ಬಹುಭಾಷಾ ನಟಿ, ಅಭಿನೇತ್ರಿ ಬಿ.ಸರೋಜಾ ದೇವಿ ನಮ್ಮನ್ನು ಅಗಲಿದ್ದಾರೆ.. ಇದು ಚಂದವನದ ಮಹಾತಾರೆಯೊಂದು ಮರೆಯಾದ ಅನುಭವವಾಗುತ್ತಿದೆ. ಕನ್ನಡ ಚಿತ್ರರಂಗದ ನಟಿಯರಲ್ಲಿ ಉತ್ತುಂಗದ ಸ್ಥಾನದಲ್ಲಿ ನಿಂತಿರುವ ಅವರ ಸಾಧನೆಯನ್ನು ಇನ್ಯಾರು ಮಾಡಲಾರರು ಎನ್ನುವುದು ಅಷ್ಟೇ ಸತ್ಯ.. ಹಮ್ಮು ಬಿಮ್ಮು ಇಲ್ಲದೆ ಜೀವನುದ್ದಕ್ಕೂ ಎಲ್ಲರ ಒಡನಾಟದಲ್ಲಿದ್ದ ಅವರು ಇವತ್ತು ಮರೆಯಾಗಿದ್ದಾರೆ. ಇನ್ಮುಂದೆ ಮಾತನಾಡುವುದು ಅವರಲ್ಲ… ಅವರ ವ್ಯಕ್ತಿತ್ವ ಮತ್ತು ಸಾಧನೆ… ಇಲ್ಲಿ ಅವರ ಸಿನಿಮಾ ಬದುಕನ್ನು ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ ಅವರು ತೆರೆದಿಟ್ಟಿದ್ದಾರೆ…
ಬ್ರಿಟಿಷ್ ಆಡಳಿತವಿದ್ದ ಭಾರತದ ಮೈಸೂರು ಸಾಮ್ರಾಜ್ಯದ ಬೆಂಗಳೂರು ಜಿಲ್ಲೆ ಚೆನ್ನಪಟ್ಟಣದ ಒಕ್ಕಲಿಗರ ಕುಟುಂಬದಲ್ಲಿ ದಿನಾಂಕ 7ನೇ ಜನವರಿ 1938ರಂದು ಜನಿಸಿದರು. ಇವರ ಹುಟ್ಟು ಹೆಸರು ಸರೋಜ. ಇವರ ತಂದೆ ಭೈರೇಗೌಡರು ಕೃಷಿ ಕುಟುಂಬದ ರೈತನಾದರೂ ಮೈಸೂರಿನ ಪೊಲೀಸ್ ಇಲಾಖೆ ಉದ್ಯೋಗಿ, ತಾಯಿ ಮಹಾಸಾಧ್ವಿ ಮಲ್ಲಮ್ಮ ಉರುಫ್ ರುದ್ರಮ್ಮ, ಗೃಹಿಣಿ. ಈ ಆದರ್ಶ ದಂಪತಿಯ ನಾಲ್ಕನೇ ಪುತ್ರಿ. ಮಗಳು ಡ್ಯಾನ್ಸರ್-ಕಂ-ಗ್ರ್ಯಾಜುಯೆಟ್ ಆಗಬೇಕೆಂಬುದೇ ಇವರ ತಂದೆ ತಾಯಿಯವರ ಮಹದಾಸೆ ಆಗಿತ್ತು. ಬಾಲ್ಯದಿಂದಲು ಬಲುಚೂಟಿ, ಧೈರ್ಯಶಾಲಿ ಹಾಗೂ ಬುದ್ಧಿವಂತೆ.
