ಭಯೋತ್ಪಾದನೆ ಮೂಲಕ ಭಾರತವನ್ನು ಬಗ್ಗುಬಡಿಯಬಹುದೆಂದು ಕೊಂಡವರಿಗೆ ಅದು ಸಾಧ್ಯವಾಗಲ್ಲ ಎಂಬುದು ಗೊತ್ತಾಗಿದೆ. ಸ್ವಾತಂತ್ರ್ಯ ನಂತರ ಭಾರತದಲ್ಲಿ ಭಯತ್ಪಾದನೆ ಯಾವ ರೀತಿಯಲ್ಲಿ ನಡೆದಿದೆ ಎನ್ನುವುದು ನಮ್ಮ ಮುಂದಿರುವ ಕಹಿ ಸತ್ಯವಾಗಿದೆ. ಆದರೂ ಭಾರತದ ಮೇಲೆ ಕಣ್ಣಿಟ್ಟಿರುವ ಉಗ್ರವಾದಿಗಳು ಏಜೆಂಟರ ಮೂಲಕ ಬೇರೆ, ಬೇರೆ ತಂತ್ರಗಳನ್ನು ಪ್ರಯೋಗ ಮಾಡುತ್ತಲೇ ಬಂದಿದ್ದಾರೆ. ಆದರೆ ಅದಕ್ಕೆ ಸಕಾಲದಲ್ಲಿ ಭಾರತ ತಿರುಗೇಟು ನೀಡಿದೆ.. ಆದರೂ ಇವತ್ತು ನಾವು ಎಚ್ಚೆತ್ತುಕೊಳ್ಳಲೇ ಬೇಕಾದ ಅನಿವಾರ್ಯತೆಗೆ ಬಂದು ನಿಂತಿದ್ದೇವೆ.. ಏಕೆಂದರೆ ಭಯೋತ್ಪಾದಕರು ಈಗ ಯುವ ಜನತೆಯ ಮೇಲೆ ಕಣ್ಣಿಟ್ಟಿದ್ದಾರೆ… ಅವರನ್ನು ವಿದ್ಯಾರ್ಥಿ ದೆಸೆಯಿಂದಲೇ ಮಟ್ಟ ಹಾಕುವ ಪ್ರಯತ್ನ ನಡೆಸುತ್ತಿದ್ದು ಅದಕ್ಕೆ ಅವರು ಬಳಸುತ್ತಿರುವ ಅಸ್ತ್ರ ಡ್ರಗ್ಸ್..
ನಮ್ಮ ದೇಶವನ್ನು ಕೋಮು ಗಲಭೆ ಹಬ್ಬಿಸುವುದರಿಂದ, ಬಾಂಬ್ ಇಡುವುದರಿಂದ, ನುಗ್ಗಿ ದಾಳಿ ಮಾಡುವುದರಿಂದ ಸುಲಭವಾಗಿ ಮುಗಿಸಿ ಬಿಡಬಹುದೆಂದು ನಂಬಿದ್ದರು. ಆದರೆ ಅದ್ಯಾವುದೂ ಸಾಧ್ಯವಾಗಲಿಲ್ಲ. ಅದರಲ್ಲೂ ಕಳೆದೊಂದುವರೆ ದಶಕದಿಂದ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ ಬಳಿಕ ಉಗ್ರಗಾಮಿಗಳನ್ನು ಹುಡುಕಿ ಹೊಡೆದು ಕೊಲ್ಲುವ ಕೆಲಸಗಳು ನಡೆಯುತ್ತಲೇ ಬರುತ್ತಿದೆ. ಇನ್ನೊಂದು ಕಡೆ ರಾಷ್ಟ್ರೀಯ ತನಿಖಾ ದಳ(ಎನ್ ಐಎ) ದೇಶದಾದ್ಯಂತ ಕಣ್ಣಿಟ್ಟಿದ್ದು ಭಯೋತ್ಪಾದನೆಯ ಚಟುವಟಿಕೆ ನಡೆಸುವ, ಕುಮ್ಮಕ್ಕು ನೀಡುವವರಿಗೆ ಹುಡುಕಿ, ಹುಡುಕಿ ಗತಿ ಕಾಣಿಸುತ್ತಿದೆ… ಹೀಗಿದ್ದರೂ ಭಾರತದ ಮೇಲೆ ಕತ್ತಿಮಸೆಯುವುದು ನಿಲ್ಲಿಸಿಲ್ಲ.

