ಕೃಷ್ಣಹರೇ..ಕೃಷ್ಣಹರೇ..ಜೈಜೈಜೈಜೈ ಕೃಷ್ಣಹರೇ.. ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಹೇಗೆ? ಏನೇನು ವಿಶೇಷತೆ?

ಈ ಬಾರಿ ಆಗಸ್ಟ್ 16, 2025ರಂದು ಗೋಕುಲಾಷ್ಠಮಿಯನ್ನು ಆಚರಿಸಲಾಗುತ್ತಿದ್ದು, ಎಲ್ಲೆಡೆ ಸಂಭ್ರಮ ಮನೆಮಾಡಿದೆ. ಶ್ರಾವಣ ಮಾಸದ ಹುಣ್ಣಿಮೆ ನಂತರ 8ನೇ ದಿನ ಮಧ್ಯರಾತ್ರಿಯಲ್ಲಿ ಶ್ರೀಕೃಷ್ಣನು ಜನಿಸಿದ ಪ್ರಯುಕ್ತ ಈ ಶುಭ ಮುಹೂರ್ತದಂದು ಆಚರಿಸುತ್ತಾರೆ “ಗೋಕುಲಾಷ್ಟಮಿ” ಜಯಂತ್ಯುತ್ಸವ. ವಿಷ್ಣುವಿನ 8ನೇಅವತಾರ ಶ್ರೀಕೃಷ್ಣನು ಜನಿಸಿದ ಪ್ರಯುಕ್ತ ಗೋಕುಲಾಷ್ಟಮಿ. ಅನೇಕ ಶತಮಾನದಿಂದ ಪ್ರತಿವರ್ಷವೂ ಭಾರತದಲ್ಲಿ ಎಲ್ಲರೂ ಆಚರಿಸಲ್ಪಡುವ ಸನಾತನ ಹಬ್ಬ! ವಿಶೇಷವಾಗಿ ಅಯ್ಯಂಗಾರ್ ಹೆಂಗೆಳೆಯರು ಅಡಿಯಿಂದ ಮುಡಿವರೆಗೆ ವಸ್ತ್ರಾಭರಣಗಳಿಂದ ಅಲಂಕಾರ ಮಾಡಿಕೊಂಡು ಶ್ರದ್ಧಾಭಕ್ತಿಯಿಂದ ಶ್ರೀಕೃಷ್ಣನ ಜಯಂತ್ಯುತ್ಸವ ಆಚರಿಸುವ ಸಂಭ್ರಮ!
ಇದನ್ನೂ ಓದಿ: ದಕ್ಕಿಣ ಕೊಡಗಿನ ಹಾತೂರಿನ ವನಭದ್ರಕಾಳೇಶ್ವರಿ ಇಲ್ಲಿನ ವಿಶೇಷತೆಗಳೇನು?
ಪೂಜಾಮಂಟಪದಿಂದ ಮುಂಬಾಗಿಲವರೆಗೆ ಬಾಲಕೃಷ್ಣನ ಪುಟ್ಟಪಾದ ರಂಗೋಲಿಯಿಂದ ಬಿಡಿಸಿ ಸಾಕ್ಷಾತ್ ಕೃಷ್ಣನೇ ಮನೆಯೊಳಗೆ ಬಂದಂಥ ಭಕ್ತಿಭಾವ ತರಿಸುವುದು! ವರ್ಣರಂಜಿತ ಹೂವು-ದೀಪಗಳ ಅಲಂಕಾರ, ಹಣ್ಣು ಬೆಣ್ಣೆ ತಿಂಡಿ ಹಾಲೋಗರ ಪಂಚಾಮೃತ ನೈವೇದ್ಯ ರುಚಿಕರ ತೀರ್ಥ ಪ್ರಸಾದ ಉಣ್ಣಲು ಚಿಣ್ಣರಿಗೆ ಉತ್ಸಾಹ! ಬಂಧುಮಿತ್ರರ ಜತೆಗೆ, ಜಾತಿಮತ ಭೇದ ಇಲ್ಲದೆ ನೆರೆಹೊರೆ ಯವರನ್ನೂ ಅಪರಿಚಿತರನ್ನೂ ಆಹ್ವಾನಿಸಿ ಸತ್ಕರಿಸುವ ಸಡಗರ. ಇಸ್ಕಾನ್ ಸೇರಿದಂತೆ ದೇಶದ ಎಲ್ಲ ಶ್ರಿಕೃಷ್ಣ ಮಂದಿರಗಳಲ್ಲಿ ಉಪನ್ಯಾಸಭಜನೆ, ನೃತ್ಯಗಾಯನ, ಹಾಸ್ಯಲಾಸ್ಯ, ಗೀತಸಂಗೀತ, ಹರಿಕಥೆ ಕೀರ್ತನೆ ನಾಟಕ ಪಾರಾಯಣ ಮಕ್ಕಳ ವೇಷಭೂಷಣ ಮುಂತಾದ ಮನರಂಜನೀಯ ಕಾರ್ಯಕ್ರಮ ಪ್ರತಿಗಂಟೆಗೂ ಬಗೆಬಗೆಯ ರುಚಿಕರ ಪ್ರಸಾದ ವಿನಿಯೋಗ ದಿನವಿಡೀ ಇದ್ದು ಅದ್ಧೂರಿ ಆಚರಣೆ ನಿರಂತರ ಸಾಗುತ್ತದೆ.
