ಮೈಸೂರು: ಮನುಷ್ಯನ ವ್ಯಕ್ತಿತ್ವ ವಿಕಾಸ ಸಂಘ ಜೀವನದಿಂದ ಮಾತ್ರ ಸಾಧ್ಯ ಎಂದು ಶ್ರೀ ಗುರು ಮಲ್ಲೇಶ್ವರ ಪದವೀಧರರ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಕಲ್ಮಳ್ಳಿ ನಟರಾಜು ಅಭಿಪ್ರಾಯ ಪಟ್ಟಿದ್ದಾರೆ.
ಮೈಸೂರಿನ ಅಗ್ರಹಾರದ ಕುದೇರು ಮಠದಲ್ಲಿ ಪರಸ್ಪರ ಗೆಳೆಯರ ಬಳಗದ ಮೊದಲ ವರ್ಷದ ಸರ್ವ ಸದಸ್ಯರ ಮಹಾ ಸಭೆಯನ್ನು ಶ್ರೀ ಗುರು ಮಲ್ಲೇಶ್ವರರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯ ಶಾಸ್ತ್ರದ ಪಿತಾಮಹ ಎಂದು ಕರೆಯಲ್ಪಡುವ ಗ್ರೀಕ್ ತತ್ವ ಜ್ಞಾನಿ ಅರಿಸ್ಟಾಟಲ್ ಮನುಷ್ಯನ ಜೀವನ ನಡವಳಿಕೆಯನ್ನು ಆಳವಾಗಿ ಅಧ್ಯಯನ ಮಾಡಿ ಸಂಘ ಜೀವಿ ಎಂದಿದ್ದಾನೆ ಅದರಂತೆ ಮಾನವ ಏನೇ ಸೌಲಭ್ಯವನ್ನು ಕೊಟ್ಟರೂ ಏಕಾಂಗಿಯಾಗಿ ಬದುಕಲಾರ.

ಮನುಷ್ಯ ಇತರ ನಿಸರ್ಗದ ಇತರ ಪ್ರಾಣಿಗಳಿಗಿಂತ ಭಿನ್ನವಾಗಿದ್ದಾನೆ ಕಾರಣ ಅವನಿಗೆ ಆಲೋಚನಾ ಶಕ್ತಿ ಇದೆ. ತನ್ನ ಭಾವನೆಗಳನ್ನು ಭಾಷೆಗಳ ಮೂಲಕ ವ್ಯಕ್ತ ಪಡಿಸುವುದರ ಮೂಲಕ ಸುಖ ದುಃಖ ಸಂತೋಷ ಹಂಚಿ ಕೊಳ್ಳುತ್ತಾನೆ ಪರಿವಾರದ ಸಂತೋಷದಲ್ಲಿ ತನ್ನ ಸುಖವನ್ನು ಮತ್ತು ತನ್ನ ಸಂತೋಷದಲ್ಲಿ ಕುಟುಂಬದ ಸುಖ ಕಂಡು ಕೊಂಡು ಶಾಂತಿ ನೆಮ್ಮದಿಯಿಂದ ಬದುಕಲು ಸಂಘ ಜೀವನ ಸಹಕಾರಿಯಾಗುತ್ತದೆ

ಜಗತ್ತಿಗೆ ಶಾಂತಿ ಸಂದೇಶವನ್ನು ಸಾರಿದ ಏಷ್ಯಾದ ಬೆಳಕು ಎಂದು ಕರೆಯಲ್ಪಡುವ ಬುದ್ಧನ ಚಿಂತನೆಗಳು ಸಂಘ ಶಕ್ತಿಯ ಮೂಲಕವೆ ಜಗತ್ತಿಗೆ ಸಾರಲ್ಪಟ್ಟಿವೆ ಹಾಗಾಗಿಯೇ ಅವನು ಸಂಗಂ ಶರಣಂ ಗಚ್ಛಾಮಿ, ಬುದ್ಧಂ ಶರಣಂ ಗಚ್ಛಾಮಿ ದಮ್ಮo ಶರಣಂ ಗಚ್ಛಾಮಿ, ಎನ್ನುವುದರ ಮೂಲಕ ಮನುಷ್ಯನ ಶಕ್ತಿ ಸಂಘ ಧರ್ಮದ ತತ್ವಗಳನ್ನು ಸಾರಲು ಸಂಘವೇ ಕಾರಣ ಎನ್ನುವುದನ್ನು ಉಲ್ಲೇಖಿಸಿದರು

