ಚನ್ನಂಗೆರೆ ಗ್ರಾಪಂ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳಿಗೆ 3 ಕೋಟಿ ಅನುದಾನ ಮಂಜೂರು
ಚನ್ನಂಗೆರೆ ಗ್ರಾಪಂ ನೂತನ ಕಟ್ಟಡ ನಿರ್ಮಾಣಕ್ಕೆ ಶಾಸಕ ಡಿ.ರವಿಶಂಕರ್ ಭೂಮಿಪೂಜೆ

ಹೊಸೂರು(ಸಂಘಟನೆ ಮಂಜುನಾಥ್): ಚನ್ನಂಗೆರೆ ಗ್ರಾಮದಲ್ಲಿ ಮತ್ತು ಪಂಚಾಯತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿ ಕೈಗೆತ್ತಿಕೊಳ್ಳಲು 3 ಕೋಟಿ ರೂ ಅನುದಾನ ಮಂಜೂರಾಗಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು
ಸಾಲಿಗ್ರಾಮ ತಾಲೂಕಿನ ಚನ್ನಂಗೆರೆ ಗ್ರಾಮದಲ್ಲಿ 25 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸುತ್ತಿರುವ ಗ್ರಾಮಪಂಚಾಯಿತಿಯ ನೂತನ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೇರವೇರಿಸಿ ನಂತರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಫೆ.13 ಜನಸ್ಪಂದನ ಕಾರ್ಯಕ್ರಮದ ದಿನ ಈ ಎಲ್ಲಾ ಅಭಿವೃದ್ದಿ ಕಾಮಗಾರಿ ಚಾಲನೆ ನೀಡುವುದರ ಜತಗೆ ತಾಲೂಕು ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಗ್ರಾಮಸ್ಥರಿಂದ ಅವಾಲು ಸ್ವೀಕರಿಸಲಾಗುವುದು ಎಂದರು

ಗ್ರಾಮಸ್ಥರು ಮಾಡಿರುವ ಮನವಿಯಂತೆ ಗ್ರಾಮಕ್ಕೆ ಪಶು ಅಸ್ವತ್ರೆ ಮಂಜೂರು , ಸಾಲಿಗ್ರಾಮದಿಂದ ಬಸ್, ವಿದ್ಯುತ್ ಕಂಬಗಳ ಬದಲಾವಣೆ , ರಸ್ತೆ ಅಭಿವೃದ್ದಿ , ಅಲದಕೆರೆಗೆ ಸೋಪಾನ ಕಟ್ಟೆ ನಿರ್ಮಾಣ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು. ಅಧಿಕಾರ ವಿಕೇಂದ್ರೀಕರಣದ ವ್ಯವಸ್ಥೆಯಲ್ಲಿ ಸ್ಥಳಿಯ ಅಡಳಿತವಾಗಿರುವ ಗ್ರಾಮ ಪಂಚಾಯಿತಿಗಳಿಗೆ ಅಭಿವೃದ್ದಿಯ ಅಧಿಕಾರ ವ್ಯವಸ್ಥೆ ನೀಡಲಾಗಿದೆ ಇಲ್ಲಿ ಚ್ಯುತಿ ಬರದಂತೆ ಗ್ರಾ.ಪಂ.ಸದಸ್ಯರು ಕೆಲಸ ಮಾಡಬೇಕು ಎಂದು ಶಾಸಕರು ಹೇಳಿದರಲ್ಲದೆ, ಅದಷ್ಟು ಬೇಗ ಗುಣಮಟ್ಟದಲ್ಲಿ ಗ್ರಾ.ಪಂ.ಕಟ್ಟಡವನ್ನು ನಿರ್ಮಿಸಿ ಸಾರ್ವಜನಿಕರಿಗೆ ಕಟ್ಟಡ ಸದುಪಯೋಗ ಮಾಡುವಂತೆ ಗ್ರಾ.ಪಂ. ಆಡಳಿತಕ್ಕೆ ಸೂಚನೆ ನೀಡಿದರು.

