ArticlesLatest

ಅವಲೋಕನ 103.. ಇದು ಸ್ಥಿರಶೀರ್ಷಿಕೆಅಡಿಯಲ್ಲಿ  ಪುಸ್ತಕ ವಿಮರ್ಶೆ ಮತ್ತು ಪರಿಚಯ

ಕನ್ನಡದ ಸಾಹಿತ್ಯಲೋಕಕ್ಕೆ ಕಾದಂಬರಿಕಾರರು, ನಾಟಕಕಾರರು, ಕಥೆಗಾರರು, ಕವಿಗಳು, ಸಾಹಿತಿಗಳು, ಲೇಖಕರು, ಪ್ರಬಂಧಕಾರರು ತಮ್ಮದೇ ಆದಕೃತಿಗಳನ್ನುಅರ್ಪಿಸಿದ್ದಾರೆ. ಇಂತಹ ಕೃತಿಗಳು ಓದುಗರನ್ನುಆಕರ್ಷಿಸಿದ್ದು ಮಾತ್ರವಲ್ಲದೆ, ಹಲವು ಪುರಸ್ಕಾರಗಳನ್ನು ಪಡೆದಿವೆ. ಇಂತಹ ಮೇರು ಕೃತಿಗಳನ್ನು ಪರಿಚಯಿಸುವ, ವಿಮರ್ಶಿಸುವ ಪ್ರಯತ್ನವೇ ಅವಲೋಕನ (ಸ್ಥಿರಶೀರ್ಷಿಕೆ ಅಡಿಯಲ್ಲಿ ಪುಸ್ತಕವಿಮರ್ಶೆ)ವಾಗಿದೆ. ಇದನ್ನು ಹಿರಿಯಬರಹಗಾರರಾದ ಕುಮಾರಕವಿ ನಟರಾಜ್ ಅವರು ಸಂಗ್ರಹಿಸಿ ಜನಮನ ಕನ್ನಡಕ್ಕೆ ನೀಡಿದ್ದಾರೆ.

ಕೃತಿ: ಉದ್ಯಾನ ನಗರಿಯಲ್ಲಿ ತಿಮ್ಮಪ್ಪನ ದರ್ಶನ

ಲೇಖಕ-ಪ್ರಕಾಶಕ:ಪ್ರೊ.ವೇಸಾರಪು ಗುರುಮೂರ್ತಿ

ಪುಟಗಳು: 230, ಬೆಲೆ: ರೂ.100

ಮೊದಲ ಮುದ್ರಣ : 2012

‘ಉದ್ಯಾನ ನಗರಿಯಲ್ಲಿ ತಿಮ್ಮಪ್ಪನ ದರ್ಶನ’ ಎಂಬ ಕೃತಿಯನ್ನು ರಚಿಸಿ ಲೋಕಾರ್ಪಣೆಗೈದ ಪ್ರೊ.ವೇಸಾರಪು ಗುರುಮೂರ್ತಿ ಅದೃಷ್ಟ ವಶಾತ್ ಹುಟ್ಟಿ ಬೆಳೆದದ್ದು ಮೂಲ ತಿಮ್ಮಪ್ಪನ ಸನ್ನಿಧಿಯಾದ ತಿರುಪತಿಯಲ್ಲಿ ಎಂಬುದು ವಿಶೇಷ ವಿಷಯ. ಚಿಕ್ಕಂದಿನಲ್ಲಿರುವಾಗಲೇ ಅನೇಕ ಸಾರಿ ತಿರುಮಲದ ಏಳು ಗಿರಿಗಳನ್ನು ಮೆಟ್ಟಿಲ ಮೂಲಕ ಹತ್ತಿಳಿದು ಪದೇ ಪದೇ ದೇವರ ದರ್ಶನಮಾಡಿ ವೆಂಕಟರಮಣನ ಕಟ್ಟಾಭಕ್ತನಾದ ಇವರು ಪಂಚ ಪ್ರಾಣವನ್ನು ತಿಮ್ಮಪ್ಪನಿಗೆ ಅರ್ಪಿಸಿ ಕೊಂಚ ಪ್ರಾಣವನ್ನು ಕುಟುಂಬದವರಿಗೆ ಮೀಸಲಿಟ್ಟಿರುವಂತೆ ಭಾಸವಾಗುತ್ತದೆ.

