ಬದಲಾವಣೆಯ ಕಾಲಘಟ್ಟದಲ್ಲಿ ನಿಂತು ನೋಡುವವರಿಗೆ ಕಾಣುತ್ತಿರುವುದೇನು? ಇಷ್ಟಕ್ಕೂ ಬದಲಾಗುತ್ತಿರುವುದೇನು?

ಬದಲಾವಣೆ ಜಗದ ನಿಯಮ ಎನ್ನುವುದು ಜನಜನಿತ ಮಾತು.. ಆದರೆ ಬದಲಾವಣೆ ಆಗಬೇಕಾಗಿರುವುದು ಎಲ್ಲಿ ಎನ್ನುವುದೇ ಇವತ್ತಿನ ಪ್ರಶ್ನೆಯಾಗಿದೆ. ಏಕೆಂದರೆ ಎಲ್ಲಿ ಬದಲಾಗಬಾರದೋ ಅಲ್ಲಿಯೇ ನಾವು ಬದಲಾಗುತ್ತಿದ್ದೇವೆ. ಇದರಿಂದ ಒಳಿತಿಗಿಂತ ಕೆಡಕು ಜಾಸ್ತಿ ಆಗುತ್ತಿದೆ. ನಮ್ಮ ಬದಲಾವಣೆ ಜಗಕ್ಕೆ ಇರಲಿ ಕೊನೆ ಪಕ್ಷ ನಮಗಾದರೂ ಒಳ್ಳೆಯದು ಮಾಡುವಂತಿದ್ದರೆ ಸಾಕಿತ್ತು. ಆದರೆ ಅದ್ಯಾವುದೂ ಆದಂತೆ ಕಾಣುತ್ತಿಲ್ಲ. ಬದಲಾಗುವುದು ಎಂದರೆ ಹಳೆಯದರ ಜೊತೆಗೆ ಹೊಸತನ್ನು ಸೇರಿಸಿಕೊಳ್ಳುವುದಾಗಿದೆ. ಆದರೆ ಜರೂರಾಗಿ ಆಗುತ್ತಿರುವ ಕೆಲವೊಂದು ಬದಲಾವಣೆಗಳು ನಮ್ಮ ಹಿರಿಯರು ರೂಢಿಸಿಕೊಂಡು ಬಂದಿದ್ದ ಆರೋಗ್ಯಕಾರಿ ಗುಣಗಳನ್ನೇ ಕಿತ್ತುಕೊಳ್ಳಲಾರಂಭಿಸಿದೆ… ಹಾಗಾದರೆ ಏನಿದು ಬದಲಾವಣೆಯ ಕರಾಮತ್ತು ಅಂತಿರಾ? ಇಲ್ಲಿದೆ ಓದಿ ಬಿಡಿ..
ಮುಂದಿನ 15 ವರ್ಷದಲ್ಲಿ 1950-60ರ ತಲೆಮಾರಿನ ಜನ ಸಂಪೂರ್ಣ ಕಾಣೆಯಾಗುತ್ತಾರೆ..?! ಇದು ಅಚ್ಚರಿ ಎನಿಸಿದರೂ ಸತ್ಯ.. ಏಕೆಂದರೆ *ರಾತ್ರಿ ಬೇಗಮಲಗಿ ಬೆಳಗ್ಗೆ ಬೇಗ ಏಳುವವರು, *ನಸುಕಿನಲ್ಲಿ ವಾಯುವಿಹಾರ ಮಾಡುವವರು, *ಅಂಗಳಗುಡಿಸಿ ನೀರುಚಿಮ್ಕಿಸಿ ರಂಗೋಲಿ ಹಾಕಿ ರೇಡಿಯೋ ಸುಪ್ರಭಾತ/ ದೇವರನಾಮ ಕೇಳು(ಳಿಸು)ವವರು, *ಮುಂಜಾನೆ ಗಿಡಬಳ್ಳಿಗೆ ನೀರುಣಿಸಿ ದೇವರ ಪೂಜೆಗೆ ಹೂವು ಕೊಯ್ಯುವವರು, *ಪ್ರತಿದಿನವೂ ದೇವಸ್ಥಾನಕ್ಕೆ ಹೋಗುವವರು, *ಕಂಡಾಗಲೆಲ್ಲ ಆತ್ಮೀಯವಾಗಿ ಮುಗುಳ್ನಗುತ್ತ ಎರಡೂ ಕೈಗಳಿಂದ ಮನಃಪೂರ್ವಕವಾಗಿ ನಮಸ್ಕರಿಸುವವರು
ಇದನ್ನೂ ಓದಿ: ಉಪ್ಪಿಗಿಂತ ರುಚಿ ಬೇರೆ ಇಲ್ಲ… ಒಪ್ಪಿಕೊಂಡೋರು ದಡ್ಡರಲ್ಲ… ತಿಳಿದವರು ಹೀಗೆ ಹೇಳಿದ್ದೇಕೆ?