ದುಃಖದುಮ್ಮಾನ ಉಪಶಮನಕ್ಕೆ, ಶಾಂತಿಪ್ರೀತಿ ಗಳಿಸಲಿಕ್ಕೆ ಜಗದೋದ್ಧಾರನ ಜಪಿಸಲು ಮುಗಿ ಬೀಳುವರು. ನೆಮ್ಮದಿ ಅರಸಿ ಆಪತ್ಭಾಂಧವನ ಬಳಿಬರುವರು. ವಿವಾಹಯೋಗ್ಯ ಯುವಕ ಯುವತಿಯರು ಬಾಳಸಂಗಾತಿಯನ್ನು ಆಯ್ಕೆಮಾಡಿಕೊಳ್ಳುವ ಕಾತುರದಿಂದಲೋ ಪರಸ್ಪರ ಆಕರ್ಷಣೆಗೋಸ್ಕರವೋ ತಪ್ಪದೇ ಭಾಗವಹಿಸಿದರೆ, ರಾಜಕಾರಣಿಗಳು ವೋಟ್‍ಬ್ಯಾಂಕ್ ಉದ್ದೇಶದಿಂದ ಭಾಗ ವಹಿಸುವರು?! ಉತ್ತರಭಾರತದಲ್ಲಿ ಮಂತ್ರಿ ನಟನಟಿಯರನ್ನ ಆಮಂತ್ರಿಸಿ ಸಂಗೀತ ವಿದ್ವಾಂಸರ ಕಛೇರಿ ಏರ್ಪಡಿಸಿ ಅನ್ನವಸ್ತ್ರ ಇತ್ಯಾದಿ ದಾನಮಾಡಿ ವೈಭವದಿಂದ ಆಚರಿಸುತ್ತಾರೆ.
ಇದನ್ನೂ ಓದಿ:ಚಾಮುಂಡಿಬೆಟ್ಟದಲ್ಲೀಗ ಹಿಮಮಳೆ… ನೀವೇಕೆ ಒಮ್ಮೆ ಹಿಮದ ಮಳೆಯಲ್ಲಿ ಮಿಂದೇಳಬಾರದು?
ಒಮ್ಮೊಮ್ಮೆ ವೈರಾಗ್ಯ ಉಂಟಾದಾಗ ಕೇಳಿಬರುವ ಮಾತು “ನೀ ಸೂತ್ರಧಾರಿ, ನಾ ಪಾತ್ರಧಾರಿ” ಡಿ.ವಿ.ಜಿ. ಮಂಕುತಿಮ್ಮನ ಕಗ್ಗದ ಬದುಕು ಜಟಕಾಬಂಡಿ, ನಾಕುದುರೆ, ವಿಧಿಅದರಸಾಹೇಬ, ಮದುವೆಗೊ ಮಸಣಕೊ ಹೋಗೆಂದೆಡೆ ಸಾಗುವೆ” ಎಂಬುದು. ಇವೆಲ್ಲಕ್ಕೂ ಮಿಗಿಲಾಗಿ *ಭಗವದ್ಗೀತೆಯ:- ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ|ಮಾಕರ್ಮ ಫಲಹೇತುರ್ಭೂರ್ಮಾ ತೇ ಸಂಗೋಸ್ತ್ವಕರ್ಮಣಿ| (ನಿನಗೆ ಕರ್ಮ ಮಾಡುವುದರಲ್ಲಿ ಮಾತ್ರ ಅಧಿಕಾರವಿದೆ, ಅದರ ಫಲಾಫಲಗಳಲ್ಲಿ ಎಂದಿಗೂಇಲ್ಲ. ನೀನು ಕರ್ಮಗಳ ಫಲಕ್ಕೆ ಕಾರಣನಾಗಬೇಡ ಕರ್ಮ ಮಾಡುವುದನ್ನು ನಿಲ್ಲಿಸಬೇಡ) ಈ ನಂಬಿಕೆಯನ್ನು ಶ್ರೀ ಸಾಮಾನ್ಯನ ಮನಸ್ಸಿನಿಂದ ಹೋಗಲಾಡಿಸಲು ಅಸಾಧ್ಯ? ಆದ್ದರಿಂದ ಇಡೀಜಗತ್ತಿಗೆ ಮಾನ್ಯ ಕೃಷ್ಣಜನ್ಮಭೂಮಿ, ಈಲೋಕಕ್ಕೇ ಧನ್ಯ ಕೃಷ್ಣನಭಕ್ತರು.