ನಮ್ಮ ದೇಶಕ್ಕೆ ಹೊರಗಿನವರಿಗಿಂತ ಒಳಗಿನ ಶತ್ರುಗಳೇ ಅಪಾಯ ತಂದೊಡ್ಡಿರುವುದರಿಂದ ನಮ್ಮ ಅನ್ನ, ನೀರು, ಎಲ್ಲವನ್ನು ಬಳಸಿಕೊಂಡು ಬೇರೆಡೆಗೆ ನಿಷ್ಠೆ ತೋರುವವರ ಸಂಖ್ಯೆಯೂ ದೊಡ್ಡ ಮಟ್ಟದಲ್ಲಿದೆ. ಅಧಿಕಾರಕ್ಕಾಗಿ ಏನೂ ಬೇಕಾದರೂ ಮಾಡಲು ತಯಾರಿರುವವರು ಇಲ್ಲದಿಲ್ಲ. ಹೀಗಾಗಿ ಎಷ್ಟೇ ಎಚ್ಚರವಾಗಿದ್ದರೂ ಸಾಲದಾಗಿದೆ. ಜನ ಸಂಪನ್ಮೂಲ ಹೊಂದಿರುವ ದೇಶದಲ್ಲಿ ಮುಂದಿನ ಪ್ರಜೆಗಳಾಗಿ ದೇಶದ ಭವಿಷ್ಯ ಬರೆಯುವ ಯುವ ಜನತೆಯನ್ನೀಗ ಭಯೋತ್ಪಾದಕರು ಟಾರ್ಗೆಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ : ಕೊಡಗಿಗೆ ಬರುತ್ತಿರುವ ವಲಸೆ ಕಾರ್ಮಿಕರು ನಿಜವಾಗಿಯೂ ಅಸ್ಸಾಂನವರಾ?
ಬಾಂಬ್, ಗನ್ ಆಚೆಗೆ ಗಾಂಜಾ, ಡ್ರಗ್ಸ್ ನಂತಹ ಮಾದಕ ವಸ್ತುಗಳಿಗೆ ಯುವ ಜನತೆಯನ್ನು ದಾಸರನ್ನಾಗಿ ಮಾಡುವ ಮೂಲಕ ಅವರನ್ನು ಚಿವುಟುವ ಷಡ್ಯಂತ್ರ ನಡೆಯುತ್ತಿದೆ. ಇದಕ್ಕೆ ವಿದೇಶಗಳಿಂದ ನಮ್ಮ ದೇಶಕ್ಕೆ ಬರುತ್ತಿರುವ ಡ್ರಗ್ಸ್ ಗಳು ಕಾರಣವಾಗುತ್ತಿವೆ. ಜತೆಗೆ ಇಲ್ಲಿಯೇ ಡ್ರಗ್ ಫ್ಯಾಕ್ಟರಿಗಳನ್ನು ತೆಗೆದು ಅದನ್ನು ಮೆಡಿಕಲ್, ಇಂಜಿನಿಯರ್ ಕಾಲೇಜ್, ಹಾಸ್ಟೆಲ್ ವ್ಯಾಪ್ತಿಯಲ್ಲಿ ಮಾರಾಟ ಮಾಡಿ, ಹುಡುಗ ಮತ್ತು ಹುಡುಗಿಯರನ್ನು ವ್ಯಸನಿಗಳನ್ನಾಗಿಸುವ ಮೂಲಕ ಅವರ ಭವಿಷ್ಯವನ್ನೇ ನಿರ್ನಾಮ ಮಾಡುವ ತಂತ್ರಗಳು ನಡೆಯುತ್ತಿವೆ.