*ನೆರೆಹೊರೆಯವರ ಮತ್ತು ಪರಿಚಯಸ್ಥರ ಸುಖ ದುಃಖ ವಿಚಾರಿಸುವವರು, *ಹಳೆಯ ಟೆಲಿಫೋನ್ ಬಳಸುವವರು, *Wrong ನಂಬರ್ ಕರೆಬಂದರೂ ಸೌಜನ್ಯದ ಮಾತುಗಳನ್ನಾಡುವವರು, *ದಿನಪತ್ರಿಕೆಯನ್ನು ಸಂಪೂರ್ಣ ಓದುವವರು *ಉಪವಾಸ ವ್ರತ ನಿಯಮ ಪಾಲಿಸುವವರು, *ಸಮಾಜ ಪೊಲೀಸ್ ಕೋರ್ಟ್ ಕಛೇರಿ ಕಾನೂನಿಗೆ ಹೆದರುವವರು, *ಹಳೆಚೆಡ್ಡಿ ಪಂಚೆ ಚಪ್ಪಲಿ ಬನಿಯನ್ ಧರಿಸುವವರು, *ಮನೆಯಲ್ಲೇ ಅಡಿಗೆಮಾಡಿ ಊಟಮಾಡೋರು, *ಮನೆಯಲ್ಲೇ ಉಪ್ಪಿನಕಾಯಿ ಹಪ್ಪಳಸಂಡಿಗೆ ತಯಾರಿಸೋರು, ಮಸಾಲೆ ರುಬ್ಬುವವರು, *ಕುಂಕುಮದ ನೀರಲ್ಲಿ ದೃಷ್ಟಿ ತೆಗೆಯುವವರು, *ವ್ಯಾಪಾರದವರೊಡನೆ ಚೌಕಾಸಿ ಮಾಡೋರು, *ಪ್ರತಿರೂಪಾಯಿಗೂ ಬೆಲೆ ಕೊಡುವವರು, *ಖರ್ಚು-ವೆಚ್ಚದ ಲೆಕ್ಕ ಇಡುವವರು.