ವಿಷ್ಣುನ 8ನೇ ಅವತಾರದ ಶ್ರೀಕೃಷ್ಣನು ದ್ವಾಪರ ಯುಗದಲ್ಲಿ ದ್ವಾರಕಾಪುರಿಯ ದೇವಕಿ-ವಸುದೇವನ ಅಷ್ಟಮ ಕಂದನಾಗಿ ಸೆರೆಮನೆಯಲ್ಲಿ ಜನ್ಮತಳೆದು ಮಥುರಾನಗರದ ಯಶೋಧ- ನಂದಗೋಪನ ಸಾಕುಮಗನಾಗಿ ಬೆಳೆಯುತ್ತಾನೆ. ಬಾಲಕೃಷ್ಣನ ಬಾಲ್ಯದ ಕು-ಚೇಷ್ಠೆಗಳು ಅಸಾಮಾನ್ಯದ್ದು. ಬೆಣ್ಣೆಯ ಕಳ್ಳತನ, ಬಾಯಲ್ಲಿ ವಿಶ್ವದರ್ಶನ, ಗೋಪಿಕಾಸ್ತ್ರೀ ವಸ್ತ್ರಾಪಹರಣ, ಕಾಳಿಂಗ ಮರ್ಧನ, ಕಂಸನ ವಧೆ, ಪೂತನಿಯ ಸಂಹಾರ, ಗೋವರ್ಧನ ಗಿರಿಯನ್ನು ಬೆರಳಲ್ಲಿ ಎತ್ತಿದ್ದು, ಮುಂತಾದ ಮಹೋನ್ನತ ಕಾರ್ಯಗಳು ಎಳೆವಯಸ್ಸಿಗೆ ಮೀರಿದ ಸಾಧನೆ. ಹಾಗಾಗಿ ಅತ್ಯಂತ ಧೀರ-ವೀರ-ಶೂರ ಬಾಲಕನು ಎನಿಸಿ ಜನಪ್ರಿಯ ಆಗುವನು.
ಕಾಲಕ್ರಮೇಣ ಕೃಷ್ಣಲೀಲೆ ಹಾಡಿ ಹೊಗಳುವ ಅಭಿಮಾನಿ ಭಕ್ತರ ಜತೆಗೇ (ಹಿತ)ಶತ್ರುಗಳೂ ಹುಟ್ಟಿಕೊಳ್ಳುತ್ತಾರೆ ಒಟ್ಟಾರೆ, ಶ್ರೀಕೃಷ್ಣನ ಬಾಲ್ಯ ಜೀವನವು ನ ಭೂತೋಃ ನ ಭವಿಷ್ಯತೀಃ ಎಂಬ ಪುರಾಣವನ್ನು ಸಾರುತ್ತದೆ! 16000 ಗೋಪಿಕಾಸ್ತ್ರೀಯರ ಪ್ರಿಯಕರ ನಾದರೂ ರುಕ್ಮಿಣಿಯ ದೃಷ್ಟಾಂತದಿಂದ ಅಪಹರಣದ ವಿವಾಹವು ತಪ್ಪಲ್ಲ ಎಂದು ಪ್ರತಿಪಾದಿಸುವ ಶ್ರೀಕೃಷ್ಣನ ವಾದ: “ತಾನು ಪ್ರೀತಿಸಿದವರಿಗಿಂತ ತನ್ನನ್ನು ಪ್ರೀತಿಸಿದವರನ್ನು ಮದುವೆಯಾಗುವುದು ಲೇಸು, ಅದರಿಂದ ದಾಂಪತ್ಯ ಜೀವನವು ಸುಖಮಯವಾಗುತ್ತದೆ” ಈ ಕಾರಣದಿಂದ ಪಾರ್ಥನು ಸುಭದ್ರೆಯನ್ನು ಅಪಹರಿಸಿ ವಿವಾಹವಾಗಲು ಆಕೆಯ ಅಣ್ಣ ಶ್ರೀಕೃಷ್ಣ ನೆರವಾಗುತ್ತಾನೆ.
