ಈ ವಷ೯ ಮಳೆರಾಯ ದಸರಾ ಹಬ್ಬದ ವೇಳೆ ಕಾಣೆಯಾಗಿದ್ದ ಕಾರಣ, ಮಿತ್ರರೊಂದಿಗೆ ರಾತ್ರಿ ಪೂತಿ೯ ಮಡಿಕೇರಿಯ ದಸರಾದಲ್ಲಿ ಕುಣಿದು ಕುಪ್ಪಳಿಸಿದ ಫಲವಾಗಿ ನೋವಿನಿಂದ ಕಾಲುಗಳು ನಿತ್ಯದ ಕೆಲಸ ಚಟುವಟಿಕೆಗಳಿಗೆ ಬಿಡುವು ನೀಡಿಯೇ ಬಿಟ್ಟಿತ್ತು…!
ಆಗ ಸುಮಾರು ಹತ್ತು ಗಂಟೆ ಸಮಯ… ಈ ವೇಳೆಯಲ್ಲಿಯೂ ಕೆಲವೊಂದು ಯುವಕರ ಗುಂಪು ದಸರಾ ಮುಗಿಸಿ ಮೆಲ್ಲನೆ ಬರುತ್ತಿದ್ದರು..!ಈ ವೇಳೆ ನಮ್ಮ ಮನೆಯ ತಿರುವಿನಲ್ಲಿ ಇರುವ ಮೋರಿಕಟ್ಟೆಯ ಮೇಲೆ ಒರ್ವ ಕುಳಿತುಕೊಂಡಿರುವುದನ್ನು ಗಮನಿಸಿ, ಆತನ ಬಳಿಗೆ ನಾನು ಹೆಜ್ಜೆ ಹಾಕಿದೆ..!
ಮೋರಿಕಟ್ಟೆಯ ಮೇಲೆ ಕುಳಿತುಕೊಂಡಿರುವುದು ಪರಿಚಿತ ಮುಖ..! ಜೊತೆಗೆ ಆತ ಒವ೯ ಚಿತ್ರ ಕಲಾವಿದ….! ಆತ ಬಿಡಿಸುತ್ತಿದ್ದ ಚಿತ್ರಗಳಿಗೆ ಜೀವ ಇರುತ್ತಿತ್ತು…! ಚಿತ್ರರ ಗೆರೆಗಳು ಮಾತಾನಾಡುತ್ತಿದ್ದವು….! ಆದರೆ ಈ ಚಿತ್ರಗಾರನಿಗೆ ಭಗವಂತ ನೆಮ್ಮದಿ ಕರುಣಿಸಲಿಲ್ಲ….! ಶಾಪದ ಬದುಕು…!
ಹೆಂಡತಿ-ಮಕ್ಕಳು ಜೊತೆ ಬದುಕು ಸಾಗಿಸುತ್ತಿದ್ದರೂ, ತನ್ನನ್ನು ಪ್ರೀತಿಸುತ್ತಿದ್ದ ಹಿರಿಯ ಜೀವವೊಂದು ಮರಣ ಹೊಂದಿದ ಮೇಲೆ, ಈ ಚಿತ್ರಗಾರನಿಗೆ ಭೂಮಿಯ ಮೇಲಿನ ಬದುಕು ಸಾಕಾಯಿತ್ತು..! ಆತನ ಮನಸ್ಸು ಸಹ ‘ಮರಣ’ವನ್ನು ಪ್ರೀತಿಸುತ್ತಿತ್ತು..! ಮನೆ ಮಂದಿಯ ಪ್ರೀತಿ- ಪ್ರೀಮದ ಮೇಲೆ ಆತನಿಗೆ ನಂಬಿಕೆಯೇ ಇರಲಿಲ್ಲ..! ತನ್ನ ತ್ಯಾಗ- ಬೆವರಿಗೆ ಸೂಕ್ತವಾದ ಬೆಲೆ..
