ಹೊಸ ವರ್ಷವನ್ನು ಸ್ವಾಗತಿಸಿದ್ದೇವೆ.. ಹೊಸ ಬದುಕಿನ ಕಡೆಗೆ ಹೆಜ್ಜೆಯಿಡೋಣ… ಇಷ್ಟಕ್ಕೂ ಹೊಸವರ್ಷ ಯಾರಿಗೆ? ಏಕೆ?

ಹೊಸ ವರ್ಷವನ್ನು ಕುಡಿದು ಕುಣಿದು, ಕುಪ್ಪಳಿಸಿ, ಬಿದ್ದು ಒದ್ದಾಡಿ, ತಮಗೆ ಹೇಗೆ ಬೇಕೋ ಹಾಗೆ ಸಂಭ್ರಮಿಸಿಯಾಗಿದೆ. ಇನ್ನು ಮುಂದೆ ಹೊಸ ವರ್ಷದಲ್ಲಿ ಮಾಮೂಲಿ ಪ್ರಯಾಣ ನಡೆಯಲಿದೆ.. ಇದೆಲ್ಲದರ ನಡುವೆಯೂ ನಮ್ಮ ಸುತ್ತಲೂ ಹೊಸ ವರ್ಷ ಯಾರಿಗೆ? ಏಕೆ? ಹೇಗೆ? ಎಂಬ ಜಿಜ್ಞಾಸೆ ಗಿರಕಿ ಹೊಡೆಯುವುದಂತು ನಿಜ… ಇದರ ಕುರಿತಂತೆ ಮುಕ್ತಾವಲೋಕನ ಹಾಗೂ ಸತ್ಯಾನ್ವೇಷಣೆ ಮಾಡುವ ಪ್ರಯತ್ನವೇ ಕುಮಾರಕವಿ ನಟರಾಜ್ ಅವರ ಈ ಲೇಖನ ಎಂದರೆ ಅತಿಶಯೋಕ್ತಿಯಾಗಲಾರದು…
ಹೊಸವರ್ಷ ಯಾರಿಗೆ? ಎಂಬ ಪ್ರಶ್ನೆಯನ್ನಿಟ್ಟುಕೊಂಡೇ ಮುಂದುವರೆದರೆ… ಕ್ರಿಸ್ತಶಕ 2026 ಜನವರಿ-1 ಹೊಸ ವರ್ಷದ ಆರಂಭವನ್ನು ಕ್ರೈಸ್ತರು ಆಚರಿಸುವುದು ಅವರ ಸಂಪ್ರದಾಯ, ಸಂಸ್ಕೃತಿ! ಕ್ರೈಸ್ತ ಧರ್ಮವು ಮಧ್ಯಪೂರ್ವ ಏಷ್ಯದಲ್ಲಿ ಹುಟ್ಟಿ, ಐರೋಪ್ಯ ರಾಷ್ಟ್ರಗಳಲ್ಲಿ ಹೆಚ್ಚುಬೆಳೆದು, ಬ್ರಿಟನ್ ಸಾಮ್ರಾಜ್ಯದಲ್ಲಿ ಬೇರೂರಿ, ಬ್ರಿಟಿಷರ ಮೂಲಕ ಪ್ರಪಂಚದಾದ್ಯಂತ ಪಸರಿಸಿತು. ಪ್ರತಿಯೊಬ್ಬ ಕ್ರೈಸ್ತನು ಸಂಭ್ರಮದಿಂದ ಜನವರಿ-1 ಹೊಸ ವರ್ಷ ಆಚರಿಸುವುದು ಸಹಜ ಮತ್ತು ಪ್ರಶ್ನಾತೀತ! ಆದರೆ ಅನ್ಯ ಧರ್ಮದವರು ಅವರವರ ಸಂಸ್ಕೃತಿ ಸಂಪ್ರದಾಯ ಪದ್ಧತಿ ಮರೆತು ಕ್ರೈಸ್ತರ ಹೊಸ ವರ್ಷವನ್ನೆ ತಮ್ಮ ಹೊಸ ವರ್ಷವೆಂದು ಕ್ರೈಸ್ತರಿಗಿಂತ ಗ್ರ್ಯಾಂಡಾಗಿ ಆಚರಿಸುವುದು ಎಷ್ಟು ಸರಿ…?

