ದೀಪಾವಳಿಯಿಂದ ಬಾಳು ಕತ್ತಲಾಗದಿರಲಿ… ಪಟಾಕಿ ಸಿಡಿಸುವ ಮುನ್ನ ಎಚ್ಚರ.. ಎಚ್ಚರ… ಸಲಹೆಗಳೇನು ಗೊತ್ತಾ?

ದೀಪಾವಳಿಯಂದು ಪಟಾಕಿ ಸಿಡಿಸಲೇ ಬೇಡಿ ಎನ್ನುವುದು ತುಸು ಕಷ್ಟವಾಗುತ್ತದೆ. ಆದರೆ ಸಿಡಿಸುವಾಗ ಎಚ್ಚರಿಕೆ ಮತ್ತು ಮುಂಜಾಗ್ರತೆ ವಹಿಸಿ ಎಂಬ ಸಲಹೆಯನ್ನು ತಪ್ಪದೇ ನೀಡಬಹುದಾಗಿದೆ. ಯಾರೇ ಆಗಲಿ ಪಟಾಕಿ ಸಿಡಿಸುವ ಮುನ್ನ ಸಲಹೆಗಳನ್ನು ಪಾಲಿಸಿದರೆ ಖಂಡಿತಾ ದೀಪಾವಳಿ ಬಾಳಿಗೆ ಬೆಳಕಾಗಲಿದೆ. ಇದನ್ನು ಬರಹದ ಮೂಲಕ ಕುಮಾರಕವಿ ನಟರಾಜ ಅವರು ವಿವರಿಸಿದ್ದಾರೆ. ಅವರ ಪ್ರಕಾರ ದೀಪಾವಳಿ ಹಬ್ಬವು ಹರುಷಕ್ಕೆ ಮಾತ್ರ ಸೀಮಿತವಾಗಿರಲಿ. ಇದರಿಂದ ಬದುಕು ಕತ್ತಲಾಗದಿರಲಿ ಎಂಬ ಆಶಯವನ್ನು ವ್ಯಕ್ತಪಡಿಸುತ್ತಾ ಒಂದಷ್ಟು ಸಲಹೆ ಮಾರ್ಗದರ್ಶನವನ್ನು ನೀಡಿದ್ದಾರೆ.. ಇದನ್ನು ಪಾಲಿಸಿದರೆ ದೀಪಾವಳಿ ಬಾಳನ್ನು ಬೆಳಗುವ ಹಣತೆಯಾಗುವುದರಲ್ಲಿ ಎರಡು ಮಾತಿಲ್ಲ…
ಇದನ್ನೂ ಓದಿ: ಸೆಗಣಿಯಲ್ಲಿ ಬಡಿದಾಡಿಕೊಳ್ಳುವ ಗೋರೆ ಹಬ್ಬ.. ಹಬ್ಬಾಚರಣೆ ಹಿಂದಿದೆ ರೋಚಕ ಇತಿಹಾಸ…
ದೀಪಾವಳಿ ಎಂದ ತಕ್ಷಣ ನಮ್ಮ ಕಣ್ಣ ಮುಂದೆ ಬರುವುದು ಪಟಾಕಿಯ ಭಾರಿ ಶಬ್ದ, ಬಾಣ ಬಿರುಸಿನ ಚಿತ್ತಾರಗಳು…. ಆದರೆ, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ಸಲ ಭಾರೀ ಶಬ್ದದ ಮತ್ತು ಅನಾಹುತಕಾರಿ ಪಟಾಕಿಗಳನ್ನು ನಿಷೇಧ ಮಾಡಲಾಗಿದೆ! ಬದಲಿಗೆ ಪರಿಸರ ಸ್ನೇಹಿ ಪಟಾಕಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ ಇದು ಖುಷಿಪಡುವ ವಿಷಯವಾಗಿದೆ. ಜತೆಗೆ ಜನರಲ್ಲಿಯೂ ಪಟಾಕಿ ಕುರಿತಂತೆ ಜಾಗೃತಿ ಮೂಡುತ್ತಿರುವುದು ಖುಷಿಯ ವಿಚಾರವೇ..