ಇವರ ಕೃತಿಯನ್ನು ಅವಲೋಕಿಸಿದಾಗ. ವೃತ್ತಿಯಲ್ಲಿ ಪ್ರಾಧ್ಯಾಪಕರಾದರೂ ಪ್ರವೃತ್ತಿಯಲ್ಲಿ ಓರ್ವ ಉತ್ತಮ ನಾಟಕ ಕಲಾವಿದ ಹಾಗು ಸಾಹಿತ್ಯ ಕೃಷಿಕ. ಕೆಲವೇ ಪುಸ್ತಕಗಳನ್ನು ಬರೆದಿರುವ ಇವರು ವೇದಿಕೆ ಮೇಲೆ ಹತ್ತಾರು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಲಿಯುಗ ನಿವಾಸ ಶ್ರೀ ಶ್ರೀನಿವಾಸನ ದಿವ್ಯ ಚರಿತ್ರೆಯನ್ನು ತಮ್ಮದೇ ಧಾಟಿಯಲ್ಲಿ ಸಾರ್ವಜನಿಕರಿಗೆ ವಿಶೇಷವಾಗಿ ತಿಮ್ಮಪ್ಪನ ಪರಮಭಕ್ತರಿಗೆ ಅರ್ಥವಾಗುವಂತೆ ಬರೆದಿದ್ದಾರೆ. ನೂರಾರು ಚಿತ್ರ-ಭಾವಚಿತ್ರಗಳನ್ನು ಸಂದರ್ಭಯೋಚಿತವಾಗಿ ಅಳವಡಿಸಿ ಪದ್ಯ-ಗದ್ಯ ಎರಡೂ ಬಗೆಯ ಸಾಹಿತ್ಯದಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ಪ್ರಕಟ ಪಡಿಸಿದ್ದಾರೆ.

ಇಡೀ ಬೆಂಗಳೂರು ನಗರದಲ್ಲಿರುವ ನೂರಾರು ಶ್ರೀನಿವಾಸ ದೇವಾಲಯಗಳಿಗೆ ಭೇಟಿಕೊಟ್ಟು ಆಯಾಯ ದೇವಸ್ಥಾನದ ಬಗ್ಗೆ ದೊರಕುವ ಪುರಾಣೇತಿಹಾಸದ ಮಾಹಿತಿ, ಅಂಕಿ-ಅಂಶದ ಜತೆಗೆ ಅಲ್ಲಿನ ಮೂರ್ತಿ ಮತ್ತು ದೇವಾಲಯದ ಭಾವಚಿತ್ರಗಳನ್ನೂ ಕಲೆಹಾಕಿ ಈ ಗ್ರಂಥದಲ್ಲಿ ಸುಂದರವಾಗಿ ಅಳವಡಿಸಿರುವುದು ಶ್ಲಾಘನೀಯ.ಇಂಥ ಆಧ್ಯಾತ್ಮಿಕ ಕಾರ್ಯವನ್ನು ಕಾಯಾವಾಚಾಮನಸಾ ತ್ರಿಕರಣ ಶುದ್ಧಿಯಿಂದ ಕೈಗೊಂಡು ಯಶಸ್ಸು ಸಾಧಿಸುವುದು ಕಷ್ಟಸಾಧ್ಯ. ಆದರೆ ಲೇಖಕರು ಸಹನೆ ಮತ್ತು ನಿಸ್ವಾರ್ಥ ಭಾವದಿಂದ ತಮ್ಮ ಅಂತರಾಳದಲ್ಲಿ ಮೂಡಿದ ಆಕಾಂಕ್ಷೆಯನ್ನ ಬಹಿರಂಗವಾಗಿ ಈಡೇರಿಸಿಕೊಂಡು ದಿಟವಾಗಿ ತಿಮ್ಮಪ್ಪನ ಕೃಪೆಗೆ ಪಾತ್ರರಾಗಿದ್ದಾರೆ.