ವ್ಯಾಪಾರಕ್ಕೆಂದು ಆಗಮಿಸಿದ ಪೋರ್ಚುಗೀಸರು ಡಚ್ಚರು ಫ್ರೆಂಚರು ಬ್ರಿಟಿಷರು ಇಲ್ಲೆ ನೆಲೆಸುವ ಸಲುವಾಗಿ ಭಾರತೀಯರನ್ನು ಒಡೆದು ಆಳುವ ಅ-ನೀತಿ ಅನುಸರಿಸಿದ್ದಲ್ಲದೆ 400 ವರ್ಷದ ಆಳ್ವಿಕೆಯಲ್ಲಿ ದೇಶದಾದ್ಯಂತ ಕ್ರೈಸ್ತ ಧರ್ಮವನ್ನು ಬಲ[ವಂತ] ವಾಗಿ ಹೇರಿದರು? ಈಸ್ಟ್ ಇಂಡಿಯಾ ಕಂಪನಿ ಕಾಲದಲ್ಲಿ ಮಾತ್ರವಲ್ಲದೆ ಸ್ವಾತಂತ್ರನಂತರ ಕಾಲದಲ್ಲೂ ಸೌರಾಷ್ಟ್ರದಿಂದ ಬಂಗಾಳದ ವರೆಗೂ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಬಡವರ್ಗದವರಿಗೆ ಆಸೆ ಆಮಿಷವೊಡ್ಡಿ ಮತಾಂತರ ಕಾರ್ಯ ಕೈಗೊಳ್ಳಲು ಕ್ರೈಸ್ತ ಮಿಶನರಿ ಹುಟ್ಟಿಕೊಂಡು ಮುಗ್ಧರನ್ನು ಉ(ದುರು)ಪಯೋಗ ಪಡಿಸಿಕೊಂಡಿರಬಹುದು…?!
ದೇಶದಲ್ಲಿರುವ ವಿವಿಧ ಧರ್ಮಗಳಲ್ಲಿ ಕ್ರೈಸ್ತ ಧರ್ಮವೂ ಇದ್ದು ದೇಶದಲ್ಲಿ ಆಚರಿಸಲ್ಪಡುವ ಹಬ್ಬಗಳಲ್ಲಿ ಕ್ರಿಸ್ಮಸ್-ನ್ಯು- ಇಯರ್ ಹಬ್ಬವೂ ಒಂದಾಗಿದ್ದು ಭಾರತವು ಸರ್ವಧರ್ಮ ಸಹಿಷ್ಣುತೆಯಲ್ಲಿ, ಕೂಡಿಬಾಳುವುದರಲ್ಲಿ ಪ್ರಪಂಚಕ್ಕೆ ರೋಲ್ ಮಾಡೆಲ್ ಅ್ಯಂಡ್ ದಿಬೆಸ್ಟ್ ದೇಶವೆಂದು ಇವತ್ತಿಗೂ ಸಾಬೀತು ಪಡಿಸುತ್ತಿದೆ! ರಾಜ್ಯದಾದ್ಯಂತ ಕ್ರೈಸ್ತ ಹೊಸ ವರ್ಷ ಆಚರಣೆಯು ಪ್ರಮುಖ ಸ್ಥಾನಮಾನ ಪಡೆದ ಉದಾಹರಣೆ ಬಹಳ ಕಾಲ ಇರಲಿಲ್ಲ. ಒಂದುವೇಳೆ ಇದ್ದರೂ ಆಕಾಲಕ್ಕೆ ಬ್ರಿಟಿಷ್ ಅಧಿಕಾರಿಗಳ ಆಡಳಿತ ಕೇಂದ್ರವಾಗಿದ್ದ ಬೆಂಗಳೂರು ಕಂಟೋನ್ಮೆಂಟಲ್ಲಿ ಮಾತ್ರವಿತ್ತು?!

