸದೆ ನೋಟಿಸು ಸಹ ನೀಡದೆ ಮೌನವಹಿಸಿರುವುದನ್ನು ಖಂಡಿಸಿದರು.
ರೈತ ಮುಖಂಡರ ಜೊತೆ, ಜಂಟಿ ಸರ್ವೆಗೂ ಕ್ರಮ ಕೈಗೊಳ್ಳದ ಅಧಿಕಾರಿಗಳೇ ನಡೆಯನ್ನು ಖಂಡಿಸಿ ಅರಬೆತ್ತಲೆ ಪ್ರತಿಭಟನೆ ನಡೆಸಲಾಗಿದೆ. ತಕ್ಷಣ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ನಾವು ನೀಡಿರುವ ರೈತ ಹಕ್ಕು ಒತ್ತಾಯಗಳಿಗೆ ಯಾವುದೇ ಅಕ್ರಮ ನಡೆದಿಲ್ಲ ಎಂದು ಬರವಣಿಗೆ ಮೂಲಕ ನೀಡಲಿ ಎಂದು ಆಗ್ರಹಿಸಿದರು ಇಲ್ಲವಾದರೆ ತಮ್ಮಲ್ಲಿ ತನಿಖೆ ಮತ್ತು ವರದಿ ತಯಾರು ಮಾಡುವಲ್ಲಿ ರಾಜಕೀಯ ಹಸ್ತಕ್ಷೇಪವಿದ್ದರೆ ಸರ್ಕಾರಕ್ಕೆ ಪತ್ರ ಬರೆದು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಆದೇಶ ಮಾಡಲು ಒಂದು ಜಂಟಿ ಸಮಿತಿಯನ್ನು ಅಧಿಕಾರಿಗಳು ಕೋರಲಿ ಎಂದು ಸಲಹೆ ನೀಡಿದರು.

ಮೈಸೂರು ಚಾಮರಾಜನಗರ ಜಿಲ್ಲೆಯ ವ್ಯಾಪ್ತಿಯ ಸುಮಾರು 50,000ಕ್ಕೂ ಹೆಚ್ಚು ಕೃಷಿ ಪಂಪ್ ಸೆಟ್ ಗಳಿಗೆ ಸರ್ಕಾರ ಆದೇಶದಂತೆ ಸಮರ್ಪಕ ವಿದ್ಯುತ್ ದೊರೆಯುತ್ತಿಲ್ಲ ಹಾಗೂ ಅಕ್ರಮ ಸಕ್ರಮ ಜಾರಿ ಆಗುತ್ತಿಲ್ಲ ಸರ್ಕಾರದ ಸೋಲಾರ್ ಯೋಜನೆಯ ಸಮರ್ಪಕವಾಗಿಯೂ ಕೂಡ ಜಾರಿಯಾಗುತ್ತಿಲ್ಲ ಇದರಿಂದ ಕೃಷಿ ಚಟುವಟಿಕೆ ಸಾಕಷ್ಟು ಕುಂಠಿತವಾಗುತ್ತದೆ ಮೈಸೂರು ಚಾಮರಾಜನಗರ ಜಿಲ್ಲೆಯ ಕೆರೆಕಟ್ಟೆಗಳಿಗೆ ನದಿ ಮೂಲದಿಂದ ನೀರು ತುಂಬಿಸುವ ಯೋಜನೆಗಳು ಹೆಚ್ಚುವರಿ ಯಾಗಿ ಕ್ರಮ ನಿರ್ವಹಿಸುತ್ತಿಲ್ಲ ಹಾಲಿಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಯಂತ್ರಗಳನ್ನು ಸ್ಥಗಿತಗೊಳಿಸಿದ್ದಾರೆ.
ಬೇಸಿಗೆಯಲ್ಲಿ ಜಾನುವಾರುಗಳು ಮತ್ತು ಅಂತರ್ಜಲ ವೃದ್ಧಿಗಾಗಿ ಮಾಡಿರುವ ಯೋಜನೆಯನ್ನು ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ. ಅಲ್ಲದೆ, ಯೋಜನೆಯ ಆಜುಬಾಜಿನಲ್ಲಿ ಇರುವ ಒಂದು ಅಥವಾ ಎರಡು ಕಿಲೋಮೀಟರ್ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸುವಲ್ಲಿ ಕೂಡ ಅಧಿಕಾರಿಗಳು ವಿಫಲರಾಗಿದ್ದಾರೆ ಆದ್ದರಿಂದ ಯೋಜನೆಯನ್ನು ವಿಸ್ತಾರ ಮಾಡಲು ಕ್ರಮ ಕೈಗೊಳ್ಳಬೇಕೆಂದು ಒತಾಯಿಸಿದರು
ಪ್ರತಿಭಟನೆಯಲ್ಲಿ ಡಾ ಗುರುಪ್ರಸಾದ್, ಕೆರೆಹುಂಡಿ ರಾಜಣ್ಣ. ಹಾಲಿನ ನಾಗರಾಜ್, ವಳಗೆರೆ ಗಣೇಶ್, ಅಂಡುವಿನಹಳ್ಳಿ ಎಚ್ಎಸ್ ರಾಜು, ಮಾಡ್ರಳ್ಳಿ ಮಾದೇವಪ್ಪ, ಹಿರಿ ಕಾಟಿ ಚಿಕ್ಕಣ್ಣ, ಮಯೂರ್ ಮಹೇಂದ್ರ. ಸತೀಶ್ ಎಚ್ ಗುಂಡ್ಲಾ ಚಿದಂಬರ. ಮುದ್ದಳ್ಳಿ ಮಧು, ದೇವಿರಮ್ಮನಹಳ್ಳಿ ಹುಂಡಿ ವೈಟ್ ನವೀನ, ಹೊನ್ನೇಗೌಡನಳ್ಳಿ ಮಹೇಶ್. ಮುಕಡಹಳ್ಳಿ ರಾಜು ಪುಟ್ಟ ಮಲ್ಲೆಗೌಡ, ಮಹೇಶ್, ದೇವನೂರು ನಾಗೇಂದ್ರ, ಸ್ಯಾನಂಡರಳ್ಳಿ ಬಸವರಾಜು, ನಾಗರಾಜಪ್ಪ, ಊರ್ದಳ್ಳಿ ರಾಮಣ್ಣ, ಕಿರಲಿಪುರ ಶ್ರೀಕಂಠ ಮಾದೇವಪ್ಪ ಸೇರಿದಂತೆ ರೈತರು ಪಾಲ್ಗೊಂಡಿದ್ದರು.








