ಜಗತ್ತಿನ ನಂ.1 ಕ್ರೀಡೆ ಫುಟ್ಭಾಲ್…. ಈ ಕ್ರೀಡೆ ಹಿಂದಿನ ನಾವು-ನೀವು ಅರಿಯದ ರೋಚಕ ವಿಚಾರಗಳು ಏನೇನು?

ಜಗತ್ತಿನ ಅತ್ಯಂತ ಪುರಾತನ ಮತ್ತು ನಂಬರ್ 1 ಜನಪ್ರಿಯ ಕ್ರೀಡೆ ಫುಟ್‍ಬಾಲ್ ಅಥವಾ ಸಾಕರ್, ಕನ್ನಡದಲ್ಲಿ ಕಾಲ್ಚೆಂಡಾಟ! ಫುಟ್‍ಬಾಲ್ ಕ್ರೀಡೆಗೆ 3000ಕ್ಕೂ ಅಧಿಕ ವರ್ಷಗಳ ವೈಭವದ ಇತಿಹಾಸವಿದೆ! ಗತಕಾಲದಿಂದ ಯೂರೋಪಿನ ಬಹುತೇಕ ರಾಷ್ಟ್ರಗಳಲ್ಲಿ ದಿನಚರಿ ಆಟವಾಗಿ ಹುಟ್ಟಿಕೊಂಡಿದ್ದು ಕಾಲಕ್ರಮೇಣ ಬೃಹದಾಕಾರವಾಗಿ ಪ್ರಪಂಚದಾದ್ಯಂತ ಬೆಳೆದು ಇಂದಿನವರೆಗೂ ಅಳಿಯದೇ ಉಳಿದಿರುವಂಥ ಏಕೈಕ ಅಂತಾರಾಷ್ಟ್ರೀಯ ಕ್ರೀಡೆ. ಐರೋಪ್ಯದ ‘ಎಪಿಸ್ಕೊಸ್’ ಮತ್ತು ಗ್ರೀಸ್-ರೋಮ್‍ನ ‘ಹರ್ಪಾಸ್ಟಂ’ ಎಂಬ ಎರಡು ಆಟಗಳ ಮಿಲನದಿಂದಾದ ರೂಪಾಂತರವೆ ‘ಸಾಕರ್’!
1848ರಲ್ಲಿ ಫುಟ್ ಬಾಲ್‍ನ ಕ್ರೀಡಾಸಂಕೇತ ಮತ್ತು ನಿಯಮಾವಳಿ ರೂಪುಗೊಂಡು 1857ರಲ್ಲಿ ಶೆಫೀಲ್ಡ್ ಫುಟ್ಬಾಲ್ ಕಪ್ ಟೂರ್ನಮೆಂಟ್ ಪ್ರಾರಂಭವಾಯಿತು. 1863ರಲ್ಲಿ ಫುಟ್ಬಾಲ್ ಒಕ್ಕೂಟ ಅಸ್ತಿತ್ವಕ್ಕೆ ಬಂದು ಜಾಗತಿಕ ಫುಟ್ಬಾಲ್ ನೀತಿ-ಕಟ್ಟಳೆ ಜಾರಿಗೊಂಡಿತು. 1886ರಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್ ಮಂಡಳಿ ರಚನೆಗೊಂಡು ಐರಿಶ್, ಮ್ಯಾಂಚೆಸ್ಟರ್, ಸ್ಕಾಟ್ಲೆಂಡ್, ವೇಲ್ಸ್ ದೇಶಗಳ ಸಹಯೋಗದಲ್ಲಿ ಪ್ರಪಂಚದ ಅತ್ಯಂತ ಪುರಾತನವಾದ ‘ಎಫ್.ಎ.ಕಪ್’ ಫುಟ್ಬಾಲ್ ಪಂದ್ಯಾವಳಿ ಸ್ಥಾಪನೆಗೊಂಡಿತು. 1872ರಲ್ಲಿ ಸ್ಕಾಟ್ಲೆಂಡ್ ಮತ್ತು ಇಂಗ್ಲೆಂಡ್ ನಡುವೆ ನಡೆದ ಪಂದ್ಯವು ಅಧಿಕೃತವಾದ ‘ಪ್ರಪ್ರಥಮ ಅಂತಾರಾಷ್ಟ್ರೀಯ ಫುಟ್ಬಾಲ್ ಸ್ಫರ್ಧೆ’ ಎನಿಸಿ ಫುಟ್ಬಾಲ್ ಕ್ರೀಡಾ ಇತಿಹಾಸದ ಪುಟ ಸೇರಿತು. ಅಂದಿನಿಂದ ಇಂದಿನವರೆಗೆ ಪ್ರತಿವರ್ಷ ರಾಜ್ಯ, ರಾಷ್ಟ್ರ, ಅಂತರ್ರಾಷ್ಟ್ರ ಮಟ್ಟದ ಪ್ರತಿಯೊಂದು ಫುಟ್ಬಾಲ್ ಪಂದ್ಯವು ಪ್ರಪಂಚದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹುಟ್ಟುಹಾಕಿತು.
