ನೆನಪಾಗಿ ಕಾಡುವ ಮೈಸೂರು ದಸರಾ ಆನೆಗಳು.. ಐರಾವತ, ದ್ರೋಣ, ರಾಜೇಂದ್ರ ತೆರೆ ಮೇಲೆ ಮಿಂಚಿದ್ದು ಹೇಗೆ?

ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾಗಿ ಜಂಬೂಸವಾರಿಯನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಅಭಿಮನ್ಯು ನೇತೃತ್ವದ ಗಜಪಡೆ ಇದೀಗ ಮೈಸೂರು ಅರಮನೆ ಆವರಣದಿಂದ ಸ್ವಸ್ಥಾನವಾದ ತಮ್ಮ ಆನೆ ಶಿಬಿರಗಳನ್ನು ಸೇರಿವೆ. ಈ ಗಜಪಡೆಯನ್ನು ನೋಡುವಾಗಲೆಲ್ಲ ಇತಿಹಾಸದ ಪುಟಗಳಲ್ಲಿ ಸೇರಿ ಹೋದ ಅಂಬಾರಿ ಹೊತ್ತ ಆನೆಗಳ ನೆನಪಾಗುವುದು ಸಹಜ.. ಈ ಆನೆಗಳು ಕೇವಲ ದಸರಾದ ವೇಳೆ ಮಾತ್ರವಲ್ಲ ಎಲ್ಲ ದಿನಗಳಲ್ಲೂ ನೆನಪಾಗುತ್ತವೆ.. ಏಕೆ ಗೊತ್ತಾ? ಇಲ್ಲಿದೆ ಆ ಕುರಿತ ಮಾಹಿತಿಗಳು…
ಇದುವರೆಗೆ ದಸರಾದಲ್ಲಿ ನೂರಾರು ಆನೆಗಳು ಭಾಗವಹಿಸಿದ್ದರೂ ಕೆಲವು ಆನೆಗಳ ನೆನಪು ಗಟ್ಟಿಯಾಗಿ ಉಳಿದಿವೆ ಈ ಪೈಕಿ ಕೆಲವು ಆನೆಗಳನ್ನು ನಾವು ಸ್ಮರಿಸಲೇ ಬೇಕಾಗುತ್ತದೆ. 1935ರಲ್ಲಿ ತಿರುಪತಿ ದೇವಸ್ಥಾನದಿಂದ ಪಟ್ಟಾಭಿರಾಮನ್ ಹೆಸರಿನ ಆನೆಯನ್ನು ತರಿಸಿಕೊಳ್ಳಲಾಗಿತ್ತು. ಅದರ ಸಂತತಿಯಾದ ಸುಂದರರಾಜ ಎಂಬ ಹೆಸರಿನ ಆನೆಯು ದಿವಂಗತ ಜಯಚಾಮರಾಜ ಒಡೆಯರ್ ಅವರ ವಿವಾಹ ಮಹೋತ್ಸವ ಸಂದರ್ಭದಲ್ಲಿ ವಿವಾಹಿತ ನವದಂಪತಿಗಳನ್ನು ಹೊತ್ತು ಮೆರವಣಿಗೆ ಮಾಡಿಸುವ ಮೂಲಕ ಮೈಸೂರಿನ ಪ್ರಜೆಗಳ ತನುಮನ ಗೆದ್ದಿತ್ತು.
ಇದನ್ನೂ ಓದಿ: ದಸರಾ ಬಂದಾಗಲೆಲ್ಲ ನೆನಪಾಗುವ ಅಂಬಾರಿ ಹೊತ್ತ ಆನೆಗಳು…
ಬಲರಾಮ ಸುಮಾರು 13 ವರ್ಷಗಳ ಪರ್ಯಂತ ಅಂಬಾರಿಯನ್ನು ಹೊರುವ ಮೂಲಕ ಪ್ರತಿಯೊಬ್ಬರ ಮೆಚ್ಚುಗೆಗೆ ಪಾತ್ರವಾಗಿದ್ದ ಆನೆ. 55 ವರ್ಷ ವಯಸ್ಸಿನ ಆನೆಯಾದ ಇದು 4650 ಕೆ.ಜಿ. ತೂಕ ಹೊಂದಿತ್ತು. ಅರ್ಜುನ ಆನೆಗೆ ಅಂಬಾರಿ ಜವಾಬ್ಧಾರಿ ನೀಡುವವರೆಗೂ ದಸರಾ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತ ಈ ಆನೆ ರಾಜರಿಂದ ಶ್ರೀ ಸಾಮಾನ್ಯನವೆರೆಗೂ ಎಲ್ಲರ ಮೆಚ್ಚುಗೆ ಗಳಿಸಿತ್ತು.
