ಜೀವನದಲ್ಲಿ ಕಷ್ಟ, ಸುಖ ಎರಡನ್ನು ಸಮಾನವಾಗಿ ಪ್ರೀತಿ, ಧೈರ್ಯದಿಂದ ಸ್ವೀಕರಿಸಿದರೆ ಯಶಸ್ಸು ಸಾಧ್ಯ:ಸುತ್ತೂರು ಶ್ರೀ
ಬೇಲದಕುಪ್ಪೆ ಶ್ರೀಮಹದೇಶ್ವರಸ್ವಾಮಿ ದೇವಾಲಯ ಉದ್ಘಾಟನೆ, ಕಳಶರೋಹಣ

ಸರಗೂರು(ಸರಗೂರು ದಾಸೇಗೌಡ): ಜೀವನದಲ್ಲಿ ಕಷ್ಟ, ಸುಖ ಎರಡನ್ನು ಸಮಾನವಾಗಿ ಪ್ರೀತಿ, ಧೈರ್ಯದಿಂದ ಸ್ವೀಕರಿಸಿದಾಗ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಚನ್ನಗುಂಡಿ ಗ್ರಾಮದಲ್ಲಿ ನಡೆದ ಬೇಲದಕುಪ್ಪೆ ಶ್ರೀಮಹದೇಶ್ವರಸ್ವಾಮಿ ದೇವಾಲಯ ಉದ್ಘಾಟನೆ, ಕಳಶರೋಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಮನುಷ್ಯನಿಗೆ ಮೊದಲು ಕಷ್ಟ ಬಂದಾಗ ಸ್ವೀಕರಿಸಬೇಕು. ಅನಂತರ ಸುಖ ಸಿಗಲಿದೆ ಎಂಬುದನ್ನು ಮನವರಿಕೆ ಮಾಡಿಕೊಳ್ಳಬೇಕು. ನಿಜವಾದ ಭಕ್ತಿ ತೋರಿಸುವವರಿಗೆ ಭಗವಂತ ಕಷ್ಟ ಕೊಡುತ್ತಲ್ಲೇ ಇರುತ್ತಾನೆ. ಭಕ್ತಿಯಿಂದ ಇರುವವರಿಗೆ ಪರೀಕ್ಷೆ ಮಾಡುತ್ತಾನೆ. ಭಗವಂತ ಏನೇ ಕಷ್ಟ ಕೊಟ್ಟರೂ ಪ್ರೀತಿ, ಧೈರ್ಯದಿಂದ ಸ್ವೀಕರಿಸಬೇಕು. ಆಗ ಯಶಸ್ಸು ಸಿಗಲಿದೆ. ಬಂದುದ್ದೆಲ್ಲ ಭಗವಂತನ ಕೃಪೆ ಎಂದು ಅರ್ಥೈಹಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ದೇವಸ್ಥಾನಗಳು ಮನುಷ್ಯರ ಮನಸ್ಸಿನಲ್ಲಿ ಶಾಶ್ವತವಾಗಿ ಭಕ್ತಿ, ಶ್ರದ್ಧೆ ಮೂಡಿಸಲಿವೆ. ಇಂಥ ದೇವಸ್ಥಾನಗಳಲ್ಲಿ ಬಂಡೀಪುರ ಕಾಡಿನೊಳಗೆ ಉದ್ಭವಗೊಂಡಿರುವ ಬೇಲದಕುಪ್ಪೆ ಮಹದೇಶ್ವರ ದೇವಸ್ಥಾನವೂ ಒಂದು. ದೇವಸ್ಥಾನಗಳು ಭಕ್ತಿ ಕೇಂದ್ರಗಳಾಗಿದ್ದು, ಬೇಲದಕುಪ್ಪೆ ಮಹದೇಶ್ವರ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದೇವಸ್ಥಾನ ನಿರ್ಮಾಣ ಮಾಡಿರುವುದು ತುಂಬಾ ಸಂತಸ ತಂದಿದೆ. ಹೀಗಾಗಿ ಎಲ್ಲರೂ ಒಗ್ಗೂಡಿ ಕೆಲಸ ಮಾಡಿ ಎಂದು ಸಲಹೆ ನೀಡಿದರು.

ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶ್ರೀ ಶಿವಸಿದ್ದೇಶ್ವರ ಮಹಾಸ್ವಾಮಿಗಳು. ಬಿಡಗಲು ಪಡುವಲ ವಿರಕ್ತಮಠದ ಶ್ರೀ ಮಹದೇವಸ್ವಾಮೀಜಿ, ದಡದಹಳ್ಳಿ ಮಠದ ಶ್ರೀ ಷಡಕ್ಷರಸ್ವಾಮಿಜಿ, ಹಂಚೀಪುರ ಮಠದ ಶ್ರೀ ಚನ್ನಬಸವಸ್ವಾಮಿ, ಕಿರಿಯ ಶ್ರೀ ತೋಂಟದಾರ್ಯ ಸ್ವಾಮಿಜಿ, ದೇವನೂರು ಮಹಾ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮಿಗಳು, ಮಾದಪಟ್ಟಣದ ಶ್ರೀ ತೋಂಟದಾರ್ಯ ಸ್ವಾಮಿಗಳು, ಕುರುಬರ ಹುಂಡಿ ಮಠದ ಶ್ರೀ ಇಮ್ಮಡಿ ಮಹಾಂತ ಸ್ವಾಮೀಜಿಗಳು, ಪುರ ಮಠದ ಶ್ರೀ ಚಂದ್ರಶೇಖರ ಸ್ವಾಮಿಗಳು.

ಮೈಸೂರಿನ ಕುದೇರು ಮಠದ ಕಿರಿಯ ಶ್ರೀಗಳಾದ ಇಮ್ಮಡಿ ಗುರುಲಿಂಗ ಸ್ವಾಮಿಗಳು, ಬೀಚನಹಳ್ಳಿಯ ಪುರ ಮಠದ ಶ್ರೀ ನಾಗೇಂದ್ರಸ್ವಾಮಿಗಳು, ಮಾದಾಪುರ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು, ಮೈಸೂರಿನ ಹುಲ್ಲಿನ ಬೀದಿ ಮಠದ ಶ್ರೀ ಚಂದ್ರಶೇಖರಸ್ವಾಮಿಗಳು,ಜಕ್ಕಳ್ಳಿ ಮಠದ ಶ್ರೀ ಶಿವಕುಮಾರಸ್ವಾಮಿಗಳು, ಯಡಿಯಾಲ ಮಠದ ಶ್ರೀ ನಾಗೇಂದ್ರಸ್ವಾಮಿಗಳು, ಚನ್ನಗುಂಡಿಯ ಶ್ರೀ ಗುರುಮಲ್ಲದೇವರು ಇವರುಗಳು ದಿವ್ಯಸಾನಿದ್ಯ ವಹಿಸಿ, ಆಶೀರ್ವಚನ ನೀಡಿದರು. ಇವರುಗಳನ್ನು ಸನ್ಮಾನಿಸಲಾಯಿತು.

ಮುಖ್ಯ ಭಾಷಣಕಾರರಾಗಿ ಗುಂಡ್ಲುಪೇಟೆ ಡಿ ಬಿ ಸ ಪ ಪೂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಶಿಕ್ಷಕರಾದ ಕೊಡಗಾಪುರ ಗುರುಪ್ರಸಾದ್ ರವರು ಮಾತನಾಡಿದರು. ಮೈಸೂರಿನ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಹಿನ್ಕಲ್ ಬಸವರಾಜು, ಸರಗೂರು ಅ ಭಾ ವೀ ಲಿಂ ಮಹಾಸಭಾದ ಅಧ್ಯಕ್ಷ ಕೆ ಎಸ್ ವೀರಭದ್ರಪ್ಪ(ನಟರಾಜ್), ಮಾಜಿ ಅಧ್ಯಕ್ಷ ದಡದಳ್ಳಿ ಡಿ ಜಿ ಶಿವರಾಜ್, ಎಚ್.ಡಿ ಕೋಟೆ ತಾಲೂಕು ಅ ಭಾ ವೀ ಲಿಂ ಎಸ್. ಮಳಲಿ ರುದ್ರಪ್ಪ, ರಾಜ್ಯ ಘಟಕದ ಅ ಭಾ ವೀ ಲಿಂ ಮಹಾಸಭಾ ನಿರ್ದೇಶಕ ಮೊತ್ತ ಬಸವರಾಜು,

