LatestMysore

ತ್ಯಾಜ್ಯ ವಸ್ತುಗಳ ಸಮರ್ಪಕ ನಿರ್ವಹಣೆಯೊಂದಿಗೆ ಪರಿಸರ ಸಂರಕ್ಷಣೆ ಮಾಡುವುದು ವಿದ್ಯಾರ್ಥಿಗಳ ಜವಬ್ದಾರಿ

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ತ್ಯಾಜ್ಯ ವಸ್ತುಗಳ ಸಮರ್ಪಕನಿರ್ವಹಣೆ ಮತ್ತು ವಿಲೇವಾರಿಯೊಂದಿಗೆ ಪರಿ ಸರ ಸಂರಕ್ಷಣೆ ಮಾಡುವುದು ವಿದ್ಯಾರ್ಥಿಗಳ ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ಮುಳ್ಳೂರು ಕ್ಲಸ್ಟರ್‌ನ ಸಂಪನ್ಮೂಲ ವ್ಯಕ್ತಿ ಎಸ್. ವಸಂತಕುಮಾ‌ರ್ ತಿಳಿಸಿದರು.

ತಾಲೂಕಿನ ಗಾವಡಗೆರೆ ಹೋಬಳಿ ಮುಳ್ಳೂರು ಕ್ಲಸ್ಟರ್‌ವ್ಯಾಪ್ತಿಯ ಕೃಷ್ಣಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಇಕೋ ಕ್ಲಬ್ ವತಿಯಿಂದ ಆಯೋಜಿಸಿದ್ದ ಪರಿಸರ ಸ್ವಚ್ಛತೆ ಕುರಿತಾದ ಮಾಹಿತಿ ಮತ್ತು ದೇವಾಲಯ ಆವರಣ ಸ್ವಚ್ಛತೆ ಕಾರ್ಯಕ್ರಮ ದಲ್ಲಿ ಮಾತನಾಡಿದರು. ಕಾರ್ಯಕ್ರಮದ ವೇಳೆ ವಿದ್ಯಾರ್ಥಿಗಳ ತಂಡ ತಾಲೂಕಿನ ಹೊಸರಾಮನಹಳ್ಳಿ ಗ್ರಾಮದ ಸಮೀಪ ಹರಿಯುವ ಲಕ್ಷ್ಮಣತೀರ್ಥ ನದಿದಂಡೆಯ ಮೇಲಿರುವ ಶ್ರೀಕ್ಷೇತ್ರ ವೀರಾಂಜನೇಯ ಸ್ವಾಮಿ ದೇಗುಲದ ಆವರಣದ ಸ್ವಚ್ಛತೆ ಕಾರ್ಯ ನಡೆಸಿದರು.

ಆವರಣದಲ್ಲಿ ಒಣ ಕಸ-ಹಸಿ ಕಸ ತ್ಯಾಜ್ಯ ವಿಲೇವಾರಿ ರೀತಿ, ಪ್ಲಾಸ್ಟಿಕ್ ಬಳಕೆ ಯಿಂದ ಪರಿಸರದ ಮೇಲಾಗುವ ಪರಿಣಾಮ, ನದಿ ಮಾಲಿನ್ಯಕ್ಕೆ ಕಾರಣಗಳು ಮುಂತಾದ ವಿಷಯಗಳನ್ನು ತಿಳಿಸಲಾಯಿತು. ಇದೇ ವೇಳೆ ನದಿದಂಡೆಯ ಬಳಿ ನಿರ್ಮಿಸಿರುವ ಏತ ನೀರಾವರಿ ಯೋಜನೆಯ ಘಟಕಕ್ಕೆ ಭೇಟಿ ನೀಡಿ ಅದರ ಉಪಯೋಗಗಳನ್ನು ವಿದ್ಯಾರ್ಥಿ ಗಳಿಗೆ ತಿಳಿಸಲಾಯಿತು.

ಶಾಲೆಯ ಮುಖ್ಯ ಶಿಕ್ಷಕ ಮೇರಿ ರೀಟಾ, ಸಹ ಶಿಕ್ಷಕರಾದ ಬಿ.ಪಿ.ರುಕ್ಷ್ಮೀಣಿ, ಶ್ವೇತಾ, ಎಸ್‌ಡಿಎಂಸಿ ಸದಸ್ಯರು, ಪಾಲಕರು, ಶಾಲಾ ಮಕ್ಕಳು ಭಾಗವಹಿಸಿದ್ದರು.

admin
the authoradmin

Leave a Reply

Translate to any language you want