ಸೃಷ್ಟಿಯ ಜೀವ ಸಂಕುಲಗಳಲ್ಲಿ ಪ್ರಾಣಿ ಪಕ್ಷಿಗಳ ಜೀವನ ಶೈಲಿಯನ್ನು ಸೂಕ್ಷ್ಮವಾಗಿ ನೋಡಿದರೆ ಎಲ್ಲ ಪ್ರಾಣಿ ಪಕ್ಷಿಗಳು ಕುಟುಂಬದೊಡನೆ ವಾಸಿಸುತ್ತವೆ ಆಹಾರ ಸಂಗ್ರಹ ವೇಳೆ ಒಂಟಿಯಾಗಿರಬಹುದು ಆದರೆ ಸೇವಿಸುವಾಗ ಇತರೆ ಗುಂಪಿನಿಂದ ನೋವಾದಾಗ ದುಃಖಿಸುವ ಸಂತೈಸುವ ಪರಿ ಮನುಷ್ಯನಿಗೆ ಅಲ್ಲ ಪ್ರಾಣಿ ಪಕ್ಷಿಗಳು ಸಂಘ ಜೀವನ ನಡೆಸುತ್ತವೆ ಎನ್ನುವುದು ನಿಸರ್ಗದ ವಿಶೇಷತೆ ಎಂದರೆ ತಪ್ಪಾಗಲಾರದು.

ಮಹಾ ಮಾನವತಾವಾದಿ ಬಸವಣ್ಣ ತನ್ನದೊಂದು ವಚನದಲ್ಲಿ ಪ್ರಾಣಿ ಪಕ್ಷಿಗಳ ಸಂಘ ಜೀವನ ಕುರಿತು ಕಾಗೆ ಒಂದ ಅಗುಳು ಕಂಡರೆ ಕೂಗಿ ಕರೆಯದೆ ತನ್ನೆಲ್ಲ ಬಳಗವನ್ನು ಕೋಳಿ ಒಂದು ಗುಟುಕು ಕಂಡರೆ ಕರೆಯದೆ ತನ್ನೆಲ್ಲ ಬಳಗವನ್ನು ಮನುಷ್ಯನಾಗಿ ಹುಟ್ಟಿ ಮನುಷ್ಯನಾಗಿ ಇನ್ನೊಬ್ಬ ವ್ಯಕ್ತಿಯ ಸುಖ ದುಃಖಗಳಿಗೆ ಸ್ಪಂದಿಸದಿದ್ದರೆ ಮನುಷ್ಯನ ಬಾಳು ಕಾಗೆ ಕೋಳಿಗಳಿಗಿಂತ ಕರ ಕಷ್ಟ ಕೂಡಲ ಸಂಗಮ ದೇವ ಎಂದು ಎಚ್ಚರಿಸಿದ್ದಾನೆ ಆದರೆ ಪ್ರಸ್ತುತ ದಿನ ಮಾನಗಳಲ್ಲಿ ಮನುಷ್ಯನ ಮಿತಿ ಮೀರಿದ ಸ್ವಾರ್ಥ ದೂರಾಸೆ , ದೂರಾಲೋಚನೆಗಳಿಂದ ವೈಯಕ್ತಿಕ ಸುಖಕ್ಕೆ ಹಾತೊರೆದು ಎಲ್ಲವನ್ನೂ ಗಳಿಸಿದರೂ ಶಾಂತಿ ನೆಮ್ಮದಿಗಳಿಂದ ಬದುಕಲಾರದೆ ,ಮಾನಸಿಕ ತೊಳಲಾಟದಿಂದ ತನ್ನ ಜೀವನವನ್ನು ಅಂತ್ಯ ಗೊಳಿಸುತ್ತಿರುವುದು ನಿಜಕ್ಕೂ ಘೋರ ದುರಂತ ಎಂದರು

ತಾನು ಬದುಕಿ ಇತರರು ಬದುಕಲು ಅವಕಾಶ ನೀಡಿ ಎನ್ನುವುದು ದೈವದ ನಿಯಮ ಅದನ್ನು ಅರಿತು ತಾನು ವಾಸ ಮಾಡುವ ಸ್ಥಳಗಳಲ್ಲಿ ಕುಟುಂಬ ನೆರೆ ಹೊರೆ ಇಂತಹ ಸಂಘ ಸಂಸ್ಥಗಳ ಮೂಲಕ ಬೆರೆತರೆ ಪರಸ್ಪರರ ಒಡಗೂಡಿ ಸುಖ ದುಃಖ ಹಂಚಿ ಕೊಂಡು ಕಿಂಚಿತ್ ಸಹಕಾರ ಸೇವೆ ಮಾಡುವ ಮೂಲಕ ಸಂತೋಷ ನೆಮ್ಮದಿ ಕಂಡು ಕೊಳ್ಳಬಹುದು ಇರುವಷ್ಟು ದಿನ ಜೀವನ ಸಾರ್ಥಕ ಪಡಿಸಿ ಕೊಳ್ಳಬಹುದು ಇಂದು ವಿಜ್ಞಾನ ಮನುಷ್ಯನಿಗೆ ಎಲ್ಲವನ್ನೂ ಕೊಟ್ಟಿದೆ ಆದರೆ ಅದರ ಮಿತಿ ಮೀರಿದ ಬಳಕೆ ಅವನನ್ನು ಒಂಟಿಯಾಗಿಸಿದೆ ಅತಿ ಹೆಚ್ಚು ಮಾನಸಿಕ ಖಿನ್ನತೆಗೆ ಒಳಗಾಗುತ್ತಿರುವುದು ಹೆಚ್ಚು ಶಿಕ್ಷಣ ಪಡೆದ ವಿದ್ಯಾವಂತರೇ ಎನ್ನುವುದು ಆತಂಕಕಾರಿ ವಿಷಯ ಅತಿಯಾದ ಒತ್ತಡದ ಜೀವನದಿಂದ ಕುಟುಂಬದ ಸುಖ ಸಂತೋಷ ದೂರಾಗಿದೆ ಸಮಾಜದಲ್ಲಿ ನಡೆಯುವ ಘಟನೆಗಳಿಗೆ ಸಾಮಾಜಿಕ ಜಾಲ ತಾಣಗಳಲ್ಲಿ ಮಾತ್ರ ಪ್ರತಿಕ್ರಿಯಿಸುವ ಮಟ್ಟಕ್ಕೆ ನಾವಿದ್ದೇವೆ ಎಂದರೆ ಮುಂದಿನ ಮಾನವ ಪೀಳಿಗೆಯ ಬದುಕನ್ನು ಊಹಿಸಲು ಸಾಧ್ಯವಿಲ್ಲ

