Mysore

ಮಹದೇಶ್ವರ ದೇವಸ್ಥಾನಕ್ಕೆ 5ಲಕ್ಷ ರೂ ದೇಣಿಗೆ ನೀಡಿದ ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ):  ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ತಾಯಿ ಹೆಸರಿನಲ್ಲಿ ಮಹದೇಶ್ವರ ದೇವಸ್ಥಾನಕ್ಕೆ 5ಲಕ್ಷ ರೂ ದೇಣಿಗೆ ನೀಡಿದರು.

ಹುಣಸೂರು ತಾಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮದ ಮಹದೇಶ್ವರ ಸ್ವಾಮಿ ವಿಗ್ರಹ ಮತ್ತು ಕಳಸ ಪ್ರತಿಷ್ಠಾಪನ ಸಮಾರಂಭದ ಗಣ್ಯರ ಸಭೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇಣಿಗೆ ನೀಡಿ ಮಾತನಾಡಿದರು.

ತಾಲೂಕಿನಲ್ಲಿ ಯಾವುದೇ ಗ್ರಾಮದಲ್ಲಿ ದೇವತಾ ಕಾರ್ಯಗಳು ನಡೆದರೂ ನಿರಂತರವಾಗಿ ಸಹಾಯ ಮಾಡುತ್ತಾ ಬಂದಿದ್ದೇನೆ ಈಗಲೂ ಕೂಡ ನನ್ನನ್ನು ಹಾಲಿ ಶಾಸಕ ಎಂದೇ ಹಲವಾರು ಜನರು ಹೇಳುತ್ತಾರೆ ಆದರೂ ತಾಲೂಕಿನ ಜನತೆಯ ತೀರ್ಪಿಗೆ ತಲೆಬಾಗಿ ಸೋತರು ಇಂದು ಜನರ ನಡುವೆ ಇದ್ದು ಗ್ರಾಮಗಳಿಗೆ ಭೇಟಿ ನೀಡಿ ನಿರಂತರ ಜನರ ಸಂಪರ್ಕದಲ್ಲಿ ಇದ್ದೇನೆ.

ನಾನು ಎಂದಿಗೂ ಈ ತಾಲೂಕಿನಲ್ಲಿ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚು ಹೊತ್ತು ನೀಡುವುದು ನನ್ನ ಮೊದಲ ಕರ್ತವ್ಯ ಹಿಂದೆ ಶಾಸಕನಾಗಿದ್ದ ಸಂದರ್ಭದಲ್ಲಿ ಈ ಗ್ರಾಮಕ್ಕೆ ಹೆಚ್ಚುಅಭಿವೃದ್ಧಿ ಕೆಲಸ ಮಾಡಿ ಜನರ ಮನಸ್ಸನ್ನು ಗೆದ್ದಿದ್ದೇನೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗದ್ದಿಗೆ ದೇವರಾಜ್, ವಸಂತ್ ಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ರಘು, ಗ್ರಾಮದ ಯಜಮಾನರಾದ ಜಗದೀಶ್, ಪಾಪಣ್ಣ,, ಮಹೇಶ್, ಹರೀಶ್, ಪುಟ್ಟರಾಜು, ಧನಂಜಯ, ಸೋಮಶೇಖರ, ಸೇರಿದ ಹಲವಾರು ಮುಖಂಡರು ಇದ್ದರು.

admin
the authoradmin

Leave a Reply

Translate to any language you want