ಇವತ್ತು ಗಾಂಜಾ, ಡ್ರಗ್ಸ್ ಮತ್ತಿನಲ್ಲಿ ನಡೆಯುತ್ತಿರುವ ಘಟನೆಗಳನ್ನು ನೋಡಿದರೆ, ಯುವ ಜನತೆಯನ್ನು ವ್ಯಸನಿಗಳನ್ನಾಗಿಸುವ ಮೂಲಕ ಅವರ ಭವಿಷ್ಯ ಮಾತ್ರವಲ್ಲ ದೇಶದ ಭವಿಷ್ಯವನ್ನು ಕೂಡ ಮೊಟಕು ಗೊಳಿಸಬಹುದು ಎನ್ನುವುದು ದೇಶ ವಿರೋಧಿಗಳ ಆಲೋಚನೆಯಾಗಿದೆ. ಈಗಾಗಲೇ ಬಹುತೇಕ ಮನೆಗಳಲ್ಲಿ ಮಕ್ಕಳು ದಾರಿ ತಪ್ಪಿದ್ದಾರೆ ಓದುವ ವಯಸ್ಸಿನಲ್ಲಿ ವ್ಯಸನಕ್ಕೆ ಬಲಿಯಾಗಿ ಬದುಕನ್ನೇ ಹಾಳು ಮಾಡಿಕೊಂಡಿದ್ದಾರೆ… ಮಾಡಿಕೊಳ್ಳುತ್ತಿದ್ದಾರೆ.. ಹೆತ್ತವರು ಮಕ್ಕಳ ಅವಸ್ಥೆ ನೋಡಿ ಕಣ್ಣೀರಿಡುತ್ತಿದ್ದಾರೆ. ಇನ್ನು ಡ್ರಗ್ಸ್ ಮಾತ್ರವಲ್ಲದೆ ಮದ್ಯದ ವ್ಯಸನಕ್ಕೂ ಬಲಿಯಾಗುತ್ತಿದ್ದಾರೆ. ಹೀಗೆ ವ್ಯಸನಿಗಳಾದವರನ್ನು ಅಕ್ರಮ, ಅಪರಾಧ ಚಟುವಟಿಕೆಗೆ ಬಳಸಿಕೊಳ್ಳುವುದು ಬಹು ಸುಲಭವಾಗಿದೆ. ಹಣ ಸಿಗುತ್ತದೆ ಎನ್ನುವುದಾದರೆ ಅವರು ಏನೂ ಬೇಕಾದರೂ ಮಾಡುವ ಮಟ್ಟಕ್ಕೆ ಹೋಗಿರುತ್ತಾರೆ.
