LatestMysore

“ಕಾವೇರಿ ವಿರಾಸಾಥ್”- ವಾರ್ಷಿಕೋತ್ಸವ ಸಂಭ್ರಮ.. ಸಹಜ ಶಿಕ್ಷಣಕ್ಕೆ ಕಾವೇರಿ ವಿದ್ಯಾಸಂಸ್ಥೆ ಒತ್ತು

ಮೈಸೂರು: ಮಕ್ಕಳ ಪ್ರಾಥಮಿಕ ಹಂತದ ಶಿಕ್ಷಣ ಬಹು ಮುಖ್ಯ ಪ್ರಾಮುಖ್ಯತೆಯನ್ನು ಹೊಂದಿದ್ದು, ಈ ಹಂತದಲ್ಲಿ ಅವರಲ್ಲಿ ಕಲಿಕೆ ಹಾಗೂ ಶಿಸ್ತು ಮೂಡಿಸಲು ಅನಗತ್ಯ ನಿಬಂಧನೆಗಳನ್ನು ಹೇರದೆ  ಸಹಜ ಶಿಕ್ಷಣ ಕಲಿಕೆಗೆ ಒತ್ತು ನೀಡುವ ಮೂಲಕ ಮೈಸೂರು ನಗರದಲ್ಲಿ ಕಾವೇರಿ ವಿದ್ಯಾ ಸಂಸ್ಥೆ ಶೈಕ್ಷಣಿಕವಾಗಿ ಉತ್ತಮವಾಗಿ ಮುನ್ನಡೆಯುತ್ತಿದೆ ಎಂದು ಮೈಸೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯರು ಹಾಗೂ ವಕೀಲರಾದ  ಎಂ. ಯು. ಸುಬ್ಬಯ್ಯ ಹೇಳಿದರು.

ನಗರದ ಕುವೆಂಪುನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ ಗಾನಭಾರತಿ ಆವರಣದಲ್ಲಿರುವ ರಮಾಗೋವಿಂದ ಕಲಾ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಕಾವೇರಿ ವಿದ್ಯಾ ಸಂಸ್ಥೆಯ ವಾರ್ಷಿಕೋತ್ಸವ “ಕಾವೇರಿ ವಿರಾಸಾಥ್” ಅನ್ನು   ಗಣ್ಯರೊಂದಿಗೆ ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು.

ಬಳಿಕ ಅವರು ಮಾತನಾಡಿ, ಶಾಲಾ ಶಿಕ್ಷಣ ಎಂಬುದು ಕಲಿಕೆಗೆ ವೇದಿಕೆಯಾಗಬೇಕೆ ಹೊರತು, ಅನಗತ್ಯ ಶಿಸ್ತು,  ಆಡಂಬರದ ಶೈಲಿಯ ಸಮವಸ್ತ್ರ, ಕಲಿಕಾ ವಿಧಾನ, ಬಹುಮಹಡಿಗಳ ಕಟ್ಟಡಗಳ ಅಂಗಳವಾಗ ಬಾರದು. ವಿದ್ಯಾರ್ಥಿಯ ಸರ್ವತೋಮುಖ ಪ್ರಗತಿಗೆ ಪೂರಕವಾದ ಸಾಂಸ್ಕೃತಿಕ ಹಾಗು ನೈತಿಕ ಮೌಲ್ಯದ ಶಿಕ್ಷಣವನ್ನು ಶಾಲೆಗಳು ನೀಡುವಂತಾಗಬೇಕು ಎಂದರು.

ಕಾವೇರಿ ವಿದ್ಯಾ ಸಂಸ್ಥೆ ಎಜುಕೇಶನ್ ಕೌನ್ಸಿಲ್ ಅಧ್ಯಕ್ಷರಾದ ಸಿ. ಯು.ಚೆಂಗಪ್ಪ ಅವರು ಮಾತನಾಡಿ   ಮಕ್ಕಳ ಮನಸ್ಸು ಸೂಕ್ಷ್ಮ ಗ್ರಹಿಕೆಯ ತಾಣ. ಉತ್ತಮ ಪರಿಸರ, ಶಿಕ್ಷಕರ ಪ್ರಜ್ಞಾಪೂರ್ವಕ ಕಲಿಕೆ ಹಾಗೂ ಜವಾಬ್ದಾರಿಯುತ ಪೋಷಕರ ಒತ್ತಾಸೆಯಿಂದ ವಿದ್ಯಾರ್ಥಿಯು ಭವಿಷ್ಯದ ಉತ್ತಮ ಪ್ರಜೆಯಾಗಿ ರೂಪುಗೊಳ್ಳುತ್ತಾನೆ.

ಪೋಷಕರು ಮಕ್ಕಳ ಓದಿನ ಸಮಯದಲ್ಲಿ ಗಮನಹರಿಸಿ , ತಮ್ಮ ಮಕ್ಕಳ ಕುರಿತು ಶಾಲೆ ಹಾಗೂ ಶಿಕ್ಷಕರೊಂದಿಗೆ  ಆಗಿಂದಾಗೆ ಭೇಟಿ ನೀಡಿ ತಿಳಿದುಕೊಳ್ಳಬೇಕು ಎಂದು ನು ಡಿದರು. ಶಾಲೆಯ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭಿಕರು ಹಾಗೂ ಪೋಷಕರನ್ನು ಮನರಂಜಿಸಿತು.

ಸಭಾ ಕಾರ್ಯಕ್ರಮದಲ್ಲಿ ಕಾವೇರಿ ಎಜುಕೇಶನ್ ಕೌನ್ಸಿಲ್ ಉಪಾಧ್ಯಕ್ಷ ಎಂ.ಪಿ. ನಾಣಯ್ಯ, ಗೌರವ ಕಾರ್ಯದರ್ಶಿ ಕೆ.ಪಿ .ಉತ್ತಪ್ಪ, ಖಜಾಂಚಿ ಕೆ.ಪಿ.ಕಾರ್ಯಪ್ಪ, ಆಡಳಿತ ಅಧಿಕಾರಿ ಡಾ.ಸಿ.ಈ.ಸುಬ್ರಮಣ್ಯ, ಪ್ರಾಂಶುಪಾಲರಾದ ಎನ್. ಸಿ ನವೀನ್ ಹಾಗೂ ಪದ್ಮಾವತಿ, ವಿವಿಧ ವಿಭಾಗಗಳ ಮುಖ್ಯ ಬೋಧಕರು,  ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

admin
the authoradmin

Leave a Reply

Translate to any language you want