ಪ್ರತಿ ದಿನ ಸೂರ್ಯ ತನ್ನ ಕೆಲಸ ಮರೆಯೋದಿಲ್ಲ ಸೂರ್ಯ ಉದಯಿಸಿ ಮತ್ತೆ ಮುಳುಗುವುದು ಸೂರ್ಯನ ಕರ್ತವ್ಯ.. ದೇಶದಲ್ಲಿ ಯೋಧ ಗಡಿ ಕಾಯೋದು ಒಬ್ಬ ಯೋಧನ ಕರ್ತವ್ಯ.. ಅವನು ತನ್ನ ಕೆಲಸ ಮರೆತರೆ ದೇಶವೇ ಸುಟ್ಟು ನಾಶ ಆಗುತ್ತದೆ… ಹಾಗೆಯೇ ಪ್ರತಿ ಮನೆಯಲ್ಲೂ ಒಬ್ಬ ಸೂರ್ಯ ಮತ್ತು ಯೋಧ ಅಂದ್ರೆ ಅದು ತಂದೆ ಮಾತ್ರ… ಮನೆಯಲ್ಲಿ ತಂದೆ ಇಲ್ಲ ಅಂದರೆ ಅ ಮನೆ ಸೂರ್ಯ ಇಲ್ಲದ ಕತ್ತಲೆ ಮಂದಿರ ಅಂತಾನೆ ನಾವು ಕಾಣಬಹುದು.. ಯಾಕಂದ್ರೆ ಅಪ್ಪ ಅನ್ನೋ ಎರಡೂ ಪದ ಸೂರ್ಯ ಹಾಗೂ ಯೋಧ ಅನ್ನೋ ಎರಡೂ ಪದಕ್ಕಿಂತ ಮಿಗಿಲಾದದ್ದು…
ಮನೇಲಿ ಅಪ್ಪ ಹೆಣ್ಣು ಮಕ್ಕಳಿಗೆ ಮಾತ್ರ ತಮ್ಮ ಪ್ರೀತಿ ಕೊಡ್ತಾರೆ ಅದೇ ಗಂಡು ಮಕ್ಳು ಅಂದ್ರೆ ಸ್ವಲ್ಪ ಬೆದರಿಕೆಯಿಂದ ಇಟ್ಟಿರುತ್ತಾರೆ ಅಂತ ಎಲ್ರೂ ಹೇಳೋದು ನಾನು ಕಂಡಿದೀನಿ ಆದ್ರೆ ಅಪ್ಪಾ ಭಯ ಪಡಿಸೋ ಯೋಧ ಆದ್ರೂ ನಮ್ಮ ಜೀವನಕ್ಕೆ ಬೆಳಕು ಕೊಡುವ ಸೂರ್ಯ ಅಪ್ಪನಿಲ್ಲದ ಮನೆ ಅಪ್ಪನಿಲ್ಲದ ಜೀವನ ಯಾವ ಮನೆ ಗೂ ಬೇಡ ….

ಅಪ್ಪ ಹೆಣ್ಣು ಮಕ್ಕಳಿಗೆ ಮಾತ್ರ ಪ್ರೀತಿ ತೋರಿಸೋದು ಅವರ ಜೀವನದಲ್ಲಿ ಮುಂದೆ ಯಾವುದೇ ಒಂದು ತಪ್ಪು ದಾರಿ ಕಾಣದೆ ಇರಲಿ ಅವರಿಗೆ ಧೈರ್ಯ ಬರಲಿ ಅವರ ಜೀವನದಲ್ಲಿ ಕಷ್ಟಾ ಅನೋ ಪದ ತನ್ನ ಮಗಳಿಗೆ ಬಾರದೆ ಇರಲಿ ಅಂತ… ಆದರೆ ಅದೇ ಅಪ್ಪನಿಗೆ ಗೊತ್ತು ನನ್ನ ಮಗ ನನ್ನ ಉಸಿರು ಅವನು ಒಳ್ಳೆಯ ದಾರಿಯಲ್ಲಿ ನಡೆಯಬೇಕು ಅವನು ತೆಗೆದುಕೊಳ್ಳುವ ನಿರ್ಧಾರ ಅವನ ಜೀವನದಲ್ಲಿ ಸ್ಪೂರ್ತಿ ಪಡೆದು ಕೊಳ್ಳುವ ಒಂದು ಮಾದರಿ ಆಗಬೇಕು ಅಂತ ಬಯಸುತ್ತಾನೆ.
ಮಗನ ಮೇಲೆ ಅದೆಷ್ಟೇ ಪ್ರೀತಿ ಇದ್ದರೂ ಅವನ ಮುಂದೆ ತೋರಿಸಲು ಮುಂದೆ ಬರೋದಿಲ್ಲ ಯಾಕೆ ಅಂದ್ರೆ ಪ್ರೀತಿ ಅನ್ನೋದು ಎಷ್ಟು ಪವಿತ್ರವೂ ಅಷ್ಟೇ ವಿಷವು ಕೂಡ.. ತನ್ನ ಪ್ರೀತಿಯಿಂದ ಮಗನ ಮುದ್ದು ಹೆಚ್ಚಾಗಿ ಅವನ ಜೀವನಕ್ಕೆ ತೊಂದರೆ ಆಗಬಾರದು ಅನ್ನೋ ಅವನ ಕಾಳಜಿ ಅವನ ಭವಿಷ್ಯಕೆ ಅಡ್ಡ ಆಗಬಾರದು ಅನ್ನೋ ನಂಬಿಕೆ.

ಅಪ್ಪ ಯಾವಾಗಲೂ ಗಂಡು ಮಕ್ಕಳಿಗೆ ರೆಗ್ತಾ ಇರ್ತಾರೆ ಅಂದ್ರೆ ಅದು ಕೋಪ ಅಥವಾ ದ್ವೇಷ ಅಲ್ಲ ಬದಲಿಗೆ ನನ್ನ ಮಗ ಬೇರೆ ಅವರ ಹಾಗೆ ತಪ್ಪು ದಾರಿ ಗೆ ಸಿಲುಕದಿರಲಿ ಅನ್ನೋ ಒಂದು ಮುಂಜಾಗ್ರತೆ.. ಹೀಗಾಗಿಯೇ ಮಗನನ್ನು ಯಾವಾಗಲೂ ಕೋಪದಿಂದ ಮಾತಾಡೋದು. ಅಪ್ಪನ ಗುಣ ಅಂದರೆ ಅಲ್ಲಿ ಅವರ ನೋವು ಅದೇ ಮಕ್ಕಳಿಗೆ ಕಾಣದೆ ಅಪ್ಪಾ ಯಾವಾಗಲೂ ಕೋಪ ತೋರಿಸ್ತಾ ಇರ್ತಾರೆ ಮತ್ತೆ ಯಾರ ಜೊತೆ ಸೇರಲು ಬಿಡಲಿಲ್ಲ ಅಂತ ಅಪ್ಪನ ಮೇಲೆ ಹೆಚ್ಚು ಕೋಪದಿಂದ ನಡೆದುಕೊಳ್ಳುತ್ತಾರೆ. ಅಪ್ಪನ ಪ್ರೀತಿ ಮುಂದೆ ಯಾವ ಪ್ರೀತಿನು ಸಮವಲ್ಲ. ಅಪ್ಪ ಅನ್ನೋ ಒಬ್ಬ ಯೋಧ ನನ್ನ ಜೊತೆ ಇದ್ರೆ ದೇಶನೇ ಅಲ್ಲ ಪ್ರಪಂಚವನ್ನೇ ಗೆಲ್ಲುತ್ತೇನೆ ಅನ್ನೋ ಧೈರ್ಯ ನಮ್ಮಲಿ ಇರುತ್ತದೆ .