ಮೈಸೂರಿನ ಬಸವ ಬಳಗಗಳ ಒಕ್ಕೂಟದ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್, ತಾಲೂಕು ಘಟಕದ ಮಹಾಸಭಾದ ಕಾರ್ಯಾಧ್ಯಕ್ಷ ಸಿ ಕೆ ಗಿರೀಶ್, ಬೀಚನಹಳ್ಳಿ ಜೆಡಿಎಸ್ ಮುಖಂಡ ಜಯಪ್ರಕಾಶ್,ಮೈಸೂರಿನ ಕಾರ್ಪೊರೇಷನ್ ಬ್ಯಾಂಕ್ ನ ವ್ಯವಸ್ಥಾಪಕರಾದ ಸುಜಾತ ಮತ್ತು ಗಂಗಾಧರಸ್ವಾಮಿ, ಭಾರತ ಸರ್ಕಾರದ ರಕ್ಷಣಾ ಇಲಾಖೆ ಆಡಳಿತ ಅಧಿಕಾರಿ ರೇಖಾ ಎಂ ಮತ್ತು ಶಶಿಕಿರಣ್ ಕಾಳಯ್ಯ, ಸರಗೂರಿನ ಅನುಪಮಾ ಹೋಟೆಲ್ ಮಾಲೀಕ ಎಸ್ ಬಿ ನಂಜುಂಡಸ್ವಾಮಿ, ಸರಗೂರಿನ ಇ ಓ ಪ್ರೇಮ್ ಕುಮಾರ್, ಎಂ.ಸಿ ತಳಲು ಪಿಡಿಒ ರೇಣುಕಪ್ಪ, ಸರಗೂರಿನ ಚೆಸ್ ಕಾಮ್ ನ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್, ಪೊಲೀಸ್ ಇಲಾಖೆ ಅಧಿಕಾರಿಗಳು ತಡವಾಗಿ ಆಗಮಿಸಿದ ಶಾಸಕ ಅನಿಲ್ ಚಿಕ್ಕಮಾದು,ಮೈಮುಲ್ ಅಧ್ಯಕ್ಷ ಕೆ.ಈರೇಗೌಡ ಅವರನ್ನು ಕಮಿಟಿ ವತಿಯಿಂದ ದೇವಸ್ಥಾನದಲ್ಲಿ ಸನ್ಮಾನಿಸಲಾಯಿತು.

ಚೆನ್ನಗುಂಡಿ ಗ್ರಾಮದ ಯಜಮಾನರಾದ ಲಿಂಗರಾಜು,ಸಿ ಎಸ್ ರವಿ, ರಾಜಶೇಖರ್, ನಿಜಗುಣ,ಸಿ ಎಸ್ ಮಹದೇವಸ್ವಾಮಿ, ಮಲ್ಲಪ್ಪ, ವಾಟರ್ ಮಲ್ಲುಸ್ವಾಮಿ, ಪರಶಿವಮೂರ್ತಿ, ಕಲ್ಲೇಶ್, ಮಂಜು,ಮಹೇಶ್, ದೊರೆಸ್ವಾಮಿ, ಪುಟ್ಟಸ್ವಾಮಿ, ಸೋಮಶೇಖರ, ಉಮೇಶ, ಸಿ ಎಸ್ ಮಂಜು, ಜಯಪ್ಪ, ಬಿ ರವಿ, ಮಹೇಶ, ರಾಜಪ್ಪ, ಮಾದೇವಪ್ಪ, ಸಿ ಎನ್ ಮಹೇಶ್, ಟಿ ಎಸ್ ಜಯಣ್ಣ, ಸಿ ಎಂ ಮಂಜು, ಮಹೇಶ್, ಬಸವ ಬಳಗದ ಅಧ್ಯಕ್ಷ ಗಣಪತಿ ಇನ್ನಿತರ ಮುಖಂಡರುಗಳು ಹಾಜರಿದ್ದರು.

ರಾತ್ರಿ ಬದನವಾಳು ಶಿವಕುಮಾರ ಶಾಸ್ತ್ರಿ ಅವರಿಂದ ಶಿವಕಥೆ, ಮೈಸೂರಿನ ಮಲ್ಲಿಕಾ ಮತ್ತು ತಂಡದವರಿಂದ ವಚನ ಗಾಯನ ನಡೆಯಿತು.ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಇಡೀ ಚೆನ್ನಗುಂಡಿ ಗ್ರಾಮವು ವಿದ್ಯುತ್ ದೀಪಗಳಿಂದ ಘಮಘಮಿಸುತ್ತಿದ್ದವು. ಸರಗೂರು ತಾಲೂಕಿನ ಚೆನ್ನಗುಂಡಿ ಗ್ರಾಮದಲ್ಲಿ ಬೇಲದಕುಪ್ಪೆ ಶ್ರೀಮಹದೇಶ್ವರಸ್ವಾಮಿ ದೇವಾಲಯ ಉದ್ಘಾಟನೆ, ಕಳಶರೋಹಣ ಕಾರ್ಯಕ್ರಮ ಉದ್ಘಾಟಿಸಲಾಯಿತು. ಈ ಕಾರ್ಯಕ್ರಮಕ್ಕೆ ಸುತ್ತಮುತ್ತಲ ತಾಲೂಕುಗಳಿಂದ ಹಾಗೂ ಅಕ್ಕ ಪಕ್ಕದ ಗ್ರಾಮಗಳು ಗ್ರಾಮಸ್ಥರುಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.