ತಮ್ಮ ಕುಟುಂಬದ ಒಳಗೆ- ಹೊರಗೆ ಎಲ್ಲರ ಅಚ್ಚುಮೆಚ್ಚಿನ ಹುಡುಗಿ. ವಿದ್ಯಾರ್ಥಿ ಜೀವನದಲ್ಲಿ ಪಠ್ಯ ಚಟುವಟಿಕೆ ಮಾತ್ರವಲ್ಲದೆ ಪಠ್ಯೇತರ ಚಟುವಟಿಕೆಯಲ್ಲು ಮುಂದಿದ್ದ ಈಕೆ ಸಂಘಜೀವಿ ಸ್ನೇಹಜೀವಿ ಗಟ್ಟಿಧ್ವನಿಯ ಕರುಣಾಮಯಿ. ನೃತ್ಯ-ನಟನೆಗೆ ತಂದೆಯವರಿಂದ ಮಾತ್ರ ಪೂರ್ಣ ಪ್ರೋತ್ಸಾಹ ದೊರಕಿದರೂ ತಾಯಿ ರುದ್ರಮ್ಮನವರಿಂದ ಕಟ್ಟಾಜ್ಞೆ ಇತ್ತು. ಯಾವ ಕಾರಣಕ್ಕೂ ಎಂಥ ಸಂದರ್ಭದಲ್ಲೂ ಈಜುಡುಗೆ ಸ್ಲೀವ್‍ಲೆಸ್- ಟಾಪ್ ಲೆಸ್ ಡ್ರೆಸ್ ಧರಿಸಲೇ ಬಾರದೆಂಬ ಖಡಕ್ ಸೂಚನೆ. ಹೀಗಾಗಿ ಬಿ.ಸರೋಜಾದೇವಿ ತಮ್ಮ ಜೀವಮಾನದಲ್ಲಿ ಒಮ್ಮೆಯೂ ತಾಯಿಯ ಆದೇಶವನ್ನು ಮೀರಲೇಇಲ್ಲ! ಇವರ 12ನೇ ವಯಸ್ಸಲ್ಲಿದ್ದ ಕಲಾಪ್ರತಿಭೆ ಗುರುತಿಸಿದ ನಿರ್ಮಾಪಕ- ನಿರ್ದೇಶಕ ಬಿ.ಆರ್.ಕೃಷ್ಣಮೂರ್ತಿ ಬಾಲನಟಿಯಾಗಿ ಅಭಿನಯಿಸುವ ಅವಕಾಶ ನೀಡಿದರೂ ನಯವಾಗಿಯೆ ತಿರಸ್ಕರಿಸಿದ್ದರು?!
1955ರಲ್ಲಿ ‘ಆಷಾಢಭೂತಿ’ಕನ್ನಡ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಮೂಲಕ ಚಂದನವನಕ್ಕೆ ಪಾದಾರ್ಪಣೆ. ಬಳಿಕ ಕೆಲವೇ ತಿಂಗಳಲ್ಲಿ ತಮಿಳು-ತೆಲುಗು ಚಿತ್ರರಂಗಕ್ಕೂ ಡೈರೆಕ್ಟ್ ಹೀರೋಯಿನ್ ಆಗಿ ಲಗ್ಗೆ ಇಟ್ಟರು. ತಮಿಳು ಚಿತ್ರರಂಗದ ಅತಿರಥಮಹಾರಥ MGR, ಶಿವಾಜಿಗಣೇಶನ್ ಜೆಮಿನಿಗಣೇಶನ್ ಮಾತ್ರವಲ್ಲದೆ ತೆಲುಗು ಚಿತ್ರರಂಗದ ದಿಗ್ಗಜ ಎ.ನಾಗೇಶ್ವರರಾವ್, NTR ಕಾಂತಾರಾವ್, ಕೃಷ್ಣ, ಮುಂತಾದವರೊಡನೆ ನಾಯಕಿಯಾಗಿ ಹಲವಾರು ಸಿನಿಮಾಗಳಲ್ಲಿ ನಟಿಸಿ ದಕ್ಷಿಣ ಭಾರತದ ಖ್ಯಾತ ನಟಿಯಾಗಿ ಮೆರೆದರು.
ಕಾಲಕ್ರಮೇಣ ಯಥೇಚ್ಛ ಹಣ ಕೀರ್ತಿ ಜನಪ್ರಿಯತೆ ಗಳಿಸಿ ಅತ್ಯಂತ ಬ್ಯುಸಿ ಹೀರೋಯಿನ್ ಆಗಿ ಮೆರೆಯುತ್ತ ದಕ್ಷಿಣ ಭಾರತದಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸಿ ಸತತ 30ವರ್ಷಕಾಲ ಅವಿಶ್ರಾಂತ ದರ್ಬಾರ್ ನಡೆಸಿದ ಇವರು ಪದ್ಮಶ್ರೀ ಪದ್ಮಭೂಷಣ ಕಲಾಸರಸ್ವತಿ ಕರಪ್ಪುಕ್ಕರಸಿ ಕನ್ನಡತ್ತು ಪೈಂಕಿಳಿ ಅಭಿನಯಸರಸ್ವತಿ ಅಭಿನಯಭಾರತಿ ಅಭಿನಯಕಾಂಚನಮಾಲ ತೊಪ್ಪುಲು ಸುಂದರಿ ಸಲ್ಲಭಸುಂದರಿ, ಮುಂತಾದ ಅನೇಕ ಬಿರುದು ಪಡೆದರು.