ಇದನ್ನೂ ಓದಿ: ಕಿಕ್ ಬಾಕ್ಸಿಂಗ್-ಬಾಕ್ಸಿಂಗ್ ನಲ್ಲಿ ಮಿಂಚುತ್ತಿರುವ ಸಿ.ಹೆಚ್.ಸ್ಪೂರ್ತಿ
1863ರಲ್ಲಿ ಇಂಗೆಂಡ್ನಲ್ಲಿ ಅಂತರ್ರಾಷ್ಟ್ರೀಯ ಫುಟ್ಬಾಲ್ ಒಕ್ಕೂಟ[ಪಿಫ] ಸ್ಥಾಪನೆಗೊಂಡಿತು. ಕಾಲಕ್ರಮೇಣ ದಶ ದಿಕ್ಕುಗಳಲ್ಲಿ ಹರಡಿ ಇಂದು 208 ದೇಶಗಳಲ್ಲಿ ಪ್ರಮುಖ ಕ್ರೀಡೆಯಾಗಿದೆ. 12.50 ಕೋಟಿ ಆಟಗಾರರಿದ್ದು, 250 ಕೋಟಿಗೂ ಹೆಚ್ಚು ಪ್ರೇಕ್ಷಕರನ್ನೂ 350 ಕೋಟಿಗೂ ಅಧಿಕ ಅಭಿಮಾನಿಗಳನ್ನೂ ಹೊಂದಿದೆ. ಪ್ರಪಂಚದಲ್ಲಿ ಅಂದಿನಿಂದ ಇಂದಿನವರೆಗೂ ನೂರಾರು ಬಗೆಯ ನೂತನ ಕ್ರೀಡೆಗಳು ಹುಟ್ಟಿಕೊಂಡರೂ ಫುಟ್ಬಾಲ್ ಪಂದ್ಯವು ಮಾತ್ರ ಇವತ್ತಿಗೂ ವಿಶ್ವದ ಅತ್ಯಂತ ಜನಪ್ರಿಯ ಹಾಗೂ ನಂಬರ್ ಒನ್ ಕ್ರೀಡೆಯಾಗಿ ಉಳಿದುಕೊಂಡಿದೆ! ಪ್ರತಿ 4 ವರ್ಷಕ್ಕೊಮ್ಮೆ ಜರುಗುವ ಫೀಫ ಫುಟ್ಬಾಲ್ ವಿಶ್ವಕಪ್ ಪಂದ್ಯಾವಳಿಗೆ ಸಾವಿರಾರು ಕೋಟಿ ಹಣದ ಖರ್ಚುವೆಚ್ಚ ತಗಲುತ್ತದೆ,
ಅದೇ ವೇಳೆ ಹತ್ತುಪಟ್ಟು ಆದಾಯವನ್ನು ಸಹ ಗಳಿಸಿಕೊಡುತ್ತದೆ. ಪ್ರತಿಯೊಂದು ಅಂತಾರಾಷ್ಟ್ರೀಯ ಅಥವ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯು ಕನಿಷ್ಠ 15 ದಿನಗಳ ಮತ್ತು ಗರಿಷ್ಠ 30 ದಿನಗಳ ಕಾಲ ಜರುಗಲಿದ್ದು ಪ್ರತಿಸಾರಿಯೂ ಹಲವಾರು ನೂತನ ವಿಶ್ವದಾಖಲೆ ಸೃಷ್ಟಿಯಾಗುತ್ತವೆ. ಅಭಿಮಾನಿಗಳಲ್ಲಿ ಕೆಲವರು ತಮ್ಮ ಆಸ್ತಿ ಮನೆ ಕಾರು ಹಣ ಪ್ರಾಣ ಕಳೆದುಕೊಂಡ ಅನೇಕ ಉದಾಹರಣೆ ಇದೆ. ಈ ಪಂದ್ಯಾವಳಿಗೆ 1998 ರಿಂದ ಈ ವರೆಗೆ ಎಂದಿನಂತಿದ್ದ ಒಟ್ಟು 32 ತಂಡಗಳು ಭಾಗವಹಿಸುತ್ತಿವೆ. ಮುಂಬರುವ 2026 ರ ಟೂರ್ನಿಗೆ 48 ತಂಡಗಳು ಭಾಗವಹಿಸುವಂತೆ ಈಗ ಇರುವ 32 ರಿಂದ ಸಂಖ್ಯೆಯನ್ನು 48ಕ್ಕೆ ಹೆಚ್ಚಿಸಲಾಗಿದೆ.
ಇದನ್ನೂ ಓದಿ: ಸ್ಕೀಯಿಂಗ್ ನಲ್ಲಿ ಭಾರತವನ್ನು ಪ್ರತಿನಿಧಿಸಲು ಸತತ ಪ್ರಯತ್ನದಲ್ಲಿರುವ ಕೊಡಗಿನ ಭವಾನಿ
ಭಾರತದ ಫುಟ್‍ಬಾಲ್ ಚರಿತ್ರೆ: 1898ರಿಂದ 1947ರವರೆಗೆ ಭಾರತದ ಅವಿಭಜಿತಬಂಗಾಳ, ಮಣಿಪುರ, ಗೋವ ಹಾಗೂ ಕೇರಳ ನಾಲ್ಕು ರಾಜ್ಯಗಳಲ್ಲಿ ಮಾತ್ರ ಫುಟ್ಬಾಲ್ ಕ್ರೀಡೆಯ ಪರಿಚಯ ಇತ್ತು. ಆದರೆ ಕ್ರಿಕೆಟ್ ಗೆ ಹೆಚ್ಚು ಅವಕಾಶ ನೀಡಿದ ಅಂದಿನ ಈಸ್ಟ್ ಇಂಡಿಯಾ ಕಂಪನಿಯ ಬ್ರಿಟಿಷ್ ಸರ್ಕಾರವು ಭಾರತದಲ್ಲಿ ಫುಟ್ಬಾಲ್ ಕ್ರೀಡೆಗೆ ಪ್ರೋತ್ಸಾಹ ಬೆಂಬಲ ನೀಡದೆ ಬೆಳೆಯದಂತೆ ಮಾಡಿತು. ಸ್ವಾತಂತ್ರ್ಯಾನಂತರ 1950ರ ದಶಕದಲ್ಲಿ ಫುಟ್ಬಾಲ್ ಕ್ರೀಡೆ ಸ್ವರ್ಣಯುಗ ಭಾರತದಲ್ಲೂ ಪ್ರಾರಂಭವಾಯ್ತು. ಭಾರತೀಯ ತಂಡವು ಸಯ್ಯದ್ ಅಬ್ದುಲ್ ರಹೀಂ ನಾಯಕತ್ವದಲ್ಲಿ ಏಷ್ಯನ್ ಕಪ್ ಕ್ರೀಡಾ ಕೂಟದಲ್ಲಿ ಇಂಡೋನೇಷ್ಯ ಮತ್ತು ಆಫ್ಘಾನಿಸ್ತಾನ್ ತಂಡಗಳನ್ನು ಸೋಲಿಸುವುದರ ಮೂಲಕ ಮೊದಲ ಬಾರಿ ಏಷ್ಯಾ ಕಪ್ ಗೆದ್ದುಕೊಂಡಿದ್ದು ಹೊಸ ಇತಿಹಾಸ.