ಸ್ವರಚಿತ ಪದ್ಯಗಳ ಜಪಮಾಲೆ ಅಮೋಘವಾಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗುವಂತಿದೆ. ಇಡೀ ಪುಸ್ತಕದ ಪ್ರತಿಯೊಂದು ಪುಟಗಳು ಭಕ್ತಿಯ ಅಲೆಗಳಂತಿದ್ದು ಓದುಗರನ್ನು ಶ್ರೀನಿವಾಸನ ಧ್ಯಾನ ಸನ್ನಿಧಿಗೆ ಕೊಂಡೊಯ್ಯುತ್ತದೆ. ಒಂದೊಂದು ಸಂಗ್ರಹವು ಅಪೂರ್ವವಾಗಿದ್ದು ವೇಸಾರಪು ಗುರುಮೂರ್ತಿ ಓರ್ವ ಧಾರ್ಮಿಕ ಸಾಧಕ ಎಂಬುದನ್ನು ಅವರ ಸಜ್ಜನಿಕೆ ಸರಳತೆಗಳೇ ಒತ್ತಿ ಹೇಳುತ್ತವೆ.

ಈ ಕೃತಿಯಲ್ಲಿ ಚಿತ್ರಕಲೆ, ಸಂಗೀತ, ಸುಜ್ಞಾನ, ವಿಜ್ಞಾನ, ಭಜನೆ, ಆರಾಧನೆ, ಸಾಹಿತ್ಯ ಮುಂತಾದ ಸತ್ಸಂಗದ್ದೆಲ್ಲವೂ ತುಂಬಿ ತುಳುಕುತ್ತದೆ. ಸಕಲ ಕಲಾ ವಲ್ಲಭ ತಿಮ್ಮಪ್ಪನನ್ನು ಕೊಂಡಾಡಲು, ಒಲಿಸಿ ಕೊಳ್ಳಲು ತಮ್ಮಲ್ಲಿದ್ದ ವಿವಿಧ ಕಲೆಗಳ ಮೂಲಕ ಲೇಖಕರು ಭಕ್ತಿಯನ್ನರ್ಪಿಸಿದ್ದಾರೆ. ಯಾರ ಹೊ(ತೆ)ಗಳಿಕೆಯನ್ನು ನಿರೀಕ್ಷಿಸದೆ ತಮ್ಮ ಸ್ವಯಂತೃಪ್ತಿಗೆ ಬರೆದ ಪುಸ್ತಕವನ್ನು ಪ್ರತಿಯೊಬ್ಬರು ಕೊಂಡು ಓದುವ ಮೂಲಕ ಈ ಸದುದ್ದೇಶ ಬರಹಗಾರರಿಗೆ ಉತ್ತೇಜನ ನೀಡಬೇಕಲ್ಲವೇ?  ಶ್ರೀನಿವಾಸನ ಭಕ್ತಸಮೂಹಕ್ಕೆ ಮಾತ್ರವಲ್ಲದೆ ದೇವರನ್ನು ನಂಬುವ ಪ್ರತಿಯೊಬ್ಬ(ಓದುಗ)ರಿಗು ಇದೊಂದು ಅಮೂಲ್ಯವಾದ ಸಂಗ್ರಹಯೋಗ್ಯ ಗ್ರಂಥ. ಅನಿವಾಸಿ ಭಾರತೀಯಳಾಗಿ ಆಮೆರಿಕದ ರಮ್ಯಾಚಂದ್ರಶೇಖರ್ ಬರೆದ’ಸವಿನುಡಿ’, ಡಾ. ಪಿ.ಚಂದ್ರಿಕಾರವರ ‘ಮುನ್ನುಡಿ’, ಪ್ರೊ.ಡಿ.ರಾಜಣ್ಣನವರ ‘ಆಶಯನುಡಿ’, ಪ್ರೊ.ರಾಜೇಂದ್ರರವರ ‘ಶುಭನುಡಿ’ ನಂತರ ಇರುವ ‘ಪರಿವಿಡಿ’ಯಲ್ಲೇನಿದೆ ನೋಡೋಣ ಬನ್ನಿ:-