ಸ್ವತಂತ್ರಾನಂತರ ರಾಜ್ಯದ ರಾಜಧಾನಿಯೂ ಐಟಿಬಿಟಿ ನಗರವೂ ಆಗಿರುವುದರಿಂದ ಬೆಂಗಳೂರಿನಲ್ಲಿ ಕ್ರಿಸ್ಮಸ್ ನ್ಯೂ ಇಯರ್ ಆಚರಣೆ ಮಾಡುವವರ ಸಂಖ್ಯೆಯೂ ಅಧಿಕ ಆಗಿರಬಹುದು? ಇಂತಹ ಜನಸಮೂಹ 2000ನೇ ಮಿಲೇನಿಯಂ ಇಯರ್ ಇಸವಿಯಿಂದ ನಿಧಾನವಾಗಿ ನಿಖರವಾಗಿ ಬೆಂಗಳೂರು ಮಂಗಳೂರು ಕೋಲಾರ ಮೈಸೂರು ಮುಂತಾದ ಪ್ರಮುಖ ನಗರ ಹಾಗು ಜಿಲ್ಲಾ ಕೇಂದ್ರಗಳಲ್ಲು ಕನ್ವರ್ಟೆಡ್ ಕ್ರಿಶ್ಚಿಯನ್ಸ್ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಕ್ರೈಸ್ತ ಹೊಸ ವರ್ಷಾಚರಣೆ ಹೆಚ್ಚು ಜನಪ್ರಿಯ ಆಗುತ್ತಿದೆ!
ಹೊಸವರ್ಷ ಆಚರಣೆ ಆಚರಿಸುತ್ತಿದ್ದ ಒಂದು ಗುಂಪನ್ನು ವಿಚಾರಿಸಿದಾಗ ತಿಳಿದುಬಂದ ವಿಚಿತ್ರ: “ನಾವು ಕನ್ವರ್ಟೆಡ್ ಕ್ರಿಶ್ಚಿಯನ್ಸ್? ಬೈಬಲ್ ಪೂರ್ತಿಓದಿಲ್ಲ, ನಮ್ಗೆ ಅರ್ಥವೆ ಆಗಲ್ಲ, ಸಂಪ್ರದಾಯ ಪದ್ಧತಿ ಗೊತ್ತಿಲ್ಲ! ನ್ಯು ಇಯರ್ ಮಾಡ್ತಿರೋದು ನಮ್ ಖುಷಿಗೆ, ಜಾಲಿಯಾಗಿರಕ್ಕೆ?!” ಎಂದು ಗ್ಯಾಂಗ್ ಹೇಳಿದಾಗ ಆಶ್ಚರ್ಯವಾಯ್ತು! ಸ್ವಲ್ಪ ದೂರದಲ್ಲಿದ್ದ ಮತ್ತೊಂದು ಗುಂಪಿನ ಹುಡುಗರನ್ನು ವಿಚಾರಿಸಿದಾಗ “ನಾವು ಕ್ರಿಶ್ಚಿಯನ್ಸಲ್ಲ! ಆದರೂ ನಮ್ಮ ಕ್ರಿಶ್ಚಿಯನ್ ಫ್ರೆಂಡ್ಸ್ ಗೋಸ್ಕರ ಅವರ ಜತೆ ನಾವು ಡ್ಯಾನ್ಸ್ ಆಡ್ತೀವಿ ಕುಡಿದು ತಿಂದು ಮಜಾ ಮಾಡ್ತೀವಿ” ಎಂದಾಗ ಶಾಕಾಯ್ತು! ಇಂಥ ಢೋಂಗಿಗಳು ಹೊಸವರ್ಷ ಆಚರಿಸುವುದು ಕೇವಲ ಫ್ಯಾಷನ್ ಗೆ ಕುಂಟುನೆಪಕ್ಕೆ ಎಂಬ ಕಟುಸತ್ಯ ಕ್ರೈಸ್ತಬಾಂಧವರಿಗೂ ತಿಳಿದಿದೆ?!

