ಶರಣರ ಕಾಯಕ, ದಾಸೋಹ ತತ್ವ ಗುಬ್ಬಿ ತೋಟದಪ್ಪ ಬದುಕಿಗೆ ಆದರ್ಶ: ಕಲ್ಮಳ್ಳಿ ನಟರಾಜು
ಗುಬ್ಬಿ ತೋಟದಪ್ಪನವರ ಜನ್ಮ ದಿನೋತ್ಸವ ಸಂಸ್ಮರಣ ಕಾರ್ಯಕ್ರಮ

ಮೈಸೂರು: ಅಖಿಲ ಭಾರತ ವೀರಶೈವ ಲಿಂಗಾಯತ ನೌಕರರ ಸಂಘದ ವತಿಯಿಂದ ಧರ್ಮ ಪ್ರವರ್ತಕ ಗುಬ್ಬಿ ತೋಟದಪ್ಪನವರ ಜನ್ಮ ದಿನೋತ್ಸವ ಸಂಸ್ಮರಣ ಕಾರ್ಯಕ್ರಮವನ್ನು ನಡೆಸಲಾಯಿತು.
ತೋಟದಪ್ಪನವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಲ್ಮಳ್ಳಿ ನಟರಾಜು ಅವರು, ತುಮಕೂರು ಜಿಲ್ಲೆಯ ಗುಬ್ಬಿ ಗ್ರಾಮದಲ್ಲಿ ಹುಟ್ಟಿದ ತೋಟದಪ್ಪ ಕುಟುಂಬ ಎಲ್ಲರಂತೆ ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ಪೇಟೆ ಬೀದಿಯಲ್ಲಿ ದಿನಸಿ ಅಂಗಡಿ ಆರಂಭ ಮಾಡುವುದರ ಮೂಲಕ ವೃತ್ತಿ ಜೀವನ ಪ್ರಾರಂಭಿಸಿದರು.

ಈ ಕುಟುಂಬ ಬಹಳ ಬೇಗ ಆರ್ಥಿಕವಾಗಿ. ಪ್ರಾಬಲ್ಯ ಗಳಿಸಿ ಎಲ್ಲವನ್ನೂ ಕುಟುಂಬದ ಉದ್ಧಾರಕ್ಕೆ ಬಳಸದೆ ಅಂದಿನ ಕಾಲ ಘಟ್ಟಕ್ಕೆ ಬೆಂಗಳೂರು ಸಮುದಾಯದ ಸಾಮಾನ್ಯರಿಗೆ ಊಹೆಗೂ ನಿಲುಕದ ನಗರವಾಗಿತ್ತು. ಶಿಕ್ಷಣ ಅರಸಿ ಬಂದ ಮಧ್ಯಮ ಮತ್ತು ಬಡ ವರ್ಗದ ಹೆಣ್ಣು ಮತ್ತು ಗಂಡು ಮಕ್ಕಳ ವಿದ್ಯಾಭ್ಯಾಸಕ್ಕೆ ಪಡುತಿದ್ದ ಬವಣೆ ಅರಿತಿದ್ದರು.
ಹೀಗಾಗಿಯೇ ತೋಟದಪ್ಪ ಕುಟುಂಬ ಅವಿದ್ಯಾವಂತರು ಸುಲಭವಾಗಿ ಬಂದು ಹೋಗಲು ಅನುಕೂಲವಾಗಲಿ ಎನ್ನುವ ದೂರದೃಷ್ಟಿಯಿಂದ 10 ಸಾವಿರ ರೂಪಾಯಿಗಳಿಗೆ ನಿವೇಶನ ಖರೀದಿಸಿ ಸಮುದಾಯಕ್ಕೆ ಮೀಸಲಾಗಿರುವ ಉಚಿತ ವಿದ್ಯಾರ್ಥಿ ನಿಲಯ ಪ್ರಾರಂಭಿಸಿ ಅವಕಾಶ ನೀಡಿದ್ದು , ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಸ್ವರ್ಗದ ಬಾಗಿಲು ತೆರೆದಂತೆ ಅವರ ಸುಭದ್ರ ಭವಿಷ್ಯಕ್ಕೆ ಅಡಿಪಾಯವಾಯಿತು ಎಂದು ಸ್ಮರಿಸಿದರು.