ಹಾಗಾಗಿ ನೀವೆಲ್ಲರೂ ಕುಟುಂಬ ಸಮೇತ ಸೇರಲಿ ಎನ್ನುವ ಸದುದ್ದೇಶದಿಂದಲೇ ಇಂತಹ ನೂರಾರು ಸಂಘಟನೆಗಳು ಸ್ಥಾಪನೆಗೊಳ್ಳಲು ಕಾರಣವಾಗಿವೆ ಈ ಸಂತಸವನ್ನು ಕೇವಲ ಹಣ ಅಧಿಕಾರದಿಂದ ಮಾತ್ರ ಕೊಳ್ಳಲು ಸಾಧ್ಯವಿಲ್ಲ ಅದಕ್ಕಾಗಿ ನಿಮ್ಮೆಲ್ಲರಿಗೂ ಕೃತಜ್ಞತೆ ಸಲ್ಲಿಸುವೆ ಇದು ಎಲ್ಲ ಸಂಘಟನೆಗಳು ಸ್ಫೂರ್ತಿಯಾಗಲಿ ಇದರ ಅಡಿಯಲ್ಲಿ ನಿಮ್ಮ ಪ್ರತಿಭೆ ಸಾಮರ್ಥ್ಯ ಬೆಳವಣಿಗೆಗೆ ವೇದಿಕೆಯಾಗಲಿ ಎಂದು ಹಾರೈಸುವೆ.
ಇಂತಹ ಸಂಘಟನೆಗಳು ನನಗೆ ಅನಾರೋಗ್ಯ ಸಂದರ್ಭದಲ್ಲಿ ನೀಡಿದ ಆರ್ಥಿಕ ಸಹಾಯ ಕುಟುಂಬಕ್ಕೆ ನೀಡಿದ ಧೈರ್ಯ ಇವುಗಳೇ ನನಗೆ ಆರೋಗ್ಯ ಚೇತರಿಕೆ ನಂತರ ಈ ನಿಟ್ಟಿನಲ್ಲಿ ಮುಂದಾಗಲು ಪ್ರೇರೇಪಣೆ ನೀಡಿದವು ಎಂದು ಸ್ಮರಿಸಿ ಅವರೆಲ್ಲರಿಗೂ ಈ ವೇದಿಕೆಯ ಮೂಲಕ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು

ಬಳಗದ ಅಧ್ಯಕ್ಷರಾದ ಪಿ ಜೆ ರಾಜೇಂದ್ರ ಕಾರ್ಯದರ್ಶಿ ಮಂಜುನಾಥ್ ಸದಸ್ಯರಾದ ಶ್ರೀ ಸುರೇಶ್ ಸುತ್ತೂರು ಡಾ ಕೆ ವಿ ಯೋಗೀಶ್ ದೂರ ಉಮೇಶ್ ಮಹೇಶ್ ಜಗನ್ಮಾತೆ ಅಕ್ಕಾ ಮಹಾದೇವಿ, ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ಶರ್ಮಿಳಾ ಮೋಹನ್, ಮೈಸೂರು ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ ಆರ್ ಶಿವಕುಮಾರ್, ಮೈಸೂರು ಜಿಲ್ಲಾ ವೀರಶೈವ ಮಹಾಸಭಾ ನಿರ್ದೇಶಕರಾದ ಪರಮೇಶ್ ಮಾಸ್ಟರ್ ಬಿಳಿಕೆರೆ ಭಾಗ್ಯ ಬಿಡಗಲೂ ಸುನಂದಾ ಖಜಾಂಚಿ ಬಾಗಳಿ ಮಹೇಶ್ ಬಾನಹಳ್ಳಿ ಸಂತೋಷ್ ಗಜೇಂದ್ರ ದೇವನೂರು ಶಿಲ್ಪಾ,ನಂದೀಶ್ ಪ್ರಭು ಸ್ವಾಮಿ ಹರವೆ ಗಿರೀಶ್ ಮಂಜು ಪರಮಾಪುರ ಮಹೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು








