LatestNews

ಗುಣಮಟ್ಟವಲ್ಲದ ಕಾಂತಿವರ್ಧಕ, ಔಷಧಿಗಳ ಪಟ್ಟಿ ಬಿಡುಗಡೆ.. ಇವುಗಳನ್ನು ಉಪಯೋಗಿಸುವ ಮುನ್ನ ಎಚ್ಚರ!

ಬಹಳ ದಿನಗಳಿಂದ ನಾವೆಲ್ಲರೂ ಬಳಕೆ ಮಾಡುತ್ತಿದ್ದ ಕಾಂತಿವರ್ಧಕ ಮತ್ತು ಔಷಧಿಗಳ ಪೈಕಿ ಕೆಲವೊಂದು ಗುಣಮಟ್ಟವನ್ನು ಹೊಂದಿಲ್ಲ ಎಂಬುದನ್ನು ಕರ್ನಾಟಕ ಔಷಧ ಪರೀಕ್ಷಾ ಪ್ರಯೋಗಾಲಯದ ಸರ್ಕಾರಿ ವಿಶ್ಲೇಷಕರು ಬಯಲು ಮಾಡಿದ್ದಲ್ಲದೆ, ನಿಷೇಧಗೊಳಿಸಿದ್ದಾರೆ. ಹೀಗಾಗಿ ಇವುಗಳನ್ನು ಬಳಸುವ ಮುನ್ನ ಜನರು ಎಚ್ಚೆತ್ತುಕೊಳ್ಳುವುದು ಬಹುಮುಖ್ಯವಾಗಿದೆ.

ಹಾಗಾದರೆ ಆ ಕಾಂತಿ ವರ್ಧಕ ಮತ್ತು ಔಷಧಿಗಳು ಯಾವುವು ಎಂಬುದನ್ನು ನೋಡಿದ್ದೇ ಆದರೆ ಗುಜರಾತಿನ ಆಹಮದಬಾದ್‍ನಲ್ಲಿರುವ ಮೆ. ಪ್ಯಾಭಿಯಾನ್ ಲೈಫ್ ಸೈನ್ಸ್‍ಸ್‍ನ ಯುನಿ-ನಿಮ್ ಆ್ಯಂಟಿ-ಬ್ಯಾಕ್ಟೀರಿಯಲ್ ಸೋಪ್ (ನೀಮ್ ಸೋಪ್), ಗುಜರಾತಿನ ಮುಂಜ್ ಮಹುದಾ ವಡೋದರಾದ ಸಹಜಾನಂದ್ ಇಂಡಸ್ಟ್ರಿಯಲ್ ಎಸ್ಟೇಟ್ ನ ಮೆ. ವೇಗಾ ಬಯೋಟೆಕ್ ಪ್ರೈ. ಲಿಮಿಟೆಡ್‍ನ ಲೆವಿಟಿರಾಸೆಟಮ್ ಟ್ಯಾಬ್ಲೆಟ್ಸ್,  ಉತ್ತರಖಾಂಡ್ ಕಾಸಿಪುರ್‍ನ ಮೋರದಬಾದ್ ರೋಡ್ ಸರ್ವೇರ್ಖೇರಾದ ಮೆ. ಅಗ್ರೋನ್ ರೆಮಿಡಿಸ್ ಪ್ರೈ.ಲಿಮಿಟೆಡ್‍ನ ಸೆಪ್ಟ್ರಿಯಾಕ್ಷೋನ್ ಮತ್ತು ಸಲ್ಬ್ಯಾಕ್ಟಮ್ ಇನ್‍ಜೆಕ್ಷನ್ (ವೆಟ್) (ಸನ್ಸೇಪ್-ಎಸ್‍ಬಿ).