ಅನ್ಯಧರ್ಮದವರು ಅವರವರ ನ್ಯುಇಯರ್ ಆಚರಿಸುವಂತೆ ಹಿಂದೂಗಳು ಸಂಕ್ರಾಂತಿ ಯುಗಾದಿ ದೀಪಾವಳಿ ಹಬ್ಬದಂದು ಹೊಸವರ್ಷ ಆಚರಿಸುವುದು ಸರಿ! ‘ವಿಶ್ ಯು ಹ್ಯಾಪಿ ನ್ಯು ಇಯರ್’ ಹೇಳುವಂತೆ ವಿಶ್ಯು ಹ್ಯಾಪಿ ಸಂಕ್ರಾಂತಿ ಯುಗಾದಿ ದೀಪಾವಳಿ ಎಂದು ಹೇಳುವುದು ಸೂಕ್ತ-ಸಮಂಜಸ? ಬೇರೆ ಬೇರೆ ಧರ್ಮದವರು ತಂತಮ್ಮ ಹೊಸ ವರ್ಷದಂದು ಎಲ್ಲರಿಗೂ ಸಿಹಿ ಹಂಚುತ್ತ ಶುಭಾಶಯ ಹೇಳುವುದು ವಾಡಿಕೆಯಾಗಿದ್ದು ಈ ಸದಾಚಾರವು ನಿರಂತರ ಮುಂದುವರೆದರೆ ಮಾತ್ರ ಭಾರತದಲ್ಲಿ ಸರ್ವಧರ್ಮೀಯರು ಸ್ವಾ[ಧರ್ಮಾ]ಭಿಮಾನಿಯಾಗಿ ಬದುಕಲು ಅವಕಾಶವಿದ್ದು, ಶಾಂತಿ ನೆಮ್ಮದಿ ಮೂಡಿಸಿ “ವಿಭಿನ್ನತೆಯಲ್ಲು ಏಕತೆ” ಇದೆಯೆಂದು ಸಾಬೀತು ಪಡಿಸಲು ಸಾಧ್ಯವಾಗುವುದು!
ಇಷ್ಟಕ್ಕೂ ಹೊಸ ವರ್ಷ ಏಕೆ …? ‘ಟೆನ್ ಕಮ್ಯಾಂಡ್ ಮೆಂಟ್ಸ್’ ಪ್ರಚಾರಕ ‘ಮೋಸೆಸ್’ ನಂತರ 2022ವರ್ಷದ ಹಿಂದೆ ಡಿಸೆಂಬರ್ 24 ಮಧ್ಯರಾತ್ರಿ ಜೆರುಸೆಲಂ ಪಟ್ಟಣದಲ್ಲಿ ಜನಿಸಿದ ಯೇಸು ತನ್ನ ಪವಾಡದಿಂದ ಆಕರ್ಷಿಸಿ ಯಶಸ್ವಿಯಾದ. ಗುಡ್ ಫ್ರೈಡೆಯಂದು ತನ್ನನ್ನು ಶಿಲುಬೆಗೆ ಏರಿಸಿದ ಶತ್ರುಗಳ ಬಗ್ಗೆ ದೇವರೆ ಅವರನ್ನು ಕ್ಷಮಿಸು ಎಂದು ವಿನಂತಿಸಿದ. ನಂತರ ಹೋಲಿಸ್ಯಾಟರ್ಡೆ ಯಂದು ಶವ ಸಂಸ್ಕಾರಗೊಂಡ ಮೇಲೆ ಈಸ್ಟರ್ ಸಂಡೆ ಸಾವು ಗೆದ್ದು ಎದ್ದು ಬಂದು ಕ್ರೈಸ್ತ ಧರ್ಮ ಸ್ಥಾಪಿಸಿದ! ಕ್ರೈಸ್ತರಾದವರು ಪ್ರತಿ ಭಾನುವಾರ ಪ್ರಾರ್ಥನೆ ಮಾಡುವಂತೆಯೂ ಪ್ರತಿ ವರ್ಷ ಡಿಸೆಂಬರ್ 25ರಿಂದ ಜನವರಿ 1 ರವರೆಗೆ 8 ದಿನವೂ ಕ್ರಿಸ್ಮಸ್ ಆಚರಿಸೋ ಮುನ್ನ ಇಡೀ ತಿಂಗಳು ಕೆರೊಲ್ಗೀತೆ ಹಾಡಲೂ, ತನ್ನ ಲಾಸ್ಟ್ ಸಪ್ಪರ್ಗೆ ನೀಡಿದ್ದ ವೈನ್ ಅ್ಯಂಡ್ ಮೀಟ್ನ್ನು ಕ್ರೈಸ್ತರ ಮುಖ್ಯ ಆಹಾರವಾಗಿಸಿ, ಇದನ್ನೆ ಅತಿಥಿಗಳಿಗು ಬಡಿಸಿ ಸತ್ಕರಿಸಲು ತಿಳಿಸಿದ.

