Mysore

ಭುಗತಗಳ್ಳಿಯಲ್ಲಿ ಸಿ.ಎಂ. ಸಿದ್ದರಾಮಯ್ಯನವರ ಸಾಧನೆಯ ಅದ್ಧೂರಿ ವಿಜಯೋತ್ಸವ

ಸುತ್ತೂರು(ನಂಜುಂಡನಾಯಕ): ವರುಣಾ ಕ್ಷೇತ್ರದ ಭುಗತಗಳ್ಳಿ ಗ್ರಾಮದಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಸಾಧಿಸಿದ ಸಾಧನೆಯ ವಿಜಯೋತ್ಸವವನ್ನು ಗ್ರಾಮದ ಶ್ರೀ ಬೇತಾಳೇಶ್ವರಿ ಅಮ್ಮನವರ ದೇವಾಲಯದ ಆವರಣದಲ್ಲಿ ಅದ್ಧೂರಿಯಾಗಿ ನಡೆಸಲಾಯಿತು.

ಈ ವೇಳೆ ಕಾಂಗ್ರೇಸ್ ಪಕ್ಷದ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ  ಬಿ.ಜೆ. ವಿಜಯ್ ಕುಮಾರ್‌  ಮಾತನಾಡಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸುರವರ ನಂತರ ಸಿದ್ದರಾಮಯ್ಯನವರು ಸುಧೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ ಜನ ಮಾನಸದಲ್ಲಿ ನೆಲೆಸಿದ್ದಾರೆ. ಅವರ ಆಡಳಿತದ ಅವಧಿಯಲ್ಲಿ ಅನ್ನಭಾಗ್ಯ, ಕ್ಷೀರಭಾಗ್ಯ, ಪಂಚ ಗ್ಯಾರಂಟಿ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತರುವ ಮೂಲಕ ಬಡ ಜನತೆಗೆ ಅನುಕೂಲ ಮಾಡಿಕೊಟ್ಟು ಸಾಮಾಜಿಕ ನ್ಯಾಯದಡಿ ಎಲ್ಲ ವರ್ಗದವರಿಗೆ ಸಮಾನತೆಯ ಸಿಹಿಯನ್ನು ನೀಡಿದಂತಹ ಧೀಮಂತ ರಾಜಕಾರಣಿ ಹಾಗೂ ವರುಣಾ ಕ್ಷೇತ್ರದ ವರಪುತ್ರ ಎಂದು ಬಣ್ಣಿಸಿದರು.

ವರುಣಾ ಕ್ಷೇತ್ರದ ಕಾಂಗ್ರೇಸ್ ಮುಖಂಡ ಭುಗತಗಳ್ಳಿ ಮಣಿಯಯ್ಯ ಮಾತನಾಡಿ ಡಿ.ದೇವರಾಜ ಅರಸುರವರ ನಂತರ 7ವರ್ಷ 240 ದಿನ ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಾ ಎಲ್ಲಾ ವರ್ಗದ ಬಡ ಜನರ ಏಳಿಗೆಗಾಗಿ ಶ್ರಮಿಸುವ ಮೂಲಕ ಮಾದರಿ ಮುಖ್ಯಮಂತ್ರಿಯಾಗಿದ್ದಾರೆ. ಹಾಗೆ ಮುಂದಿನ 2028ರ ಚುನಾವಣೆಯಲ್ಲೂ ಸಹ ಸಿದ್ದರಾಮಯ್ಯರವರೇ ಮುಖ್ಯಮಂತ್ರಿಯಾಗಿ ಮುಂದುವರೆಯುವಂತೆ ಶ್ರೀ ಬೇತಾಳೇಶ್ವರಿ ಅಮ್ಮನವರು ಆಶೀರ್ವದಿಸಲಿ ಎಂದು ತಿಳಿಸಿದರು.

ಕಾಂಗ್ರೇಸ್ ಮುಖಂಡರಾದ ನಾಡನಹಳ್ಳಿ ರವಿ, ಜಿ.ಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಮೆಳ್ಳಳ್ಳಿ ನಾಗರಾಜು, ಸಿದ್ದಯ್ಯ, ಸ್ವಾಮಿ, ತಾ.ಪಂ ಮಾಜಿ ಸದಸ್ಯ ಮುದ್ದರಾಮೇಗೌಡ, ರವಿಕುಮಾರ್, ವರುಣಾ ಚಿಕ್ಕದೇವಯ್ಯ, ಚೋರನಹಳ್ಳಿ ರಾಜು, ಶಕಳ್ಳಿ ಬಸವರಾಜು, ಚಿಕ್ಕಳ್ಳಿ ಕೃಷ್ಣ, ಶಕಳ್ಳಿ ರಂಗಯ್ಯ, ಮಂಜು, ಮಹದೇವು, ವರಕೋಡು ಉಮೇಶ್, ಸಣ್ಣಮಾದು, ನವೀನ್ ಶಂಕರ್, ದೇವರಾಜು, ಗೋಪಾಲರಾಜು, ಸೋಮು, ವೆಂಕಟೇಶ್, ಅಂಕನಾಯ್ಕ, ಪಿಳ್ಳಳ್ಳಿ ಶಿವಕುಮಾರ್, ವರುಣಾ ಹಾಗೂ ಭುಗತಗಳ್ಳಿ ಸೇರಿದಂತೆ ಸುತ್ತ ಮುತ್ತಲ ಗ್ರಾಮಸ್ಥರು, ಮತ್ತು ಕಾಂಗ್ರೇಸ್ ಕಾರ್ಯಕರ್ತರು ಹಾಜರಿದ್ದರು.

admin
the authoradmin

ನಿಮ್ಮದೊಂದು ಉತ್ತರ

Translate to any language you want