ಹಿಮಾಚಲ ಪ್ರದೇಶದ ಸೋಲನ್ ಸುಬತು ರೋಡ್‍ನ ವಿಲೇಜ್ ಭಾನತ್‍ನ ಮೆ. ಜೆ.ಎಂ. ಲ್ಯಾಬೋರೇಟರಿಸ್‍ನ ಅಪ್ಸೋನಾಕ್ ಎಸ್‍ಪಿ ಟ್ಯಾಬ್ಲೆಟ್ಸ್ (ಅಸೇಕ್ಲೋಫೆನಕ್, ಪ್ಯಾರಸೆಟಿಮೋಲ್ ಮತ್ತು ಸೆರಾಟಿಯೋಪೆಪ್ಟಿಡೇಸ್ ಟ್ಯಾಬ್ಲೆಟ್ಸ್), ಹಿಮಾಚಲ ಪ್ರದೇಶ ಸೋಲನ್ ಬಡ್ಡಿ ಡಿಸ್ಟ್ ಇಪಿಐಪಿ ಫೆಸ್-11 ರ ಆಟ್ ಪ್ಲಾಟ್ ನಂ. 769-ಎ ಮತ್ತು 79-ಬಿ ನ ಮೆ. ಲೀಫೋರ್ಡ್ ಹೆಲ್ತ್‍ಕೇರ್ ಲಿಮಿಟೆಡ್‍ನ ವನ್‍ಪ್ರೆಸ್-40ಹೆಚ್ (ಟೆಲ್ಮಿಸರ್‍ಟನ್ ಅಂಡ್ ಹೈಡ್ರೋಕ್ಲೋರೋಥೈಜಡ್ ಟ್ಯಾಬ್ಲೆಟ್ಸ್ ಐಪಿ), ಉತ್ತರ್‍ಖಾಂಡ್ ಭಗ್ವಾನ್ಪುರ್‍ನ ರಾಯ್‍ಪುರ್ ನಲ್ಲಿರುವ ಮೆ. ಶೈನ್ ಪಾರ್ಮಾದ ಕ್ಲಿನ್ಸೆಪ್-200(ಸಿಫಿಕ್ಸಿಮ್ ಐಪಿ 200 ಎಂಜಿ ಟ್ಯಾಬ್ಲೆಟ್ಸ್).

ಆಂಧ್ರ ಪ್ರದೇಶದ ನೆಲ್ಲೂರು ಡಿಸ್ಟ್ರಿಕ್ಟ್‍ನ ಎಸ್.ಪಿ.ಎಸ್.ಆರ್. ನ ಕೋವೋರ್ ಪಿ.ಆರ್ ಪಾಲಿಮ್ ಸರ್ವೇ ನಂ. 263/1, 264/1ರ ಮೆ. ಡಾಕ್ಟರ್ಸ್ ವೆಟ್ ಫಾರ್ಮ್ ಪ್ರೈ.ಲಿಮಿಟೆಡ್‍ನ ಡಾಕ್ಸಿಸೈಕ್ಲಿನ್ ಚಿವಬಲ್ ಟ್ಯಾಬ್ಲೆಟ್ಸ್ (ಡಾಕ್ಸೆನ್-200), ಗುಜರಾತ್‍ನ ದಾಹೋದ್ ಖರೇಡಿ, ಮೇಗಾ ಜಿಐಡಿಸಿ, ಪ್ಲಾಟ್ ಸಂ. 611, 612ರ ಮೆ. ಗಿಡ್ಯಾ ಫಾರ್ಮಾಸ್ಯುಟಿಕಲ್ಸ್ ನ ಡಿ-50, (ಡೈಕ್ಲೋಫೆನಕ್ ಸೋಡಿಯಂ ಟ್ಯಾಬ್ಲೆಟ್ಸ್ ಐ.ಪಿ 50 ಎಂಜಿ), ಹಿಮಾಚಲ ಪ್ರದೇಶದ ಸೋಲನ್ ಡಿಸ್ಟ್ರಿಕ್ಟ್‍ನ ಜರ್ಮಜ್ರಿ ವಿಲೇಜ್‍ನ ಮೆ. ಬಯೋಜೆನಟಿಕ್ ಡ್ರಗ್ಸ್ ಪ್ರೈ.ಲಿಮಿಟೆಡ್‍ನ ಐಬುಫ್ರೋಫೆನ್ ಟ್ಯಾಬ್ಲೆಟ್ಸ್ ಐಪಿ 400 ಎಂಜಿ.