ನೆರೆಹೊರೆಯನ್ನು ಪ್ರೀತಿಸಿ ಗೌರವಿಸಲು ಮತ್ತು ಎಲ್ಲಾ ಇರುವವರು, ಏನೂ ಇಲ್ಲದವರಿಗೆ ದಾನ ಮಾಡಲು ಬೋಧಿಸಿದ! ಅಂದಿನಿಂದ ಪ್ರತಿವರ್ಷ ಡಿಸೆಂಬರ್ 24ರ ಮಧ್ಯರಾತ್ರಿಯಿಂದ 31ರ ಮಧ್ಯರಾತ್ರಿವರೆಗೆ ಪ್ರತಿದಿನವು ಕ್ರಿಸ್ಮಸ್ ಆಚರಿಸಿ, ಜನವರಿ 1ರಂದು ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ಬೈಬಲ್ನ ಹಳೆ ಒಡಂಬಡಿಕೆ ಮತ್ತು ಹೊಸ ಒಡಂಬಡಿಕೆ (OLD TESTAMENT & NEW TESTAMENT)ಗಳಲ್ಲು ಇದನ್ನೆ ಉಲ್ಲೇಖಿಸಿದ್ದು ಜನವರಿ-1 ಕ್ರೈಸ್ತರು ಹೊಸವರ್ಷ ಆಚರಿಸುವ ಪದ್ಧತಿಯಿದೆ.
“I came and saw under the Sun that the race is not to the swift; nor battle to the strong neither Yet bread to the wise, nor yet riches to men of understanding, nor yet favor to men of skill, but time and chance happenth to them all”
–OLD TESTAMENT
ಇದರ ಕನ್ನಡಾನುವಾದ ಏನೆಂದರೆ? “ನಾನು ಬಂದನಂತರ ಸೂರ್ಯನ ಅಡಿಯಲ್ಲಿರುವ ಈ ಜಗತ್ತನ್ನು ಕಂಡಾಗ ನನಗೆ ಅರಿವಾದುದು: ಓಟದಲ್ಲಿ ಯಾವಾಗಲು ಗೆಲುವು ಸಾಧಿಸುವವರು ಕೇವಲ ವೇಗ ಪಡೆದವರಲ್ಲ; ಯುದ್ಧದಲ್ಲಿ ಯಾವಾಗಲೂ ಗೆಲುವು ಸಾಧಿಸುವವರು ಕೇವಲ ಬಲ ಇದ್ದವರಲ್ಲ. ಪ್ರಪಂಚದಲ್ಲಿ ಯಾವಾಗಲೂ ಅನ್ನ ದೊರಕುವುದು ಪಾಂಡಿತ್ಯ ಉಳ್ಳವರಿಗೆ ಮಾತ್ರವಲ್ಲ, ಅರಿತವರಿಗೆ ಮಾತ್ರವೆ ಧನಕನಕವಲ್ಲ, ನಿಪುಣರಿಗೆ ಮಾತ್ರ ಸಂಭಾವನೆಯಲ್ಲ. ಹಾಗಾಗಿ, ಸಮಯ ಮತ್ತು ಅವಕಾಶ ಪ್ರತಿಯೊಬ್ಬರಿಗೂ ದೊರಕುತ್ತದೆ” –ಹಳೆ ಒಡಂಬಡಿಕೆ