ಅಲ್ಲಮ ಪ್ರಭು ತನ್ನದೊಂದು ವಚನದಲ್ಲಿ ಹಸಿದವರಿಗೆ ಒಂದು ತುತ್ತು ಅನ್ನವನಿಕ್ಕುವೆ ಬಾಯಾರಿದವರಿಗೆ ಉದಕನೆರೆವೆ. ನಾ ದೇವನಲ್ಲದೆ ನೀ ದೇವನೇ ಗುಹೇಶ್ವರ ಎನ್ನುವ ಮೂಲಕ ಸ್ಥಾವರ ದೇವರ ಅಸ್ತಿತ್ವವನ್ನು ಪ್ರಶ್ನೆ ಮಾಡುವ ಮೂಲಕ ಹಸಿವು ತೃಷೆ ನೀಗಿಸುವವನೇ ಕಣ್ಣಿಗೆ ಕಾಣುವ ದೇವರು ಎನ್ನುವುದರ ಮೂಲಕ ಮನುಷ್ಯ ದೇವರಾಗುವ ಬಗೆ ತಿಳಿಸಿದಂತೆ ರಾಜತ್ವ ಪರಂಪರೆಗೆ ಸೀಮಿತವಾಗಿದ್ದ ಸೇವಾ ಕಾರ್ಯವನ್ನು ಮಾಡುವುದರ ಮೂಲಕ ನಾಲ್ವಡಿ ಕೃಷ್ಣರಾಜ ಒಡೆಯರ್ ರವರಿಂದ ಧರ್ಮ ಪ್ರವರ್ತಕ ಗುಬ್ಬಿ ತೋಟದಪ್ಪ ಎನ್ನುವ ಬಿರುದು ಪಡೆದುಕೊಂಡ ಧೀಮಂತ ಸೇವಕ ಎಂದರೆ ಅತಿಶಯೋಕ್ತಿ ಮಾತಲ್ಲ ಎಂದರು.

ಎಲ್ಲಕ್ಕಿಂತ ಹೆಚ್ಚಾಗಿ ಜಾತ್ಯತೀತ ಶರಣ ತತ್ವಗಳನ್ನ ತಮ್ಮ ನಡೆ ನುಡಿಯ ಮೂಲಕ ಲಕ್ಷಾಂತರ ಜನರ ಬಾಳಿಗೆ ಬೆಳಕಾದ ನಡೆದಾಡುವ ದೇವರೆಂದೇ ಪೂಜಿಸಲ್ಪಡುವ ಪೂಜ್ಯ ಡಾ,ಶಿವಕುಮಾರ ಮಹಾ ಸ್ವಾಮಿಗಳವರು ತಮ್ಮ ಉನ್ನತ ವಿದ್ಯಾಭ್ಯಾಸಕ್ಕೆ ಗುಬ್ಬಿ ತೋಟದಪ್ಪ ವಿದ್ಯಾರ್ಥಿನಿಲಯಲ್ಲಿ ಆಶ್ರಯ ಪಡೆದಿದ್ದರು ಬಹುಶಃ ಅವರ ಸಂತ ಸೇವಾ ಜೀವನಕ್ಕೆ ಈ ಸೇವೆಯ ಸ್ಪೂರ್ತಿ ಯಾಗಿರ ಬಹುದೇನೋ ಎಂದು ನನಗೆ ಭಾಸವಾಗುತ್ತಿದೆ. ಅಷ್ಟೇ ಅಲ್ಲದೆ ಈ ನಾಡು ಧೀಮಂತ ಅಪ್ಪಟ ಗಾಂಧಿವಾದಿ ಪ್ರಾಮಾಣಿಕ ರಾಜಕಾರಣಿ ಮುಖ್ಯ ಮಂತ್ರಿಯಾಗಿ ಒಂದು ಸ್ವಂತ ಮನೆಯನ್ನು ಕಟ್ಟಿ ಕೊಳ್ಳದ ದಿವಂಗತ ಎಸ್ ನಿಜಲಿಂಗಪ್ಪ ಅವರು ಗುಬ್ಬಿ ತೋಟದಪ್ಪ ವಿದ್ಯಾರ್ಥಿ ನಿಯಲದಲ್ಲಿ ಆಶ್ರಯ ಪಡೆದು ವಿದ್ಯಾಭಾಸ್ಯ ಮುಂದುವರಿಸಿದ್ದರು ಎನ್ನುವುದು ಅವರ ಮುಂದಿನ ಪ್ರಾಮಾಣಿಕ ಬದುಕಿಗೆ ಸ್ಪೂರ್ತಿಯಾಗಿದೆ.