ಇದನ್ನೂ ಓದಿ : ಮನೆ ಬಾಡಿಗೆಗೆ ನೀಡುವ ಮುನ್ನ ಎಚ್ಚರವಿರಲಿ…
ವ್ಯಸನಿಗಳ ದೌರ್ಬಲ್ಯ ದೇಶ ವಿರೋಧಿಗಳಿಗೆ ಎತ್ತಿಕಟ್ಟಲು ಸುಲಭವಾಗುತ್ತದೆ. ಇನ್ನು ಮತಾಂತರ, ಹೆಣ್ಣು ಮಕ್ಕಳ ಸಾಗಾಣಿಕೆಯೂ ದೇಶದ ಮೇಲೆ ಪರಿಣಾಮ ಬೀರುತ್ತಿದೆ. ಹೆಣ್ಣು ಮಕ್ಕಳನ್ನೇ ಟಾರ್ಗೆಟ್ ಮಾಡುತ್ತಿರುವ ವಿರೋಧಿ ಶಕ್ತಿಗಳು ಅವರ ಬದುಕಿನ ಜತೆಗೆ ಆಟವಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಆ ಮೂಲಕ ಹಣ ಮಾಡುವ ದಂಧೆಯನ್ನು ನಡೆಸುತ್ತಿದ್ದಾರೆ. ಹಾಗೆನೋಡಿದರೆ ಮಾನವ ಸಾಗಾಣಿಕೆ ಇವತ್ತು ನಿನ್ನೆಯದಲ್ಲ ಹಿಂದಿನಿಂದಿಲೂ ನಡೆದುಕೊಂಡು ಬಂದಿದೆ. ಅದು ಇವತ್ತು ಬೇರೆಯದ್ದೇ ರೂಪವನ್ನು ಪಡೆಯುತ್ತಿದೆ. ಹೆಣ್ಣು ಹೆತ್ತವರನ್ನು ಭಯಪಡುವಂತೆ ಮಾಡಿದೆ. ಮೇಲ್ನೋಟಕ್ಕೆ ಅದು ನಾಪತ್ತೆ ಪ್ರಕರಣದಂತೆ ಕಂಡು ಬಂದರೂ ಅದರ ಹಿಂದೆ ಮಾನವಸಾಗಾಣಿಕೆ ಲಿಂಕ್ ಇರುವುದು ಸುಳ್ಳೇನಲ್ಲ..

ಇಷ್ಟಕ್ಕೂ ಮಾನವಸಾಗಾಣಿಕೆ ಎಂದರೇನು ಎಂಬುದನ್ನು ನೋಡುವುದಾದರೆ, ಮನುಷ್ಯ ಮನುಷ್ಯನನ್ನ ಒಂದು ನಿರ್ದಿಷ್ಟ ಸ್ಥಳದಿಂದ ಬೇರೆ ಕಡೆಗೆ ಅಸ್ವಾಭಾವಿಕ ಕಾರಣಗಳಿಗಾಗಿ ವರ್ಗಾಹಿಸುವುದು, ಮಾರುವುದು, ಬಲವಂತವಾಗಿ ವ್ಯಕ್ತಿಯ ಇಚ್ಛೆಗೆ ವಿರುದ್ಧವಾಗಿ ಕಳುಹಿಸುವುದು ಇವೆಲ್ಲವೂ ಮಾನವ ಸಾಗಾಣಿಕೆ ಎಂದು ಹೇಳಲಾಗುತ್ತಿದೆ. ಈ ಮಾನವ ಸಾಗಾಣಿಕೆಯು ಹಲವಾರು ಅಂಶಗಳನ್ನು ಒಳಗೊಂಡಿರುವುದನ್ನು ನಾವು ಕಾಣಬಹುದಾಗಿದೆ. ಈ ಮಾನವಸಾಗಾಣಿಕೆ ಜೀವಂತವಾಗಿರಲು ಕಾರಣಗಳೇನು ಇರಬಹುದು ಎಂಬುದನ್ನು ನೋಡಿದ್ದೇ ಆದರೆ, ನಿರುದ್ಯೋಗ ಬಹುಮುಖ್ಯವಾಗಿದೆ. ಇದನ್ನೇ ಬಳಸಿಕೊಂಡು ಬಹುಸುಲಭವಾಗಿ ಹೆಣ್ಣು ಮಕ್ಕಳನ್ನು ಕತ್ತಲಕೂಪಕ್ಕೆ ತಳ್ಳುತ್ತಿದ್ದಾರೆ.
ಇದನ್ನೂ ಓದಿ : ಜನ ಸ್ಪಾಗಳನ್ನು ಅನುಮಾನದಿಂದ ನೋಡುತ್ತಿರುವುದೇಕೆ?
ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗಿಗಳ ಸಂಖ್ಯೆ ಅತಿಹೆಚ್ಚಾಗಿದ್ದು ಅದರಲ್ಲಿ ಮಹಿಳಾ ನಿರುದ್ಯೋಗಿಗಳ ಸಂಖ್ಯೆ ಅಧಿಕವಾಗಿದೆ. ಸರಳ ಶಿಕ್ಷಣ, ಸಾಂಪ್ರಾದಾಯಿಕ ಹಿನ್ನಲೆಗಳಿಂದಾಗಿ ಉದ್ಯೋಗಿಗಳ ಬಗ್ಗೆ ಸೂಕ್ತ ಮಾಹಿತಿಯಿಲ್ಲದೇ ಹೆಣ್ಣು ಮಕ್ಕಳು ಪ್ರತಿನಿತ್ಯ ಉದ್ಯೋಗ ಹುಡುಕಲು ಹರಸಾಹಸ ಪಡುತ್ತಿರುತ್ತಾರೆ. ಇಂತಹ ಸಂದರ್ಭಗಳಲ್ಲಿ ವಿದೇಶದಲ್ಲಿ ಉದ್ಯೋಗದ ಸುಳ್ಳು ಜಾಹೀರಾತು ನೀಡುತ್ತಾರೆ. ಈ ವೇಳೆ ಉದ್ಯೋಗ ಪಡೆಯುವ ಆಸೆಯಿಂದ ಬರುವ ಯುವತಿಯರನ್ನು ಟಾರ್ಗೆಟ್ ಮಾಡುತ್ತಿದ್ದು, ಅಪರಿಚಿತ ವ್ಯಕ್ತಿಗಳೊಂದಿಗೆ, ಅಪರಿಚಿತ ಸ್ಥಳಗಳಿಗೆ ಸಾಗಾಣಿಕೆ ಮಾಡುತ್ತಾರೆ. ಆದರೆ ವಾಸ್ತವ ಸ್ಥಿತಿಯ ಅರಿವು ಆಗುವುದರೊಳಗೆ ಮಾನವ ಸಾಗಾಣಿಕೆಯ ಕಬಂಧ- ಬಾಹುವಿನೊಳಗೆ ಬಂಧಿಯಾಗಿ ಬಿಡುತ್ತಾರೆ.

ಇನ್ನು ಬಣ್ಣದ ಪ್ರಪಂಚ ಎಂತಹವರನ್ನು ಅತೀ ಸುಲಭವಾಗಿ ಆಕರ್ಷಣೆ ಮಾಡಿಬಿಡುತ್ತದೆ. ಅದರಲ್ಲೂ ಅದೆಷ್ಟೋ ಮುಗ್ದ ಯುವತಿಯರು ಸಿನಿಮಾಗಳಲ್ಲಿ ಬರುವ ನಾಯಕಿಯರಂತೆ ತಮ್ಮನ್ನು ಹೋಲಿಸಿಕೊಂಡು ಕನಸು ಕಾಣುವುದರಲ್ಲಿ ಅದೆಷ್ಟೋ ಸಮಯವನ್ನ ಕಳೆಯುತ್ತಿರುತ್ತಾರೆ. ಅಂತಹವರಿಗೆ ಮಾಧ್ಯಮಗಳಲ್ಲಿ ಪ್ರಸಾರವಾಗುವ ಜಾಹೀರಾತು ಅಥವಾ ತಮ್ಮನ್ನು ಸಿನಿಮಾಕ್ಕೆ ಸೇರಿಸುತ್ತೇವೆಂದು ಹೇಳುವ ವ್ಯಕ್ತಿಗಳು ಅತ್ಯಂತ ಆಪ್ತರೆನಿಸಿರುತ್ತಾರೆ. ಹಿಂದೆ-ಮುಂದೆ ಯೋಚನೆ ಮಾಡದೇ ಇಂತಹ ವ್ಯಕ್ತಿಗಳೊಟ್ಟಿಗೆ ನಗರ ಪ್ರವೇಶಿಸುವ ಯುವತಿಯರು ಮಾನವ ಸಾಗಾಣಿಕೆಯ ಕೂಪದೊಳಗೆ ಸಿಲುಕುತ್ತಾರೆ. ಮುಂದೆ ಅವರನ್ನು ವೇಶ್ಯಾವಾಟಿಕೆಗೆ ತಳ್ಳಿದರು ಅಚ್ಚರಿಯಿಲ್ಲ. ಮತಾಂತರ ಮಾಡಿ ಮಾರಾಟ ಮಾಡಿದರೂ ಗೊತ್ತಾಗುವುದಿಲ್ಲ.