ಇದನ್ನೂ ಓದಿ: ಪುರದಕಟ್ಟೆ ಚಿಕ್ಕದೇವಮ್ಮ… ಸುಂದರ ಪರಿಸರದಲ್ಲಿ ನೆಲೆನಿಂತ ತಾಯಿಗೆ ನಮೋ ಎನ್ನೋಣ
ಸತ್ಯಭಾಮ ಮೂಲಕ ಪ್ರೇಮಕ್ಕಿಂತ ಭಕ್ತಿಯೇ ಶ್ರೇಷ್ಠ ಎಂಬುದನ್ನು ಶ್ರೀಕೃಷ್ಣ ತುಲಾಭಾರ ಘಟನೆಯಿಂದ ಜಗತ್ತಿಗೆ ತೋರಿಸುತ್ತಾನೆ. ನಂಬಿದವರ ಕೈಬಿಡುವುದಿಲ್ಲ ಎಂಬುದನ್ನು “ಪಾಂಚಾಲಿಯ ಮಾನಹರಣ” ಸಂದರ್ಭದಲ್ಲಿ ವಸ್ತ್ರವನ್ನು ನೀಡುವುದರ ಮೂಲಕ ಮತ್ತು ಹಸಿದು ಬಂದ ಋಷಿಗಳಿಗೆ ‘ಅಕ್ಷಯಪಾತ್ರೆ’ ಮೂಲಕ ‘ಭಕ್ತರೆಲ್ಲೊ ಭಗವಂತನೂ ಅಲ್ಲೆ’ ಎಂಬುದನ್ನು ಸಾಬೀತು ಪಡಿಸುತ್ತಾನೆ. ಶ್ರೀವಿನಾಯಕ ಚೌತಿ ಯಂದು ಚಂದ್ರದರ್ಶನ ಮಾಡಿದ ತಪ್ಪಿಗೆ ಶಮಂತಕಮಣಿಯ ಕಳ್ಳನೆಂಬ ಅಪವಾದಕ್ಕೆ ಗುರಿಯಾಗುತ್ತಾನೆ. ಪುನಃ ಶ್ರೀಗಣೇಶನ ಕೃಪಾಶೀರ್ವಾದದಿಂದ ಶಮಂತಕಮಣಿ ಮತ್ತು ಜಾಂಭವತಿಯನ್ನು ಪಡೆವ ಘಟನೆ ದೇವ ಮತ್ತು ಅವತಾರ ಪುರುಷ ನಡುವಣದ ಶಕ್ತಿ-ಯುಕ್ತಿಗಳ ವಸ್ತುನಿಷ್ಠೆಯನ್ನು ರುಜುವಾತು ಪಡಿಸುತ್ತಾನೆ!
ಶ್ರೀಕೃಷ್ಣನು 64 ವಿದ್ಯಾ ಪಾರಂಗತ, ನವರಸ ನಾಯಕ, ಸಮಾಜಶಾಸ್ತ್ರದಷ್ಟೆ ಶೃಂಗಾರಶಾಸ್ತ್ರಕ್ಕೂ ಪ್ರಾಶಸ್ತ್ಯ ನೀಡಿದ್ದಾನೆ. ಸಮಾಜೋದ್ಧಾರದಷ್ಟೆ ದಾಂಪತ್ಯೋದ್ಧಾರವು ಪ್ರಮುಖಾಂಶ ಎಂಬ ಸಹಜಪ್ರಜ್ಞೆ ಪ್ರತಿಪಾದಿಸಿ, ಜನನ ಪ್ರಕ್ರಿಯೆಗೆ ಶೃಂಗಾರವೂ ಅವಶ್ಯವೆಂಬುದನ್ನು ರುಜುವಾತುಪಡಿಸಿದ್ದಾನೆ. ಸಂತಾನದ ಬಗ್ಗೆ ಗಂಡಹೆಂಡಿರಲ್ಲಿ ಇರಬೇಕಾದ ಜ್ಞಾನ, ಜಾಣ್ಮೆ, ತಾಳ್ಮೆ ಮುಂತಾದ ಸಾಮಾನ್ಯ ತಿಳುವಳಿಕೆ ಬಗ್ಗೆ ಸರಳವಾಗಿ ವಿವರಿಸಿದ್ದಾನೆ. ಕುಟುಂಬದಲ್ಲಿ ಇರಬೇಕಾದ ಪ್ರೇಮ-ಕಾಮ, ಪ್ರೀತಿ-ವಾತ್ಸಲ್ಯ, ಕೋಪ-ತಾಪ, ದ್ವೇಷ-ಅಸೂಯೆ, ಕಾಯಕ-ಕರ್ತವ್ಯ, ಬದ್ಧತೆ-ಪ್ರಾಮಾಣಿಕತೆ ಬಗ್ಗೆಯೂ ಹೇಳಿದ್ದಾನೆ.
