Latest

ರಕ್ಷಣಾ ಪತ್ರಿಕೋದ್ಯಮ ಕಾರ್ಯಾಗಾರದಲ್ಲಿ ಪತ್ರಕರ್ತರಿಗೆ ಅಭಿನಯ ಚತುರ್ವೇದಿ ನೀಡಿದ ಸಲಹೆ ಏನು?

ಮೈಸೂರು: ಜಿಲ್ಲೆಯ ಪ್ರತಿಷ್ಠಿತ ರಕ್ಷಣಾ ಇಲಾಖೆಯ ತರಬೇತಿ ಕೇಂದ್ರವಾದ ಆಲ್ಫಾ ಲೀಡ್ ಅಕಾಡೆಮಿ ವತಿಯಿಂದ  ರಕ್ಷಣಾ ಪತ್ರಿಕೋದ್ಯಮ ಕಾರ್ಯಾಗಾರ ನಡೆಯಿತು. ಈ ಕಾರ್ಯಾಗಾರವು ದೇಶದ ರಕ್ಷಣಾ ವಿಚಾರದಲ್ಲಿ ಪತ್ರಕರ್ತರಿಗೆ ಹಲವು ರೀತಿಯಲ್ಲಿ ಉಪಯುಕ್ತವಾಯಿತು.

ಕಾರ್ಯಾಗಾರದಲ್ಲಿ ಮಾತನಾಡಿದ ಆಲ್ಫಾ ಲೀಡ್ ಅಕಾಡೆಮಿ ಸಂಸ್ಥಾಪಕರು ಹಾಗೂ ವಾಯುಸೇನೆಯ ಮಾಜಿ ಅಧಿಕಾರಿಯಯಾದ ಗ್ರೂಪ್ ಕ್ಯಾಪ್ಟನ್ ಅಭಿನಯ ಚತುರ್ವೇದಿಯವರು, ರಕ್ಷಣಾ ಸಂಪತ್ತಿಗೆ ಸುದ್ದಿಗಳನ್ನು ವರದಿ ಮಾಡುವಾಗ ವರದಿಗಾರರು ಎದುರಿಸುತ್ತಿರುವ ಸಮಸ್ಯೆಗಳು,  ರಕ್ಷಣಾ ಸಂಬಂಧಿತ ಸುದ್ದಿಗಳನ್ನು ವರದಿ ಮಾಡುವಲ್ಲಿ ಮತ್ತು ಮಾಹಿತಿಯನ್ನು ಸಾರ್ವಜನಿಕರಿಗೆ ಪ್ರಸಾರ ಮಾಡುವಲ್ಲಿ ಮಾಧ್ಯಮಗಳ ಪಾತ್ರದ ಕುರಿತು  ಮಾಹಿತಿ ನೀಡಿದರಲ್ಲದೆ, ಇತರೆ ದೇಶಗಳಿಗೆ ಹೋಲಿಸಿದರೆ ಕೇವಲ ಭಾರತದಲ್ಲಿ ಮಾತ್ರ ರಕ್ಷಣಾ ಪಡೆಗಳು ಪತ್ರಕರ್ತರು ಹಾಗೂ ವರದಿಗಾರರಿಗೆ ಘಟನೆಗಳನ್ನು ವರದಿ ಮಾಡಲು ಅವಕಾಶ ನೀಡುತ್ತದೆ ಎಂದು ಹೇಳಿದರು.

ಕಾರ್ಯಾಚರಣೆ ನಂತರ ಸಂಕ್ಷಿಪ್ತ ಮಾಹಿತಿ, ಅಧಿಕೃತ ಹೇಳಿಕೆಗಳು, ರಕ್ಷಣಾ ಇಲಾಖೆಯ ಜಾಗೃತಿ ಮತ್ತು ಕೆರಿಯರ್ ಹಾಗೂ ತರಬೇತಿ ಮೌಲ್ಯಗಳು ಮತ್ತು ನಾಯಕತ್ವದ ಕುರಿತು ವಿವರಿಸಿದರು. ಲೈವ್ ಆಪರೇಷನ್ಸ್ ನಡೆಯುವುದನ್ನು ಚಿತ್ರೀಕರಿಸುವುದು, ಗಾಡ್ ಪೋಸ್ಟ್, ಕಣ್ಗಾವಲು ಉಪಕರಣಗಳನ್ನು ಚಿತ್ರೀಕರಣ ಮಾಡುವುದು, ಹ್ಯಾಂಗರ್ ಗಳು ಹಾಗೂ ರನ್ವೆಗಳನ್ನು ಸಾರ್ವಜನಿಕರಿಗೆ ದೃಶ್ಯ ಮಾಧ್ಯಮಗಳಲ್ಲಿ ತೋರಿಸುವುದು, ನಿಯಂತ್ರಣ ಕೊಠಡಿಗಳು ಹಾಗೂ ವಾಹನ ನಂಬರ್ ಪ್ಲೇಟ್ ಗಳನ್ನು ಚಿತ್ರೀಕರಣ ಮಾಡಿ ಸಾರ್ವಜನಿಕರಿಗೆ ಟಿವಿ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವುದನ್ನು ತಪ್ಪಿಸಬೇಕು ಎಂದು ಸಲಹೆ ನೀಡಿದರು.

