janamanakannada > Blog > Latest > Mysore > ಹಳೆಯೂರು ಹಾಲು ಉತ್ಪಾದಕರ ಸಂಘಕ್ಕೆ 25 ಸಾವಿರ ನಿವ್ವಳ ಲಾಭ: ಹೆಚ್. ಎಸ್ ಹರೀಶ್
ಸಾಲಿಗ್ರಾಮ(ಸಂಘಟನೆ ಮಂಜುನಾಥ್): ತಾಲೂಕಿನ ಹಳೆಯೂರು ಹಾಲು ಉತ್ಪಾದಕರ ಸಂಘಕ್ಕೆ 25 ಸಾವಿರ ನಿವ್ವಳ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷರಾದ ಹೆಚ್. ಎಸ್ ಹರೀಶ್ ಹೇಳಿದರು.

ವಾರ್ಷಿಕ ಮಹಾಸಭೆಯಲ್ಲಿ ಸಂಘದ ಸಿಇಒ ಹೆಚ್. ಆರ್ ಸುಧರ್ಶನ್ 2025-2026 ನೇ ಸಾಲಿನ ಆಡಿಟ್ ವರದಿಯನ್ನು ಮಂಡಿಸಿದರು. ಅವರು ಮಾತನಾಡಿ ರೈತರು ಗುಣಮಟ್ಟದ ಹಾಲನ್ನು ಹಾಕಿ ಸಂಘದ ಬೆಳವಣಿಗೆಗೆ ಸಹಕರಿಸಬೇಕು ಎಂದು ಹೇಳಿದರಲ್ಲದೆ, ಸಮಾಲೋಚನಾ ವಿಸ್ತರಣಾಧಿಕಾರಿಗಳಾದ ಸಿ. ಜಿ ಅಭಿಷೇಕ್ ಪಶು ಆಹಾರದ ಬಗ್ಗೆ ಮಾಹಿತಿ ನೀಡಿದರು.

ಉಪಾಧ್ಯಕ್ಷರಾದ ಹೆಚ್.ಸಿ.ಶ್ರೀನಿವಾಸ ಗೌಡ, ನಿರ್ದೇಶಕರಾದ ಹೆಚ್ ಎಸ್ ಜಗದೀಶ್, ಎಚ್ ಬಿ ನವೀನ್ ಕುಮಾರ್, ಹೆಚ್.ಆರ್.ಗೋವಿಂದೇಗೌಡ, ರಾಜಕುಮಾರ ಹೆಚ್ ಎಸ್, ಜಯಮ್ಮ, ಮಮತಾ, ಹೆಚ್ ಎನ್ ಯೋಗಾನಂದ ಹಾಲು ಪರೀಕ್ಷಕ ಎಚ್ ಆರ್ ಅಭಿಷೇಕ್ ಹಾಗೂ ಸಂಘದ ಸದಸ್ಯರು ಇದ್ದರು.
Tags:sangatane manjunath
admin








