LatestMysore

ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ವಿಜೇತೆ ಶಿಲ್ಪಾಗೆ ಅಭಿನಂದನೆ ಸಲ್ಲಿಕೆ

ಮೈಸೂರು: ಅಖಿಲ ನಾಮಧಾರಿಗೌಡ ಸಂಘ (ರಿ)ದ  ವತಿಯಿಂದ ಅಂತರರಾಷ್ಟ್ರೀಯ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ವಿಜೇತೆ ಕುಮಾರಿ ಶಿಲ್ಪ ಕೆ ಎಸ್ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.

ಮೈಸೂರಿನ , ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕಾವೇರಿ ಸಭಾಂಗಣದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಅಭಿನಂದನೆ ಸಲ್ಲಿಸಲಾಯಿತು.   ಹುಣಸೂರು ರಸ್ತೆಯ ಮುಖ್ಯದ್ವಾರದಿಂದ ಸಭಾಂಗಣದವರೆಗೆ ತೆರೆದ ಸಾರೋಟಿನಲ್ಲಿ ಚಂಡೆ ವಾದ್ಯ ಹಾಗೂ ಪುಷ್ವಾರ್ಚನೆಯ ಮೂಲಕ ಶಿಲ್ಪಾರವರನ್ನು ಕರೆತರಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಅಖಿಲ ನಾಮಧಾರಿಗೌಡ ಕೇಂದ್ರ ಸಂಘ, ಹಾಗೂ ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ, ಕರ್ನಾಟಕ ಸರ್ಕಾರದ ಮಾಜಿ ಅಧ್ಯಕ್ಷರು ಹಾಗೂ ಕಾಂಗ್ರೆಸ್ ಮುಖಂಡರು ಆದ ಡಿ ಸುಂದರದಾಸ್ ಮಾಡಿದರು.

ಬಳಿಕ ಮಾತನಾಡಿ,  ನಮ್ಮ ಸಮಾಜದ ಹೆಣ್ಣು ಮಗಳಾದ ಕುಮಾರಿ ಶಿಲ್ಪ ಕೆ ಎಸ್ ರವರು ರಾಜ್ಯ, ರಾಷ್ಟ್ರಕ್ಕೆ ಕ್ರೀಡಾಕೂಟದಲ್ಲಿ ಕಂಚಿನ ಪದಕ ಪಡೆಯುವುದರೊಂದಿಗೆ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯ. ಜೊತೆಗೆ ಯುವ ಜನತೆಗೆ ಸ್ಪೂರ್ತಿಯ ಸೆಲೆಯಾಗಿದ್ದಾರೆ. ಈ ಬಾರಿಯ ವಿಶ್ವವಿಖ್ಯಾತ ಮೈಸೂರು ದಸರಾ ವನ್ನ ಶಿಲ್ಪಾರವರು ಉದ್ಘಾಟನೆ ಮಾಡಲು ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಮನವಿ ಮಾಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಡೀನ್ ಅಕಾಡೆಮಿಕ್ ನ ಪ್ರೊಫೆಸರ್ ಎನ್ ರಾಮನಾಥನ್ ನಾಯ್ಡು ರವರು ಮಾತನಾಡಿ ಅಂತರರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸುವುದೇ ಕಷ್ಟ ಅಂತಹದರಲ್ಲಿ ಕನ್ನಡ ನಾಡಿನ ಕುವರಿ ಕಂಚಿನ ಪದಕ ಪಡೆಯುವುದರೊಂದಿಗೆ ಗಮನಾರ್ಹ ಸಾಧನೆಯನ್ನ ಮಾಡಿದ್ದಾರೆ. ಇವರು ನಮ್ಮ ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯಾಗಿರುವುದು ಕೂಡ ಹೆಮ್ಮೆಯ ವಿಷಯ ಎಂದರು.

ಇದೇ ಸಂದರ್ಭದಲ್ಲಿ ಇವರಿಗೆ ಅಖಿಲ ನಾಮಧಾರಿ  ಗೌಡ ಸಮಾಜದ  ವತಿಯಿಂದ  ಶಿಲ್ಪಾರವರ ಮುಂದಿನ ಕ್ರೀಡಾ ತಯಾರಿಗೆ 10 ಲಕ್ಷ ಧನಸಹಾಯ ನೀಡಲು ಭಿನ್ನವತ್ತಳೆ ನೀಡಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿಲ್ಪಾರವರು ಮುಂದಿನ ಕ್ರೀಡಾಪಂದ್ಯಗಳಲ್ಲಿ ನಾನು ಚಿನ್ನದ ಪದಕ ಪಡೆಯುವ ಗುರಿಯನ್ನು ಹೊಂದಿದ್ದೇನೆ. ಈ ಸಂದರ್ಭದಲ್ಲಿ ನನ್ನನ್ನು ಪ್ರೋತ್ಸಾಹಿಸುತ್ತಿರುವ ನಮ್ಮ ಸಮಾಜ ಮತ್ತು ರಾಜ್ಯ, ರಾಷ್ಟ್ರದ ಜನರನ್ನ ತುಂಬಾ ತುಂಬಾ ನೆನಪಿಸಿಕೊಳ್ಳುತ್ತೇನೆ ಎಂದರು. ಅಲ್ಲದೆ ಈ ಸಂದರ್ಭದಲ್ಲಿ ಶಿಲ್ಪಾರವರ ತಂದೆ- ತಾಯಿಗಳಾದ ಶ್ರೀಶೈಲ ಮತ್ತು ಶಾಂತ ರವರನ್ನು ಹಾಗೂ ತರಬೇತುದಾರರಾದ ರಾಘವೇಂದ್ರರವರನ್ನ ಸನ್ಮಾನ ಮಾಡಲಾಯಿತು.

ಇದೇ ವೇಳೆ ಎಲ್ಲಾ ತಾಲೂಕು ಮತ್ತು ಜಿಲ್ಲಾ ವಲಯಗಳ ಅಧ್ಯಕ್ಷರು  ಶಿಲ್ಪಾ ಅವರನ್ನು ಸನ್ಮಾನಿಸಿದರು. ಹೆಚ್ ಹೆಚ್ ಸುಂದರ್ ವರು ಶಿಲ್ಪಾರವರ ಕುರಿತು ಸ್ವರಚಿತ ಕವನ ವಾಚಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಯೋಗಿನಿ ಪ್ರಕಾಶ್ ಮತ್ತು ಸೀತಾ ಲಕ್ಷ್ಮಿ ಸೋಮಶೇಖರ್ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಅಖಿಲ ನಾಮಧಾರಿ ಗೌಡ ಕೇಂದ್ರ ಸಂಘದ ಅಧ್ಯಕ್ಷರಾದ ಕೆ ಟಿ ಗೋವಿಂದರಾಜು ವಹಿಸಿದ್ದರು. ಸಿದ್ದೇಗೌಡರು  ಸ್ವಾಗತಿಸಿದರೆ, ಮೈಸೂರು ನಗರ ವಲಯದ ಅಧ್ಯಕ್ಷರಾದ ಎಂ ಎನ್ ಸೋಮಶೇಖರ್   ಪ್ರಾಸ್ತಾವಿಕ ನುಡಿ ಹಾಗೂ ಸನ್ಮಾನಿತರ ಕಿರು ಪರಿಚಯ ಮಾಡಿದರು. ಡಾ. ಕೋಮಲ ರಾಧಾಕೃಷ್ಣ ನಿರೂಪಿಸಿದರೆ, ವೇಣುಗೋಪಾಲ್ ವಂದಿಸಿದರು.

admin
the authoradmin

Leave a Reply