LatestMysore

ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೈಲಿನಿಂದ ಹೊರ ಬರುವಂತೆ ಅಭಿಮಾನಿಗಳಿಂದ ಚಾಮುಂಡೇಶ್ವರಿಗೆ ಪೂಜೆ

ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬದ ಅಂಗವಾಗಿ  ಸಿದ್ದಾರ್ಥ ನಗರದಲ್ಲಿರುವ ತೂಗುದೀಪ್ ಶ್ರೀನಿವಾಸ್ ವೃತ್ತದಲ್ಲಿ  ದರ್ಶನ್ ಅಭಿಮಾನಿಗಳು  ಹಾಗೂ  ಸಮಾಜ ಸೇವಕರಾದ ಬನ್ನೂರು ಮಹೇಂದ್ರ ಸಿಂಗ್ ಕಾಳಪ್ಪ ರವರ ನೇತೃತ್ವದಲ್ಲಿ  ತಾಯಿ ಚಾಮುಂಡೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ನಂತರ  ದರ್ಶನ್ ರವರ ಬೃಹತ್ ಕಟೌಟಿಗೆ  ಕುಂಬಳಕಾಯಿಂದ ದೃಷ್ಟಿ ತೆಗೆದು  ನಂತರ  ಅಭಿಮಾನಿಗಳಿಗೆ  ಮಜ್ಜಿಗೆ, ಸಿಹಿ  ವಿತರಿಸಿ  ಡಿ ಬಾಸ್  ಸಂಕಷ್ಟದಿಂದ  ಮುಕ್ತಿಪಡೆಯಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು.

ಈ ಸಂದರ್ಭಲ್ಲಿ ಮಾತನಾಡಿದ  ಸಮಾಜ ಸೇವಕ ಬನ್ನೂರು ಮಹೇಂದ್ರ ಸಿಂಗ್ ಕಾಳಪ್ಪ ಅವರು ಅವರಿಗೆ ಅಂಟಿರುವ ಕಳಂಕದಿಂದ ನಿರ್ದೋಷಿಯಾಗಿ  ಬೇಗ  ಹೊರಗೆ ಬರುತ್ತಾರೆ ಎಂಬ ವಿಶ್ವಾಸ ನಮ್ಮೆಲ್ಲರಿಗೂ  ಇದೆ.  ಪ್ರತಿ ವರ್ಷದಂತೆ ಈ ವರ್ಷವೂ ಸಹ  ರಾಜ್ಯಾದ್ಯಂತ ಅರ್ಥಪೂರ್ಣವಾಗಿ   ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಹುಟ್ಟುಹಬ್ಬವನ್ನು  ಬಿಸಿಲಿನ ತಾಪದಿಂದ  ಓಡಾಡುವ  ವಾಹನ ಸವಾರಿರಿಗೆ  ಮಜ್ಜಿಗೆ ನೀಡುವ ಮೂಲಕ  ಅರ್ಥಪೂರ್ಣವಾಗಿ ಆಚರಿಸುವ ಮೂಲಕ  ದರ್ಶನ್ ರವರು ಬೇಗ   ನಿರ್ದೋಷಿಯಾಗಿ  ಹೊರಗೆ ಬಂದು ಮತ್ತೆ ಚಿತ್ರರಂಗದಲ್ಲಿ ಕಾಣಲಿ  ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ವಿಶೇಷ ಪ್ರಾರ್ಥನೆ  ಮಾಡಿದ್ದಾಗಿ ಹೇಳಿದರು.

ಮುಂದಿನ ವರ್ಷ 50ನೇ  ವರ್ಷದ ಹುಟ್ಟುಹಬ್ಬವನ್ನು ಅಭಿಮಾನಿಗಳ ಜೊತೆ ಅವರು ಅದ್ದೂರಿಯಾಗಿ ಆಚರಿಸುವ  ವಿಶ್ವಾಸವಿದೆ ಎಂದು  ಹೇಳಿದರು.  ಇದೇ ಸಂದರ್ಭದಲ್ಲಿ   ನಜರ್ ಬಾದ್ ನಟರಾಜ್, ಜಿ ರಾಘವೇಂದ್ರ, ಹರೀಶ್ ನಾಯ್ಡು, ಎಸ್ ಎನ್ ರಾಜೇಶ್,ಅಮಿತ್, ಅಶ್ವಥ್, ನಾಗರಾಜು ಹಾಗೂ ಅಭಿಮಾನಿಗಳಿದ್ದರು.

admin
the authoradmin

Leave a Reply

Translate to any language you want