1.ವೆಂಕಟೇಶ, ನಿನಗೆ ವಂದನೆ! 2. ವೇದಪುರಾಣ ಶಾಸನಗಳಲ್ಲಿ ಶ್ರೀನಿವಾಸ. 3.ಭೂಲೋಕಕ್ಕೆ ಶ್ರೀನಿವಾಸನಾಗಮನ. 4.ಶ್ರೀನಿವಾಸ ಕಲ್ಯಾಣ. ೫.ಶ್ರೀನಿವಾಸನ ಬ್ರಹ್ಮೋತ್ಸವ. 6.ವೆಂಕಟಾಚಲ ಕ್ಷೇತ್ರ. *ಉದ್ಯಾನ ನಗರಿಯಲ್ಲಿ ತಿಮ್ಮಪ್ಪನ ದರ್ಶನ

7.ಕರ್ನಾಟಕದಲ್ಲಿ ನಾರಾಯಣ ಆರಾಧನೆ. ೮.ಕೋಟೆ ಶ್ರೀ ಪ್ರಸನ್ನ ವೆಂಕಟೇಶ್ವರ ದೇವಾಲಯ. 9.ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನ(ಉಲ್ಲಾಳು). 10.ಶ್ರೀದೇವಿ ಭೂದೇವಿ ಸಮೇತ ವೆಂಕಟರಮಣ ದೇವಸ್ಥಾನ (ಪಾಪರೆಡ್ಡಿಪಾಳ್ಯ). 11.ಸಂಜೀವಿನಿ ಕ್ಷೇತ್ರದ ಶ್ರೀವೆಂಕಟೇಶ್ವರ ದೇವಸ್ಥಾನ. 13.ಶ್ರೀವಸಂತ ವಲ್ಲಭರಾಯ ಸ್ವಾಮೀ ದೇವಾಲಯ. 14.ಶ್ರೀಮಹಾಲಕ್ಷ್ಮೀ ಪದ್ಮಾವತಿ ಸಮೇತ ಶ್ರೀನಿವಾಸ ದೇವಸ್ಥಾನ. 15. ಶ್ರೀವೆಂಕಟರಮಣ ದೇವಸ್ಥಾನ, ಕಲ್ಲಳ್ಳಿ 16.ಶ್ರೀನಿವಾಸ ಕೋದಂಡರಾಮ ಭಜನಾ ಮಂದಿರ (ಮಲ್ಲೇಶ್ವರಂ). 17.ತಿರುಪತಿ ತಿರುಮಲ ದೇವಸ್ಥಾನ (ವೈಯಾಲಿಕಾವಲ್). 18.ಶ್ರೀಲಕ್ಷ್ಮೀವೆಂಕಟೇಶ್ವರ ದೇವಸ್ಥಾನ.

19.ಮಹಾಲಕ್ಷ್ಮೀಪುರ ಶ್ರೀ ಶ್ರೀನಿವಾಸ ದೇವಸ್ಥಾನ,  20.ಲಾಲದಾಸ್ ವೆಂಕಟ ರಮಣ ದೇವಾಲಯ (ಬಳೇಪೇಟೆ), 21.ಸುಗ್ರೀವ ವೆಂಕಟರಮಣ ದೇವಸ್ಥಾನ (ಬಳೇಪೇಟೆ) 22. ಶ್ರೀವೆಂಕಟರಮಣಸ್ವಾಮಿ ದೇವಸ್ಥಾನ (ಶ್ರೀನಗರ). 23.ಶ್ರೀಲಕ್ಷ್ಮೀ ವೆಂಕಟೇಶ್ವರದೇವಸ್ಥಾನ(ಗಿರಿನಗರ). 24.ಶ್ರೀವೆಂಕಟೇಶ್ವರದೇವಸ್ಥಾನ ಹಲ್ಸೂರು 25.ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಾಲಯ (ಹಲಸೂರು). 26.ಶ್ರೀಲಕ್ಷ್ಮೀ ವೆಂಕಟೇಶ್ವರ ದೇವಾಲಯ (ಶಿವಾಜಿನಗರ). 27.ವರಪ್ರದ ಶ್ರೀವೆಂಕಟೇಶ್ವರ ದೇವಸ್ಥಾನ, 28.ಶ್ರೀಕಲ್ಯಾಣ ಶ್ರೀವೆಂಕಟೇಶ್ವರ ಸ್ವಾಮೀ ದೇವಸ್ಥಾನ (ಜೆ.ಪಿ.ನಗರ) 29.ಶ್ರೀತಿರುಮಲ ಗಿರಿ ವೆಂಕಟೇಶ್ವರ ದೇವಸ್ಥಾನ, ಜೆಪಿ ನಗರ 30. ಶ್ರೀನಿವಾಸ ದೇವಸ್ಥಾನ (ಬ್ಯಾಡರಹಳ್ಳಿ). 31.ಶ್ರೀವಿನಾಯಕ, ಶ್ರೀವೆಂಕಟೇಶ್ವರ ದೇವಸ್ಥಾನ (ರೈಲ್ವೆಕಾಲೊನಿ). 32 .ಶ್ರೀವೆಂಕಟರಮಣ ಸ್ವಾಮಿದೇವಸ್ಥಾನ (ಯಲಚೇನಳ್ಳಿ).