ತಲತಲಾಂತರದಿಂದಲೂ ದೀಪಾವಳಿ ಜತೆಗೆ ಪಟಾಕಿ ಮಿಳಿತಗೊಂಡು ಆಚರಣೆಯ ಸಂಭ್ರಮಕ್ಕೆ ಸೇತುವೆಯಾಗಿದೆ. ಪಟಾಕಿ ಇಲ್ಲದ ದೀಪಾವಳಿಯನ್ನು ಊಹಿಸುವುದೂ ಕಷ್ಟ..?! ಆದರೂ ಪಟಾಕಿ ಬೇಡವೇಬೇಡ ಎಂಬ ವಾದ-ವಿವಾದ, ಪ್ರತಿವಾದಗಳು ಇತ್ತೀಚಿನ ವರ್ಷಗಳಲ್ಲಿ ಪ್ರಬಲವಾಗಿ ಕೇಳಿ ಬರುತ್ತಿವೆ. ಜತೆಗೆ ಪಟಾಕಿಯಿಂದ ಆಗುವ ಅನಾಹುತಗಳ ಒಂದು ದೊಡ್ಡ ಪಟ್ಟಿಯನ್ನೇ ಸೊ-ಕಾಲ್ಡ್ ಪ್ರರಿಸರ ಪ್ರೇಮಿಗಳು ತೆರೆದು ಇಡುತ್ತಿದ್ದಾರೆ ಎಂಬಲ್ಲಿ ಅವರವರ ಬೇಳೆಯನ್ನೂ ಸಹ ಬೇಯಿಸಿ ಕೊಳ್ಳಲು ಇರಬಹುದೇನೋ! ಯಾರಿಗೆ ಗೊತ್ತು?
ಇದನ್ನೂ ಓದಿ: ದೀಪದಿಂದ ದೀಪಹಚ್ಚುವ ದೀಪಾವಳಿ ಹಬ್ಬ! ಕತ್ತಲೆಯಿಂದ ಬೆಳಕಿನೆಡೆಗೆ ಸಾಗೋಣ ಬನ್ನಿರಿ
ಪಟಾಕಿ ಸಿಡಿಸದೇ ದೀಪಾವಳಿ ಹಬ್ಬ ಆಚರಿಸಿರಿ” ಎನ್ನುವ ಪರಿಸರ ಸ್ನೇಹಿಗಳ ಬಿಟ್ಟಿಸಲಹೆ ಕೂಡ ಅಸಾಧ್ಯದ ಮಾತು. ಆದರೆ ಹಾನಿಕರ ಪಟಾಕಿ ಸಿಡಿಸಬೇಡಿ ಎನ್ನುವುದು ಮಾತ್ರ ಸರಿಯಾಗೇ ಇದೆ ಅಲ್ಲವೇ? ಯಾವುದೇನೇ ಇದ್ದರೂ ನನ್ನಂಥವರ ಅಭಿಪ್ರಾಯ ಅನಿಸಿಕೆ ಆಗ್ರಹ ಇಷ್ಟೇ: “ಬೆವರು (ಸುರಿಸದಿರುವವರಿಗೆ ಅನ್ವಯವಾಗಲ್ಲ) ಸುರಿಸಿ ದುಡಿದ ಲಕ್ಷಾಂತರ ರೂಪಾಯಿಯನ್ನು ಮತಾಪಿನ ಬೆಂಕಿಯಲ್ಲಿ ಸುಟ್ಟು ಬೂದಿ ಮಾಡುವುದು ಎಷ್ಟರ ಮಟ್ಟಿಗೆ ಸರಿ?” ಪಟಾಕಿ ಸಿಡಿಸುವುದರಿಂದ ಕೇವಲ ಹಣದ ವ್ಯಯ, ಸಮಯದ ವ್ಯರ್ಥ, ಪರಿಸರದ ಮಾಲಿನ್ಯ ಆಗುವುದು ಮಾತ್ರವಲ್ಲದೆ ಎಲ್ಲರ ಆರೋಗ್ಯವು ವಿಶೇಷವಾಗಿ ಮಕ್ಕಳ ಆರೋಗ್ಯ ಹದಗೆಡುವುದರ ಜತೆಗೆ ಅಸ್ತಮಾ, ಹೃದ್ರೋಗ, ಇತರೆ ಖಾಯಿಲೆ ಇದ್ದವರಿಗೆ ಪ್ರಾಣ(ಭೀತಿ) ಕಂಟಕ ಉಂಟಾಗುತ್ತದೆ! ಅದರಲ್ಲೂ ಗರ್ಭಿಣಿ ಮತ್ತು ಬಾಣಂತಿ(ಮಗು) ಮುಂತಾದ ದುರ್ಬಲ ಜೀವ-ದೇಹಕ್ಕೆ ಖುತ್ತು ಬರುವುದಂತೂ ಖಚಿತ!