ಗೌರವ ಮನೆ ಮಂದಿಯಿಂದ ದೊರೆಯುತ್ತಿಲ್ಲ ಎಂಬ ಕೊರಗು ಈ ಚಿತ್ರಗಾರನಿಗೆ ಇತ್ತು….!ಆದರಿಂದ ಈ ಸಮಯದಲ್ಲಿ ನಾನು ಆತನಿಗೆ ಜೀವನದ ಕುರಿತು ಸಣ್ಣ ಪಾಠ ಮಾಡಿದೆ…! ಜೊತೆಗೆ ಮೊಬೈಲ್ ನ್ನು ಜೇಬಿನಿಂದ ಹೊರತೆಗೆದು ಇತ್ತೀಚೆಗೆ ಬರೆದ ‘ಕವಿತೆ’ವೊಂದನ್ನು ತೋರಿಸಿದೆ..!

ಗೋಡೆಯ ಮೇಲೆ
ಆತ ಕೈ ಬೆರಳುಗಳಿಂದ
ಮೋಡಿ ಮಾಡುತ್ತಿದ್ದ…!
ಬದುಕಿನ ಚಿತ್ರ
ಬಿಡಿಸುವಾಗ ಮಾತ್ರ
‘ಬಣ್ಣ’ ಬಳಸದೇ
‘ಕಣ್ಣೀರು’ ಸುರಿಸುತ್ತಿದ್ದ….!!!
ಈ ಮೇಲಿನ ಕವಿತೆಯನ್ನು ಓದಿ ಮುಗಿಸುತ್ತಿದ್ದಂತೆ, ಚಿತ್ರಗಾರನ ನಯನಗಳಿಂದ ಪುನಃ ಕಣ್ಣೀರು ಹನಿ.. ಹನಿಯಾಗಿ ಬೀಳ ತೊಡಗಿತ್ತು.
“ಇದು ನಿನ್ನ ಕವಿತೆ ಅಲ್ಲ…! ನನ್ನ ಜೀವನದ ನಗ್ನ ಸತ್ಯ..!ಈಗ ನಾನು ಯಾವುದೇ ಚಿತ್ರಗಳಿಗೂ ಬಣ್ಣ ಬಳಸುವುದೇ ಇಲ್ಲ…! ಕಪ್ಪು-ಬಿಳುಪುನ ಚಿತ್ರಗಳು…! ಅದು ಸಹ ನನ್ನ ಕಣ್ಣೀರಿಗೆ ಕರಗಿ ಹೋಗಿರುತ್ತದೆ…! ಮನೆ ಮಂದಿಗೆ ನನ್ನ ಚಿತ್ರದ ಬೆಲೆ – ಮೌಲ್ಯ ಗೊತ್ತೆ ಇಲ್ಲ..! ಆದರೆ ನನ್ನ ಪ್ರೀತಿಸುತ್ತಿದ್ದ ಆ ಹಿರಿಯ ಜೀವಗಳು, ಚಿತ್ರದ ಕುರಿತು ವಿಮಶೆ೯ ಮಾಡುತ್ತಿದ್ದರು…!ಪ್ರೀತಿಯಿಂದ ನಾನು ಬಿಡಿಸುತ್ತಿದ್ದ ಚಿತ್ರಗಳಿಗೆ ಮುತ್ತು ನೀಡುತ್ತಿದ್ದರು…!” ಎಂದು ಆ ಚಿತ್ರಗಾರ ಸಂಕಟದಿಂದ, ತನ್ನ ಬಣ್ಣ ಇಲ್ಲಾದ ಬದುಕಿನ ಚಿತ್ರವನ್ನು ಬಿಡಿಸಿ ಹೇಳಿದಾಗ, ನಾನು ವಾಸ್ತವ ಪ್ರಪಂಚದ ಸ್ಥಿತಿ-ಗತಿಗಳನ್ನು ಬಿಡಿಸಿ ಹೇಳುತ್ತಾ, ಆತನನ್ನು ಸಮಾಧಾನ ಪಡಿಸಿದೆ.