33 .ಶ್ರೀಲಕ್ಷ್ಮಿವೆಂಕಟೇಶ್ವರ ಸಿದ್ಧಿವಿನಾಯಕ ವೀರಾಂಜನೇಯ ದೇವಾಲಯ. 34 .ಶ್ರೀನಿಧಿ ಶ್ರೀನಿವಾಸ ದೇವಾಲಯ (ಕೋಣನಕುಂಟೆ). 35. ಲಕ್ಷ್ಮಿವೆಂಕಟೇಶ್ವರ  ದೇವಸ್ಥಾನ (ಐ.ಟಿ.ಐ.). 36. ಶ್ರೀಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವಸ್ಥಾನ (ರಾಮಮೂರ್ತಿನಗರ). 37. ಬೊನೀಳಾ ಸಮೇತ ಶ್ರೀ ವೆಂಕಟೇಶ್ವರ  ದೇವಾಲಯ (ವಿಜಯನಗರ). 38.ಗಣಪತಿ, ಮಹೇಶ್ವರ, ವೆಂಕಟೇಶ್ವರ ದೇವಸ್ಥಾನ (ವಿಜಯನಗರ). 39.ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ (ಮಾರೇನಹಳ್ಳಿ).40. ಶ್ರೀಕಲ್ಯಾಣ ವೆಂಕಟೇಶ್ವರ ದೇವಾಲಯ (ಗೋಕುಲ). 41.ಶ್ರೀಶ್ರೀನಿವಾಸ ದೇವಸ್ಥಾನ (ಯಲಹಂಕ). 42.ಶ್ರೀವೆಂಕಟೇಶ್ವರ ಸ್ವಾಮಿ ದೇವಸ್ಥಾನ (ವಿದ್ಯಾರಣ್ಯಪುರ). 43.ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನ (ಆರ್.ಟಿ.ನಗರ). ೪೪.ಪ್ರಸನ್ನ ಗಣಪತಿ ಮತ್ತು ವೆಂಕಟೇಶ್ವರ ಸ್ವಾಮೀ ದೇವಸ್ಥಾನ. 45 .ಶ್ರೀರಾಧಾಕೃಷ್ಣಮಂದಿರ (ಇಸ್ಕಾನ್). 46.ಲಕ್ಷ್ಮೀವೆಂಕಟೇಶ್ವರ ದೇವಸ್ಥಾನ (ಪದ್ಮನಾಭನಗರ). 47 ಲಕ್ಷ್ಮೀ ವೆಂಕಟೇಶ್ವರ ದೇವಾಲಯ (ತ್ಯಾಗರಾಜನಗರ). 48.ಬಾಲಾಜಿ ದೇವಾಲಯ (ಮೆಜೆಸ್ಟಿಕ್). 49.ಶ್ರೀ ಕೈಲಾಸ ವೈಕುಂಠ ಮಹಾಕ್ಷೇತ್ರ. 50.ಒಂಟಿಕೊಪ್ಪಲು ವೆಂಕಟರಮಣ ದೇವಾಲಯ(ಮೈಸೂರು). ೫೧.ಮೇಲುಕೋಟೆ ಚೆಲುವನಾರಾಯಣ ಸ್ವಾಮಿ ದೇವಾಲಯ.