ನಿಮ್ಮ ಒಂದೊಂದು ಕಹಿಯಾದ ಮಾತು ಅಪ್ಪನ ಹೃದಯಕ್ಕೆ ಚುಚ್ಚಿದರೂ ಅದನ್ನ ಮರೆತು ಅದೇ ಮಾತಲಿ ಸಿಹಿಯನ್ನು ಕೊಡುವದು ಅಪ್ಪಾ.. ಅಪ್ಪನ ಬಗ್ಗೆ ಒಂದೆರಡು ಮಾತಲ್ಲಿ ಹೇಳಲು ಸಾಧ್ಯವಿಲ್ಲ ಆದರೆ ಅಪ್ಪನ ಈ ಧೈರ್ಯಕ್ಕೆ ಯಾರೂ ಸಮಾನರಲ್ಲ. ಪ್ರತಿ ದಿನವೂ ಯೋಧನಂತೆ ನಮ್ಮನ್ನು ಕಾಯುವ ಯೋಧ ನನ್ನ ಅಪ್ಪಾ… ಅವನು ತನ್ನ ಜೀವನದಲ್ಲಿ ನೋಡದ ಅಥವಾ ಅನುಭವಿಸಲು ಆಗದ ಕೆಲವು ಖುಷಿಯನ್ನು ತನ್ನ ಮಕ್ಕಳು ಅನುಭವಿಸಲ್ಲಿ ಎಂದು ತನ್ನ ನೋವನ್ನು ತೋರಿಸದೆ ಮಕ್ಕಳು ಕೇಳಿದ್ದೆಲ್ಲಾ ಕೊಡಿಸಿ ಅವರ ಖುಷಿ ಅಲ್ಲಿ ಖುಷಿ ಕಾಣುವ ವ್ಯಕ್ತಿ ಅಂದ್ರೆ ಅದು ಅಪ್ಪಾ ಮಾತ್ರ..

ತನ್ನ ಮಕ್ಕಳು ಎಷ್ಟೇ ತಪ್ಪು ಮಾಡಿದರೂ ಅದನ್ನು ಸರಿ ಮಾಡಿ ಅವರಿಗೆ ತಪ್ಪು ಸರಿ ತಿಳುವಳಿಕೆ ತಿಳಿಸಿ ಮನೆಯಲ್ಲಿ ಮೊದಲ ಗುರುವಾಗಿ ತನ್ನ ಮಗನ ಜೀವನದ ಭವಿಷ್ಯವನ್ನು ರೂಪಿಸುವ ಶಿಕ್ಷಕ ಅಂದ್ರೆ ಅದು ಅಪ್ಪಾ.. ತನ್ನ ಕೈ ಕೆಸರಾದರೂ ತನ್ನ ಮಕ್ಕಳ ಜೀವನ ಸಿಹಿಯಾಗಿರಲಿ ಅಂಥ ದಿನ ರಾತ್ರಿ ಹಗಲು ದುಡಿದು ಮಕ್ಕಳ ಜೀವನ ರೂಪಿಸಿ ಕೊಡುವುದರ ಜೊತೆಗೆ ಅವರ ಮುಂದಿನ ಪ್ರತಿ ಗುರಿಯಲ್ಲಿ ಬ್ಯಾಕ್ ಬೋನ್ ಆಗಿ ನಿಂತು ಸಹಾಯ ಮಾಡುವವನು ಅಂದ್ರೆ ಅವನೇ ಅಪ್ಪಾ…