ತಾ.ಪಂ. ಇ ಓ ಎ.ಎನ್.ರವಿ ಮಾತನಾಡಿ ಈ ಗ್ರಾಮಪಂಚಾಯಿಗೆ ಸ್ವಂತ ಕಟ್ಟಡ ಇಲ್ಲದ ಬಗ್ಗೆ ಶಾಸಕರಾದ ಡಿ.ರವಿಶಂಕರ್ ಅವರ ಗಮನಕ್ಕೆ ತರಲಾಗಿ ಈ ಕಟ್ಟಡಕ್ಕೆ ಅನುದಾನ ಕೊಡಿಸಿದ್ದು ಇದಕ್ಕೆ ಶಾಸಕರನ್ನು ಈ ಭಾಗದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನ ಗ್ರಾ.ಪಂ.ಅಧ್ಯಕ್ಷೆ ಸುನೀತಾ ದಿನೇಶ್ ವಹಿಸಿದ್ದರು. ಈ ಸಂದರ್ಭದಲ್ಲಿ ತಾ.ಪಂ.ಇಓ ಎ. ಎನ್ ರವಿಕುಮಾರ್, ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಬ್ಲಾಕ್ ಕಾಂಗ್ರೇಸ್ ಹಾಗೂ ಗ್ಯಾರಂಟಿ ಸಮಿತಿಯ ಅಧ್ಯಕ್ಷ ಉದಯಶಂಕರ್, ಗ್ರಾ.ಪಂ.ಮಾಜಿ ಅಧ್ಯಕ್ಷ ತಾರಕೇಶ್ವರಿ ಹರೀಶ್, ಉಪಾಧ್ಯಕ್ಷ ಕೃಷ್ಣಪ್ಪ, ಸದಸ್ಯಾರಾದ ಮಣಿಯಮ್ಮ, ರಾಜೇಶ್ವರಿ ಲೋಕೇಶ್, ಚೈತ್ರ ಸುರೇಶ್, ಅನಿತಾಕಾಂತರಾಜು , ಸುನಿತಾಯುವರಾಜ್ , ಕಾಂಗ್ರೇಸ್ ಮುಖಂಡರಾದ ಮಂಚನಹಳ್ಳಿ ಧನು, ನಾಡಪ್ಪನಹಳ್ಳಿ ಅಶ್ವತ್, ಹನಸೋಗೆ ನವೀನ್, ಪ್ರಶನ್ನ ನಾಯಕ.

ಎರೆಮನುಗನಹಳ್ಳಿ ಅಸ್ಲಾಂ, ಅಭಿಜಿತ್, ಸಿ.ಎಚ್, ಬೋರೇಗೌಡ, ಮಲ್ಲಿಕಾರ್ಜುನ್, ಕೋಟೆ ಶಂಕರೇಗೌಡ,ಕೋಳೊರು ರಂಗಸ್ವಾಮಿ, ಸಿ.ಎಂ.ಹರೀಶ್, ಮಲ್ಲೇಶ್, ಸಿ.ಕೆ.ಕಾಂತರಾಜು, ಸಿ.ಪಿ.ಪ್ರಕಾಶ್, ಶಂಕರ್ ನಾಯಕ್, ಸಿ.ಕೆ.ಗಂಗಾಧರ್, ಸಿ.ಕೆ.ಶೇಷಾದ್ರಿ, ಡೈರಿ ಅಧ್ಯಕ್ಷ ಪ್ರಕಾಶ್, ಪಿಡಿಓ ಸ್ವಾಮಿನಾಯಕ್, ಕಾರ್ಯದರ್ಶಿ ಪ್ರಕಾಶ್, ಬಿಸಿಯೂಟ ಅಧಿಕಾರಿ ಸ್ವಾಮಿಗೌಡ ಶಿಕ್ಷಕರಾದ ಸಿ.ಎನ್.ಪ್ರಭು ಗ್ರಾಮ ಆಡಳಿತ ಅಧಿಕಾರಿ ಅಜಿತ್ ಇದ್ದರು.







