ಕೆ.ಆರ್.ನಗರ(ಜಿಟೆಕ್ ಶಂಕರ್): ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ತಾಲೂಕಿನ ಬಾಲೂರು ಹೊಸಕೊಪ್ಪಲು ಗ್ರಾಮದ ಗ್ರಾಮಸ್ಥರು ಅಯ್ಯಪ್ಪಸ್ವಾಮಿ ಉತ್ಸವವನ್ನು ಅತ್ಯಂತ ಸಂಭ್ರಮದಿಂದ ನಡೆಸಿದರು.
ಗ್ರಾಮದ ನೂರಕ್ಕೂ ಹೆಚ್ಚು ಅಯ್ಯಪ್ಪ ಮಾಲಾಧಾರಿಗಳು ಕಾವೇರಿ ನದಿಯಲ್ಲಿ ಉತ್ಸವ ಮೂರ್ತಿಯನ್ನು ಸ್ವಚ್ಚಗೊಳ್ಳಿಸಿ ಅಲಂಕೃತಗೊಂಡ ಬೆಳ್ಳಿ ರಥದಲ್ಲಿ ಕೂರಿಸಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆ ಮಾಡಿದರು.
ಅಯ್ಯಪ್ಪ ಮಾಲಾಧಾರಿಗಳು ಅಯ್ಯಪ್ಪ ಸ್ವಾಮಿಯ ಭಜನೆ ಮಾಡುತ್ತಾ ಹೊರಟ ಮೆರವಣಿಗೆ ಗ್ರಾಮದಲ್ಲೆಡೆ ಭಕ್ತಿ ಭಾವದಿಂದ ಮಿಂದೇಳುವಂತೆ ಮಾಡಿತು, ಗ್ರಾಮದ ಪ್ರತಿ ಮನೆಗಳಲ್ಲೂ ವಿಶೇಷ ಪೂಜೆ ಸಲ್ಲಿಸಿ ತಮ್ಮ ಇಷ್ಟಾರ್ಥ ನೆರವೇರುವಂತೆ ಪ್ರಾರ್ಥನೆ ಸಲ್ಲಿಸಿದರಲ್ಲದೆ ಸಾಲುಪಂಕ್ತಿ ಅನ್ನದಾನ ದಾಸ್ತೋಹ ನಡೆಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ರಾತ್ರಿ ನಡೆದ ಕೋಂಡ್ಯೋತ್ಸವದಲ್ಲಿ ನೂರಾರು ಮಂದಿ ಅಯ್ಯಪ್ಪ ಭಕ್ತರು ಮತ್ತು ಮಾಲಾಧಾರಿಗಳು ಕೋಂಡ ತುಳಿದು ತಮ್ಮ ಭಕ್ತಿಯನ್ನು ಮೆರೆದರು. ಉತ್ಸವದ ಅಂಗವಾಗಿ ಎರಡು ಗ್ರಾಮಗಳನ್ನು ತರಿಳು ತೋರಣಗಳಿಂದ ಅಲಂಕರಿಸಿದ್ದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಸೇರಿದಂತೆ ಸುತ್ತಮುತ್ತಲ ಗ್ರಾಮದವರು ಹಾಜರಿದ್ದರು.
ಈ ವೇಳೆ ಮಾತನಾಡಿದ ಅಯ್ಯಪ್ಪ ಮಾಲಾಧಾರಿಗಳು ಪ್ರತಿ ವರ್ಷದಂತೆ ಈ ವರ್ಷವೂ ಮಾಲೆ ಧರಿಸಿದ್ದು ನಾವುಗಳು ಸುಮಾರು 30 ವರ್ಷಗಳಿಂದ ಶಬರಿ ಮಲೆಗೆ ಹೋಗಿ ಸ್ವಾಮಿ ದರ್ಶನ ಪಡೆಯುತ್ತಿದೆವು ಈ ಬಾರಿ ವಿಶೇಷ ಎಂದರೆ ಸ್ವಾಮಿಯ ಉತ್ಸವ ಮೂರ್ತಿಯನ್ನು ಗ್ರಾಮದ ಎಲ್ಲಾ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಅನ್ನಸಂರ್ಪಣೆ ನೆರವೇರಿಸಿದ್ದಲ್ಲದೆ ಕೊಂಡೋತ್ಸವ ಮಾಡಿದ್ದು ಮುಂದಿನ ದಿನಗಳಲ್ಲಿ ಇದನ್ನು ಮುಂದುವರೆಸಿಕೊಂಡು ಹೋಗುವುದಾಗಿ ತಿಳಿಸಿದರು.