ಮಕ್ಕಳು ಎಷ್ಟೇ ದೊಡ್ಡವರಾದರು ತನ್ನ ಮುಂದೆ ಅವರು ಯಾವಾಗಲೂ ಚಿಕ್ಕ ಪಾಪು ಹಾಗೆ ಕಾಣುವವನು. ಬೇರೆ ಯಾವುದೇ ಒಬ್ಬ ವ್ಯಕ್ತಿ ತನ್ನ ಮಗನ ಬಗ್ಗೆ ಬೆರಳು ಮಾಡಿ ತೋರಿಸದೆ ಇರುವ ಹಾಗೆಯೇ ತನ್ನ ಮಗನನ್ನು ಬೆಳೆಸಿ ಅವನ ಧೈರ್ಯ ಸ್ಫೂರ್ತಿ ಹಾಗೂ ಅವನ ಜೀವನ ರೂಪಿಸಿ ಕೊಡುವ ವ್ಯಕ್ತಿ. ಅಪ್ಪಾ ನಾ ಪ್ರೀತಿ ಮುಂದೆ ಯಾವ ಪ್ರೀತಿಯೂ ಕಾಣಲು ಸಾಧ್ಯವಿಲ್ಲ

ತಂದೆ ಇದ್ದಾಗಲೇ ಅವರನ್ನು ಪ್ರೀತಿಸಿ ಅವರಿಗೆ ನಿಮ್ಮಿಂದ ಗೌರವ ಸಿಗುವ ಹಾಗೆ ಅದಷ್ಟು ಒಳ್ಳೆ ಕೆಲಸ ಮಾಡಿ. ನಿಮ್ಮ ಅಪ್ಪ ನಿಮ್ಮಿಂದ ತಲೆ ತಗ್ಗಿಸಲು ಬಿಡಬೇಡಿ ಯಾಕಂದ್ರೆ ನಿಮ್ಮನ್ನ ಜಗತ್ತಲ್ಲಿ ತೆಲೆಯತ್ತಿ ನಡೆಯಲು ಕಲಿಸಿಕೊಟ್ಟ ತಂದೆಗೆ ತಲೆ ತಗ್ಗಿಸುವ ಕೆಲಸ ಮಾಡಬೇಡಿ… ತಂದೆ ಕಳೆದು ಕೊಂಡವರು ತಂದೆ ಪ್ರೀತಿ ಬೇಕು ಅಂತ ಬೇಡಿದರು ಸಿಗದು ಅವರ ತಂದೆ ಮತ್ತೆ ಸಿಗೋದಿಲ್ಲ ತಂದೆ ಇದ್ದು ನೀವು ಅನಾಥರು ಅನ್ನೋ ಭಾವನೆ ಬೇಡ ಅಪ್ಪನನ್ನು ನೀವು ಮಗುವಿನ ಹಾಗೆಯೇ ಪ್ರೀತಿಸಿ ಅವರು ನಿಮ್ಮನ್ನು ಅವರ ತಂದೆ ಹಾಗೆ ಪ್ರೀತಿಸುತ್ತಾರೆ .
ಪ್ರತಿ ಅಪ್ಪ ಅವನಿಗೆ ಮಗ ಹುಟ್ಟಿದ ಅಂದ ತಕ್ಷಣ ಆ ತಂದೆ ಹೇಳ್ತಾರೆ ನನ್ನಪ್ಪ ಹುಟ್ಟಿದ್ದಾರೆ ಅಂಥ ಅವರ ಪ್ರೀತಿ ನೋಡಿ ಮಗನನ್ನು ನನ್ನ ಅಪ್ಪಾ ಅನ್ನೋ ತಂದೆ ಮುಂದೆ ಮತ್ತೆ ಎಲ್ಲ ಪ್ರೀತಿಯೂ ಕ್ಷಣಿಕ.. ಹಾಗೆಯೇ ನನ್ನ ಅಪ್ಪನ್ನು ಕೂಡ ನನಗೆ ಒಬ್ಬ ಅಪ್ಪಾ ಅಂಥ ಹೇಳೋದುಕಿಂತ ಅವರು ನನ್ನ ದೇವರೂ ಯಾಕಂದ್ರೆ ಇಲ್ಲಿವರೆಗೂ ನನ್ನ ಅಪ್ಪಾ ನನಗೆ ಒಬ್ಬ ಮಗನಿಗೆ ಕಂಡಿದ್ದು ನಾನು ಕಾಣಲ್ಲೇ ಇಲ್ಲ..
