ನಾಟಕರತ್ನ ಗುಬ್ಬಿವೀರಣ್ಣರ ಪತ್ನಿ ಮೇರು ನಟಿ ಬಿ.ಜಯಮ್ಮರವರ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಮಾಹಿತಿ..

15ನೇ ನವೆಂಬರ್ 1915ರಲ್ಲಿ ಬೆಂಗಳೂರಿನ ಮಧ್ಯಮವರ್ಗ ಕುಟುಂಬದಲ್ಲಿ ಜನಿಸಿದ ಬಿ.ಜಯಮ್ಮ ಕಾಲಕ್ರಮೇಣ ಕೈಬೀಸಿ ಕರೆದ ರಂಗಭೂಮಿ ಮತ್ತು ಸಿನಿರಂಗಕ್ಕೆ ಓರ್ವ ಅವಶ್ಯ ಕಲಾವಿದೆಯಾಗಿ ಪಾದಾರ್ಪಣೆಗೈದರು. ಕಡಿಮೆ ಅವಧಿಯಲ್ಲೆ ಮೇರುನಟಿ ಎನಿಸಿಕೊಳ್ಳುವ ಮುನ್ನ 9ನೆ ವಯಸ್ಸಿಗೆ ತಾರಾಲೋಕದ ನಕ್ಷತ್ರವಾಗಿ ಮಿನುಗಿ ಮೆರೆದರು. ಆಟವಾಡುತ್ತ ಪಾಠ ಕಲಿವಂಥ ಎಳೆಯ ವಯಸ್ಸಿಗೆ ಕಲಾಸೇವೆ ಪ್ರಾರಂಭಿಸಿದ ಅತ್ಯಂತ ಕಿರಿವಯಸ್ಸಿನ ಈ ಸರಸ್ವತಿಪುತ್ರಿ 15ನೇ ವಯಸ್ಸಿಗೆ ಮೂಕಿ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿ ಮಹಾಸಾಧಕಿ ಎನಿಸಿದ್ದಾಗಲೇ ವಿಧಿ ಲಿಖಿತದಂತೆ ನಾಟಕರತ್ನ ಗುಬ್ಬಿವೀರಣ್ಣರನ್ನು ವಿವಾಹವಾದರು.
ಇದನ್ನೂ ಓದಿ: ಚಂದನವನದಿಂದ ಮರೆಯಾದ ಅಭಿನಯ ಸರಸ್ವತಿ ಡಾ.ಬಿ.ಸರೋಜಾದೇವಿ…
ಶ್ರೀಮತಿ ಗುಬ್ಬಿವೀರಣ್ಣ ಆದ ನಂತರವೂ ತಮ್ಮ ಕಲಾಸೇವೆ ತಟಸ್ಥಗೊಳಿಸದೆ ನಾಟಕ ಸಿನಿಮಾದಲ್ಲಿ ನಟಿಸುವುದನ್ನು ಮುಂದುವರೆಸಿ ಅಪ್ರತಿಮ ಸೇವೆಗೈದು ಸಾಧಕಿಯಾದರು. ವೈಯಕ್ತಿಕ ಜೀವನ ಮತ್ತು ವೃತ್ತಿಜೀವನ ಎರಡನ್ನೂ ಹೊಂದಿಸಿಕೊಂಡು ಮತ್ತು ಪತಿಯಿಂದಲೂ ಬೆಂಬಲ ಪ್ರೋತ್ಸಾಹ ದೊರಕಿಸಿಕೊಂಡು ಸಾಧ್ವಿಗೃಹಿಣಿ ಎನಿಸಿಕೊಂಡರು.
ಜಯಮ್ಮನವರ ಮೊಟ್ಟಮೊದಲ ವಾಕ್ಚಿತ್ರ ಕನ್ನಡದ “ಸತಿಸುಲೋಚನ”(1934). ಆದರೆ ಇದಕ್ಕೂ ಮುನ್ನ ಎರಡು ಮೂಕಿ ಚಿತ್ರಗಳಲ್ಲೂ 1935ರಲ್ಲಿ ತೆರೆಕಂಡ “ಸದಾರಮೆ” ಚಿತ್ರದಲ್ಲೂ ಪ್ರಮುಖ ಪಾತ್ರ ನಿರ್ವಹಿಸಿದರು. ಸಿನಿಮಾ ಹೀರೋಯಿನ್ನಾದ ನಂತರವೂ ತಾವು ಬಣ್ಣದ ಲೋಕಕ್ಕೆ ಬರಲು ಭಾಗ್ಯದ ಬಾಗಿಲು ತೆರೆದ ರಂಗಭೂಮಿಯನ್ನು ಮರೆಯದೆ ಸದಾ ಋಣಿ ಆಗಿದ್ದರು. ನೂರಾರು ನಾಟಕದಲ್ಲಿ ಅಭಿನಯಿಸಿ 20ಕ್ಕೂ ಹೆಚ್ಚು ಕನ್ನಡ ಚಿತ್ರದಲ್ಲೂ 6 ಭಾಷೆಯ ವಿವಿಧ ಚಿತ್ರಗಳಲ್ಲೂ ನಟಿಸಿ ದಾಖಲೆ ಸೃಷ್ಟಿಸಿದರು. ಶ್ರೇಷ್ಠ ಅಭಿನೇತ್ರಿ ಎಂದು ಹಲವು ಪ್ರಶಸ್ತಿ ಸನ್ಮಾನ ಪಡೆದ ಕೀರ್ತಿಗೂ ಭಾಜನರಾದರು.
ಇದನ್ನೂ ಓದಿ: ಚಂದನವನದಲ್ಲಿ ಮಿಂಚಿ ಮರೆಯಾದ ಹಿರಿಯ ನಟಿ ಕಮಲಾಬಾಯಿರವರ ಬಗ್ಗೆ ನಿಮಗೆಷ್ಟು ಗೊತ್ತು?
ಗುಬ್ಬಿವೀರಣ್ಣನವರ ಮೂವರು ಪತ್ನಿಯರಲ್ಲಿ ಒಬ್ಬರಾಗಿದ್ದ ಬಿ.ಜಯಮ್ಮನವರ ಮಕ್ಕಳು, ಮೊಮ್ಮಕ್ಕಳು ಸಹ ಚಂದನವನದ ಖ್ಯಾತ ಕಲಾವಿದರಾದರು. ನಟಿ, ಹಿನ್ನೆಲೆಗಾಯಕಿ, ಜಾನಪದತಜ್ಞೆ, ರಂಗಾಯಣದ ಅಧಿಕಾರಿ ಬಿ.ಜಯಶ್ರೀ, ನಟಿ ಬಿ.ಸುಂದರಶ್ರೀ ಹಾಗೂ ಗೃಹಿಣಿ ಬಿ.ಶಿವಶ್ರೀ (ಖ್ಯಾತ ನಟ-ನಿರ್ದೆಶಕ ಪ್ರೀತಂಗುಬ್ಬಿ ತಾಯಿ) ಮುಂತಾದವರು ಇವರ ಕಂದಮ್ಮಗಳು.1980ರಲ್ಲಿ ಕರ್ನಾಟಕ ಸರ್ಕಾರದ ವಿಧಾನ ಪರಿಷತ್ ಸದಸ್ಯೆ[ಎಂಎಲ್‍ಸಿ]ಆಗಿ ಅಮೋಘ ಸೇವೆ ಸಲ್ಲಿಸಿದರು. ಕಲಾವಿದ ಕುಟುಂಬದ ಪ್ರತಿಭಾವಂತ ಹಿರಿಯನಟಿ ಹಾಗೂ ಗಾಯಕಿ ಬಿ.ಜಯಮ್ಮ 20.12.1988ರಂದು ತಮ್ಮ 73ನೇ ವಯಸ್ಸಿಗೆ ಬೆಂಗಳೂರಿನಲ್ಲಿ ವಿಧಿವಶರಾದರು.
ಬಿ.ಜಯಮ್ಮ ನಟಿಸಿದ ಚಿತ್ರಗಳು ಹೀಗಿವೆ.. 1 ಹಿಸ್ ಲವ್ ಅಫೇರ್: ಇಂಗ್ಲಿಷ್ ಸೈಲೆಂಟ್ ಫಿಲಂ/1931, 2 ಹರಿಮಾಯ (1932,ಮೂಕಿಚಿತ್ರ), 3 ಸದಾರಮೆ(1935), 4 ಗುಲೇಬಾಕಾವಲಿ (1938,ಪಂಜಾಬಿ-ಹಿಂದಿ), 5 ಸುಭದ್ರಾ(1941), 6 ಜೀವನನಾಟಕ (1942), 7 ಬರ್ತೃಹರಿ(1944,ತಮಿಳು), 8 ಹೇಮರೆಡ್ಡಿಮಲ್ಲಮ್ಮ (1945), 9 ಸ್ವರ್ಗಸೀಮಾ (1945,ತೆಲುಗು), 10 ಲವಂಗಿ (1946,ತಮಿಳು), 11 ತ್ಯಾಗಯ್ಯ (1946,ತೆಲುಗು), 12 ಬ್ರಹ್ಮರಥಂ (1947,ತೆಲುಗು), 13 ನಾಟ್ಯರಾಣಿ (1947,ತಮಿಳು), 14 ಮಂಗಯರಕ್ಕರಸಿ (1949,ತಮಿಳು).
ಇದನ್ನೂ ಓದಿ: ಇದು ಮೈಸೂರಿನ ನಟಿಯಾಗಿದ್ದ ಎಂ. ಜಯಶ್ರೀರವರ ಬಣ್ಣದ ಬದುಕಿನಾಚೆಗಿನ ಕಥೆ…
15 ರಾಜಾವಿಕ್ರಮ (1950,ಕನ್ನಡ-ತಮಿಳು), 16 ಮಂತ್ರದಂಡಂ (1951,ತೆಲುಗು), 17 ಕಾರ್ಕೋಟ್ಟೈ (1954,ತಮಿಳು), 18 ಗುಮಾಸ್ತ (1953,ತಮಿಳು), 19 ಗುಣಸಾಗರಿ (1953), 20 ಅಣ್ಣತಂಗಿ (1958), 21 ಕರಪ್ಪುಕ್ಕರಸಿ [1960,ತಮಿಳು), 22 ಮಾವನ ಮಗಳು (1965), 23 ಬಾಲರಾಜನಕಥೆ (1965), 24 ಪ್ರೇಮಮಯಿ (1966), 25 ಇಮ್ಮಡಿಪುಲಿಕೇಶಿ (1967), 26 ಅಣ್ಣತಮ್ಮ (1968), 27 ಬೇಡಿಬಂದವಳು (1968), 28 ಮುಕ್ತಿ(1970), 29 ನನ್ನತಮ್ಮ (1970), 30 ಸಾಕ್ಷಾತ್ಕಾರ (1971), 31 ಪುನರ್ಮಿಲನ (1977), 32 ಮಿಥುನ (1987), 33 ಸಾವಿರಮೆಟ್ಟಿಲು (2006), 34 ಬಂಧಮುಕ್ತ (2007)