ಗ್ರಾಮೀಣ ಕನ್ನಡತಿಯಾಗಿ ಇಡೀ ಭಾರತವನ್ನೆ ಆಳಿದ ಏಕೈಕ ನಾಯಕನಟಿ ಹೆಗ್ಗಳಿಕೆಗೂ ಪಾತ್ರರಾದರು. ಇದು ಭಾರತ ದೇಶದ ಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆ. ಕಾಲಿವುಡ್ ನಲ್ಲಿ ಹೊಸಚರಿತ್ರೆ ಬರೆದ ನಾಡೋಡಿಮನ್ನನ್ ಎಂಗವೀಟ್ಟುಪಿಳ್ಳೆ ಅನ್ಬೇವಾ ಬ್ಲಾಕ್ಬಸ್ಟರ್ ಬಾಕ್ಸಾಫೀಸ್ ಸಿನಿಮಾಗಳು ಸೇರಿದಂತೆ ಬ್ಯಾಕ್- ಟು- ಬ್ಯಾಕ್ 25 ಫಿಲಂಸ್ ಸಿಲ್ವರ್ ಜ್ಯುಬ್ಲಿ ಗೋಲ್ಡನ್ ಜ್ಯುಬ್ಲಿ ಆಚರಿಸಿಕೊಂಡಿವೆ! ಈ ಎಲ್ಲ ಚಿತ್ರಗಳಲ್ಲಿ ಎಂಜಿಆರ್-ಬಿ.ಸರೋಜ, ಹೀರೋ- ಹೀರೋಯಿನ್ (ಜಯಲಲಿತ-ಎಂಜಿಆರ್ ಜೋಡಿಗೂ ಮುಂಚೆಯೇ) ಪ್ರಖ್ಯಾತಜೋಡಿ ಎನಿಸಿ 20 ವರ್ಷ ಪರ್ಯಂತ ಧೂಳೆಬ್ಬಿಸಿದ್ದು ಎವರ್ಗ್ರೀನ್ ರೆಕಾರ್ಡ್.
ಡಾ.ರಾಜ್ ವಿಷ್ಣುವರ್ಧನ್ ಸೇರಿದಂತೆ ಇಡೀ ಭಾರತದ ನಟದಿಗ್ಗಜರು ವೈಯಕ್ತಿಕವಾಗಿಯೂ ಈ ಅಭಿನೇತ್ರಿಯ ಬಗ್ಗೆ ಅಪಾರ ಪ್ರೀತಿ ವಿಶ್ವಾಸ ಗೌರವ ಇರಿಸಿ ಕೊಂಡಿದ್ದರು! ಸ್ವಯಂ ನಿರ್ಮಾಪಕಿಯು ಆಗಿದ್ದ ಅಪೂರ್ವ ಕಲಾವಿದೆ ಸರೋಜಾದೇವಿ 1985ರಲ್ಲಿ ತಮ್ಮದೆ ನಿರ್ಮಾಣದ “ಲೇಡೀಸ್ ಹಾಸ್ಟೆಲ್” ಚಿತ್ರ ತಯಾರಿಸಲು ಸಕಲಸಿದ್ಧತೆ ಮಾಡಿಕೊಂಡಿದ್ದ ವೇಳೆ ಅಂದಿನ ಬೆಂಗಳೂರಿನ ಫೇಮಸ್ ಸ್ಟಾರ್ ಹೋಟೇಲ್ ಗಳಲ್ಲಿ ಪ್ರಮುಖವೆನಿಸಿದ್ದ ಶಿವಾಜಿನಗರದ ಹೊಟೇಲ್-ಸ್ಟೇ-ಲಾಂಗರ್ (ಹೋಟೇಲ್ ಹರ್ಷ) ಮಾಲೀಕರಾಗಿದ್ದ ಇವರ ಪತಿ ಶ್ರೀಹರ್ಷ ನಿಧನರಾದ ಕಾರಣ ಲೇಡೀಸ್ ಹಾಸ್ಟೆಲ್ ಫಿಲಂ ತಡವಾಗಿ ಬಿಡುಗಡೆಗೊಂಡಿತು!