ನನ್ನ ಅಪ್ಪಾ ನನ್ನನು ತನ್ನ ಬೆಸ್ಟ್ ಫ್ರೆಂಡ್ ಅಂದ್ರೆ ಒಬ್ಬ ಒಳ್ಳೆ ಗೆಳೆಯ ಆಗೆ ನನ್ನ ಬಳಿ ನಡೆದು ಬಂದರು ಮತ್ತು ನನ್ನ ಅಪ್ಪಾ ನನಗೆ ನಾನು ಮಾಡುವ ಪ್ರತಿ ಕೆಲಸದಲ್ಲೂ ನನ್ನ ಜೊತೆ ಬ್ಯಾಕ್ ಬೋನ್ ಆಗಿ ನಿಂತು ನನ್ನ ಒಳ್ಳೆ ಸಪೋರ್ಟ್ ಮಾಡಿ ನನಗೆ ಪ್ರತಿ ಕೆಲಸದಲ್ಲೂ ಧೈರ್ಯ ತುಂಬಿದರು. ನನಗೆ ಹೊರಗಡೆ ಸ್ನೇಹಿತರಿಗಿಂತ ನನ್ನ ಅಪ್ಪಾ ನನ್ನ ಮೊದಲ ಗೆಳೆಯ ಆಗಿ ನನ್ನ ತಪ್ಪು ಸರಿ ಎಲ್ಲವನ್ನೂ ತಿದ್ದಿ ನನ್ನ ಜೀವನಕ್ಕೆ ದಾರಿ ದೀಪ ಹಾಗೂ ಮಾದರಿಯಾದರು.

ನನ್ನ ಅಪ್ಪಾ ಯಾವ ತಾಯಿಗೂ ಕಡಿಮೆ ಇಲ್ಲ ಯಾಕಂದ್ರೆ ತಾಯಿ ಪ್ರೀತಿ ಗೊತ್ತಿಲ್ಲದ ನನಗೆ ನನ್ನ ಅಪ್ಪಾ ತಾಯಿಗಿಂತ ಹೆಚ್ಚಾಗಿ ಅವನ ಜೀವನವನ್ನೇ ನನಗೆ ಮಿಗಿಲಾಗಿ ಇಟ್ಟಿದ್ದಾರೆ. ನನ್ನ ಅಪ್ಪಾ ನನಗೆ ಬರಿ ಮಾತುಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ ಅವರು ನನ್ನ ದೇವರು… ಕಾಣದ ದೇವರಿಗೆ ನಾನು ಪೂಜಿಸಲು ಮುಂದಾಗಲ್ಲ ಯಾಕಂದ್ರೆ ಕಾಣಿಸುವ ದೇವರೂ ನನ್ನ ಅಪ್ಪಾ..
