State

ರೋಟರಿ ಗದಗ ಸೆಂಟ್ರಲ್ ಹಾಗೂ ಐಡಿಬಿಐ ಬ್ಯಾಂಕ್ ನಿಂದ ಡೋಣಿ ಬಾಲಕಿಯರ ಶಾಲೆಗೆ ಕಂಪ್ಯೂಟರ್ ಕೊಡುಗೆ

ಗದಗ: ರೋಟರಿ ಗದಗ ಸೆಂಟ್ರಲ್ ಹಾಗೂ ಐಡಿಬಿಐ ಬ್ಯಾಂಕ್ ಸಹಯೋಗದಲ್ಲಿ ಮುಂಡರಗಿ ತಾಲೂಕಿನ ದೋಣಿ ಗ್ರಾಮದ ಸರಕಾರಿ ಬಾಲಕಿಯರ ಶಾಲೆಗೆ ಮೂರು ಕಂಪ್ಯೂಟರ್‌ಗಳನ್ನು ಮಕ್ಕಳ ಕಂಪ್ಯೂಟರ್ ಜ್ಞಾನಾರ್ಜನೆಗೆ ಕೊಡುಗೆಯನ್ನು ನೀಡಲಾಯಿತು.

ರೋಟರಿ ಗದಗ್ ರೆವಿನ್ಯೂ ಡಿಸ್ಟ್ರಿಕ್ಟ್ ನ ಅಸಿಸ್ಟೆಂಟ್ ಗವರ್ನರ್ ವಿ ಕೆ ಗುರುಮಠ ಅವರು ಮಾತನಾಡಿ ರೋಟರಿ ನಡೆದು ಬಂದ ದಾರಿ ಹಾಗೂ ರೋಟರಿ ಮಾಡುವ ಕೆಲಸಗಳನ್ನು ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ತಿಳಿಸಿದರು. ಐಡಿಬಿಐ ಬ್ಯಾಂಕ್ ಗದಗ್ ಬ್ರಾಂಚ್ ನ ಮ್ಯಾನೇಜರ್ ವಿಕ್ರಂ ಕಡೆಮನೆ ಅವರು ತಮ್ಮ ಬ್ಯಾಂಕಿನಲ್ಲಿರುವ ಸೌಲಭ್ಯಗಳನ್ನು ಮಕ್ಕಳಿಗೆ ವಿವರಿಸಿ ಹೇಳಿದರು. ಬ್ಯಾಂಕಿನ ರೀಜನಲ್ ಆಫೀಸರ್  ರಮೇಶ್ ಅವರು ಉದ್ಘಾಟಿಸಿ ಮಕ್ಕಳು ಕಂಪ್ಯೂಟರ್ ಕಲಿಕೆಯ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯ್ಯಾರಿ ನಡೆಸಿ ಯಶಸ್ವಿಯಾಗುವಂತೆ ಕರೆ ನೀಡಿದರು.

ರೋಟರಿ ಗದಗ್ ಸೆಂಟ್ರಲ್ ಅಧ್ಯಕ್ಷ ಚೇತನ್ ಅಂಗಡಿ ಮಾತನಾಡಿ ನಮ್ಮ ಸಂಸ್ಥೆ ಮಕ್ಕಳಿಗೆ ಅಗತ್ಯವಾದ ಸೌಲಭ್ಯಗಳನ್ನು ಒದಗಿಸಲು ಸದಾಕಾಲ ಸಿದ್ಧವಿದೆ ಎಂದರು. ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೇಣುಕಾ ಟಿ ಮೊಕಾಶಿ, ಎಸ್ ಡಿ ಎಂ ಸಿ ಅಧ್ಯಕ್ಷ ಶರಣಪ್ಪ ಗೋಣಿಸ್ವಾಮಿ, ರೋಟರಿ ಸೆಂಟ್ರಲ್ ಕಾರ್ಯದರ್ಶಿ ರಾಜು ಹುಮ್ನಾಬಾದಿ, ಖಜಾಂಚಿ , ಡಾ. ಪ್ರಭು ಗಂಜಿಹಾಳ,ಮಾಜಿ ಅಸಿಸ್ಟೆಂಟ್ ಗವರ್ನರ್ ಎಂ ಸಿ ಐಲಿ, ಸುರೇಶ ಅಬ್ಬಿಗೇರಿ, ವಿಜಯ್ ಕುಮಾರ್ ಹಿರೇಮಠ, ಮಂಜುನಾಥ್ ಕಬಾಡಿ, ಹಾಗೂ ರೋಟರಿ ಸದಸ್ಯರು , ಶಾಲಾ ಶಿಕ್ಷಕರು ಉಪಸ್ಥಿತರಿದ್ದರು

admin
the authoradmin

ನಿಮ್ಮದೊಂದು ಉತ್ತರ

Translate to any language you want