ಬ್ರಿಟಿಷ್ ಸರಕಾರ ಅವರ ಧರ್ಮ ಸೇವಾ ಕಾರ್ಯ ಮೆಚ್ಚಿ ಅವರಿಗೆ ರಾವ್ ಬಹದ್ದೂರ್ ಎನ್ನುವ ಬಿರುದು ನೀಡಿ ಗೌರವಿಸಿರುವುದು ಅವರ ಸೇವಾ ಜೀವನಕ್ಕೆ ಹಿಡಿದ ಕೈ ಗನ್ನಡಿಯಾಗಿದೆ. ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗೆ ಅವರ ಸೇವೆಯ ಬಗ್ಗೆ ಹೇಳುವುದಾದರೆ ಅಗ್ರಹಾರದ ಬಳಿ ರೈಲ್ವೆ ಇಲಾಖೆ ನಿವೃತ್ತರಾಗಿರುವ ಶ್ರೀಮತಿ ಪ್ರಭಾಮಣಿ ನಿವೃತ್ತಿ ನಂತರ ತಮಗೆ ಬಂದ ಹಣವನ್ನು ವೈಯಕ್ತಿಕ ಸುಖಕ್ಕೆ ಬಳಸದೆ ಮೈಸೂರಿಗೆ ಉನ್ನತ ಶಿಕ್ಷಣ ಪಡೆಯಲು ಬರುವ ದುಬಾರಿ ಹಾಸ್ಟಲ್ ವೆಚ್ಚ ಭರಿಸಲಾಗದ ಸಮುದಾಯದ ಬಡ ಗ್ರಾಮೀಣ ಹೆಣ್ಣು ಮಕ್ಕಳಿಗೆ ಗುಬ್ಬಿ ತೋಟದಪ್ಪ ಟ್ರಸ್ಟ್ ಸಹಯೋಗದಲ್ಲಿ ತಮ್ಮ ಸ್ವಂತ ಮನೆಯನ್ನೇ ವಿದ್ಯಾರ್ಥಿ ನಿಲಯವನ್ನಾಗಿ ಪರಿವರ್ತಿಸಿದರು.

ಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮಿಗಳವರ ಮಾರ್ಗದರ್ಶನದ ಕೃಪಾಶೀರ್ವಾದ ಪಡೆದು ಗುಂಡ್ಲುಪೇಟೆ ಎಚ್ ಡಿ ಕೋಟೆ ಚಾಮರಾಜನಗರ ಗಳಿಂದ ಬರುವ ಮಕ್ಕಳಿಗೆ ಉಚಿತ ಅನ್ನ ಆಶ್ರಯ ನೀಡಿ ಸದ್ದಿಲ್ಲದೆ ಸೇವೆಗೈಯುವುದಕ್ಕೆ ಗುಬ್ಬಿ ತೋಟದಪ್ಪ ಅವರ ನಿಸ್ವಾರ್ಥ ಸೇವೆಯೇ ಕಾರಣವಾಗಿದೆ. ಇತ್ತೀಚೆಗೆ ನಂಜನಗೂಡು ಪಟ್ಟಣದಲ್ಲಿಯೂ ಇವರ ಆಶ್ರಯದಲ್ಲಿ ಉಚಿತ ಹೆಣ್ಣು ಮಕ್ಕಳ ವಿದ್ಯಾರ್ಥಿ ನಿಲಯ ಆರಂಭವಾಗಿದ್ದು ಚಾಮರಾಜನಗರ ಪಟ್ಟಣ ಕೊಳ್ಳೇಗಾಲ ಯಳಂದೂರು ತಾಲೂಕಿನಲ್ಲಿಯೂ ಸಂಸ್ಥೆಯ ಸಹ ಯೋಗದಲ್ಲಿ ಸಾವಿರಾರು ಹೆಣ್ಣು ಮಕ್ಕಳ ಭವಿಷ್ಯ ನಿರ್ಮಾಣದಲ್ಲಿ ಸೇವೆ ಗೈಯುತ್ತಿವೆ.