1950ರಷ್ಟು ಹಿಂದೆಯೇ ಭಾರತ ತಂಡವು ಕ್ವಾಲಿಫೈ ಆಗಿದ್ದರೂ ಸಹ ಭಾರತೀಯ ಆಟಗಾರರು ಷೂ ಧರಿಸಿ ಅಥವ ಬರಿಗಾಲಲ್ಲಿ? ಆಡಬೇಕೋ ಬೇಡವೋ? ಎಂಬ ದ್ವಂದ್ವ ಜಿಜ್ಞಾಸೆ ಸಮಸ್ಯೆ ಬಗೆಹರಿಯದೆ ಇರುವುದರಿಂದ ಎಂದಿನಂತೆ ಈ ಪಂದ್ಯಾವಳಿಯಲ್ಲು ಆಡುವ ಅವಕಾಶದಿಂದ ವಂಚಿತರಾಗಿದ್ದಾರೆ. 1956ರ ಏಷ್ಯನ್ ಕಪ್ ಕ್ರೀಡಾಕೂಟದಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಪಂಚದ ಗಮನ ಸೆಳೆಯಿತು. 1966ರಲ್ಲಿ ಅಖಿಲ ಭಾರತ ಫುಟ್ಬಾಲ್ ಫೆಡರೇಶನ್ ಸಂಸ್ಥೆ ಗೋವಾದಲ್ಲಿ ನಡೆಸಿದ ನ್ಯಾಶನಲ್ ಫುಟ್ಬಾಲ್ ಲೀಗ್ ಟೂರ್ನಮೆಂಟ್ ಕ್ರೀಡಾಕೂಟದಿಂದಾಗಿ ವಿಶ್ವದ ಫುಟ್‍ಬಾಲ್ ಭೂಪಟದಲ್ಲಿ ಭಾರತವೂ ಕಾಣಿಸಿ ಕೊಳ್ಳುವಂತೆ ಮಾಡಿ, ಕೋಟಿ ಕೋಟಿ ಭಾರತೀಯರ ಮೆಚ್ಚುಗೆಯನ್ನು ಗಳಿಸಿತು.
ಆದರೆ 33 ವರ್ಷ ಅಜ್ಞಾತ ವಾಸದ ನಂತರ ಪುನಃ 2000ನೇ ಇಸವಿಯಲ್ಲಿ ಮರು ಜನ್ಮ ಪಡೆದು ಅಂದಿನಿಂದ ಈವರೆಗೂ ತನ್ನ ಜೈತ್ರ ಯಾತ್ರೆ ಮುಂದುವರೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. 2006ರಲ್ಲಿ ವಿದೇಶೀ ಆಟಗಾರ ಬಾಬ್ ಹೂಗ್ಟನ್ ಕೋಚ್‍ಆದ ನಂತರ ಭಾರತ ತಂಡವು ಪುನರ್‍ಚೇತನ ಕಂಡಿತು. ನೆಹರೂ ಕಪ್ ಫುಟ್ಬಾಲ್ ಪಂದ್ಯಾವಳಿ-2007ರಲ್ಲಿ ಪ್ರಥಮ ಬಾರಿಗೆ ಸಿರಿಯ ದೇಶವನ್ನು 1-0 ಗೋಲ್ ನಿಂದ ಪರಾಭವ ಗೊಳಿಸಿ ತನ್ನ ಚೊಚ್ಚಲ ಅಂತಾರಾಷ್ಟ್ರೀಯ ವಿಜಯದ ನವಯುಗಕ್ಕೆ ನಾಂದಿ ಹಾಡಿತು ಭಾರತ. ಇದೇ ಜೋಶ್ಅನ್ನು ಸತತ ಪರಿಶ್ರಮದಿಂದ ಮುಂದುವರೆಸಿದ್ದೇ ಆದರೆ 2026ರ ವಿಶ್ವಕಪ್ ಟೂರ್ನಿಗೆ ಭಾರತ ತಂಡದ ಆಯ್ಕೆ ನಿಖರ?! ಭಾರತೀಯರಾದ ನಾವು ಭಾರತ ತಂಡವು ಆಡುತ್ತಿಲ್ಲ ಎಂಬ ಅನಿವಾರ್ಯತೆ ನೋವನ್ನು ಮರೆತು ಎಲ್ಲ 29 ದಿನವೂ ಈ ಕ್ರೀಡೆಯನ್ನು ಕಣ್ತುಂಬಿ ಕೊಳ್ಳೋಣ! ಮುಂದಿನ 2026ರಲ್ಲಿ ಭಾಗವಹಿಸುವ 48 ತಂಡಗಳಲ್ಲಿ ಭಾರತ ತಂಡವೂ ಸಹ ಭಾಗವಹಿಸಲಿ ಎಂದು ದೇವರನ್ನು ಪ್ರಾರ್ಥಿಸೋಣ?
ಇದನ್ನೂ ಓದಿ: ದುಬಾರೆಯಲ್ಲಿ ರಿವರ್ ರಾಫ್ಟಿಂಗ್… ಭೋರ್ಗರೆದು ಹರಿಯುವ ಕಾವೇರಿ ನದಿಯಲ್ಲಿ ಸವಾರಿ
ಫುಟ್ಬಾಲ್ ಲೋಕದ ದಂತಕತೆ ದಿಗ್ಗಜರು : 1930-50 : ಸರ್ ಸ್ಟ್ಯಾನ್ಲಿಮ್ಯಾಥ್ಯೂಸ್, ರೈಟ್‍ವಿಂಗರ್ – ಇಂಗ್ಲೆಂಡ್ ತಂಡ, 1950-60 : ಲೆವ್‍ಯಶೀನ್, ಗೋಲ್‍ಕೀಪರ್ – ಡೈನಮೊಮಾಸ್ಕೊ ರಷ್ಯ ತಂಡ, 1950-60 : ಗಾರಿಂಚಾ, ರೈಟ್‍ವಿಂಗರ್ – ಬೊಟಫೊಗೊ+ಬ್ರೆಜಿಲ್ ತಂಡ, 1950-70 : ಪೀಲೇ, ಫಾರ್ವರ್ಡ್ – ಬ್ರೆಜಿಲ್+ಸ್ಯಾಂಟಾಸ್ ತಂಡ, 1950-70 : ಸರ್ ಬಾಬಿಚಾರಿಟಾನ್, ಎಟಿಟಿಮಾಡಿಫಯರ್ – ಇಂಗ್ಲೆಂಡ್+ಮ್ಯಾನ್‍ಯುಟಿಡಿ ತಂಡ, 1950-55 : ಫೆರಿಕ್‍ಪುಸ್ಕಾಸ್, ಫಾರ್ವರ್ಡ್ – ಹಾನ್ವೆಡ್[ರಿಯಲ್‍ಮ್ಯಾಡ್ರಿಡ್]+ಹಂಗರಿ ತಂಡ, 1950-55: ಆಲ್‍ಫ್ರೆಡೊ.ಡಿ.ಸ್ಟಿಫಾನೊ ಆಲ್ರೌಂಡರ್ – ರಿಯಲ್‍ಮ್ಯಾಡ್ರಿಡ್+ ಸ್ಪೇನ್ ತಂಡ, 1960-65: ಇಸಾಬಿಯೊ, ಸ್ಟ್ರೈಕರ್ – ಪೋರ್ಚುಗಲ್+ ಬೆನಿಫಿಕಾ ತಂಡ, 1960-70: ಜಾರ್ಜ್‍ಬೆಸ್ಟ್, ರೈಟ್- ಲೆಫ್ಟ್‍ವಿಂಗರ್ – ಉ.ಕೊರಿಯಾ+ ಮ್ಯಾನ್‍ಯುಟಿಡಿ ತಂಡ, 1960-70: ಫ್ರಾಂಚ್‍ಬೆಕೆನ್, ಸ್ವೀಪರ್ – ಪ.ಜರ್ಮನಿ+ಬೈರನ್ ಮ್ಯೂನಿಚ್ ತಂಡ, 1970-75: ಜೋಹಾನ್‍ಕ್ರಿಫ್, ಫಾರ್ವರ್ಡ್ – ನೆದರ್‍ಲ್ಯಾಂಡ್+ ಬಾರ್ಸಲೋನ ತಂಡ, 1970-80: ಮೈಕೆಲ್‍ಪ್ಲಾಟಿನಿ, ಮಿಡ್‍ಫೀಲ್ಡರ್ – ಫ್ರಾನ್ಸ್+ ಜ್ಯುವೆಂಟಸ್ ತಂಡ, 1980-90: ಡಿಯಾಗೋ ಮೆರಡೋನ, ಮಿಡ್‍ಫೀಲ್ಡರ್ – ಅರ್ಜೆಂಟಿನ+ ಬಾರ್ಸಲೋನ ತಂಡ.