ಇದನ್ನೂ ಓದಿ : ಭಾರತಕ್ಕೆ ಬಾಂಗ್ಲಾ-ನೇಪಾಳಿ ಹುಡ್ಗೀರ್ ಬರೋದ್ಯಾಕೆ?…
ಬಡತನದಲ್ಲಿರುವ ಹೆಣ್ಣು ಮಕ್ಕಳನ್ನು ದಾರಿ ತಪ್ಪಿಸುವುದು ಬಹು ಸುಲಭ. ಅದರ ಜತೆಗೆ ಅನಕ್ಷರತೆಯೂ ಮಾನವಸಾಗಾಣಿಕೆಗೆ ಇನ್ನಷ್ಟು ಪುಷ್ಠಿ ನೀಡುತ್ತದೆ. ಗ್ರಾಮೀಣ ಯುವತಿಯರು ತಾವು ಕೇಳಿದ್ದು ನೋಡಿದ್ದು ಸತ್ಯವೆಂದು ಭ್ರಮಿಸುತ್ತಾ ಕಲ್ಪನಾ ಬದುಕನ್ನ ಸಾಗಿಸುತ್ತಿರುತ್ತಾರೆ. ಸತ್ಯಾ-ಸತ್ಯತೆಗಳ ಯಾವುದೇ ಅರಿವು ಅವರಿಗೆ ಇರುವುದಿಲ್ಲ. ತಾವು ಉತ್ತಮ ಜೀವನ ನಡೆಸಬೇಕು ಎಂಬ ಕನಸು ಕಾಣುವ ಅವರು ಅತೀ ಸುಲಭವಾಗಿ ಪಟ್ಟಣದ ಬದುಕಿಗೆ ಮಾರುಹೋಗುತ್ತಾರೆ. ತಮಗೆ ಅರಿವು ಬರುವುದಕ್ಕೆ ಮುಂಚೆಯೇ ಮಾನವ ಸಾಗಾಣಿಕೆಯ ವ್ಯವಸ್ಥಿತ ಜಾಲದಲ್ಲಿ ಸೆರೆಯಾಗುತ್ತಾರೆ

ಅದೆಷ್ಟೊ ಅವಿದ್ಯಾವಂತ ಹೆಣ್ಣು ಮಕ್ಕಳು ಕೆಲಸಕ್ಕೆಂದು ರಾಜ್ಯದಿಂದ ರಾಜ್ಯಕ್ಕೆ, ರಾಷ್ಟ್ರದಿಂದ ರಾಷ್ಟ್ರಕ್ಕೆ ಸಾಗಾಣಿಕೆಗೆ ಒಳಪಟ್ಟು, ಅಲ್ಲಿ ವೇಶ್ಯಾವಾಟಿಕೆಗೆ ಸಿಲುಕಿ ಅದರಿಂದ ಈಚೆ ಬರಲಾಗದಂತೆ ಬಳಲಿ ಹೋಗುತ್ತಾರೆ. ಇದರಾಚೆಗೆ ಪ್ರೀತಿ, ಪ್ರೇಮದ ಹೆಸರಿನಲ್ಲೂ ಮಹಾ ವಂಚನೆಯೇ ನಡೆದು ಹೋಗುತ್ತದೆ. ಹದಿಹರೆಯದ ಹುಡುಗಿಯರನ್ನು ಪ್ರೀತಿ, ಪ್ರೇಮದ ಹೆಸರಲ್ಲಿ ಸೆಳೆದು ಅವರನ್ನು ಮನೆಯಿಂದ ಹೊರಕ್ಕೆ ಬರುವಂತೆ ಮಾಡಿ ಸುಲಭವಾಗಿ ಮಾನವ ಸಾಗಾಣಿಕೆ ತಳ್ಳಲಾಗುತ್ತದೆ.