*ದಿನಚರಿ(ಡೈರಿ) ಬರೆಯುವವರು, *ಹಣಕ್ಕಿಂತ ಗುಣಕ್ಕೆ, ಆಸ್ತಿಗಿಂತ ವ್ಯಕ್ತಿ(ಅಸ್ತಿ)ಗೆ ಮಾನ್ಯತೆ ಕೊಡುವವರು, *ಒಡವೆ-ವಸ್ತ್ರಕ್ಕಿಂತ ನಡತೆ(ನಡೆ-ನುಡಿ)ಗೆ ಗೌರವ ನೀಡುವವರು, *ಮಕ್ಕಳನ್ನ ಮನೆಯಲ್ಲಿ ಬೆಳಸುತ್ತ ಅವರ ಜತೆ ಆಟವಾಡುವ ಪೋಷಕರು(ತಂದೆತಾಯಿ), *ಅಜ್ಜ ಅಜ್ಜಿ ಜತೆಗೆ ಆಡುವ ಮೊಮ್ಮಕ್ಕಳು, *ಮುಮ್ಮಕ್ಕಳಿಗೆ ಕಥೆ ಹೇಳುವ, ಪದ ಹಾಡುವ ಮುತ್ತಜ್ಜ ಮುತ್ತಜ್ಜಿಯರು ಎಲ್ಲರೂ ಮರೆಯಾಗುವ ಲಕ್ಷಣಗಳು ಗೋಚರಿಸುತ್ತದೆ.
ಇದನ್ನೂ ಓದಿ: ಸಂಶಯ ಪಿಶಾಚಿ ನಿಮ್ಮ ಬದುಕನ್ನು ನಾಶ ಮಾಡುವ ಮುನ್ನ ಎಚ್ಚರವಾಗಿರಿ… ಏಕೆ ಗೊತ್ತಾ?
*ಮನೆಯಲ್ಲಿ ತಮ್ಮ-ತಂಗಿಯರಿಗೆ ಪಾಠ ಹೇಳುವ ಅಣ್ಣ-ಅಕ್ಕ, ಚಿಕ್ಕಪ್ಪ-ಚಿಕ್ಕಮ್ಮ, ದೊಡ್ಡಪ್ಪ-ದೊಡ್ಡಮ್ಮ, ಸೋದರಮಾವ- ಸೋದರತ್ತೆ, ಸೋದರಳಿಯ, ಸೋದರಸೊಸೆ ಅತ್ತಿಗೆ-ನಾದಿನಿ, ಬಾವ-ಬಾಮೈದ, ಚಿಕ್ಕಮಾವ-ಚಿಕ್ಕತ್ತೆ, ದೊಡ್ಡಮಾವ-ದೊಡ್ಡತ್ತೆ, ದೊಡ್ಡಜ್ಜಿ-ದೊಡ್ಡಜ್ಜ, ಚಿಕ್ಕಜ್ಜಿ-ಚಿಕ್ಕಜ್ಜ, ಮಿತ್ರ ಚಡ್ಡಿದೋಸ್ತ್ ಮುಂತಾದ ಅನೇಕ ಬಂಧು ಬಳಗದ ಸಂಬಂಧಗಳೆಲ್ಲಾ ಬೇಕೆಬೇಕು ಎನ್ನುವ ತಲೆಮಾರಿನವರು ಒಂದೇಸಲ ಸಾರಾಸಗಟಾಗಿ ಹಳ್ಳಿ ಗ್ರಾಮಾಂತರದಲ್ಲಿ ನಗರ ಪಟ್ಟಣದಲ್ಲಿ ಒಟ್ಟಾರೆ ಇಡೀ ಸಮಾಜದಿಂದಲೇ ಸಂಪೂರ್ಣ ಕಾಣೆಯಾಗಲಿದ್ದಾರೆ! ಸರಿಯಾದ ಜೀವನ ಪಾಠಗಳೂ ಸಹ ಕಣ್ಮರೆಯಾಗುತ್ತವೆ. ಆದ್ದರಿಂದ, ಈ ಹೊತ್ತು ಸಧ್ಯಕ್ಕೆ ನಿಮ್ಮಲ್ಲಿ ಯಾರಿಗಾದ್ರೂ ಮೇಲೆ ತಿಳಿಸಿದಂತೆ ಬಂಧು ಬಾಂಧವರಿದ್ದರೆ ನೀವೇ ಪುಣ್ಯವಂತರು. ಇವರೆಲ್ಲ ಹೆಚ್ಚುವರ್ಷ ನಿಮ್ಮೊಂದಿಗೆ ಇರುವುದಿಲ್ಲ. ತಡಮಾಡದೇ ನೀವೇ ಅವರ ಜತೆ ಅಮೂಲ್ಯ ಕ್ಷಣಗಳನ್ನು ಕಳೆಯಬೇಕು.