ಹಾನಿಕರ ಪಟಾಕಿ ಸಿಡಿಸಿವುದರಿಂದ ಪ್ರಯೋಜನಕ್ಕಿಂತ ಅನಾನುಕೂಲ, ಲಾಭಕ್ಕಿಂತ ಕಷ್ಟನಷ್ಟ, ಹೆಚ್ಚಾಗಿರುತ್ತದೆ. ಗೋಡೌನ್ ಅಥವಾ ದಾಸ್ತಾನು ಅಂಗಡಿಯಲ್ಲೂ ದುರಂತ, ಹಾನಿ, ಕಷ್ಟನಷ್ಟ ಅಧಿಕವಾಗಿ ಸಂಭವಿಸುವ ಸಾಧ್ಯತೆ ಇದ್ದೇ ಇರುತ್ತದೆ. ಈ ಅನಿರೀಕ್ಷಿತ ಅಪಾಯಗಳ ಬಗ್ಗೆ ಪಟಾಕಿ ತಯಾರಿಸುವವರಿಗೆ, ಮಾರಾಟಗಾರರಿಗೆ ದಾಸ್ತಾನುದಾರರಿಗೆ, ಗ್ರಾಹಕರಿಗೆ ಹಾಗೂ ಸಿಡಿಸುವವರಿಗೆ ಮನವರಿಕೆ ಆಗುವಂತೆ, ಜಾಗೃತಿ ಮೂಡಿಸುವ ಪ್ರಾತ್ಯಕ್ಷಿಕತೆ ಕೆಲಸವನ್ನು ಅಲ್ಲಲ್ಲೇ ಆಗಾಗ್ಗೆ ಪರಿಸರ ಸ್ನೇಹಿಗಳು, ಸಾಮಾಜಿಕ ಕಾಳಜಿ ಉಳ್ಳವರು, ಮತ್ತಿತರರು ಮಾಡುತ್ತಲೇ ಬಂದಿದ್ದು ಇಂಥ ಉತ್ತಮಕೆಲಸ ಈಗಲೂ ಮುಂದುವರೆಯುತ್ತಿದೆ..
ಇದನ್ನೂ ಓದಿ: ಕತ್ತಲಲ್ಲಿದ್ದ ಚಾಮರಾಜನಗರದ ಏಳು ಗ್ರಾಮಗಳಲ್ಲಿ ಈ ಬಾರಿ ದೀಪಾವಳಿ ಆಚರಣೆ…
ದೀಪಾವಳಿಯು ಕತ್ತಲಿಂದ ಬೆಳಕಿಗೆ ಕೊಂಡೊಯ್ಯುವ ಹಬ್ಬ ಆಗಿರುವುದರಿಂದ, ಹಬ್ಬದ ಸಂಭ್ರಮದಲ್ಲಿ ಉಡಾಫೆಯಿಂದ ಪಟಾಕಿ ಹಚ್ಚುವಾಗ ಎಚ್ಚರತಪ್ಪಿ ಕಣ್ಣುಗಳನ್ನು ಕಳೆದುಕೊಂಡು ತಮ್ಮ ಬದುಕನ್ನು ಕತ್ತಲೆಗೆ ತಳ್ಳಿಕೊಳ್ಳಬಾರದು! ಹೀಗಾಗಿ ಪಟಾಕಿ ಸಿಡಿಸುವ ಮುನ್ನ ಒಂದಷ್ಟು ಮುನ್ನೆಚ್ಚರಿಕೆ ವಹಿಸಿದರೆ ಸಾಕು ಒಳಿತಾಗುತ್ತದೆ.ಸ್ವಯಂಕೃತ ಅಪರಾಧಕ್ಕೆ ಯಾರೂ ಹೊಣೆಯಲ್ಲ!. ಆದರೂ ಪ್ರಾಮಾಣಿಕ ಸಲಹೆ ಮತ್ತು ಮಾರ್ಗದರ್ಶನಗಳು ಹೀಗಿವೆ…