ಇಂದು ಅಲ್ಲಿ ಆಶ್ರಯ ಪಡೆದ ಸಾವಿರಾರು ವಿದ್ಯಾರ್ಥಿಗಳು ದೇಶ ವಿದೇಶಗಳ ನಾನ ಕ್ಷೇತ್ರಗಳಲ್ಲಿ ಉದ್ಯೋಗ ಪಡೆದು ಉತ್ತಮ ಜೀವನ ನಡೆಸುತ್ತಿದ್ದಾರೆ ಅವರ ಕೈಲಾದ ಮಟ್ಟಿಗೆ ಸೇವಾ ರೂಪದಲ್ಲಿ ಸಮಾಜದ ಋಣ ತೀರಿಸುವ ಕೆಲಸ ಮಾಡುತ್ತಿದ್ದಾರೆ ಕೋಟಿಗೊಬ್ಬ ಜಂಗಮ ಕುಲಕೊಬ್ಬ ಶರಣ ಎನ್ನುವಂತೆ ತೋಟದಪ್ಪ ಅವರ ಸೇವೆಗೆ ತೋಟದಪ್ಪನವೇ ಸಾಟಿ ಬೇರೊಬ್ಬರನ್ನು ಉದಾಹರಿಸಲು ಸಾಧ್ಯವಿಲ್ಲ ಜಾತ್ಯತೀವಾಗಿ ಬೆಂಗಳೂರಿಗೆ ಪ್ರವಾಸಕ್ಕೆ ಬರುವ ಪ್ರವಾಸಿಗರಿಗೆ ತಂಗುದಾಣ ನಿರ್ಮಿಸಿ ಇಂದು ನಾಡಿನಲ್ಲಿ ಅಜಾರಾಮರ ಸೇವಾ ಧ್ರುವತಾರೆ ಮಹಾತ್ಮರ ನೆನೆವುದು ಘನ ಮುಕ್ತಿ ಪದ ಎನ್ನುವಂತೆ ಅವರನ್ನು ಸ್ಮರಿಸುವ ಪುಣ್ಯ ಅವಕಾಶ ಬಂದಿರುವುದೇ ನಮ್ಮ ಜೀವಿತಾವಧಿ ಸೌಭಾಗ್ಯ ಎಂದರು

ಕಾರ್ಯಕ್ರಮದಲ್ಲಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ ಆರ್ ಶಿವಕುಮಾರ್, ಉದ್ಯಮಿ ಸುರೇಶ್ ಶಂಭು ದೇವನಪುರ ಡಾ ಮಲ್ಲಿಕಾ ದೇವನೂರು ಶಿಲ್ಪಾ ನಂದೀಶ್, ಸಂಘದ ಖಜಾಂಚಿ ಬಾಗಳಿ ಮಹೇಶ್, ನಿರ್ದೇಶಕರಾದ ಜಗದೀಶ್ ಗೋಪಾಲಪುರ ಗಜೇಂದ್ರ ಮಹೇಶ್ ಶಿಕ್ಷಕರಾದ ಕಿರಾಳು ಬಸವಣ್ಣ ವಿವೇಕಾನಂದ ಪುಟ್ಟ ಸುಬ್ರಮಣ್ಯ ಸುರೇಶ್ ಸುತ್ತೂರು ದೇವರಾಜು ಶಶಿಧರ್ ಸೇರಿದಂತೆ ಇತರರು ಉಪಸ್ಥಿತರಿ ದ್ದರು