ಪ್ರತಿಯೊಬ್ಬರೂ ವ್ಯಕ್ತಿಗತ ಏಕತಾನಕ್ಕೆ ನೀಡುವಷ್ಟೆ ಮಹತ್ವ ಸಾಮೂಹಿಕ ಬಹುತಾನಕ್ಕೂ ನೀಡುವಂತೆ ಮಾರ್ಗದರ್ಶನ ಮಾಡಿದ್ದಾನೆ. ನಿಸ್ವಾರ್ಥದ ಬಗ್ಗೆ ಮನವರಿಕೆ ಮಾಡಿಕೊಡಲು ಪವಾಡಗಳನ್ನು ಪ್ರದರ್ಶಿಸಿದ್ದಾನೆ. ಕಷ್ಟ-ನಷ್ಟಗಳು ಪ್ರಾಪ್ತವಾದಾಗ ಧೃತಿಗೆಡಬೇಡಿರೆಂದು ಸಾಂತ್ವನ ಹೇಳುತ್ತಾನೆ ಹೀಗೆ : “ಒಂದನ್ನು ಗಳಿಸಿಕೊಳ್ಳಬೇಕಾದರೆ ಇನ್ನೊಂದನ್ನು ಕಳೆದುಕೊಳ್ಳಲೇಬೇಕು. ಶರೀರವನ್ನು ಉಳಿಸಿ ಕೊಳ್ಳಬೇಕಾದರೆ ಬೆರಳನ್ನು ಕಳೆದುಕೊಳ್ಳಬೇಕಾಗುತ್ತದೆ ಮತ್ತು ಸಮಾಜವನ್ನು ಉಳಿಸಿಕೊಳ್ಳಬೇಕಾದರೆ ಕುಟುಂಬ ವನ್ನು ಕಳೆದುಕೊಳ್ಳಲೇ ಬೇಕಾಗುತ್ತದೆ” [ಶ್ರೀಕೃಷ್ಣವಚನಾಮೃತ]
ಇದನ್ನೂ ಓದಿ: ನಿಸರ್ಗದ ಸೂಜಿಗ ತಾಣ ಹಿಮವದ್ ಗೋಪಾಲಸ್ವಾಮಿ ಬೆಟ್ಟ…
ಮಹಾಭಾರತದ ಕೃಷ್ಣ ತನ್ನದೇಆದ ಷಡ್ಯಂತ್ರ ರೂಪಿಸಿ ಶಕುನಿ ಮೂಲಕ ಪಾಂಡವರಿಗೆ 12ವರ್ಷ ವನವಾಸ, 1ವರ್ಷ ಅಜ್ಞಾತವಾಸದ ಶಿಕ್ಷಾವಧಿಯಲ್ಲಿ ಧರ್ಮರಾಯನನ್ನು ಮನೆಗೆಲಸದವನನ್ನಾಗಿಸಿ, ಭೀಮನನ್ನು ಅಡುಗೆಭಟ್ಟನನ್ನಾಗಿಸಿ, ಗಾಂಢೀವಿಯನ್ನು ಬೃಹನ್ನಳೆಯನ್ನಾಗಿಸಿ, ನಕುಲ-ಸಹದೇವರನ್ನು ದನಗಾಹಿಗಳನ್ನಾಗಿಸುತ್ತಾನೆ. ಕಪಟನಾಟಕ ಸೂತ್ರಧಾರಿ ಶ್ರೀಕೃಷ್ಣಸಂಧಾನ ವಿಫಲಗೊಳಿಸಿ ಕುರುಕ್ಷೇತ್ರ ರಣರಂಗದಲ್ಲಿ ಯುದಿಷ್ಠಿರನಿಂದ ಎಂದು ಸುಳ್ಳು ಹೇಳಿಸಿದಂತೆ ಮಾಡುತ್ತಾನೆ.
ಕರ್ಣನ ವಜ್ರಕವಚ-ಕುಂಡಲಗಳನ್ನು ಇಂದ್ರನ ಮೂಲಕ ಕಸಿದು, ಕುಂತಿಯಿಂದ ಜನ್ಮರಹಸ್ಯ ಬಹಿರಂಗಗೊಳಿಸಿ ‘ತೊಟ್ಟಬಾಣ ತೊಡಬೇಡ ಇಟ್ಟಗುರಿ ಇಡಬೇಡ’ ಎಂಬ ವಚನ ಪಡೆದು, ದಾನಶೂರಕರ್ಣನ ಮನೋಸ್ಥೈರ್ಯ ದುರ್ಬಲಗೊಳಿಸಿ, ಭೀಷ್ಮನನ್ನು ಶರಮಂಚದಲ್ಲಿ, ದ್ರೋಣಾಚಾರ್ಯನ ತುಂಡರಿಸಿ, ಅಶ್ವತ್ಥಾಮನಿಂದ ಉಪಪಾಂಡವರ ಹತ್ಯೆಗೈಸಿ, ಚಕ್ರವ್ಯೂಹದಲಿ ಅಭಿಮನ್ಯು ಸಿಲುಕಿಸಿ, ಧೃತರಾಷ್ಟ್ರನಿಂದ ಭೀಮನನ್ನು ಬಚಾವ್ ಮಾಡಲು ಉಕ್ಕಿನಪುತ್ಥಳಿ ಪುಡಿಗೈಸಿ ಪಾರ್ಥನಿಗೆ ಸಾರಥಿಯಾಗಿ ‘ವಿರಾಟ್ ದರ್ಶನ’ ಮೂಲಕ ದುಷ್ಟಶಿಕ್ಷಕ ಶಿಷ್ಟರಕ್ಷಕ ಎಂದು ಕೊಂಡಾಡಿಸಿಕೊಳ್ಳುತ್ತಾನೆ.