ಇದನ್ನೂ ಓದಿ : ಫೇಸ್ ಬುಕ್ ಪ್ರೇಮ.. ಪ್ರಣಯ… ಪ್ರಾಣ ತೆಗೆಯಿತು!
ಅಂಕಿ ಅಂಶಗಳ ಆಧಾರದಲ್ಲಿ ನೋಡಿವುದಾದರೆ ಪ್ರತಿಶತ 20 ರಿಂದ 30 ಮಂದಿ ಪ್ರೀತಿ-ಪ್ರೇಮದಿಂದಾಗಿ ಮಾನವ ಸಾಗಾಣಿಕೆಗೆ ಜಗತ್ತಿನಾದ್ಯಂತ ಒಳಪಡುತ್ತಿದ್ದಾರೆ. ತನ್ನದಲ್ಲದ ಜಾತಿಯವರನ್ನು, ತನ್ನದಲ್ಲದ ಧರ್ಮದವರನ್ನು, ತನಗೆ ಸರಿಹೊಂದದ ಅಂತಸ್ತಿನವರನ್ನ, ತನ್ನ ಪೋಷಕರು ಇಷ್ಟಪಡದವರನ್ನ, ಪ್ರೇಮಿಸುವ ಹುಡುಗ ಅಥವಾ ಹುಡುಗಿಯನ್ನು ಸಮಾಜದಿಂದ, ಸಂಬಂಧಿಕರಿಂದ, ಕುಟುಂಬದಿಂದ ದೂರಹೋಗಿ ಸ್ವತಂತ್ರ ಬದುಕನ್ನ ನಡೆಸುವ ನಿರ್ಧಾರ ತೆಗೆದುಕೊಳ್ಳುತ್ತಾರೆ. ಹೀಗೆ ತೆಗೆದುಕೊಳ್ಳುವ ದುಡುಕು ತೀರ್ಮಾನಗಳಿಂದ ಮೋಸ ಹೋಗುತ್ತಾರೆ.

ಇದೆಲ್ಲದರ ನಡುವೆ ಪ್ರೇಮಿಸಿದ ವ್ಯಕ್ತಿಯು ತನ್ನ ಪ್ರೇಯಸಿಯನ್ನು ಮದುವೆಯಾಗುವುದಾಗಿ ನಂಬಿಸಿ ಕರೆದುಕೊಂಡು ಹೋಗಿ ಮತ್ತೊಬ್ಬರಿಗೆ ಮಾರಾಟ ಮಾಡುತ್ತಿರುವುದು ಕೂಡ ಹೊಸತೇನಲ್ಲ. ಇದರ ಲಿಂಕ್ ಭಯೋತ್ಪಾದನೆಗೂ ಇಲ್ಲದಿಲ್ಲ. ಅದು ಏನೇ ಇರಲಿ ನಾವು ಎಚ್ಚರಿಕೆ ವಹಿಸದೆ ಹೋದರೆ ನಾವೇ ಮೈಮೇಲೆ ದುರಂತವನ್ನು ಎಳೆದುಕೊಂಡಂತೆಯೇ… ಪೋಷಕರು ತಮ್ಮ ಮಕ್ಕಳ ಮೇಲೆ ಕಣ್ಣಿಡುವುದು ಮುಖ್ಯ..
B M Lavakumar








