ಪ್ರಪಂಚದಲ್ಲಿರುವ ಅತಿದೊಡ್ಡ ಪಿಶಾಚಿಯೇ “ಸಂಶಯ”! ಸಂದೇಹ ಪಡುವುದು ಎಂದರೆ ಕತೆ ಮುಗೀತು. ಇದಕ್ಕಿಂತ ಹೆಚ್ಚಿನ ಮಾರಕ ರೋಗ ಅಥವಾ ಕೆಡುಕು ಇನ್ನೊಂದಿಲ್ಲ. ಇದರ ಭಯ ಎಲ್ಲ ಭಯಾನಕ ಕೃತ್ಯಕ್ಕಿಂತ ಘೋರವಾದುದು.
ಸಂಶಯಕ್ಕೆ ಒಳಗಾದವರು ಪಡುವ ಹಿಂಸೆ ಯಾವ ಶತ್ರುವಿಗೂ ಬೇಡ. ಅದನ್ನು ಅನುಭವಿಸಿದವರಿಗೆ ಗೊತ್ತು ಅದರ ಕಷ್ಟನಷ್ಟ ಜಿಗುಪ್ಸೆ ಇತ್ಯಾದಿ ನರಕ ದರ್ಶನ. ಹೀಗಾಗಿ ಸಂಶಯಕ್ಕೊಳಗಾದ ವರು ತಮ್ಮ ಸಂಕಟ ತಡೆಯಲಾರದೇ ಮೊರೆಹೋಗಿ ಬೇಡುತ್ತಾರೆ ಹೀಗೆ: “ನನ್ನ ನೋವು ಆ ದೇವರಿಗೇ ಅರ್ಪಿತ”. ಭಗವಂತ ನೀನೇ ನನ್ನನ್ನು ಕಾಪಾಡು ಮತ್ತು ಆ ದುರುಳನಿಗೆ ಶಿಕ್ಷೆ ಕೊಟ್ಟು ಒಳ್ಳೆಯ ಬುದ್ಧಿ ಕರುಣಿಸು! ಇದರಿಂದ ದೊರಕುವ ನಿತ್ಯಸತ್ಯ ಫಲಿತಾಂಶ.
*ಸಂಶಯ ಪಡುವವರು ರಾಕ್ಷಸಗುಣದವರು, *ಸಂದೇಹ ಸಂಸಾರವನ್ನ ಹಾಳು ಮಾಡುತ್ತದೆ, *ಸಂಶಯ ಇಡೀವಂಶವನ್ನೇ ನಾಶಮಾಡುತ್ತದೆ, *ಸಂದೇಹವು ಕುಟುಂಬದ ನೆಮ್ಮದಿ ಕೆಡಿಸುತ್ತದೆ, *ಸಂಶಯವು ಅಪರಾಧ ಮಾಡಿಸಿ ಜೈಲುವಾಸ ಕೊಡಿಸುತ್ತದೆ, *ಸಂದೇಹವು ತಾಯಿ ತಂದೆ ಗುರು ಹಿರಿಯರನ್ನು ದೂರಮಾಡುತ್ತದೆ, *ಸಂಶಯವು ಬಂಧು ಬಳಗ ಮಿತ್ರ ವಿದ್ಯೆ ವಿವೇಕ ಸರ್ವಸ್ವವನ್ನೂ ತೊರೆಸುತ್ತದೆ, *ಸಂದೇಹ ಪಟ್ಟವರು ಕಡೆಗೂ ಸರ್ವನಾಶ ಆಗುವರು!
ವಾಸ್ತವತೆ ಅಥವ ವಸ್ತುಸ್ಥಿತಿ ಹೀಗಿರುವಾಗ, ನಮಗೇಕೆ ಬೇಕು ಈ ಹಾಳು ಸಂದೇಹ, ಸಂಶಯ, ಅನುಮಾನ? ಆದ್ದರಿಂದ ಈ ಕ್ಷಣದಿಂದಲೆ ನಾವೆಲ್ಲರೂ ದಟ್ಟ ದರಿದ್ರದ ಸಿಟ್ಟು ಬರಿಸುವ ಸಂದೇಹ, ಸಂಶಯ, ಅನುಮಾನ ಇವುಗಳನ್ನು ಸಾರಾ ಸಗಟಾಗಿ ತೊಟ್ಟರಿಯೆ ಬಿಟ್ಟುಬಿಡೋಣ ಚಟ್ಟಕಟ್ಟೋಣ? ಕಳೆದುಕೊಂಡ ಸುಖ ಶಾಂತಿ ನೆಮ್ಮದಿ ತೃಪ್ತಿ ನಗು ಸಂತೋಷ ಇತ್ಯಾದಿಗಳನ್ನು ಮರಳಿ ಪಡೆದು ನಮ್ಮ ಉಳಿದ ಬದುಕನ್ನು ಸಾರ್ಥಕವಾಗಿ ಸಾಗಿಸೋಣ. ಅಂತಿಮ ನಿರ್ಧಾರ, ತೀರ್ಮಾನ ನಮ್ಮದೇ ಅಲ್ಲವೇ ಏನಂತೀರಿ?!