ಇನ್ನೊಂದು ಮುಖ್ಯವಿಷಯ ಏನೆಂದರೆ 1950-1960 ಇಸವಿ ಅವಧಿಯಲ್ಲಿ ಜನಿಸಿರುವಂಥವರು ಭಾಗ್ಯವಂತರು. ಏಕೆಂದರೆ ಮೇಲಿನ ಸಂಬಂಧ ಗಳನ್ನು ನೋಡಿರುತ್ತಾರೆ?! ಹಿಂದಿನಕಾಲ ಮತ್ತು ಇಂದಿನ ಕಾಲ ಎರಡನ್ನು ಅನುಭವಿಸಿರುತ್ತಾರೆ. ಎತ್ತಿನಗಾಡಿ, ಕುದುರೆಟಾಂಗ, ಬೈಸಿಕಲ್, ಸ್ಕೂಟರ್, ಮೋಟಾರ್ ಬೈಕ್ ಕಾರ್ ಏರೋಪ್ಲೇನ್, ಯುದ್ಧ, ಹೆಲಿಕಾಪ್ಟರ್, ರಾಕೆಟ್ ಹಾಗೂ ರೇಡಿಯೋ, ಟಿವಿ, ಮೊಬೈಲ್, ಇಂಟರ್ನೆಟ್ ವರೆಗೂ. ಚಿನ್ನಿದಾಂಡು, ಕುಂಟೆ ಪಿಲ್ಲೆ, ಕಬ್ಬಡ್ಡಿ, ಮರಕೋತಿ, ಬಾಕ್ಸಿಂಗ್, ಕುಸ್ತಿ, ಕ್ರಿಕೆಟ್ ಈ ಎಲ್ಲತರದ ಆಟ, ಗರಡಿಮನೆ, ಜಿಮ್, ಕಾಲರಾ ಮಲೇರಿಯ ಕೋವಿಡ್-19 ಕೊರೋನ ಮುಂತಾದ ಎಲ್ಲವನ್ನೂ ಕಂಡಿರುವುದರ ಜತೆಗೇ ಬಡತನ, ಮಧ್ಯಮವರ್ಗ, ಶ್ರೀಮಂತಿಕೆ ಎಲ್ಲವನ್ನೂ ಬಲ್ಲ ಇವರು ಬದುಕಿರೋವರೆಗೂ ಇವರದ್ದಾಗಿ(ತ್ತು)ರುತ್ತದೆ.
ಇದನ್ನೂ ಓದಿ: ಬದಲಾದ ಈ ಕಾಲ ಘಟ್ಟದಲ್ಲಿ ಜನರು ಹೊಟ್ಟೆಗಾಗಿ- ಗೇಣುಬಟ್ಟೆಗಾಗಿ ಮಾತ್ರ ದುಡಿಯುತ್ತಿಲ್ಲ… ಮತ್ತೆ?
ಒಂದು ಸರಳ ಸುಂದರವಾದ ಬದುಕು, ಪ್ರೇರಣೆ ತುಂಬುವಂಥ ಬದುಕು, ನಾಟಕೀಯ(ಬೂಟಾಟಿಕೆ) ಅಲ್ಲದ ಬದುಕು, ಸತ್ಯಧರ್ಮದ ದಾರಿ ತೋರಿಸುವ ಬದುಕು, ಇತರರಿಗೆ ಸ್ಪಂದಿಸುವ ಹಸನ್ಮುಖೀ ಬದುಕು! ಈ ಸ್ವಭಾವಗಳುಳ್ಳ ತಲೆಮಾರಿನ ಜನರೆಲ್ಲ ಮುಂದಿನ ಹತ್ತು, ಹದಿನೈದು ವರ್ಷಗಳಲ್ಲಿ ಸಂಪೂರ್ಣ ಕಾಣೆಯಾಗುತ್ತಾರೆ. ಆದ್ದರಿಂದ ಇಂಥವರಿಂದ ಜೀವನಾನುಭವ ಕಲಿಯುವ ಮೂಲಕ ಸಂಸ್ಕ್ರತಿ ಉಳಿಸೋಣ. ಪವಿತ್ರ ಸಂಬಂಧಗಳನ್ನು ಬೆಸೆಯೋಣ ಎಲ್ಲರನ್ನೂ ಬೆಳಸೋಣ.. ಏನಂತೀರಾ?
