ಜನವರಿ 2 ರಿಂದ 5ರ ತನಕ ಕುಂದೂರು ಶ್ರೀ ಚಿಕ್ಕದೇವಮ್ಮನವರ ಜಾತ್ರೆ.. ಸಿದ್ಧತೆಗೆ ಪೂರ್ವಭಾವಿ ಸಭೆ

ಸರಗೂರು: ಕುಂದೂರು ಶ್ರೀ ಚಿಕ್ಕದೇವಮ್ಮ ನವರ ಜಾತ್ರೆ ಜ 2 ರಿಂದ ಜ 5 ರ ತನಕ ನಡೆಯುವ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಕಂದಾಯ ಮತ್ತು ಮುಜರಾಯಿ ಇಲಾಖೆ ಪೂರ್ವ ಭಾವಿ ಸಿದ್ಧತೆಗಳನ್ನು ಹಮ್ಮಿಕೊಂಡಿದ್ದಾರೆ ಎಂದು ತಹಸೀಲ್ದಾರ್ ಮೋಹನಕುಮಾರಿ ತಿಳಿಸಿದರು.
ತಾಲೂಕಿನ ಕಲ್ಲಂಬಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದೂರು ದಡದಹಳ್ಳಿ ಬಳಿ ಇರುವ ಶ್ರೀ ಚಿಕ್ಕದೇವಮ್ಮನ ದೇವಸ್ಥಾನದ ಆವರಣದಲ್ಲಿ ಮುಜರಾಯಿ ಮತ್ತು ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್ ಮೋಹನಕುಮಾರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು. ಕುಂದೂರು ಶ್ರೀ ಚಿಕ್ಕದೇವಮ್ಮನವರ ಜಾತ್ರೆ ಆಂಗವಾಗಿ ಜಾತ್ರೆ ಯಶಸ್ವಿಯಾಗಬೇಕಾದರೆ ಸಾರ್ವಜನಿಕರು ಹಾಗೂ ಮುಖಂಡರುಗಳು ಸಹಕಾರ ನೀಡಬೇಕು. ಜಾತ್ರಾ ಮಹೋತ್ಸವವನ್ನು ಅಚ್ಚುಕಟ್ಟಾಗಿ ನಡೆಸಬೇಕು ಭಕ್ತಾಧಿಗಳಿಗೆ ಯಾವುದೆ ತೊಂದರೆಯಾಗದಂತೆ ನೋಡಿಕೊಳ್ಳುವುದರ ಜೊತೆಗೆ ಮೂಲ ಸೌಲಭ್ಯ ಕಲ್ಪಿಸುವಂತೆ ಸಂಬಂದ ಪಟ್ಟ ಅಧಿಕಾರಿಗಳಿಗೆ ತಿಳಿಸಿದರು,
ಜಾತ್ರೆ ಹೊರಾಂಗಣ ಸ್ವಚತೆಯನ್ನು ಕಲ್ಲಂಬಾಳು ಗ್ರಾಮ ಪಂಚಾಯಿತಿ ಪಿಡಿಒ ಅದಿಕಾರಿಗಳು ಕ್ರಮ ವಹಿಸಬೇಕು, ಜಾತ್ರೆಗೆ ಬರಲು ವಿವಿಧೆಡೆಯಿಂದ ಹೆಚ್ಚು ಬಸ್ ವ್ಯವಸ್ಥೆ, ಅಂಗಡಿ ಮುಂಗಟ್ಟು, ಹಾಗೂ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ, ಕುಡಿಯುವ ನೀರು ಸರಬರಾಜು, ಭಕ್ತರಿಗೆ ಅನ್ನದಾಸೋಹ ಸ್ನಾನ ಗೃಹ, ಶೌಚಾಲಯ, ಇನ್ನಿತರ ಸೌಲಭ್ಯಗಳನ್ನು ಭಕ್ತರಿಗೆ ಅನುಕೂಲ ಕಲ್ಪಿಸಬೇಕು ಎಂದು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಇಲಾಖಾಧಿಕಾರಿಗಳ ಸಮ್ಮುಖದಲ್ಲಿ ಗ್ರಾಮಸ್ಥರು ಸೇರಿ ನಡೆದ ಪೂರ್ವಭಾವಿ ಸಭೆಯಲ್ಲಿ ತಿಳಿಸಿದರು,

ಇರುವ ದಿನಗಳಲ್ಲಿ ಆಗುವ ಕೆಲಸಗಳ ಬಗ್ಗೆ ಹಲವಾರು ಮುಖಂಡರು ಜಾತ್ರೆ ನಡೆಸಲು ಆಗಬೇಕಾದ ಸೌಕರ್ಯದ ಬಗ್ಗೆ ಸಲಹೆ ಸೂಚನೆಯನ್ನು ತಿಳಿಸಿದ್ದೀರಿ ಶಾಸಕರು ಹಾಗೂ ತಮ್ಮೆಲ್ಲರ ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು. ಸಭೆಯಲ್ಲಿ ಹಲವಾರು ಮುಖಂಡರು ಜನಪ್ರತಿನಿಧಿಗಳು ತಮ್ಮ ತಮ್ಮ ಅಭಿಪ್ರಾಯಗಳನ್ನು ತಿಳಿಸಿದರು.
ಸಭೆಯಲ್ಲಿ ಧಾರ್ಮಿಕ ದತ್ತಿ ಇಲಾಖೆ ಇಒ ರಘು, ಪಾರುಪತ್ತೇದಾರ್ ಕುಂದೂರು ಮಹದೇವಸ್ವಾಮಿ, ಗ್ರಾಮದ ಯಜಮಾನರಾದ ಪುಟ್ಟಮಾದೇಗೌಡ, ಗ್ರಾಮ ಪಂಚಾಯಿತಿ ಸದಸ್ಯ ಮಹೇಶ್, ಚಿನ್ನಸ್ವಾಮಿ, ಮುಖಂಡರಾದ ಗುತ್ತಿಗೆದಾರ ಕುಂದೂರು ಮೂರ್ತಿ, ಶಂಭುಲಿಂಗನಾಯಕ, ನಿಂಗನಾಯಕ, ದೇವಣ್ಣಉಪ್ಪಿ, ಶಿವಕುಮಾರ್, ದಡದಹಳ್ಳಿ ಮೂರ್ತಿ, ಮಹೇಶ್, ಬೀರೇಗೌಡ್ರು, ಕಲ್ಲಂಬಾಳು ಶಿವಪ್ಪ, ನಾಗರಾಜಪ್ಪ, ಆರ್.ಐ. ರವಿಚಂದ್ರ, ವಿ.ಎ.ಸತ್ಯನಾರಾಯಣ, ಬೆಟ್ಟದ ಪುರದಕಟ್ಟೆ ಕೃಷ್ಣ ಹಾಗೂ ಸಾರ್ವಜನಿಕರು ಗ್ರಾಮಸ್ಥರು ಇನ್ನಿತರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.

ಚಾಮುಂಡೇಶ್ವರಿಯ ಸಹೋದರಿ ಪುರದಕಟ್ಟೆ ಚಿಕ್ಕದೇವಮ್ಮ… ಸುಂದರ ಪರಿಸರದಲ್ಲಿ ನೆಲೆನಿಂತ ತಾಯಿಗೆ ನಮೋ ಎನ್ನೋಣ