ಇದನ್ನೂ ಓದಿ: ಭಕ್ತರ ಇಷ್ಟಾರ್ಥ ನೆರವೇರಿಸುವ ಚಾಮುಂಡಿಬೆಟ್ಟದ ತಾಯಿಗೆ ನಮೋ ಎನ್ನಿ…
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ; ಅಭ್ಯುತ್ಥಾನಂ ಅಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ.. (ಹೇ ಅರ್ಜುನನೇ ಯಾವಯಾವ ಕಾಲದಲ್ಲಿ ಧರ್ಮದ ಹಾನಿ ಮತ್ತು ಅಧರ್ಮದ ವೃದ್ಧಿಯಾಗುವುದೋ ಆವಾಗಲೆಲ್ಲಾ ನಾನು ನನ್ನ ಸ್ವರೂಪವನ್ನು ರಚಿಸುತ್ತೇನೆ, ಜನರ ಮುಂದೆ ಪ್ರಕಟವಾಗುತ್ತೇನೆ) ಪರಿತ್ರಾಣಾಯ ಸಾಧೂನಾಂ ವಿನಾಶಾಯಚ ದುಷ್ಕೃತಾಂ ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ (ಸಾಧು ಪುರುಷರನ್ನು ಉದ್ಧಾರ ಮಾಡುವುದಕ್ಕಾಗಿ ಪಾಪಿಗಳನ್ನು ವಿನಾಶಪಡಿಸಲಿಕ್ಕಾಗಿ ಹಾಗೂ ಧರ್ಮವನ್ನು ಪುನರ್ ಸ್ಥಾಪಿಸುವುದಕ್ಕಾಗಿ ಯುಗಯುಗಗಳಲ್ಲಿ ನಾನು ಪ್ರಕಟವಾಗುತ್ತೇನೆ)
ಧರ್ಮಕರ್ಮ, ಸತ್ಯಾಸತ್ಯ, ನ್ಯಾಯನೀತಿ, ಸಾವುಬದುಕು, ಜಯಾಪಜಯ, ಪಾಪಪುಣ್ಯ, ಮುಂತಾದವುಗಳನ್ನು ವಿವರಿಸುತ್ತ ದಶಾವತಾರ ನೀತಿ ಸಂಹಿತೆಯನ್ನು ಬೋಧಿಸುತ್ತ ‘ಗೀತೋಪದೇಷ’ ಮೂಲಕ ಗೀತಾಚಾರ್ಯನೆಂಬ ಬಿರುದು ಪಡೆಯುತ್ತಾನೆ. ಪಾಂಡವರಿಂದ ಅಶ್ವಮೇಧಯಾಗ ಮೂಲಕ ಅರ್ಜುನನ ದುರಹಂಕಾರವನ್ನ ಅವನಮಗ ಬಭ್ರುವಾಹನ ನಿಂದಲೆ ಬಗ್ಗು ಬಡಿಸುತ್ತಾನೆ. ಪಾಂಡವರಿಗೆ ದಿಕ್ಕುದೆಸೆ, ಮತಿಗತಿ ಶ್ರೀಕೃಷ್ಣನೇ ಎಂಬುದನ್ನು ಪದೇಪದೇ ನೆನಪಿಸುತ್ತಾನೆ. ತ್ರೇತಾ ಯುಗದಲ್ಲಿ ವಾಲಿಯನ್ನು ಕೊಂದು, ಶಾಪಗ್ರಸ್ಥನಾದ ಕೋದಂಡ ರಾಮನು ತನ್ನ ಶಾಪ ವಿಮೋಚನೆಗಾಗಿ ದ್ವಾಪರ ಯುಗದಲ್ಲಿ ಶ್ರೀಕೃಷ್ಣನಾಗಿ ಅವತರಿಸಿ, ಅಣ್ಣ ಬಲರಾಮನಿಗೆ ಸಾಮ್ರಾಜ್ಯ ಆಳುವ ಉಸ್ತುವಾರಿ ನೀಡುತ್ತಾನೆ.