The ever best notes article about the current situation of GENERATION GAP truth, thanks sir
Thank you so much LAVA sir 💖 🙏
ಫಸ್ಟ್ ಕ್ಲಾಸ್ ಆರ್ಟಿಕಲ್, ನಮ್ಮ ತಾಯಿಯವರಿಗೆ ತುಂಬ ಇಷ್ಟವಾಯ್ತು ಸರ್ ಈ ಲೇಖನ ಬರೆದವರಿಗೆ ನಮ್ಮಇಡೀ ಕುಟುಂಬದವರು ಥ್ಯಾಂಕ್ಸ್ ಹೇಳಿದ್ದಾರೆ. ನಿಮ್ಮ ಜನಮನ ಪತ್ರಿಕೆಗೆ ನಮ್ಮ ಕಡೆಯಿಂದ ತುಂಬ ತುಂಬ ಧನ್ಯವಾದ,
ಹುಡುಕಿದರೂ ಸಿಗದ ಜ್ಞಾನ ಭಂಡಾರ ನಿಮ್ಮತ್ರ ಇದೆ ಕುಮಾರಕವಿ ಸರ್.
ನಮ್ಮ ಕನ್ನಡಿಗರು ವಜ್ರ ಬಿಟ್ಟು ಗಾಜಿನ ಹಿಂದೆ ಹೋಗ್ತಾ ಇದ್ದಾರೆ. ಜನಮನ ಕನ್ನಡ ಪತ್ರಿಕೆಯ ಪ್ರತಿಯೊಂದು ಲೇಖನವೂ ಉಪಯುಕ್ತವಾದದ್ದು ಎಂದು ತಿಳಿಸಲು ಹೆಮ್ಮೆ ಪಡುವೆನು, ನಿಮಗೆಲ್ಲ ಧನ್ಯವಾದಗಳು ಸರ್
ಮಂಡಕಳ್ಳಿ ಶಾಂತಕುಮಾರ್, ಮಾದರಿ ರೈತ
ನಟರಾಜ ಕುಮಾರಕವಿಯವರ ಈ ಲೇಖನ ನೂರಕ್ಕೆ ನೂರು ಸತ್ಯ. ನಾನೂಸಹ 1951ರಲ್ಲಿ ಜನಿಸಿದೆ. ಹಳೇ ಸಿನಿಮ-ನಾಟಕ, ಚಿತ್ರಗೀತೆ ಹಾಗೂ ವಿದ್ಯಾಭ್ಯಾಸ ಇವುಗಳಿಗೂ ಇದು ಅನ್ವಯ ಆಗುತ್ತದೆ ಎಂದು ನನ್ನ ಅಭಿಪ್ರಾಯ, ಆದೇನೇ ಇರಲಿ ಇವರ ಪ್ರತಿಯೊಂದು ಲೇಖನ ಕವನ ಅತ್ಯುತ್ತಮ, ಮಾರ್ಗದರ್ಶನ ಹಾಗೂ ಸಂಗ್ರಹ ಯೋಗ್ಯ! ಕನ್ನಡ ಜನಮನ ಪತ್ರಿಕೆಯವರಿಗೆ ಮನಪೂರ್ವಕ ವಂದನೆ, ಧನ್ಯವಾದ
ನಾನು ವಸಂತ ನಿವೃತ್ತ ಮಹಿಳಾ ಆರೋಗ್ಯಾಧಿಕಾರಿ. ನಿಮ್ಮ ಜನಮನ ಕನ್ನಡ ಪತ್ರಿಕೆಯನ್ನು ಕಳೆದ 2-3 ತಿಂಗಳ ಹಿಂದೆ ಒಮ್ಮೆ ಓದಿದ ನೆನಪು. ಬಹುಶಃ ಬಾಳೆ ಎಲೆ ಊಟ ಮತ್ತು ಪಂಕ್ತಿ ಊಟದಲೆ ಮೇಲಿನ ಉಪ್ಪಿನ ಬಗ್ಗೆಲ್ಲ ಬರೆದಿದ್ದ ನಟರಾಜ ಕವಿಯವರ ಲೇಖನ ಇರಬಹುದು ಎಂದು ನನ್ನ ನೆನಪು. ಈಗ ಮತ್ತೆ ಈವತ್ತು ಈ ಲೇಖನ ಓದಿದ ನನಗೆ ಬಹಳ ಸಂತೋಷ ಆಗಿದ್ದು ಲೇಖಕರು ಮತ್ತು ಪತ್ರಿಕೆಯವರಿಗೂ ತುಂಬ ಧನ್ಯವಾದಗಳು ಸರ್.
ಹಳೇ ತಲೆಮಾರಿನ ಜನರೆಲ್ಲರ ಕಷ್ಟನಷ್ಟ ಸುಖದುಃಖ ಜೀವನಶೈಲಿ ಇತ್ಯಾದಿ ಬಗ್ಗೆ ಒಂದು ಬೆಳಕಿನ ಕಿರಣದಂತೆ ಇರುವ ಈ ಲೇಖನವಂತು ಉತ್ತಮವಾಗಿದ್ದು ಪ್ರಯೋಜನಕಾರಿಯೂ ಆಗಿದೆ. ಇವತ್ತಿನ ಪೀಳಿಗೆಯವರು ಓದಲೇ ಬೇಕಾದಂತಹ ಅತ್ಯುತ್ತಮ ಲೇಖನ
ಫಸ್ಟ್ ಕ್ಲಾಸ್ ಆರ್ಟಿಕಲ್, ನಮ್ಮ ತಾಯಿಯವರಿಗೆ ತುಂಬ ಇಷ್ಟವಾಯ್ತು ಸರ್ ಈ ಲೇಖನ ಬರೆದವರಿಗೆ ನಮ್ಮಇಡೀ ಕುಟುಂಬದವರು ಥ್ಯಾಂಕ್ಸ್ ಹೇಳಿದ್ದಾರೆ. ನಿಮ್ಮ
ಜನಮನ ಪತ್ರಿಕೆಗೆ ನಮ್ಮ ಕಡೆಯಿಂದ ತುಂಬ ತುಂಬ ಧನ್ಯವಾದ,
Ee lekhana nijavaaglu Bahala sundaravagi saralavagi
mattu artha poornavagide. Aagina mattu eegina talemaaru janaru odi tilidukollabahudu haagide, Shobha, Bengaluru
ನಾನು ವಸಂತ ನಿವೃತ್ತ ಮಹಿಳಾ ಆರೋಗ್ಯಾಧಿಕಾರಿ. ನಿಮ್ಮ ಜನಮನ ಕನ್ನಡ ಪತ್ರಿಕೆಯನ್ನು ಕಳೆದ 2-3 ತಿಂಗಳ ಹಿಂದೆ ಒಮ್ಮೆ ಓದಿದ ನೆನಪು. ಬಹುಶಃ ಬಾಳೆ ಎಲೆ ಊಟ ಮತ್ತು ಪಂಕ್ತಿ ಊಟದಲೆ ಮೇಲಿನ ಉಪ್ಪಿನ ಬಗ್ಗೆಲ್ಲ ಬರೆದಿದ್ದ ನಟರಾಜ ಕವಿಯವರ ಲೇಖನ ಇರಬಹುದು ಎಂದು ನನ್ನ ನೆನಪು. ಈಗ ಮತ್ತೆ ಈವತ್ತು ಈ ಲೇಖನ ಓದಿದ ನನಗೆ ಬಹಳ ಸಂತೋಷ ಆಗಿದ್ದು ಲೇಖಕರು ಮತ್ತು ಪತ್ರಿಕೆಯವರಿಗೂ ತುಂಬ ಧನ್ಯವಾದಗಳು ಸರ್.
