Mysore

ಮೈಸೂರಿನಲ್ಲಿ  ಕೂ-ಆಪ್ಟೆಕ್ಸ್ ಸಂಕ್ರಾಂತಿ ವಿಶೇಷ ಸೀರೆ ಪ್ರದರ್ಶನ–ಮಾರಾಟ ಮೇಳ ಆರಂಭ

ಮೈಸೂರು: ಸಂಕ್ರಾಂತಿ ಹಬ್ಬದ ಪ್ರಯುಕ್ತ ಕೂ-ಆಪ್ಟೆಕ್ಸ್ (CO-OPTEX) ವತಿಯಿಂದ ಆಯೋಜಿಸಿರುವ ವಿಶೇಷ ಪ್ರದರ್ಶನ–ಮಾರಾಟ ಮೇಳಕ್ಕೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯರಾದ ಬಿ. ರಾಘವೇಂದ್ರ ಅವರು ಚಾಲನೆ ನೀಡಿದರು.

ಮೈಸೂರಿನ ಜೆಎಲ್‌ಬಿ ರಸ್ತೆಯಲ್ಲಿರುವ ಇನ್‌ಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್ ಸಭಾಂಗಣದಲ್ಲಿ ಈ ಮೇಳವನ್ನು ಆಯೋಜಿಸಲಾಗಿದ್ದು, ಜನವರಿ 2ರಿಂದ 8 ದಿನಗಳ ಕಾಲ ರಿಯಾಯಿತಿ ದರದಲ್ಲಿ ಮಾರಾಟ ನಡೆಯಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಕೂ-ಆಪ್ಟೆಕ್ಸ್ ಬೆಂಗಳೂರು ಪ್ರಾದೇಶಿಕ ವ್ಯವಸ್ಥಾಪಕರಾದ ಎನ್. ಸುಂದರ್ ರಾಜನ್ ಅವರು, ಮೇಳದಲ್ಲಿ ಕೂ-ಆಪ್ಟೆಕ್ಸ್‌ನ ಉನ್ನತ ಗುಣಮಟ್ಟದ ಕೈಮಗ್ಗ ವಸ್ತ್ರಗಳು, ಸಂಕ್ರಾಂತಿ ಹಬ್ಬಕ್ಕೆ ವಿಶೇಷವಾಗಿ ಸಿದ್ಧಪಡಿಸಿದ ಬಟ್ಟೆಗಳು ಹಾಗೂ ಆಕರ್ಷಕ ರಿಯಾಯಿತಿ ದರಗಳಲ್ಲಿ ಲಭ್ಯವಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆಯಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ರಮೇಶ್, ಇಸ್ಯಾಕಿನ, ಸನತ್ ಕುಮಾರ್, ಬಾಲಾಜಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

admin
the authoradmin

ನಿಮ್ಮದೊಂದು ಉತ್ತರ

Translate to any language you want