ಅಮೇರಿಕದಲ್ಲಿ ತಿಮ್ಮಪ್ಪನ ದರ್ಶನ: 52. ಶಿವ-ವಿಷ್ಣು ದೇವಾಲಯ (ಉತ್ತರ ಕ್ಯಾಲಿಫೋರ್ನಿಯ). 53. ಅಟ್ಲಾಂಟದ ಹಿಂದೂ ದೇವಾಲಯ. 54 .ಶ್ರೀ ವೆಂಕಟೇಶ್ವರ ದೇವಸ್ಥಾನ (ಕಾರ್ಪಸ್ ಕ್ರಿಸ್ಟಿ). 55. ಪೋರ್ಟ್ಲ್ಯಾನ್ಡ್ ಬಾಲಾಜಿ ದೇವಸ್ಥಾನ. 56. ಶ್ರೀ ವೆಂಕಟೇಶ್ವರ ದೇವಸ್ಥಾನ (ಕ್ಲೀವ್ ಲ್ಯಾನ್ಡ್). 57. ಶ್ರೀವೆಂಕಟೇಶ್ವರ ಸ್ವಾಮೀ  ದೇವಸ್ಥಾನ (ಚಿಕಾಗೋ). 58. ಶ್ರೀವೆಂಕಟೇಶ್ವರ ದೇವಸ್ಥಾನ (ಬ್ರಿಡ್ಜ್ ವಾಟರ್). 59.ಶ್ರೀವೆಂಕಟೇಶ್ವರ (ಬಾಲಾಜಿ) ದೇವಸ್ಥಾನ (ಕೊಲೊರಾಡೋ). 60.ಶ್ರೀವೆಂಕಟೇಶ್ವರ ಕಮಲ ದೇವಸ್ಥಾನ(ವರ್ಜೀನಿಯ). 61.ಶ್ರೀವೆಂಕಟೇಶ್ವರ ದೇವಸ್ಥಾನ (ಉಟಾಹ್,ದ.ಜಾರ್ಡನ್)

ಗ್ರಂಥಋಣಿ: 1.ಬೆಂಗಳೂರಿನ ಇತಿಹಾಸ/ ಬ.ನ.ಸುಂದರರಾವ್ 2.ಶ್ರೀವೆಂಕಟೇಶ್ವರಸ್ವಾಮೀ ಹಾಗೂ ಇತರೆ ವಿಷ್ಣು ದೇವಾಲಯಗಳು/ ಕೆ.ಆರ್.ನರಸಿಂಹನ್  3.ಬ್ರಹ್ಮಾಂಡ ನಾಯಕುನಿ ಬ್ರಹ್ಮೋತ್ಸವ ವೈಭವಂ/ ವೆಂಕಟ್ ಗರಿಕ ಪಾಟಿ (ಆಂಧ್ರಭೂಮಿ) 4.ನಿತ್ಯಕಲ್ಯಾಣಂ ಪಚ್ಛತೋರಣಂ/ ಗನುಪಾಟಿ ಭೋಗಿಶ್ವರಂ (ಆಂಧ್ರಭೂಮಿ) 5.ವೆಂಕಟೇಶ್ವರ ಪುರಾಣ/ ಮುಲುಕುಟ್ಲಿ ಪುನ್ನಯ್ಯಶಾಸ್ತ್ರಿ ಭಾಗವತರ್ 6.ಮೇಲುಕೋಟೆ ಪರಿಚಯ/ ಸ್ಥಾನಿಕಂ ನಾಗರಾಜ ಅಯ್ಯಂಗಾರ್ 7.ಐಕೊನೊ ಗ್ರಾಫಿ ಆಫ್ ವಿಷ್ಣು/ ಡಾ.ಕಲ್ಪನ ದೇಸಾಯಿ.

 

 

admin
the authoradmin

Leave a Reply