ಕನ್ನಡ ಚಿತ್ರರಂಗದ ಮೇರು ನಾಯಕನಟರಾದ ರಾಜ್ ಕಲ್ಯಾಣ್ ಹಾಗೂ ಉದಯ್ ಕುಮಾರತ್ರಯರ ಜತೆ ಹತ್ತಾರು ಉತ್ತಮ ಚಿತ್ರಗಳಲ್ಲಿ ಉನ್ನತ ಪಾತ್ರಗಳಲ್ಲಿ ನಟಿಸಿರುವುದೇ ಅಲ್ಲದೆ ಇಡೀ ಚಂದನವನದ ಬಹುತೇಕ ಎಲ್ಲಾ ಹೀರೋಗಳ ಚಿತ್ರಗಳಲ್ಲೂ ನಟಿಸಿದ್ದಾರೆ. ಇವರು ಅಭಿನಯಿಸಿದ ಅನೇಕ ಎವರ್ ಗ್ರೀನ್ ಸಿನಿಮಾ ಗಳಲ್ಲಿ ಹಲವು ದಾಖಲೆ ಮಾಡಿದ್ದಾರೆ. ಈ ಪೈಕಿ
ಉದಾಹರಣೆಗೆ ಕಿತ್ತೂರುಚೆನ್ನಮ್ಮ ಮತ್ತು ಅಮರಶಿಲ್ಪಿಜಕಣಾಚಾರಿ. ಕಿತ್ತೂರುಚೆನ್ನಮ್ಮ ಚಿತ್ರದಲ್ಲಿ ಬಿ.ಸರೋಜಾದೇವಿಯ ಅಮೋಘ ಅದ್ಭುತ ಅಪ್ರತಿಮ ಅಭಿನಯವನ್ನ ಕಂಡು ಆಕಾಲಕ್ಕೆ ಭಾರತದಲ್ಲಿ ನೆಲೆಸಿದ್ದ ಆಂಗ್ಲೋ ಇಂಡಿಯನ್ ಕುಟುಂಬದವ್ರು ಬೆಚ್ಚಿಬೆರಗಾಗಿ ಅವಾಕ್ಕಾದರು. ಬ್ರಿಟನ್ ದೇಶದ ರಾಜ, ರಾಣಿ, ಪ್ರಜೆಗಳಾದಿಯಾಗಿ ಪ್ರತಿಯೊಬ್ಬ ಪರಂಗಿಯವನೂ ಶಾಕ್ ಅಂಡ್ ಸ್ಟನ್ ಆದರಂತೆ. ಸಬ್ ಟೈಟಲ್ ಗೊಂಡು ಯೂರೋಪ್ ನ 5 ರಾಷ್ಟ್ರಗಳಲ್ಲಿ ಅದ್ಧೂರಿ ಪ್ರದರ್ಶನ ಕಂಡು ಇತಿಹಾಸ ಬರೆಯಿತು!
ಲಂಡನ್ ನ ಬ್ಯಾಂಕ್ವೆಟ್ ಹಾಲ್ ಗೆ ಬಿ.ಸರೋಜಾದೇವಿಯನ್ನು ರೆಡ್ ಕಾರ್ಪೆಟ್ ಹಾಸಿ ಸ್ವಾಗತಿಸಲಾಯಿತು. ಅಂದಿನ ಬ್ರಿಟಿಷ್ ರಾಣಿ ಅಭಿನಂದಿಸಿ ಸನ್ಮಾನಿಸಿದ್ದು, ಆ ಬಳಿಕ ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲ ಕೂಡ ಡಾ.ಬಿ.ಸರೋಜಾದೇವಿಗೆ ವಿಶೇಷ ಆಹ್ವಾನವನ್ನಿತ್ತು ಸನ್ಮಾನಿಸಿ ಬೀಳ್ಕೊಟ್ಟಿದ್ದು, ಭಾರತೀಯ ಸಿನಿಮಾ ಇತಿಹಾಸದ ಸ್ವರ್ಣಪುಟ! ಅಮೆರಿಕ ಕನ್ನಡ ಸಂಘದ ‘ಅಕ್ಕ’ ಸಮ್ಮೇಳನ ಮೊದಲ್ಗೊಂಡು ಅನೇಕ ಪ್ರತಿಷ್ಠಿತ ಸಮಾರಂಭಸಗಳಿಗೆ ಇವರನ್ನು ಆಹ್ವಾನಿಸಿ ಸನ್ಮಾನ ನೀಡಿ ಗೌರವಿಸಿ ಬೀಳ್ಕೊಟ್ಟಿದ್ದಾರೆ. ಇಂಥ ಅಮೋಘ ಸಂದರ್ಭಗಳಲ್ಲೂ ಇವರು ಸರಳ ಸಜ್ಜನಿಕೆಯ ಪ್ರತೀಕವಾಗಿ ಭಾರತ- ಕರ್ನಾಟಕ ಸಂಸ್ಕೃತಿ ನಾಗರಿಕತೆ ಪ್ರತಿನಿಧಿಯಾಗಿ ಕಿಂಚಿತ್ತು ಅಹಂಕಾರವಿಲ್ಲದೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು ಹೀಗೆ: ಇದು ಕನ್ನಡಿಗರಿಗೆ ಸಂದ ಗೌರವ ನನ್ನದೇನೂಇಲ್ಲ! ಎಂಬ ನಿಗರ್ವದ ನುಡಿಮುತ್ತು!
