LatestMysore

ಎಚ್ ಮಟಕೆರೆ ಶಾಲೆಯಲ್ಲಿ ಬಡ್ತಿ ಮುಖ್ಯ ಶಿಕ್ಷಕರಾಗಿದ್ದ ಕೃಷ್ಣಪ್ಪ ರವರಿಗೆ ಅದ್ಧೂರಿ ಬೀಳ್ಕೊಡುಗೆ

ಎಚ್ ಡಿ ಕೋಟೆ: ಕಳೆದ ಮೂರು ವರ್ಷಗಳಿಂದ ಸೇವೆ ಸಲ್ಲಿಸಿದ್ದ ಎಚ್ ಡಿ ಕೋಟೆ ತಾಲೂಕಿನ ಎಚ್ ಮಟಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಡ್ತಿ ಮುಖ್ಯ ಶಿಕ್ಷಕ ಎಲ್ ಕೃಷ್ಣಪ್ಪ ರವರನ್ನ ಶಾಲೆಯ ಶಿಕ್ಷಕರಿಂದ ಮತ್ತು ಗ್ರಾಮಸ್ಥರು ಅದ್ದೂರಿಯಾಗಿ  ಬೀಳ್ಕೊಡುಗೆ ಮಾಡಿದರು.

ಈ ಸಂದರ್ಭದಲ್ಲಿ ಕೃಷ್ಣಪ್ಪರವರು ಮಾತನಾಡಿ ನಿಮ್ಮೆಲ್ಲರ ಪ್ರೀತಿ ವಿಶ್ವಾಸಕ್ಕೆ ನಾನೆಂದೂ ಚಿರಋಣಿ. ನಾನು ಕಳೆದ ಮೂರು ವರ್ಷ ಇಲ್ಲಿ ಯಾವುದೇ ಸಮಸ್ಯೆ ಇಲ್ಲದೆ ಸೇವೆ ಸಲ್ಲಿಸಿದ್ದೇನೆ. ಈ ಗ್ರಾಮದ ಜನರ ಬಗ್ಗೆ ನನಗೆ ಅಪಾರ ಮೆಚ್ಚುಗೆ ಇದೆ ಎಂದರು.

ಎಲ್ ಕೃಷ್ಣಪ್ಪ ರವರು 32 ವರ್ಷ ಸರ್ಕಾರಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು ಅವರು ಬರುವ ಮೇ 31ಕ್ಕೆ ನಿವೃತ್ತಿಯಾಗಲಿದ್ದಾರೆ. ಪ್ರಸ್ತುತ ಅವರು ಎಚ್ ಡಿ ಕೋಟೆ ತಾಲೂಕಿನ ಮಲಾರ ಕಾಲೋನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 8 ತಿಂಗಳಿನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಎಲ್ ಪಿ ಎಸ್ ನೆಮ್ಮನಹಳ್ಳಿಯಲ್ಲಿ ಎಂಟು ವರ್ಷ, ಎಚ್‌ಪಿಎಸ್ ಬೊಪ್ಪನಹಳ್ಳಿಯಲ್ಲಿ 18 ವರ್ಷ, ಎಲ್ ಪಿಎಸ್ ಶೀರನಹುಂಡಿಯಲ್ಲಿ 3 ವರ್ಷ, ಮತ್ತೆ  ಹೆಚ್ ಮಟಕೆರೆಯಲ್ಲಿ ಮೂರು ವರ್ಷ ಎರಡು ತಿಂಗಳು ಸೇವೆ ಸಲ್ಲಿಸಿದ್ದಾರೆ.

ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶಂಕರ ಕೃಷ್ಣಯ್ಯ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡುತ್ತಾ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಕೃಷ್ಣಪ್ಪ ರವರು ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಪೂರಕವಾಗಿ ಶ್ರಮಿಸಿದ್ದಾರೆ ಎಂದು ಭಾವುಕರಾದರು.

ಇದೇ ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಯ ಉಪಾಧ್ಯಕ್ಷರಾದ ಕಲಾವತಿ, ಗ್ರಾಮ ಪಂಚಾಯಿತಿಯ ಸದಸ್ಯ ರಾಜೇಶ್, ವೆಂಕಟೇಶ್, ಉಪಾಧ್ಯಾಯರ ಸಂಘದ ಅಧ್ಯಕ್ಷರು ಕೆಂಪರಾಜು, ಎಚ್ ಮಟಕೆರೆ ಗ್ರಾಮದ ನಾಡಗೌಡರಾದ ಜಯಶಂಕರ್, ಯಜಮಾನ ಕೃಷ್ಣ ಇದ್ದರು.

ಮಟಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ಅಂಬಿಕಾ ಮತ್ತು ಶಿಕ್ಷಕ ವೃಂದ, ಮಾಜಿ ಗುಡಿಗೌಡ ಮಾದೇಗೌಡ, ಊರಿನ ಮಾದೇಗೌಡರು, ಜವರ ನಾಯಕ, ವಿರಾಜ ನಾಯಕ, ಎಸ್ ಡಿ ಎಂ ಸಿ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು, ಊರಿನ ಪ್ರಮುಖರು ಭಾಗಿಯಾಗಿದ್ದರು.

ಶಿಕ್ಷಣ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಶಿವರಾಜು ರವರು ಕೂಡ ಭಾಗಿಯಾಗಿದ್ದರು. ಶಾಲೆಯ ಹಳೆಯ ಮತ್ತು ಹೊಸ ವಿದ್ಯಾರ್ಥಿಗಳು ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಇದೇ ಸಂದರ್ಭದಲ್ಲಿ ಎಲ್ ಕೃಷ್ಣಪ್ಪ ರವರ ಧರ್ಮಪತ್ನಿ ಕೃಷ್ಣವೇಣಿ ಅವರ ಮಕ್ಕಳು, ಕುಟುಂಬ ವರ್ಗದವರು ಭಾಗಿಯಾಗಿದ್ದರು.

ವರದಿ: ಕಾಳಿಹುಂಡಿ ಶಿವಕುಮಾರ್

admin
the authoradmin

Leave a Reply

Translate to any language you want