ಮನಸ್ಸು ಕಸದ ಬುಟ್ಟಿಯಲ್ಲ.. ಮಾನವ ಜನ್ಮ ಕೊಟ್ಟ ಶಿವನು ಧರೆಯಮೇಲೆ ಕಸ ಮತ್ತು ರಸ ಎರಡನ್ನೂ ಸೃಷ್ಟಿಸಿದ. ಎಲ್ಲ ಪ್ರಾಣಿಗಿಂತ ಹೆಚ್ಚಿನ ಯೋಚಿಸುವ ಶಕ್ತಿಯನ್ನ ಮನುಷ್ಯನೊಳಗೆ ತುಂಬಿದ. ಇಂಥ ಮಾನವನು ಕಸವನ್ನ ರಸವಾಗಿಸಿ ತದನಂತರ, ರಸವನ್ನು ಮಾತ್ರ ತನ್ನೊಳಗೆ ಸೇರಿಸಿ ಕೊಳ್ಳುವ ಬುದ್ಧಿವಂತಿಕೆಯನ್ನ ಆ ಶಿವನೇ ನೀಡಿದ್ದು ಆದರೆ ಅವಿವೇಕಿ ಮನುಷ್ಯನು, ರಸವನ್ನು ಮಾತ್ರ ತೆಗೆದುಕೊಳ್ಳುವ ಬದಲು, ಕಸವನ್ನು ಮತ್ತು ರಸ-ಕಸ ಎರಡನ್ನೂ ಅಥವ ರಸವನ್ನೂ ಕಸಮಾಡಿ ತೆಗೆದುಕೊಳ್ಳುವ ದುರ್ಬಲ ದುರ್ಬುದ್ಧಿ ಬೆಳೆಸಿಕೊಂಡಿದ್ದಾನೆ.
ಇದನ್ನೂ ಓದಿ: ಸುಖ ನಿದ್ದೆ ಎಂದರೆ ಏನು? ಅದಕ್ಕಾಗಿ ಏನು ಮಾಡಬೇಕು?
ತತ್ಪರಿಣಾಮ, 21ನೇ ಶತಮಾನದಲ್ಲಿ ಬಹುತೇಕ ಎಲ್ಲ (ಅತಿ) ಬುದ್ಧಿವಂತರೂ (ಅತಿ)ಅವಿವೇಕಿಗಳೂ ಅವರವರ ಮನಸ್ಸಿಗೆ ಬಂದಂತೆ ತಮಗೆ ತೋಚಿದಷ್ಟು ಕಸವನ್ನು ರಸದೊಡನೆ ಬೆರೆಸಿ ಅಥವ ಕೇವಲ ಕಸವನ್ನೇ ತಂತಮ್ಮ ತನುಮನದೊಳಗೆ ತುಂಬಿ ಕೊಳ್ಳುತ್ತಿದ್ದಾರೆ. ತಿಳಿದೂ ತಿಳಿದೂ ಅಥವ ತಿಳಿದೋ ತಿಳಿಯದೆಲೋ ಅಶುದ್ಧ ಅಸಹ್ಯ ಅನಾರೋಗ್ಯ ಅನಾಹುತ ಅನಾಚಾರ ಅಕ್ರಮ ಅನುಚಿತ ಆಹಾರ-ವಿಚಾರ ಕಸಗಳನ್ನು ತುಂಬಿ(ಸಿ) ಕೊಳ್ಳುತ್ತ ದೇವರು ಕೊಟ್ಟಿರುವಂಥ ಈ ನಮ್ಮ “ಮನಸ್ಸನ್ನು ಕಸದಬುಟ್ಟಿ” ಯನ್ನಾಗಿ (ಏಕೆ) ಮಾಡಿಕೊಂಡಿದ್ದೇವೋ, ಬುದ್ಧಿಮಾಂದ್ಯರಂತೆ ವರ್ತಿಸುತ್ತಿದ್ದೇವೋ! ಬಲ್ಲವರಾರು.
ಆದ್ದರಿಂದ ಇನ್ನಾದರೂ ಶುದ್ಧವಾದ ಮನಸ್ಸಿನಿಂದ ಸರಿಯಾದ ನಿರ್ಧಾರದಿಂದ ಸದಾ ಸದ್ಬುದ್ಧಿಯಿಂದ ಸಮರ್ಪಕ ಜೀವನವನ್ನ ಸಾರ್ಥಕರೀತಿಯಲ್ಲಿ ಹೊರೆಯಬೇಕು ಎಂಬ ನಿರ್ಧಾರದಿಂದ : ನಮ್ಮ “ಮನಸ್ಸು ಕಸದ ಬುಟ್ಟಿಯಲ್ಲ” ಎಂಬುದನ್ನು ನಿರೂಪಿಸಬೇಕು, ಈ ನಿಟ್ಟಿನಲ್ಲಿ ಎಲ್ಲರೂ ಕಂಕಣಬದ್ಧರಾಗೋಣ?!
ಇದನ್ನೂ ಓದಿ: ಜೀವನದಲ್ಲಿ ಈ ಮೂರು ಹಣತೆಗಳು ಸದಾ ಬೆಳಗುತ್ತಿದ್ದರೆ..
Wonderful guidance article for all human beings 🙏 ❤
Very nice and helpful article for new and old couples especially both working husband and wife family 👪 ❤ 😊