ಹಿಮಾಚಲ ಪ್ರದೇಶದ ಸಿರ್‍ ಮೋರ್ ಡಿಸ್ಟ್ರಿಕ್ಟ್‍ನ ಪೌಂಟಾ ಸಾಹಿಬ್ ರಾಮ್‍ಪುರ್ ಘಾಟ್‍ನ ಮೆ.ನಾನ್ಜ್ ಮೆಡ್ ಸೈನ್ಸ್‍ಸ್ ಫಾರ್ಮಾ ಪ್ರೈ ಲಿಮಿಟೆಡ್‍ನ ಮುಪಿರೋಸಿನ್ ಮುಲಾಮ್ ಐಪಿ 2% ಡಬ್ಲ್ಯೂ/ಡಬ್ಲ್ಯೂ (ಮುಪಿಸಿಪ್ ಮುಲಾಮ್) ಹರಿಯಾಣದ ಯಮುನ ನಗರದ ಬಡ್ಡಿ ಮಜ್ರಾ ಆಸ್ಕಾರ್ ಹೌಸ್‍ನ ಮೆ. ರೆಮಿಡಿಸ್ ಪ್ರೈಲಿಮಿಟೆಡ್‍ನ ಪ್ಯಾಟೊಫ್ರಜೋಲ್ ಫರ್ ಇನ್‍ಜೆಕ್ಷನ್ (ಜೋಪನ್ 40) ಮತ್ತು ಮಧ್ಯಪ್ರದೇಶದ ಇಂದೋರ್‍ನ ದೇವಾಸ್ ನಾಕಾ ಲಸೂಡಿಯ ಮೋರಿ ಎಸ್.ಡಿ.ಎ ಕಾಂಪೌಂಡ್ 25/1/3/25 ನಲ್ಲಿರುವ ಮೆ. ಸೈಮರ್ ಫಾರ್ಮಾದ ಕಾಪೌಂಡ್ ಬನೆಜೋನ್ ಟಿಂಚರ್ ಐ.ಪಿ ಔಷಧಿ, ಕಾಂತಿವರ್ಧಕಗಳು ಉತ್ತಮ ಗುಣಮಟ್ಟದಲ್ಲ  ಎಂಬುದು ಖಾತರಿಯಾಗಿದೆ.

ಹಾಗಾಗಿ ಈ ಔಷಧಿ, ಕಾಂತಿವರ್ಧಕಗಳನ್ನು ಔಷಧಿ ವ್ಯಾಪರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್‍ ಹೋಂನವರು ದಾಸ್ತಾನು ಮಾಡುವುದಾಗಲಿ, ಮಾರಾಟ ಮಾಡುವುದಾಗಲಿ ಅಥವಾ ಉಪಯೋಗಿಸುವುದಾಗಲಿ ಮಾಡಬಾರದು. ಯಾರಾದರೂ ಈ ಔಷಧಿಗಳ ದಾಸ್ತಾನು ಹೊಂದಿದ್ದಲ್ಲಿ ಕೂಡಲೇ ಸಂಬಂಧಪಟ್ಟ ಕ್ಷೇತ್ರದ ಔಷಧ ಪರಿವೀಕ್ಷಕರು ಅತವಾ ಔಷಧ ನಿಯಂತ್ರಕರ ಗಮನಕ್ಕೆ ತರುವುದು. ಸಾರ್ವಜನಿಕರು ಈ ಔಷಧಗಳು, ಕಾಂತಿವರ್ಧಗಳನ್ನು ಉಪಯೋಗಿಸಬಾರದೆಂದು ಕರ್ನಾಟಕ ಔಷಧ ಪರೀಕ್ಷಾ ಪ್ರಯೋಗಾಲಯದ ಅಪರ ಔಷಧ ನಿಯಮತ್ರಕರು ಮತ್ತು ನಿಯಂತ್ರಣಾಧಿಕಾರಿಗಳಾದ ಡಾ. ಉಮೇಶ್ ಎಸ್ ಅವರು ತಿಳಿಸಿದ್ದಾರೆ.

admin
the authoradmin

ನಿಮ್ಮದೊಂದು ಉತ್ತರ

Translate to any language you want