LatestState

ಕೋರಮಂಡಲ್ ಸಕ್ಕರೆ ಕಾರ್ಖಾನೆ ಸುತ್ತಲೂ ಹಸಿರೀಕರಣ… ಇದು ಸಾಧ್ಯವಾಗಿದ್ದು ಹೇಗೆ?

ಮಂಡ್ಯ: ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಮಾಕವಳ್ಳಿಯ ಕೋರಮಂಡಲ್ ಸಕ್ಕರೆ ಕಾರ್ಖಾನೆಯು ಹಸಿರೀಕರಣಕ್ಕೆ ಒತ್ತು ನೀಡುವುದರೊಂದಿಗೆ ಪರಿಸಂರಕ್ಷಣೆ ಜತೆಗೆ ರೈತರ ಜೀವನಾಡಿಯಾಗಿ ಗಮನಸೆಳೆಯುತ್ತಿದ್ದು, ಇದೀಗ ಕೇವಲ ಕಬ್ಬು ಅರೆಯುವುದು ಮಾತ್ರವಲ್ಲದೆ, ವಿದ್ಯುತ್  ಮತ್ತು ಎಥೆನಾಲ್ ಉತ್ಪಾದನೆ ಜತೆಗೆ ಕಬ್ಬು ಅರೆದ ತ್ಯಾಜ್ಯ ನೀರನ್ನು ಸಂಸ್ಕರಿಸಿ ಅದರಿಂದ  ಕಾರ್ಖಾನೆ ಆವರಣದಲ್ಲಿ ಮರಗಿಡಗಳನ್ನು ಬೆಳೆಸಿ ಗಮನಸೆಳೆಯುತ್ತಿದೆ.

ಹೇಮಾವತಿ ನದಿ ನೀರನ್ನು ಬಳಕೆ ಮಾಡಿಕೊಂಡು ಕಾರ್ಖಾನೆಯು ಸಕ್ಕರೆ ಉತ್ಪಾದನೆ ಮಾಡಿ ತನಗೆ ನಿಗದಿಪಡಿಸಿರುವ ನೀರಿಗಿಂತಲೂ ಕಡಿಮೆ ಪ್ರಮಾಣದ ನೀರನ್ನು  ಮಾಡಿಕೊಂಡು ಸಕ್ಕರೆ ಉತ್ಪಾದನೆ ನಂತರ ಸಂಗ್ರಹವಾಗುವ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಿ ಮರುಬಳಕೆ ಮಾಡಿಕೊಂಡು ಕಾರ್ಖಾನೆಯ ಆವರಣದಲ್ಲಿ ಕಬ್ಬು ಬೆಳೆಯುತ್ತಿದೆ. ಇಷ್ಟೇ ಅಲ್ಲದೆ ಇಲ್ಲಿರುವ ಗಿಡಮರಗಳಿಗೆ ಬೇಕಾದ ಜೀವಜಲ ನೀರನ್ನು ಉಣಿಸಲು ಮುಂದಾಗಿರುವ ಕಾರ್ಖಾನೆಯ ಆಡಳಿತ ಮಂಡಳಿಯು ಮಾವು, ಬೇವು, ಹಿಪ್ಪೆ, ಮಹಾಘನಿ, ತೇಗ, ಹೆಬ್ಬೇವು, ತೆಂಗು ಸೇರಿದಂತೆ 25 ಸಾವಿರಕ್ಕೂ ಹೆಚ್ಚಿನ ವಿವಿಧ ಜಾತಿಯ ಕಾಡು ಮರಗಳನ್ನು ಬೆಳೆಸಿ ಹಸರೀಕರಣದತ್ತ ಹೆಚ್ಚಿನ ಕಾಳಜಿ ವಹಿಸುತ್ತಿದೆ.

ಸಂಸ್ಕರಣೆ ಮಾಡಿದ ನೀರನ್ನು ಬಳಕೆ ಮಾಡಿಕೊಂಡು ಕಬ್ಬನ್ನು ಬೆಳೆಯುತ್ತಿದೆ. ಕಾರ್ಖಾನೆಯಿಂದ ಹೊರಬರುವ ಒಂದೇ ಒಂದು ಹನಿ ನೀರನ್ನೂ ಸಹ ಕಾರ್ಖಾನೆಯಿಂದ ಹೊರಹೋಗಲು ಬಿಡದೆ ಸಂಸ್ಕರಣೆ ಮಾಡಿ ಮರು ಬಳಕೆ ಮಾಡಿ ಬೇಸಾಯಕ್ಕೆ ಹಾಗೂ ಗಿಡಮರಗಳಿಗೆ ಹಾಯಿಸಲಾಗುತ್ತಿದೆ.

ಅತ್ಯಾಧುನಿಕ ತಂತ್ರಜ್ಞಾನದ ಯಂತ್ರೋಪಕರಣಗಳನ್ನು ಹೊಂದಿರುವುದರಿಂದಾಗಿ ಹಾರುಬೂದಿ, ಕೆಟ್ಟವಾಸನೆ ಬಾರದ ಕಾರಣ ಸುತ್ತಮುತ್ತಲಿನವರು ನೆಮ್ಮದಿಯಿಂದ ಇದ್ದಾರೆ. ಪರಿಸರ ಸಂರಕ್ಷಣಗೆ ಒತ್ತು ನೀಡುತ್ತಿರುವುದಕ್ಕೆ ಇಲ್ಲಿ ಬೆಳೆಯುತ್ತಿರುವ ಮರಗಿಡಗಳು ಸಾಕ್ಷಿಯಾಗಿವೆ.

admin
the authoradmin

Leave a Reply

Translate to any language you want