ಐರಾವತ ಆನೆಯು 1935 ರಲ್ಲಿ ಮಹಾರಾಜರು ದಸರಾ ಮಹೋತ್ಸವದ ವೈಭವವನ್ನು ಇಡೀ ಪ್ರಪಂಚಕ್ಕೆ ಸಾರಬೇಕೆಂಬ ಹಂಬಲದಿಂದ ಅವರೇ ನಿರ್ಮಿಸಿದ ” ದಿ ಎಲಿಫೆಂಟ್ ಬಾಯ್’ ಚಿತ್ರವು ಇಂಗ್ಲಿಷ್ ಭಾಷೆಯಲ್ಲಿ ಅಲ್ಲದೇ ಯೂರೋಪಿನ ಅನೇಕ ಭಾಷೆಗಳಲ್ಲೂ ಡಬ್ ಆಗಿ ಪ್ರಪಂಚದಾದ್ಯಂತ ಪ್ರದರ್ಶನಗೊಂಡು ಪ್ರಖ್ಯಾತವಾಯಿತು. 1944ರಲ್ಲಿ ಈ ಆನೆಯು ತನ್ನ ಕೊನೆ ಉಸಿರೆಳೆಯಿತು.
ಬಿಳಿಗಿರಿ ಆನೆಯು 1972 ರಲ್ಲಿ ಜಯಚಾಮರಾಜ ಒಡೆಯರ್ ಅಂಬಾರಿಯಲ್ಲಿ ಕುಳಿತಿದ್ದುದೆ ಕೊನೆಯದಾಗಿದೆ. ಅಂಬಾರಿ ಹೊರುವ ಆನೆಗಳ ಪೈಕಿ ವೈವಿಧ್ಯತೆ ಹೊಂದಿದ್ದ ಇದು 11 ಅಡಿ ಎತ್ತರವಿದ್ದು 7250 ಕೆ.ಜಿ. ತೂಕವಿದ್ದ ಈ ಆನೆಯು ಮೈಸೂರಿನ ಅಂತಿಮ ಮಹಾರಾಜ ಜಯಚಾಮರಾಜ ಒಡೆಯರ್ ಅವರನ್ನು ದಸರ ಮೆರವಣಿಗೆಯಲ್ಲಿ ಹೊತ್ತೊಯ್ದ ರಾಜ-ಗಜರಾಜ ಎಂಬ ಖ್ಯಾತಿಗೆ ಪಾತ್ರವಾಯಿತು! ವಯೋಸಹಜ ಕಾರಣದಿಂದ 1975ರಲ್ಲಿ ಮರಣ ಹೊಂದಿತು.
ದ್ರೋಣ ಆನೆಯು 18ವರ್ಷ ಪರ್ಯಂತ ಜಂಬೂಸವಾರಿ ಮೆರವಣಿಗೆಯಲ್ಲಿ ಅಂಬಾರಿ ಹೊತ್ತು ಸೈ ಎನಿಸಿಕೊಂಡಿದೆ. ಅತಿಹೆಚ್ಚು ವರ್ಷಗಳು ಅಂಬಾರಿ ಹೊರೆ ಹೊತ್ತ ಹೆಮ್ಮೆ ದ್ರೋಣ ಆನೆಗಿದೆ. “ದಿ ಸ್ವೋರ್ಡ್ ಆಫ್ ಟಿಪ್ಪುಸುಲ್ತಾನ್” ಟಿ.ವಿ. ಸೀರಿಯಲ್ ನಲ್ಲಿ ಟಿಪ್ಪು ಸುಲ್ತಾನ್ ಪಾತ್ರ ನಿರ್ವಹಿಸಿದ ಸಂಜಯ್ ಖಾನ್ ಅವರನ್ನು ಚಿತ್ರೀಕರಣದಲ್ಲಿ ಹೊತ್ತು ಮೆರೆದ ಆನೆ ಈ ದ್ರೋಣ. 1977ರಲ್ಲಿ ದಸರಾ ಉತ್ಸವ ಮುಗಿಸಿಕೊಂಡು ತವರಿಗೆ ಹೋದ ದ್ರೋಣ ಬಳ್ಳೆ ಎಂಬ ಅರಣ್ಯ ಪ್ರದೇಶದಲ್ಲಿ ಆಹಾರ ಅರಸುತ್ತಾ ಹೋಗಿದ್ದಾಗ ತನ್ನ ಸೊಂಡಿಲಿಗೆ ವಿದ್ಯುತ್ ತಂತಿಯು ತಗುಲಿದ ಕೂಡಲೇ ಸಾವನ್ನಪ್ಪಿತು. ಉತ್ತಮ ಕಾರ್ಯವನ್ನೂ ದೇವರ ಕಾಯಕವನ್ನೂ ಸಾರ್ಥಕವಾಗಿ ಮಾಡಿ ಮುಗಿಸಿದ್ದ ದ್ರೋಣನಿಗೆ ಅಕಾಲ ಮರಣ ಬಂದೊದಗಿದ್ದು ವಿಧಿಲೀಲೆ!
ಇದನ್ನೂ ಓದಿ: ಆನೆಗಳನ್ನು ಖೆಡ್ಡಾಕ್ಕೆ ಬೀಳಿಸುತ್ತಿದ್ದದ್ದು ಹೇಗೆ ಗೊತ್ತಾ?