*ಯಾವಾಗಲೂ ಸಹ ಪಟಾಕಿ ಸಿಡಿಸುವವರು ಸದಾ ಹತ್ತಿ(ಕಾಟನ್) ಬಟ್ಟೆಯನ್ನೇ ಧರಿಸುವುದು ಉತ್ತಮ. *ಹಬ್ಬದ ಜೋಶಲ್ಲಿ ಪಟಾಕಿಯನ್ನು ಕೈಯಲ್ಲಿ ಹಿಡಿದು, ಕಣ್ಣಿಗೆ ಹತ್ತಿರದಲ್ಲಿ ಬೆಂಕಿ ಹಚ್ಚುವ ಯತ್ನ ಬೇಡ! *ಬೇರೆಯವರಮೇಲೆ, ಮಕ್ಕಳಮೇಲೆ, ತಿರುಗಾಡುವರಮೇಲೆ ಪಟಾಕಿ ಎಸೆವ ಕೆಟ್ಟಪ್ರವೃತ್ತಿ ದುಷ್ಟಪ್ರಯತ್ನ ಮಾಡದಿರಿ! *ಪಟಾಕಿ ಸಿಡಿದಿಲ್ಲವೆಂದು ಅದನ್ನು ಮುಖದ ಹತ್ತಿರ ಕೈಯಲ್ಲಿ ಹಿಡಿದು ಅದರಮೇಲಿನ ಪೇಪರ್ ಸುಲಿದು ಬತ್ತಿ ಎಳೆದು ಮತ್ತೆ ಬೆಂಕಿ ಹಚ್ಚಬೇಕೆಂಬ ಸಾಹಸ ದುರ್ಬುದ್ಧಿ ಬೇಡ. ಏಕೆಂದರೆ ಕೆಲವೊಮ್ಮೆ ತಡವಾಗಿ ಸಿಡಿವ ಸಾಧ್ಯತೆಯೂ ಇದೆ.
ಪಟಾಕಿ ಸಿಡಿಸುವಾಗ ಕಿವಿಗೆ ಹತ್ತಿ, ಮೂಗಿಗೆ ಮಾಸ್ಕ್ ಹಾಕಿ ಕೊಳ್ಳಿರಿ. ಭಾರೀ ಸದ್ದು ಮಾಡುವ ಪಟಾಕಿಗಳಿಂದ ದೂರವಿರಿ. ಕಿವಿಯ ತಮಟೆಗೆ ಹಾನಿಯಾಗಿ ಕಿವುಡು ಉಂಟಾಗಬಹುದು ಎಚ್ಚರ.. *ಪಟಾಕಿ ಸಿಡಿಸುವಾಗ ಕನ್ನಡಕವನ್ನು ಧರಿಸುವುದು ಒಳ್ಳೆಬುದ್ಧಿ, ಸುರಕ್ಷತೆ ಹಾಗೂ ಎಲ್ಲರೀತಿ ಕ್ಷೇಮ. ಮೇಲ್ಕಂಡ ಎಲ್ಲಾ ಸಲಹೆ ಸೂಚನೆಗಳನ್ನು ಪ್ರತಿಯೊಬ್ಬರೂ ಅನುಸರಿಸಿರಿ, ಜೋಪಾನ..