ಸಂದರ್ಶನದ ವೇಳೆಯಲ್ಲಿ ಪ್ರಶ್ನೆಗಳು ನಾಯಕತ್ವ, ತರಬೇತಿ, ಜೀವನ ಪಾಠಗಳು, ಪ್ರೇರಣೆ ಮತ್ತು ಸೇವೆಗಳ ಮೌಲ್ಯಗಳ ಬಗ್ಗೆ ಇರಬೇಕೇ ಹೊರತು ಕಾರ್ಯಾಚರಣೆಗಳು, ಗುಪ್ತಚರ ಇಲಾಖೆ, ಭವಿಷ್ಯದ ನಿಯೋಜನೆ ಮತ್ತು ಶಸ್ತ್ರಾಸ್ತ್ರ ವ್ಯವಸ್ಥೆಯ ಬಗ್ಗೆ ಇರಬಾರದು ಹಾಗೂ ಕೇಳಬಾರದು. ಭಾರತೀಯ ಸೇನೆಯ ಕುರಿತು ಮಾಹಿತಿಗಳನ್ನು ಪಡೆಯಬೇಕೆಂದರೆ ಅಧಿಕೃತ ಮಾಹಿತಿ ಮೂಲಗಳಾದ ಆರ್ಮಿ ಎಡಿಜಿಪಿಐ,  ಇಂಡಿಯನ್ ಏರ್ ಫೋರ್ಸ್ ಪಬ್ಲಿಕ್ ರಿಲೇಶನ್ ಡೈರೆಕ್ಟರ್, ಇಂಡಿಯನ್ ನೇವಿ ಪಬ್ಲಿಕ್ ರೆಲಶನ್ ಆಫೀಸರ್, ರಕ್ಷಣಾ ಸಚಿವಾಲಯ,  ವಿದೇಶಾಂಗ ಮತ್ತು ವ್ಯವಹಾರಗಳ ಸಚಿವಾಲಯ ಹಾಗೂ ಕೇಂದ್ರ ಗೃಹ ಸಚಿವಾಲಯಗಳ ಮೂಲಕ ಪಡೆಯಬಹುದು.

ಇದಲ್ಲದೆ ಅನಧಿಕೃತವಾಗಿ ಮಾಜಿ ಸೇನಾಧಿಕಾರಿಗಳಿಂದ,  ಅಧಿಕೃತ ಚಿಂತಕರ ಸಹಾಯದಿಂದ ಮಾಹಿತಿಗಳನ್ನು ಪಡೆದು ಅಂಕಣಗಳು, ಸುದ್ದಿಗಳನ್ನು ಮಾಡಬಹುದು ಎಂದು ಕಾರ್ಯಗಾರದಲ್ಲಿ ಭಾಗಿಯಾಗಿದ್ದ ಎಲ್ಲಾ ಪತ್ರಕರ್ತರಿಗೆ ತಿಳಿಸಿದರು. ನಂತರ ಚತುರ್ವೇದಿಯವರು ದಿನ ಪತ್ರಿಕೆ ಮತ್ತು ವಾರಪತ್ರಿಕೆಗಳಲ್ಲಿ ಹಾಗೂ ಟಿವಿ ಮಾಧ್ಯಮಗಳಲ್ಲಿ ಪ್ರಕಟವಾಗುವ ಅಂಕಣಗಳಿಗೆ ವರ್ಷಕ್ಕೆ ಎರಡು ಬಾರಿ ನಗದು ಬಹುಮಾನ ಹಾಗೂ ಫೀಲ್ಡ್ ಮಾರ್ಷಲ್ ಕೆಎಂ ಕಾರ್ಯಪ್ಪ ಅತ್ಯುತ್ತಮ ಡಿಫೆನ್ಸ್ ಜರ್ನಲಿಸ್ಟ್ ಎಂಬ ನೀಡಿ ಸನ್ಮಾನಿಸಲಾಗುತ್ತದೆ ಎಂದು ತಿಳಿಸಿದರು.

ಇದೇ ವೇಳೆ ಪತ್ರಕರ್ತರೊಂದಿಗೆ ಸಂವಾದ ನಡೆಸಲಾಯಿತು. ಕಾರ್ಯಾಗಾರದಲ್ಲಿ ಡಾ.ಮಮತಾ ವಿಶ್ವನಾಥ್, ಸ್ವಾತಿ ಎಂ ಶೇಟ್,  ನಿಶಾ ಹಾಗೂ ಮಣಿಕಂಠ ಉಪಸ್ಥಿತರಿದ್ದರು.

admin
the authoradmin

Leave a Reply