ರಾಜೇಂದ್ರ ಆನೆಯು 1978-1980 ಅವಧಿಯಲ್ಲಿ 3 ಬಾರಿ ಅಂಬಾರಿ ಹೊತ್ತ ಗಜ ರಾಜೇಂದ್ರನು ತೀರ ಬಲಿಷ್ಠವಾದ ಮತ್ತು ಬುದ್ಧಿವಂತ ಆನೆ. ಇದು ಎಂಪಿ.ಶಂಕರ್ ನಿರ್ಮಾಣದ ಡಾ. ರಾಜ್ ಕುಮಾರ್ ಅಭಿನಯದ “ಗಂಧದಗುಡಿ” ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಇದರ ಮೇಲೆ ಕುಳಿತು ಡಾ.ರಾಜಕುಮಾರ್ “ನಾವಾಡುವ ನುಡಿಯೇ ಕನ್ನಡ ನುಡಿ…” ಹಾಡನ್ನು ಹಾಡುತ್ತಾ ಅಭಿನಯಿಸಿದ್ದರು. ಇದು 1980 ರಲ್ಲಿ ಮರಣ ಹೊಂದಿತು.
ಸಂಗಾತಿ ಆನೆಗಳಾದ ಕಾಂತಿ ಹೆಸರಿನ ಸಂಗಾತಿ ಅಥವಾ ಸಹಚರೆ ಆನೆ ಸತತ 30 ವರ್ಷಗಳ ಪರ್ಯಂತ ದಸರಾ ಮಹೋತ್ಸವ ಕಾರ್ಯಕ್ರಮದ ಮೆರವಣಿಗೆಯಲ್ಲಿ ಪಾಲ್ಗೊಂಡ ಏಕೈಕ ಸಾಥೀ ಆನೆ ಎಂಬ ಖ್ಯಾತಿ ಪಡೆದಿತ್ತು ಇದರ ಜೊತೆಗಿದ್ದ ಇನ್ನಿತರ ಸಂಗಾತಿ ಆನೆಗಳು ರೇವತಿ, ಗಾಯತ್ರಿ, ಅಮ್ಮಿ, ಕುಮ್ಕಿ, ಸರಳ, ಮೇರಿ, ವರಲಕ್ಷ್ಮಿ ಹಾಗೂ ಭಾರತಿ. ಈ ಎಲ್ಲಾ ಆನೆಗಳು ಒಂದಿಲ್ಲೊಂದು ರೀತಿಯಲ್ಲಿ ತಮ್ಮ ಅಪ್ರತಿಮ ಅನನ್ಯ ಸೇವೆಯನ್ನು ಮೈಸೂರಿನ ದಸರಾ ನವರಾತ್ರಿ ಸಂದರ್ಭಗಳಲ್ಲಿ ಅಮೋಘವಾಗಿ ನಿರ್ವಹಿಸಿದ್ದು ಮೈಸೂರು ಅರಮನೆಯ ಗತವೈಭವದ ಚಿರಸ್ಮರಣೀಯ ಇತಿಹಾಸ ದಾಖಲೆಯ ಸುವರ್ಣ ಪುಟಗಳ ಅಧ್ಯಾಯವಾಗಿ ಆಚಂದ್ರಾರ್ಕ ಅಮರಕಥೆಯಾಗಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಅನಂತಾನಂತ ಧನ್ಯವಾದಗಳು ಲವ ಸರ್ 🤝🙏🤝🙏🤝🙏
ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಅಸಾಧಾರಣ ಆಶ್ಚರ್ಯ ಆಪ್ಯಾಯಮಾನ ಆಚಂದ್ರಾರ್ಕ ಅಜರಾಮರ ನಮಸ್ಕಾರ
ಅನಂತಾನಂತ ಧನ್ಯವಾದಗಳು ಲವ ಸರ್ 🙏🤝🙏🤝🙏
Extraordinary and exciting articles sir
ದಸರಾ ಆನೆಗಳನ್ನು ಮರೆಯದಂತೆ ಮಾಡುವಂಥ ಈ ಲೇಖನ ಸೂಪರ್ ಮತ್ತು ಬೊಂಬಾಟ್. ಲೇಖಕರಿಗೂ ಪ್ರಕಟಪಡಿಸಿದ ಜನಮನ ಪತ್ರಿಕೆಯವರಿಗೂ ಸಾವಿರ ವಂದನೆಗಳು,
ದಸರ ಗಜಪಡೆಯ ಬಗ್ಗೆ ಬರೆದ ಆನೆಗಳ ಲೇಖನ ನನಗೆ ತುಂಬ ಇಷ್ಟವಾಯ್ತು, ಧನ್ಯವಾದ ಸರ್
Very nice and useful article
Preethu from Mysuru city, really very good article
ಬಹಳ ಮಾಹಿತಿಯ ಉಳ್ಳ ಲೇಖನ, ದಸರಾ ಹಬ್ಬದ ಆನೆಗಳ ಸಂಬಂಧದ ಲೇಖನ, ಧನ್ಯವಾದ ನಮಸ್ಕಾರ ಸರ್