DistrictLatest

ಹನುಮನ‌ ಉತ್ಸವಕ್ಕೆ ಶುಭಕೋರಿದ ಮುಸ್ಲಿಂ ಬಾಂಧವರು… ಸರ್ವಧರ್ಮಗಳ ಶಾಂತಿಯ ತೋಟವಾದ ಕುಶಾಲನಗರ

ಕುಶಾಲನಗರ: ದೇವನೊಬ್ಬ ನಾಮ ಹಲವು.. ಎಲ್ಲಾ ಧರ್ಮಗಳ ಸಾರ ಒಂದೇ… ಹುಟ್ಟುವಾಗ ಯಾವುದೇ ಶಿಶು  ಜಾತಿ ನೋಡಿಕೊಂಡು ಹುಟ್ಟಲ್ಲ.  ಕಣ್ಣಿಗೆ ಕಾಣದ ಆ ಅಗೋಚರ ಶಕ್ತಿಯ ಬಳಿ ಯಾರೂ ಕೂಡ ಇಂತಹುದೇ ಜಾತಿ – ಧರ್ಮದಲ್ಲಿ ಹುಟ್ಟಿಸು ಅಂತಾ  ಅಪ್ಲಿಕೇಶನ್ ಹಾಕಿರುವುದೂ ಇಲ್ಲ. ರಾಜಕಾರಣ ಹಾಗೂ ರಾಜಕಾರಣಿಗಳು ಧರ್ಮಗಳ ಮಧ್ಯೆ ಒಡಕುಂಟು ಮಾಡಿದ ಫಲ ಸ್ವಸ್ಥ ಹಾಗೂ ಸ್ವಚ್ಛವಾಗಿದ್ದ   ಸಮಾಜದ ಸ್ವಾಸ್ಥ್ತ ಕದಡಿದೆ ಅಷ್ಟೆ.

ಕುಶಾಲನಗರದಲ್ಲಿ ಈ ಬಾರಿ ನಡೆಯುತ್ತಿರುವ  ಹನುಮಜಯಂತಿ  ಒಂದು ರೀತಿ ಯುವಜನೋತ್ಸವದ ಮಾದರಿಯಲ್ಲಿ ಇರುಳನ್ನು ಹಗಲಾಗಿಸಿ ನಡೆಯುತ್ತಿರುವ ಬೆಳಕಿನ  ಮಹಾ ಉತ್ಸವ.  ಜೊತೆಗೆ,  ಬಿಸಿ ರಕ್ತದ ನವತರುಣರಿಗೆ ಕ್ಷೇತ್ರದ ಯುವ ಶಾಸಕ ಡಾ.ಮಂತರಗೌಡರು ವಿಶೇಷವಾಗಿ ಸಾಥ್ ಕೊಟ್ಟ ಮೇಲಂತೂ ಈ ಉತ್ಸವ  ಆಗುತ್ತಿದೆ ಜನೋತ್ಸವ. ಹನುಮ, ರಾಮ, ಶಬರಿ, ಸೀತೆ ಯರು ಕೇವಲ ಒಂದು ಧರ್ಮ  ಅಥವಾ ಪಕ್ಷವೊಂದರ ಆಸ್ತಿ –  ಆಚರಣೆಯಲ್ಲ. ಅದಕ್ಕೆ ಪಕ್ಷಾತೀತ ಜಾತ್ಯತೀತದ ಸ್ವರೂಪ ಕೊಟ್ಟದ್ದು ಶಾಸಕ ಡಾಕ್ಟರ್ ಮಂಥರ್ ಗೌಡ

ಈ ಬಾರಿ ನಡೆವ ಮಹಾ ಉತ್ಸವಕ್ಕೆ ಅನ್ಯಧರ್ಮೀಯ ಯುವಕರ ಶುಭ ಕೋರಿಕೆ  ಬಾಹ್ಯವಾಗಿ  ಪೋಲಿಸರ ತಲೆ ನೋವು ಕಡಿಮೆ ಮಾಡಿದೆ. ಆದರೆ, ಅಂತರಂಗದಲ್ಲಿ ಎಲ್ಲಾ ಧರ್ಮೀಯರು ಎಲ್ಲಾ ಧರ್ಮಗಳ ಆಚರಣೆಗೆ  ಪರಸ್ಪರ ಸಾಥ್ ನೀಡುವ ಮೂಲಕ ನಗರವನ್ನು ಸರ್ವಧರ್ಮಗಳ ಶಾಂತಿಯ ತೋಟವಾಗಿಸಬೇಕಿದೆ.

-ಕೆ.ಎಸ್.ಮೂರ್ತಿ, ಕುಶಾಲನಗರ

admin
the authoradmin

Leave a Reply