ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ 20ನೇ ವಾರ್ಷಿಕೋತ್ಸವದಲ್ಲಿ ಕೃತಿಗಳ ಲೋಕಾರ್ಪಣೆ

ಮೈಸೂರು: ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ 20ನೇ ವಾರ್ಷಿಕೋತ್ಸವದ ಅಂಗವಾಗಿ ಮೈಸೂರಿನ ವಿಜಯ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಪರಮೇಶ ಕೆ.ಉತ್ತನಹಳ್ಳಿ ಅವರ “ಸಾಕವ್ವನ ಸಾಂಗತ್ಯ” ಕವನ ಸಂಕಲನ ಮತ್ತು ಡಾ. ಸೌಗಂಧಿಕ ಜೋಯಿಸ್ ಅವರ ತನಿಗಂಧ ತನಗ ಸಂಕಲನ ಕೃತಿಗಳು ಲೋಕಾರ್ಪಣೆಗೊಂಡವು.
ಮಹಾಕವಯತ್ರಿಯವರಾದ ಡಾ. ಲತಾರಾಜಶೇಖರ ಅವರು ಲೋಕಾರ್ಪಣೆ ಮಾಡಿದರು. ಕೃತಿ ಕುರಿತು ಕೌಟಿಲ್ಯ ವಿದ್ಯಾಲಯದ ಕನ್ನಡ ಶಿಕ್ಷಕಿ, ನಿರೂಪಕಿ, ಕವಯತ್ರಿಯಾದ ಶ್ರೀಮತಿ ಶೋಭ ಬಿ ಅವರು ಮಾತನಾಡಿದರು, ಮುಖ್ಯ ಅತಿಥಿಗಳಾಗಿ ನಿಕಟ ಪೂರ್ವ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ವೈ.ಡಿ. ರಾಜಣ್ಣ ಭಾಗವಹಿಸಿ ಸಾಹಿತ್ಯದ ಹೊಸ ಹೊಳಹುಗಳ ಬಗ್ಗೆ ತಿಳಿಸಿದರು.

ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಎಂ.ಬಿ. ಸಂತೋಷ್ ಅವರು ಆಶಯ ನುಡಿಗಳನ್ನು ಆಡಿದರು, ಡಾ. ಆರ್. ವಾಣಿ ರಾಘವೇಂದ್ರ ಅವರು ಪ್ರಾಸ್ತಾವಿಕ ನುಡಿಗಳನ್ನು, ವಿದುಷಿ ಪನ್ನಗ ಎಸ್. ವಿ. ಅವರು ಪ್ರಾರ್ಥಿಸಿದರು, ರಾಘವೇಂದ್ರ ಸಿ.ಎಸ್. ಅವರು ಸ್ವಾಗತಿಸಿದರು, ಶ್ರೀಮತಿ ರೂಪಶ್ರಿ ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಸುಮಾರು ಹದಿನೈದು ಮಂದಿ ಉದಯೋನ್ಮುಖ ಕವಿಗಳು ಕವಿತೆಗಳನ್ನು ವಾಚಿಸಿದರು.
ಕಾರ್ಯಕ್ರಮದ ಎರಡನೇ ಭಾಗವಾಗಿ ಮಧ್ಯಾಹ್ನ ಎಂ.ಬಿ. ಸಂತೋಷ್ ಅವರ ಶ್ವೇತ ಭಾಗ-2 ಸಾಮಾಜಿಕ ಕಾದಂಬರಿಯ ಕನ್ನಡ ಹಾಗೂ ಅನುವಾದಕರಾದ ಶ್ರೀಮತಿ ವಾಣಿ ರಾಘವೇಂದ್ರ ಅನುವಾದಿಸಿರುವ ಇಂಗ್ಲೀಷ್ ಅವತರಣಿಕೆ ಶ್ವೇತಾ ಭಾಗ -2 ಮತ್ತು ರಾಘವೇಂದ್ರ ಸಿ.ಎಸ್. ಅವರ “ಕತ್ತಲ ದಾರಿಗೆ ಅಕ್ಷರ ದೀಪ್ತಿ” ಅಂಕಣ ಬರಹಗಳ ಸಂಕಲನ ಲೋಕಾರ್ಪಣೆ ಮಾಡಲಾಯಿತು. ಖ್ಯಾತ ಸಾಹಿತಿಗಳು ಮತ್ತು ನಿವೃತ್ತ ತಹಶೀಲ್ದಾರರಾದ ರಂಗನಾಥ್ ಅವರು ಉದ್ಘಾಟನೆಯನ್ನು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಡಾ. ಕೃ.ಪ. ಮಂಜುನಾಥ್ ಭಾಗವಹಿಸಿದ್ದರು.

ಎಂ.ಬಿ. ಸಂತೋಷ್ ಅವರ ಶ್ವೇತ ಭಾಗ-2 ಸಾಮಾಜಿಕ ಕಾದಂಬರಿಯ ಕನ್ನಡ ಹಾಗೂ ಅನುವಾದಕರಾದ ಶ್ರೀಮತಿ ವಾಣಿ ರಾಘವೇಂದ್ರ ಅನುವಾದಿಸಿರುವ ಇಂಗ್ಲೀಷ್ ಅವತರಣಿಕೆ “ಶ್ವೇತಾ ಭಾಗ -2 ” ವನ್ನು ಕೃತಿ ಕುರಿತು ಶ್ರೀಮತಿ ವಾಣಿ ರಾಘವೇಂದ್ರ ಮಾತನಾಡಿದರು, ರಾಘವೇಂದ್ರ ಸಿ.ಎಸ್. ಅವರ “ಕತ್ತಲ ದಾರಿಗೆ ಅಕ್ಷರ ದೀಪ್ತಿ” ಅಂಕಣ ಬರಹಗಳ ಸಂಕಲನ ಕುರಿತು ಶಿಕ್ಷಕಿ, ನಿರೂಪಕಿ, ಸಾಹಿತಿಗಳು ಆಗಿರುವ ಶ್ರೀಮತಿ ಶೋಭಾ ನಾಗಭೂಷಣ ಅವರು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ವಹಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಎಂ.ಬಿ. ಸಂತೋಷ ಸರ್ ಉಪಸ್ಥಿತರಿದ್ದರು. ಡಾ. ಸೌಗಂಧಿಕ ಜೋಯಿಸ್ ಮೇಡಂ ಅವರು ಸ್ವಾಗತಿಸಿದರು. ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಪರಮೇಶ ಕೆ. ಉತ್ತನಹಳ್ಳಿ ಅವರು ನಿರೂಪಣೆಯನ್ನು ಮಾಡಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಲವರಿಗೆ ವಿವಿಧ ಸಾಹಿತ್ಯ ಪ್ರಶಸ್ತಿ, ಬಾಲಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಾಕವ್ವನ ಸಾಂಗತ್ಯ ಕೃತಿ ಲೋಕಾರ್ಪಣೆ… ಲೇಖಕ ಪರಮೇಶ ಕೆ.ಉತ್ತನಹಳ್ಳಿಯವರ ಬದುಕು ಬರಹ..