ಅಮೋಘವಾಗಿದೆ, ಅನೇಕಾನೇಕ ಧನ್ಯವಾದ ಲವ ಸರ್
ಸತ್ಯವಾಗಿಯೂ ಇದರಲ್ಲಿರುವ ಸಲಹೆ ಸೂಚನೆ ಮಾರ್ಗದರ್ಶನ ಎಲ್ಲವೂ ಬಹಳ ಪ್ರಯೋಜನಕಾರಿ ಮತ್ತು ಸ್ವಾಗತಾರ್ಹ., ಅಭಿನಂದನೆ ಸರ್
ಸೂಪರ್ ಸಲಹೆ, ಪ್ರತಿಯೊಬ್ಬರಿಗೂ ಅದರಲ್ಲೂ ಮಕ್ಕಳಿಗೆ ತುಂಬ ಚೆನ್ನಾಗಿ ತಿಳುವಳಿಕೆಯ ಉಪಯುಕ್ತ ಲೇಖನ, ಧನ್ಯವಾದಗಳು ಸಾರ್
ಬಹಳ useful ಲೇಖನ, thanks a Lott….sir
ಅವಶ್ಯಕ ಮಾಹಿತಿಯ ಉತ್ತಮ ಲೇಖನ, ಲೇಖಕರಿಗೆ ನಮ್ಮೆಲ್ಲರ ಧನ್ಯವಾದಗಳು,
ಈಗಾಗಲೇ ರಾಜ್ಯದ ಎಲ್ಲೆಡೆ ನೂರಾರು ಜನರು ವಿಶೇಷವಾಗಿ ಮಕ್ಕಳು ಮತ್ತು ಯುವಕರು ಪಟಾಕಿಯಿಂದ ಗಾಯಗೊಂಡು ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂಥ ಲೇಖನಗಳು ಓದಲೇಬೇಕು, ಏಕೆಂದರೆ ಇದರಿಂದ ಮೊಂಡತನದ ಎಲ್ಲರಿಗೂ ಶಿಕ್ಷಣ ಮತ್ತು ಎಚ್ಚರಿಕೆ ನೀಡುತ್ತದೆ. No question of negligence or deliberation about the eyes and other organs. Thanks again 🙏
ಈಗಾಗಲೇ ರಾಜ್ಯದ ಎಲ್ಲೆಡೆ ನೂರಾರು ಜನರು ವಿಶೇಷವಾಗಿ ಮಕ್ಕಳು ಮತ್ತು ಯುವಕರು ಪಟಾಕಿಯಿಂದ ಗಾಯಗೊಂಡು ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂಥ ಲೇಖನಗಳು ಓದಲೇಬೇಕು, ಏಕೆಂದರೆ ಇದು ಕೆಲವು ಮೊಂಡುತನದ ಅಥವಾ ಭಂಡತನದ ಎಲ್ಲರಿಗೂ ಶಿಕ್ಷಣ ಮತ್ತು ಎಚ್ಚರಿಕೆ ನೀಡುತ್ತದೆ. No question of negligence or deliberation about the eyes and other organs. Thanks again 🙏
ಈಗಾಗಲೇ ರಾಜ್ಯದ ಎಲ್ಲೆಡೆ ನೂರಾರು ಜನರು ವಿಶೇಷವಾಗಿ ಮಕ್ಕಳು ಮತ್ತು ಯುವಕರು ಪಟಾಕಿಯಿಂದ ಗಾಯಗೊಂಡು ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂಥ ಲೇಖನಗಳು ಓದಲೇಬೇಕು, ಏಕೆಂದರೆ ಇದು ಕೆಲವು ಮೊಂಡುತನದ ಅಥವಾ ಭಂಡತನದ ಎಲ್ಲರಿಗೂ ಶಿಕ್ಷಣ ಮತ್ತು ಎಚ್ಚರಿಕೆ ನೀಡುತ್ತದೆ. No question of negligence or deliberation about the eyes and other organs. Thanks sir 🙏
ನಿಮ್ಮ ಈ ಉತ್ತಮ ಉಪಯುಕ್ತ ಲೇಖನ ವನ್ನು ನನ್ನ ಮಕ್ಕಳು ಮತ್ತು
ಮೊಮ್ಮಕ್ಕಳಿಗೆ ತೋರಿಸುತ್ತ ಓದಿ ಬುದ್ದಿವಾದ ಹೇಳಿ ಒಪ್ಪಿಸಿದೆ. ಲೇಖಕ ಮತ್ತು ಪತ್ರಿಕೆಗೆ ನಮ್ಮೆಲ್ಲರ ಧನ್ಯವಾದಗಳು ಸಾರ್
ಬೊಂಬಾಟ್ ಲೇಖನ, ಇದನ್ನು ಯೋಚಿಸಿ ಬರೆದವರಿಗೆ ಸಾವಿರ ಸಾವಿರ ನಮಸ್ಕಾರಗಳು ಸಾರ್
Very nice and very helpful article 👍 👏 👌 👍 thank you very much sir
Superbly narrated very useful and helpful article 👍 👏