Latest

ಚಾಮರಾಜನಗರ ಈಶ್ವರೀಯ ವಿಶ್ವ ವಿದ್ಯಾಲಯದಲ್ಲಿ 2025ಕ್ಕೆ ಬೀಳ್ಕೊಡುಗೆ.. 2026ಕ್ಕೆ ಸ್ವಾಗತ..

ಹೊಸ ವರ್ಷದಲ್ಲಿ ಯಾವುದೇ ಭಾರವಿಲ್ಲ. ಕಹಿ ಇಲ್ಲ. ಕೇವಲ ಸ್ಪಷ್ಟ ಮನಸ್ಸು ಮತ್ತು ಸತ್ಯ ಏಕೆಂದರೆ ಹಳೆಯ ಕುಂದು ಕೊರತೆಗಳನ್ನು ಬಿಟ್ಟಾಗ ಹೊಸ ವರ್ಷ ಉತ್ತಮವಾಗಿರುತ್ತದೆ.

ಚಾಮರಾಜನಗರ: ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಪ್ರಕಾಶ ಭವನದಲ್ಲಿ 2025 ಕ್ಕೆ ಬೀಳ್ಕೊಡುಗೆ ನೀಡಿ 2026 ಕ್ಕೆ ಸ್ವಾಗತ ಹಾಗೂ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕ್ಯಾಲೆಂಡರ್ ಬಿಡುಗಡೆಗೊಳಿಸಿ   ಮಾತನಾಡಿದ ಮನೋಬಲ ತರಬೇತಿದಾರೆ ರಾಜಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜೀ ಅವರು, ಹೊಸ ವರ್ಷವೆಂದರೆ ಕ್ಯಾಲೆಂಡರ್ ಮಾತ್ರ ಬದಲಾವಣೆ ಮಾಡುವುದಲ್ಲ, ಕ್ಯಾರೆಕ್ಟರ್ ಗಳು ಅಂದರೆ ಆಸುರಿ ನಡೆತೆಗಳನ್ನ ದೈವೀ ನಡತೆಯನ್ನಾಗಿ ಸಹ ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದರು.  2025ರ ಅಂತ್ಯ ವರ್ಷದಲ್ಲಿ ಯಾರಾದರೂ ನನ್ನ ಮನಸ್ಸು ಕಾರ್ಯಗಳು ಮತ್ತು ಮಾತಿನಿಂದ ತಿಳಿದು ಅಥವಾ ತಿಳಿದೆಯೋ ನೋವಾಗಿದ್ದರೆ ಯಾರೊಬ್ಬರ ಹೃದಯವು ನೋಯುತ್ತಿದ್ದರೆ ಯಾರೊಬ್ಬರ ಭರವಸೆ ಮುರಿದುಹೋಗಿದೆ. ಆಗ ನಾನು ನನ್ನ ಹೃದಯದಿಂದ ಕ್ಷಮೆ ಯಾಚಿಸುತ್ತೇನೆ.

ನಾವೆಲ್ಲರೂ ಮನುಷ್ಯರು ತಪ್ಪುಗಳನ್ನು ಮಾಡುತ್ತೇವೆ .ಆದರೆ ವರ್ಷದ ಕೊನೆಯಲ್ಲಿ ನಿಮ್ಮ ಹೃದಯವನ್ನು ಹಗುರುಗೊಳಿಸುವುದು ಮತ್ತು ಕ್ಷಮೆ ಯಾಚಿಸುವುದು ಉತ್ತಮ ಆರಂಭವಾಗಿದೆ. ಹೊಸ ವರ್ಷದಲ್ಲಿ ಯಾವುದೇ ಭಾರವಿಲ್ಲ. ಕಹಿ ಇಲ್ಲ. ಕೇವಲ ಸ್ಪಷ್ಟ ಮನಸ್ಸು ಮತ್ತು ಸತ್ಯ ಏಕೆಂದರೆ ಹಳೆಯ ಕುಂದು ಕೊರತೆಗಳನ್ನು ಬಿಟ್ಟಾಗ ಹೊಸ ವರ್ಷ ಉತ್ತಮವಾಗಿರುತ್ತದೆ. ಹೃದಯವು ಹಗುರವಾಗುತ್ತದೆ. ಮತ್ತು ಮುಂದೆ ಸಾಗುತ್ತೇವೆ ಎಂದು ತಿಳಿಸಿದರು.

ಪ್ರಾಧ್ಯಾಪಕಿ ಭಾವನಾ ಮಾತನಾಡಿ ವೈರಿಗಳಿಗಿಂತಲೂ ಹತೋಟಿ ಇಲ್ಲದ ಮನಸ್ಸೇ ಹೆಚ್ಚು ಕೆಡಕನ್ನು ಉಂಟುಮಾಡುತ್ತದೆ. ಆದ್ದರಿಂದ ಮನಸ್ಸಿಗೆ ಒಡೆಯರಾಗಿ, ಗುಲಾಮರಲ್ಲ, ಈ ವಿಚಾರವನ್ನು ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ರಾಜಯೋಗದ ಮೂಲಕ ತಿಳಿಸಿ ಕೊಡುವುದು ಬಹಳ ಅವಶ್ಯಕತಯಿದೆ ಎಂದರು.

ಪತಂಜಲಿ ಯೋಗ ಶಿಕ್ಷಕ ಗುರುಮಲ್ಲಪ್ಪ ಮಾತನಾಡಿ ಯಾವ ವ್ಯಕ್ತಿ ತನ್ನ ನಿಬಂಧನೆಗಳನ್ನು ಸಮಾಧಾನದಿಂದ ಕೇಳಿಸಿಕೊಳ್ಳುತ್ತಾನೋ ಅವನು ಇಡೀ ಜಗತ್ತಿನ ಮೇಲೆ ವಿಜಯ ಸಾಧಿಸುತ್ತಾನೆ. ಇದು ಯೋಗದಿಂದ ಮಾತ್ರ ಸಾಧ್ಯ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ರಿಯಾಳ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಓಂ ಶಾಂತಿ ನ್ಯೂ ಸರ್ವಿಸ್ ನ ಬಿಕೆ ಆರಾಧ್ಯ, ನ್ಯಾಯಾಂಗ ಇಲಾಖೆಯ ಶ್ರೀನಿವಾಸ್, ಆರೋಗ್ಯ ಇಲಾಖೆಯ ಪುಷ್ಪ, ಗೀತಾ, ಶಿಕ್ಷಣ ಇಲಾಖೆಯ ಸುಂದರ ನಾಗರಾಜ್, ಪ್ರಮೀಳಾ ಊದುಗಡ್ಡಿ,ಲಕ್ಷ್ಮಿ, ನರಸಿಂಹ ಪ್ರಸಾದ್, ಶಿವಕುಮಾರ್, ಆಶಾ, ರಾಧಾ, ಮಂಜುಳಾ, ತ್ರಿವೇಣಿ, ಶಿವಕಮಲ, ಜಗದಂಬ, ಭಾಗ್ಯ, ತ್ರಿಲೋಚನ, ಪೊಲೀಸ್ ಇಲಾಖೆಯ ಸಿದ್ದಯ್ಯಣ್ಣ, ಅರ್ಜುನ್, ಪಾಲಾಕ್ಷಯ್ಯ, ಶೋಭಾ, ಲಕ್ಷ್ಮಮ್ಮ, ಹಾಜರಿದ್ದರು.

admin
the authoradmin

ನಿಮ್ಮದೊಂದು ಉತ್ತರ

Translate to any language you want