ಮುನಿಯ ಶಾಪದಿಂದಾಗಿ ಉದ್ಭವಿಸಿದ ಯಾದವೀ ಕಲಹದಿಂದಾಗಿ ಇಡೀ ಯದುಕುಲ ಸರ್ವನಾಶವಾಗುತ್ತದೆ. ಇದೇ ಚಿಂತೆಯಲ್ಲಿ ಕೃಷ್ಣನು ಸಮುದ್ರ ತೀರದ ವಿಶ್ರಾಂತಿಯಲ್ಲಿ ಇದ್ದಾಗ ಬೇಡನ(ವಾಲಿಯ ಪುನರ್ಜನ್ಮ) ಶಬ್ಧವೇದಿಬಾಣ ತನ್ನಪಾದಕ್ಕೆ ಚುಚ್ಚಿದಾಗ ತ್ರಿಕಾಲಜ್ಞಾನಿ ಮುರಳಿ ಲೋಲನ ಅಂತ್ಯವಾಗುತ್ತದೆ. ಈರೀತಿ ವಿಷ್ಣುವಿನ ಕೃಷ್ಣಾವತಾರದ ಅಂತ್ಯವಾಗುವುದರೊಡನೆ ದ್ವಾಪರಯುಗವುಸಹ ಪರ್ಯಾವಸಾನ ಆಗುತ್ತದೆ?!
ಇದನ್ನೂ ಓದಿ:ಚಾಮರಾಜನಗರದ ಕರಿವರದರಾಜ ಸ್ವಾಮಿಬೆಟ್ಟಕ್ಕೆ ಬನ್ನಿ… ಇಲ್ಲಿ ಮನಶಾಂತಿ ಖಚಿತ!
ಅಂದು ಹಿಪ್ಪೀ ಸಂಸ್ಕೃತಿ ಯಿಂದ ಸ್ಫೂರ್ತಿಗೊಂಡ ಬಾಲಿವುಡ್ ಖ್ಯಾತನಟ ದೇವಾನಂದ್ “ಹರೇ ರಾಮ ಹರೇ ಕೃಷ್ಣ” ಹಿಂದಿ ಸಿನಿಮಾದಲ್ಲಿ ನಟಿ ಝೀನತ್ತಮಾನ್ ಮೂಲಕ “ದಂ..ಮಾರೋ..ದಂ..ಮಿಟ್ ಜಾಯೇ ಹಂ..” ನಶೆಯ ಹಾಡು ಹೇಳಿದ ಚಿತ್ರ ತಯಾರಿಸಿ ಬಿಡುಗಡೆ ಗೊಳಿಸಿದರು. ಈ ಹಾಡು ಮತ್ತು ದೃಶ್ಯ ಇವತ್ತಿಗೂ ಎಂಜಾಯ್ ಮಾಡುವಂತಿದೆ? 1970ರ ದಶಕದಲ್ಲಿ ಪ್ರಪಂಚದಾದ್ಯಂತ ನವ ಯುವಕರಲ್ಲಿ ವಿದ್ಯುತ್ ಸಂಚಲನವುಂಟು ಮಾಡಿದ ಈ ಚಿತ್ರವು ‘ಶ್ರೀಕೃಷ್ಣ ಪಂಥದವರನ್ನು ಒಪ್ಪಿ ಅಪ್ಪಿಕೊಂಡ ಹಿಪ್ಪೀಕ್ರಾಂತಿ’ ಹೊಸ ಅಲೆಯನ್ನೆ ಸೃಷ್ಟಿಸಿತು! ಶ್ರೀಕೃಷ್ಣನ ಬಗ್ಗೆ ಅಸಂಖ್ಯಾತ ಉಧಾಹರಣೆ ನೀಡಬಹುದು.
‘ಕೃಷ್ಣ….ಎನಬಾರದೇ…..’ ‘ಕೃಷ್ಣ ನೀ ಬೇಗನೆ ಬಾರೋ…’‘ಬೇಡ ಕೃಷ್ಣ…ರಂಗಿನಾಟ ಸೀರೆ ನೆನೆವುದು…’, “ಕರೇ.. ಕರೇ…..ಕೃಷ್ಣನಾ…ಕೊಳಲಿನಾ…ಕರೇ..” ಮುಂತಾದ ಭಜನೆ ಜತೆಗೆ ಅವಲಕ್ಕಿಮಿತ್ರ ಸುಧಾಮ(ಕುಚೇಲ)ನ ‘ಕೃಷ್ಣ ಎಂದರೆ ಭಯವಿಲ್ಲ ಶ್ರೀಕೃಷ್ಣಾ ಎನದೆ ಸುಖವಿಲ್ಲ’ ‘ಕಂಡೇ ಹರಿಯ ಕಂಡೆ.. ದೇವಾಧಿದೇವ ಧನುಜಾದಿವಂದ್ಯ’ ‘ಬಾಗಿಲನು ತೆರೆದು ಸೇವೆಯನು ಕೊಡೊಹರಿಯೆ” ಎಂದು ಭಕ್ತಿಗೀತೆ ಹಾಡಿ ಉಡುಪಿ ಗರ್ಭಗುಡಿಯ ದಿಕ್ಕನ್ನೆ ಕನಕನ ಕಿಂಡಿಯಾಗಿಸಿದ ದಾಸವರೇಣ್ಯ ಹಾಗೂ ಇತ್ತೀಚೆಗೆ ಬಾಲಕಿ ಹಾಡಿದ ಜಯ ಜನಾರ್ಧನಾ ಕೃಷ್ಣ…ರಾಧಿಕಾಪತೇ…ಮುಂತಾದ ಕೀರ್ತನೆಗಳು ಆಚಂದ್ರಾರ್ಕ ಚಿರಸ್ಥಾಯಿ ಆಗಿವೆ.