ಹುಡುಕಿದರೂ ಸಿಗದ ಜ್ಞಾನ ಭಂಡಾರ ನಿಮ್ಮತ್ರ ಇದೆ ಕುಮಾರಕವಿ ಸರ್.
ನಮ್ಮ ಕನ್ನಡಿಗರು ವಜ್ರ ಬಿಟ್ಟು ಗಾಜಿನ ಹಿಂದೆ ಹೋಗ್ತಾ ಇದ್ದಾರೆ. ಜನಮನ ಕನ್ನಡ ಪತ್ರಿಕೆಯ ಪ್ರತಿಯೊಂದು ಲೇಖನವೂ ಉಪಯುಕ್ತವಾದದ್ದು ಎಂದು ತಿಳಿಸಲು ಹೆಮ್ಮೆ ಪಡುವೆನು, ನಿಮಗೆಲ್ಲ ಧನ್ಯವಾದಗಳು ಸರ್
ಮಂಡಕಳ್ಳಿ ಶಾಂತಕುಮಾರ್, ಮಾದರಿ ರೈತ
ಅಮೋಘ ಬರವಣಿಗೆಯ ಅತ್ತ್ಯುತ್ತಮ ಲೇಖನ
ಸತ್ಯ ವಿಷಯದ ಸತ್ವಪೂರ್ಣ ಬರವಣಿಗೆ ಬರೆದ ಲೇಖಕ ನಟರಾಜ ಅವರಿಗೆ ಅನೇಕಾನೇಕ ಧನ್ಯವಾದಗಳು ಸರ್
ಹುಡುಕಿದರೂ ಸಿಗದ ಜ್ಞಾನಭಂಡಾರ ನಿಮ್ಮತ್ರ ಇದೆಸರ್ ಕುಮಾರಕವಿಯವರೇ, ಹೀಗಾಗಿ ನಿಮ್ಮ ಲೇಖನಗಳು ಒಂದಕ್ಕಿಂತ ಒಂದು ಉತ್ತಮ ಮತ್ತು ಉಪಯುಕ್ತ. ಇನ್ನಾದರೂ ಕನ್ನಡಿಗರು ನಿಮ್ಮಂಥ ವಜ್ರವನ್ನು ಮಾತ್ರ ಬೆಂಬಲಿಸಲಿ. ಅದುಬಿಟ್ಟು ಗಾಜಿನ ಹಿಂದೆ ಹೋಗುವ ಅಭ್ಯಾಸ ಬಿಡಲಿ, ಪ್ರತಿಭಾವಂತರನ್ನು ಯಾವಾಗಲೂ
ಎಲ್ಲರೂ ಭೇಷರತ್ತಾಗಿ ಪ್ರೋತ್ಸಾಹಿಸಲಿ, ಧನ್ಯವಾದಗಳು ಸರ್, ನಮಸ್ಕಾರ…..