” ನೋಡಿ ಚಿತ್ರಗಾರರೇ…., ಈ ಭೂಮಿಯಲ್ಲಿ ಸದಾ ಕಾಲ ನಮ್ಮ ಸುತ್ತ, ನಮ್ಮನ್ನು ಪ್ರೀತಿಸುತ್ತಿದ್ದ ಮಂದಿ ಇರಬೇಕು ಎಂದು ಹೇಳುವುದು ತಪ್ಪು…! ಕೆಲವೊಂದು ಮಂದಿಯ ನುಡಿ – ವತ೯ನೆಗಳಿಂದ ಮಾನಸಿಕವಾಗಿ ನೋವು ಉಂಟಾದ್ದರೇ, ಒಂಟಿಯಾಗಿ ಸಮಯ ಕಳೆಯಲು ನಾವು ಕಲಿತುಕೊಳ್ಳಬೇಕು….!ನಮ್ಮದ್ದು ಸಹ ನೂರಾರು ಪುಟಗಳು ಇರುವ ‘ಪುಸ್ತಕ ‘ದಂತಹ ಬದುಕು…! ಆದರೆ ಈ ಪುಸ್ತಕದ ಎಲ್ಲಾ ಪುಟಗಳಲ್ಲಿ ಸಹ ಕೇವಲ ‘ಮಧುರ’ವನ್ನು ಮಾತ್ರ ನಿರೀಕ್ಷೆ ಮಾಡಬಾರದು…. ಬದುಕು ಎಂದ ಮೇಲೆ, ಸುಖ-ಕಷ್ಟ ಎಲ್ಲಾವು ಇರುತ್ತದೆ….! ನಾವು ಪರಿಸ್ಥಿತಿಗೆ ಹೊಂದಿಕೊಂಡು ಸಾಗಬೇಕು ಅಷ್ಟೇ….!” ಎಂದು ಧೀಘ೯ವಾದ ಜೀವನದ ಪಾಠವನ್ನು ಮಾಡಿದಾಗ, ಆ ಚಿತ್ರಗಾರ ನನಗೆ ದೊಡ್ಡದಾಗಿ ನಮಸ್ಕಾರ ಮಾಡಿ, ತನ್ನ ಮನೆಯ ಕಡೆಗೆ ಸಾಗಿಬಿಟ್ಟ..!
ಇದು ಒರ್ವ ಚಿತ್ರಗಾರನ ಕಥೆ ಮಾತ್ರವಾಗಿರುವುದಿಲ್ಲ….! ಈ ಭೂಮಿಯಲ್ಲಿ ಇಂತಹ ಸಾವಿರಾರು ನೊಂದ ಮನಸ್ಸಿನ ಪಾಪಿ ಜನ್ಮಗಳು ನಮ್ಮ ನಡುವೆ ಬದುಕು ಸಾಗಿಸುತ್ತಿದ್ದಾರೆ..! ಆದರೆ ಅವರ ಬದುಕಿನ ಚಿತ್ರ ಒಂದು ಕತೆ – ಕವಿತೆಯಾಗಿ ಮೂಡಿ ಬಂದಿಲ್ಲ ಅಷ್ಟೇ…! ಆದರೂ ನಾವು ಈ ಸಮಯದಲ್ಲಿ ಒಂದು ಸಣ್ಣ ಪ್ರಾಥ೯ನೆಯನ್ನು ಭಗವಂತನಲ್ಲಿ ಮಾಡೋಣ…!
” ಈ ಭೂಮಿಯಲ್ಲಿ ಜೀವನ ಸಾಗಿಸುತ್ತಿರುವ ಸವ೯ರ ಬದುಕು, ಬಣ್ಣ – ಬಣ್ಣಗಳಿಂದ ಸುಂದರವಾಗಿ ಇರಲಿ….ಅಜ್ಞಾನಿಗಳಿಗೂ ಬೇಗಾನೆ ಜ್ಞಾನೋದಯವಾಗಿ, ಎಲ್ಲಾರನ್ನು ಪ್ರೀತಿಸುತ್ತ ಬಾಳುವಂತಹ ಮನಸ್ಸುನ್ನು ಕರುಣಿಸಲಿ….!!