Thank you so much lava sir 💖 🙏
1000 ಪುಟದಲ್ಲಿರುವ ವಿಷಯಗಳನ್ನ 3 ಪುಟದಲ್ಲಿ ಎಲ್ಲರಿಗೂ ಅರ್ಥವಾಗುವ ರೀತಿ ಬರೆದಿರುವ ಲೇಖಕರ ಜಾಣ್ಮೆ ಶ್ಲಾಘನೀಯ. ಇಂತಹ ಉತ್ತಮ ಮಾಹಿತಯ ಲೇಖನ ಪ್ರಕಟಿಸಿದ ತಮಗೆ ಧನ್ಯವಾದ. ನಿಮ್ಮ ಪತ್ರಿಕೆ ನೂರುಕಾಲ ಬದುಕಿರಲಿ, ನಮಸ್ಕಾರ ಸರ್
1000 ಪುಟದಲ್ಲಿರುವ ಶ್ರೀಕೃಷ್ಣ ಚರಿತ್ರೆಯ ವಿಷಯಗಳನ್ನು “ಶ್ರೀಕೃಷ್ಣ ಜನ್ಮಾಷ್ಟಮಿ” ಲೇಖನದ 3 ಪುಟದಲ್ಲಿ ಎಲ್ಲರಿಗೂ ಅರ್ಥವಾಗುವ ರೀತಿ ಬರೆದಿರುವ ಲೇಖಕರ ಜಾಣ್ಮೆ ಶ್ಲಾಘನೀಯ. ಇಂತಹ ಉತ್ತಮ ಮಾಹಿತಿಯ ಲೇಖನವನ್ನು ಪ್ರಕಟಿಸಿದ ತಮಗೆ ಧನ್ಯವಾದ. ನಿಮ್ಮ ಪತ್ರಿಕೆ ನೂರುಕಾಲ ಬದುಕಿರಲಿ, ಇಂತಹ ನೂರಾರು ಸಂಗ್ರಹಯೋಗ್ಯ ಲೇಖನವನ್ನು ಪ್ರಕಟಿಸುತ್ತ ಇರಲಿ ನಮಸ್ಕಾರ ಸರ್
ಕೃಷ್ಣಜನ್ಮಾಷ್ಟಮಿ ಲೇಖನ ಓದಿದ ನಂತರ ನನಗೆ ಭಕ್ತಿ ಭಾವ ಮತ್ತು ವಿಚಾರ ಮಾಹಿತಿ ಹೆಚ್ಚಿನ ರೀತಿಯಲ್ಲಿ ಮನವರಿಕೆ ಆಯ್ತು, ಧನ್ಯವಾದ ಸರ್
Srikrishna Janmashtami article is really amazing and mind blowing and therefore thanks sir
ಶ್ರೀಕೃಷ್ಣ ಜಯಂತ್ಯುತ್ಸವ ಕಾರ್ಯಕ್ರಮ ಬಗ್ಗೆ ಬಹಳ ಮುಖ್ಯ ವಿಷಯಗಳನ್ನು ಆಧ್ಯಾತ್ಮಿಕ ವಿಚಾರಗಳನ್ನು ಆಕರ್ಷಕವಾಗಿ ಭಕ್ತಿಯಿಂದ ಬರೆದಿದ್ದಾರೆ ಲೇಖಕರು, ಇದನ್ನು ಮನಮೋಹಕವಾಗಿ ಪ್ರಕಟಿಸಿದ ನಿಮಗೆ ಭಕ್ತಿ ಪೂರಕ ಧನ್ಯವಾದಗಳು ಸರ್
Krishna Jayanti article compared with HINDI film, song and then hippy culture, during 1970s excellent narration. So, this is really good spiritual cum myths-social article. And published by our beloved media JANAMANA KANNADA. Thanksgiving sir
Very nice article about KRISHNA the INCARNATION of LORD VISHNU! Dum..maaro..dum.. HINDI film song HIPPY GENERATION and other passionately spiritual writing style and skill are appreciated. Thank you very much 😊