ಶಾಂತಕುಮಾರ, ಮಾದರಿ ರೈತ, ಮಂಡಕಳ್ಳಿ, ಮೈಸೂರು
ಆಗಾಗ ನಮ್ಮ ತಾಯಿ ತಂದೆಯವರೂ ಸಹ ಅಲ್ಲಲ್ಲೇ ಇಂಥಮಾತು,ಅನುಭವದ ನುಡಿ ನಮಗೂ ಹೇಳುತ್ತಿರುತ್ತಾರೆ. ಇದೆಲ್ಲಾ ಯಾವ ಪುಸ್ತಕದ ಬದನೇಕಾಯಿ ಅಲ್ಲ. ಹಿರಿಯರದೇ ಅನುಭವದ ಮಾತುಗಳು. ಹೀಗಿರುವಾಗ ಇವತ್ತಿನ ಮಕ್ಕಳು ಮತ್ತು ಮೊಮ್ಮಕ್ಕಳು ಇಂತಹ ಲೇಖನ ಓದಬೇಕು, ಓದಿದ ನಂತರ ಬೆಲೆ ಕೊಡಬೇಕು, ಹಿರಿತಲೆಗಳ ಜತೆಗೆ ಪ್ರೀತಿ ವಿಶ್ವಾಸ ಮಮತೆ ಗೌರವದಿಂದ ವರ್ತಿಸಲು ಕಲಿಯಬೇಕು. ಆಗಮಾತ್ರ ಕುಮಾರ ಕವಿಯವರಂಥ ಉತ್ತಮ ಲೇಖಕರ ಅತ್ತ್ಯುತ್ತಮ ಲೇಖಕನಕ್ಕೆ ಗೌರವ ಸಿಸಿಗುತ್ತದೆ ಎಂಬುದು ನನ್ನ ಸ್ವಂತ ಅಭಿಪ್ರಾಯ
ಹುಡುಕಿದರೂ ಸಿಗದ ಜ್ಞಾನ ಭಂಡಾರ ಕುಮಾರಕವಿಯವರ ಹತ್ತಿರ ಇದೆ ಸರ್. ಆದರೆ ನಮ್ಮ ಕನ್ನಡಿಗರು ಇಂಥ ವಜ್ರವನ್ನು ಬೆಂಬಲಿಸದೇ ಕೇವಲ ಗಾಜಿನಹಿಂದೆ ಹೋಗ್ತಾ ಇದ್ದಾರೆ. ಜನಮನ ಪತ್ರಿಕೆಯ ಲೇಖನಗಳು ಒಂದಕ್ಕಿಂತ ಇನ್ನೊಂದು ವಿಶೇಷದ ಲೇಖನ, ಧನ್ಯವಾದಗಳು ಸರ್
Uttamavada prayojanada lekhana, dhanyavadagalu sir
Fantastic and fabulous article, ಅತ್ಯಂತ ವಿಷಾದನೀಯ ಸಂಗತಿ.
ಆದರೆ ಇವತ್ತಿನ ಪೀಳಿಗೆಗೆ ಅರ್ಥಪೂರ್ಣ ಲೇಖನ. ಇದರಲ್ಲಿರುವ ಸತ್ಯದ ವಾಸ್ತವಾಂಶ ತಿಳಿದುಕೊಳ್ಳುವ ಪ್ರಯತ್ನ ಮಾಡಿದರೆ ಎಲ್ಲರಿಗೂ ಶ್ರೇಯಸ್ಸು.
Fantastic and fabulous article, ಅತ್ಯಂತ ವಿಷಾದನೀಯ ಸಂಗತಿ
ಆದರೂ ಇವತ್ತಿನ ಪೀಳಿಗೆಗೆ ಅರ್ಥಪೂರ್ಣ ಲೇಖನ. ಇದರಲ್ಲಿರುವ ಸತ್ಯದ ವಾಸ್ತವಾಂಶ ತಿಳಿದುಕೊಳ್ಳುವ ಪ್ರಯತ್ನ ಮಾಡಿದರೆ ಎಲ್ಲರಿಗೂ ಶ್ರೇಯಸ್ಸು.