ಕೋಟಿ ಕೋಟಿ ವಂದನೆಗಳು ಲವ ಸರ್
Best publication, ವಂದನೆಗಳು ಲವ ಸರ್
ನನ್ನ ಜೀವಮಾನ ಅವಧಿಯಲ್ಲಿ ಇಂಥದ್ದೊಂದು ಅತ್ಯುತ್ತಮ ಲೇಖನ ಪ್ರಕಟಣೆ ಕಂಡು ಓದಿರಲಿಲ್ಲ , ಎಲರಿಗೂ ಅನೇಕಾನೇಕ ಧನ್ಯವಾದಗಳು ಸರ್
ನಮಸ್ಕಾರ ಸರ್
ಎಂದಿನಂತೆ ನಾನು ಪ್ರೇಮಅಕ್ಕ ರವರ ತಂಗಿ ಇಂದಿರಾ ಫ್ರಂ ಮಂಡ್ಯ.
ಚಂದನವನ ಚರಿತ್ರೆಯ ಎಲ್ಲ ಲೇಖನ ಓದಿದ್ದೇವೆ. ಕವಿ ನಟರಾಜ ಅವರು ಬಹಳ ಚೆನ್ನಾಗಿ ಹಳ್ಳಿ ಮತ್ತು ಸಿಟಿ ಜನರಿಗೆ ಮತ್ತು ಓದುಗರಿಗೆ ಅರ್ಥ ಆಗುವಂತೆ ಸರ್ ಕನ್ನಡದಲ್ಲಿ ಮತ್ತು ಸುಲಭವಾದ ಅಂಕಿ-ಅಂಶ ಮತ್ತು ಸತ್ಯ ಘಟನೆಯನ್ನು ವಿವರಿಸಿ ಚೆನ್ನಾಗಿ ಬರೆಯುತ್ತಾರೆ. ನಿಮ್ಮ ಪತ್ರಿಕೆಯ ಪ್ರಕಟಣೆ ಸುಂದರ ಫಾಸ್ಟ್ ನ್ಯೂಸ್ ಮತ್ತು ಉಪಯೋಗ ಬರುವಂಥ ಲೇಖನ ಎಲ್ಲ ಬಗೆಯ ಸುದ್ದಿ ವಿಚಾರ ಇರುತ್ತದೆ. ಸೂ…ಪ…ರ್ ಸರ್ ಧನ್ಯವಾದ ನಮಸ್ಕಾರ
ಬಿ. ಸರೋಜಾದೇವಿಯ ಲೇಖನ ಅದ್ಭುತ ಮತ್ತು ಮೈಸೂರು ತವರಿನ
ನಟನಟಿಯರ ವಿವರ ಬೊಂಬಾಟ್ ಮಾಹಿತಿಯ ಲೇಖನ, ಧನ್ಯವಾದ ನಮಸ್ಕಾರ ಧನ್ಯವಾದ ನಮಸ್ಕಾರ ಸರ್, ಗುಡ್ ನೈಟ್
ಬಿ ಸರೋಜಾದೇವಿಯ ಅವರ ಲೇಖನ ಓದಿದ ನಂತರ ಚೆನ್ನಾಗಿ ಅತ್ತುಬಿಟ್ಟೇ ,ಇಂತಹ ನಟಿಯರು ನಮ್ಮ ದೇಶದಲ್ಲೇ ಇಲ್ಲ ಇದ್ದರೂ ಬಹಳ ಅಪರೂಪ, thanks sir
Dr.vinaykumar
PADMASREE DR.B.SAROJADEVI article is very interesting informative and astonishment. Thanks for your best and
Really wonderful article sir . Please convey my sincere thanks and gratitude to the author and publisher rather journalist of your editorial wing, good bye sir 🙏 👍
Very nice and very informative and interesting article about one of the all-time INDIAS THE BEST ASTRESSES PADMABUSHAN DR.SAROJADEVI.B. once again thank you all, bye sir 🙏 ☺ 😊
Dr. B.sarojadevi, madam brief life history exposed Wonderful article
Uthama lekhana nimagu kumarkavi avarigu. Dhanyavaadaglu