ಅವರಿಗೆ ತುಂಬಾನೇ ಕಷ್ಟ ಇದ್ರು ಅದನ ನನ್ನಲ್ಲಿ ತೋರಿಸದೆ ಆ ನೋವು ಕಷ್ಟವನ್ನು ತಾನೆ ನುಂಗಿ ನನ್ನ ಜೀವನ ರೂಪಿಸಿದ ದೇವರು ನನ್ನ ಅಪ್ಪಾ.. ಅಪ್ಪ ಈ ಜೀವನ ನೀವು ಕೊಟ್ಟ ಭಿಕ್ಷೆ ಅಂತಾನೆ ನಾನು ಗೌರವದಿಂದ ಹೇಳಿಕೊಳ್ಳುತ್ತೇನೆ. Love you ಅಪ್ಪಾ
ಮಕ್ಕಳು ಅಪ್ಪನನ್ನು ಪ್ರೀತಿ ವಿಶ್ವಾಸ ಗೌರವದಿಂದ ನೋಡಿಕೊಂಡರೆ ಈ ಜಗತ್ತಲ್ಲಿ ವೃದ್ಧಾಶ್ರಮ ಇರೋದಿಲ್ಲ ಪ್ರತಿಯೊಬ್ಬರು ತಮ್ಮ ತಂದೆಯನ್ನು ಒಬ್ಬ ಗೆಳೆಯನಾಗಿ ನೋಡಿ ಅದೇ ತಂದೆ ನಿಮ್ಮನ್ನು ಒಬ್ಬ ಒಳ್ಳೆ ಗೆಳೆಯನ ಹಾಗೆಯೇ ನಿಮ್ಮ ಜೊತೆ ನಿಲ್ಲುತ್ತಾರೆ ಮತ್ತು ಅವರು ತಮ್ಮ ಸರ್ವಸ್ವವನ್ನು ನಿಮಗೆ ಧಾರೆ ಎರೆಯುತ್ತಾರೆ.
ಅಪ್ಪಾ ಅನ್ನೋದು ಯಾಕೆ ಸೂರ್ಯನಿಗೆ ಹೋಲುತ್ತದೆ ಅಂದ್ರೆ ಸೂರ್ಯ ಒಂದು ದಿನ ತನ್ನ ಕರ್ತವ್ಯ ಮಾಡದೆ ನಿಂತರೆ ಜಗತ್ತೆ ಅಂಧಕಾರದಲ್ಲಿ ಅಂದರೆ ಕತ್ತಲಲ್ಲಿ ತುಂಬಿರುತ್ತದೆ ಹಾಗೆಯೇ ಅಪ್ಪ ಇಲ್ಲದ ಜೀವನ ಕತ್ತಲೇ ಆವರಿಸಿದ ಬದುಕಿನ ಹಾಗೆ ತುಂಬಿರುತ್ತದೆ ಇದು ಅಪ್ಪಾ ಬಗ್ಗೆ ಎರಡು ಸಾಲುಗಳು ಅಷ್ಟೇ. ನೀವು ನಿಮ್ಮ ಅಪ್ಪನ ಬಳಿ ಹೋಗಿ ಅಪ್ಪ ನಾನು ಮಾಡಿದ ತಪ್ಪನ್ನು ಕ್ಷಮಿಸಿ ಎಂದು ಕೇಳಿ ನಿಮ್ಮ ನಿಮ್ಮ ತಪ್ಪನ್ನೆಲ್ಲ ಕ್ಷಮಿಸಿ ನಿಮ್ಮ ಜೊತೆ ಒಬ್ಬ ಒಳ್ಳೆ ಗೆಳೆಯ ಹಾಗೂ ಶಿಕ್ಷಕನಾಗಿ ನಿಮ್ಮನ್ನು ತಿದ್ದಿ ನಿಮಗೆ ಮಾರ್ಗದರ್ಶಕರಾಗುತ್ತಾರೆ.
ಅಪ್ಪಾ I love you ಅಪ್ಪಾ.. ಯಾವಾಗಲೂ ನೀನು ನಿನ್ನ ಖುಷಿ ಮರೆತು ನನಗೆ ಸಂತೋಷ ನೀಡುತ್ತಿದ್ದೆ ಆದರೆ ಒಂದು ದಿನ ನಾನು ನಿನ್ನ ಕಷ್ಟನೆಲ್ಲ ದೂರ ಮಾಡಿ ನಿನಗೆ ನೀನು ಕಳೆದು ಕೊಂಡ ಸಂತೋಷವೆಲ್ಲಾ ಕೊಡುವೆನು ಮತ್ತು ನಿನ್ನ ಬೆನ್ನೆಲುಬಾಗಿ ನಿಂತು ಕಾಯುವೆ ಅಪ್ಪಾ .