1990-2000:ರೊನಾಲ್ಡೊ,ಸ್ಟ್ರೈಕರ್-ಬ್ರೆಜಿಲ್+ಬಾರ್ಕಾ ತಂಡ, 1990-2000: ಜೆನೆಡಿನ್‍ಜಿಡಾನೆ, ಮಿಡ್‍ಫೀಲ್ಡರ್ – ಫ್ರಾನ್ಸ್+ಜ್ಯುವೆಂಟಿಸ್ ತಂಡ, 2000-2010: ಲಯನ್‍ಮೆಸ್ಸಿ, ರೈಟ್‍ವಿಂಗರ್/ಫಾರ್ವರ್ಡ್ – ಅರ್ಜೆಂಟಿನ+ ಬಾರ್ಸಲೋನ ತಂಡ, 2000-2020: ಡಿಯೆಗೊಫೋರ್ಲಾನ್‍ಕೊರಝೊ, ಫಾರ್ವರ್ಡ್- ಉರುಗ್ವೆ+ ಯೂರೋಪ್ ತಂಡ, 2000-2020: ಮಿರೊಸ್ಲವ್‍ಕ್ಲೋಸ್, ಸ್ಟ್ರೈಕರ್–ಜರ್ಮನಿ ತಂಡ
Top level sports article with lot of true information thanks sir
Top level sports article with lot of true information thanks sir
Football sports article is extraordinary one
Fantastic article about WORLD CUP SOCCER’S FOOTBALL
ಫುಟ್‍ಬಾಲ್‍ನ ಅದರಲ್ಲೂ ವಿಶ್ವಕಪ್ ಫುಟ್‍ಬಾಲ್‍ನ ಆಟದ ಬಗ್ಗೆ ಸೂಕ್ತ ಮತ್ತು ಸರಿಯಾದ ಮಾಹಿತಿಯ ಅಂಕಿ-ಅಂಶ ನೀಡಿ ಸುಂದರವಾಗಿ ಬರೆದಿರುವ ಉತ್ತಮ ಲೇಖನ, ಎಲ್ಲರಿಗೂ ಧನ್ಯವಾದ
Very much appreciated and informative article about WORLD CUP FOOTBALL SOCCER SPORTS. Thanks a lot 🙏 for author and (publisher) publishing electronic media JANAMANA KANNADA, KARNATAKA
Extraordinary and exciting article about WORLD CUP FOOTBALL
Extraordinary and exciting article about WORLD CUP soccer ⚽️ 🙌 👏 👌 😀 😎 ⚽️