ಕ್ರೈಸ್ತ ಧರ್ಮಕ್ಕೂ ಮುಂಚೆ ಸಾವಿರಾರು ವರ್ಷಗಳ ಹಿಂದೆಯೇ ಗೀತಾಚಾರ್ಯನು ಭಗವದ್ಗೀತೆಯಲ್ಲಿ ಉಪದೇಶಿಸಿದ್ದು: ಪರೋಪಕಾರಾರ್ಥಪುಣ್ಯಾಯ, ಪಾಪಾಯ ಪರಪೀಡನಾಂ, ದುಷ್ಟಶಿಕ್ಷಣಾಂ ಶಿಷ್ಟರಕ್ಷಣಾಂ, ಯದಾಯದಾಹಿ ಧರ್ಮಸ್ಯಃ ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇಯುಗೇ.” ಎಂಬ ಶ್ಲೋಕದ ಭಾವಾರ್ಥವನ್ನೆ ಕಾಕತಾಳೀಯವೆಂಬಂತೆ? ಯೇಸುಕ್ರಿಸ್ತನ ಸುವಾರ್ತೆಯಲ್ಲೂ ಇದನ್ನು ಉಪದೇಶಿಸಲಾಗಿ ಅದು ಹೀಗಿದೆ:-
ಎಲ್ಲವೂ ನಾನೆ, ಪುನರುತ್ಥಾನವೂ ನಾನೇ, ಜೀವವೂ ನಾನೇ, ಆಗಿದ್ದೇನೆ, ನನ್ನಲ್ಲಿ ವಿಶ್ವಾಸವಿಟ್ಟವರು ಸತ್ತರೂ ಬದುಕುವರು [ಯೋವಾನ್ನ:11:25]. ಆದಿಯಿಂದಲೂ ಲೋಕದಲ್ಲಿ ಹುಟ್ಟು ಕುರುಡಂಗೆ ದೃಷ್ಟಿ ನೀಡಿದ್ದನ್ನು ಯಾರೊಬ್ಬರು ಕೇಳಿದ್ದಿಲ್ಲ ಕಂಡಿದ್ದಿಲ್ಲ. ಯೇಸು ಕ್ರಿಸ್ತನು ದೇವರಿಂದ ಬಂದವನಲ್ಲದಿದ್ದರೆ ಇಂಥದ್ದೇನು ಮಾಡಲು ಸಾಧ್ಯವಾಗುತ್ತಿರಲಿಲ್ಲ [ಯೋವಾನ್ನ: 9:32-33] ಯೇಸುವಿನ ಸುವಾರ್ತೆಗಳನ್ನು ಕ್ರಿಸ್ಮಸ್ ಅವಧಿಯಲ್ಲಿ ಅಳವಡಿಸಿಕೊಳ್ಳಲು ಟ್ರು ಕ್ರಿಶ್ಚಿಯನ್ ಪ್ರಯತ್ನ ಪಡುವನೆಂದೂ, ಕ್ರೈಸ್ತರ ಬೇಡಿಕೆಗಳನ್ನು ಯೇಸುಕ್ರಿಸ್ತನು ಈಡೇರಿಸುವನೆಂದೂ ನಂಬಿರುವ ಕ್ರೈಸ್ತರು ಜನವರಿ 1 ರಂದು ಕ್ರೈಸ್ತಹೊಸವರ್ಷ ಆಚರಿಸುವುದರಲ್ಲಿ ಅರ್ಥವಿದೆ! ಹಿಂದೂಗಳಿಗೆ ಹೊಸವರ್ಷ ಏಕೆ ಹೇಗೆ ಪ್ರಶ್ನೆ ಉದ್ಭವಿಸುವುದು ಸಹಜ? ಬದಲಿಗೆ ನಿಗಧಿತವಾದ ಸಂಕ್ರಾಂತಿ-ಯುಗಾದಿ-ದೀಪಾವಳಿ ಯಂದು ಹೊಸವರ್ಷ ಆಚರಿಸುವುದು ಸ್ವಾಭಾವಿಕ.
ಸತತ 8 ದಿನ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುವ ಹಿಂದೂ ಧರ್ಮದ ಬಗ್ಗೆ ಗೌರವ ನಂಬಿಕೆ ಭಕ್ತಿ ವೃದ್ಧಿಸಿಕೊಂಡು ನಮ್ಮದು ಅಲ್ಲದ ಜನವರಿ-1ರ ಆಕರ್ಷಣೆ ವ್ಯಾಮೋಹದಿಂದ ಅಥವಾ ಅನ್ಯರ ದಾಕ್ಷಿಣ್ಯದಿಂದ ಕ್ರೈಸ್ತ ಹೊಸವರ್ಷ ಆಚರಿಸುವುದರಲ್ಲಿ ಅರ್ಥವಿಲ್ಲ! ಆಯಾಯ ಧರ್ಮದ ಸಂಸ್ಕೃತಿ ಸಂಪ್ರದಾಯ ಹಬ್ಬ ಆಚರಣೆ ಅವರವರಿಗೆ ಅಗತ್ಯವೂ ಶ್ರೇಷ್ಠವೂ ಹೌದು! ಆದ್ದರಿಂದ ಭಾರತದಂಥ ದೇಶದಲ್ಲಿ ಎಲ್ಲರುಸೇರಿ ಸದ್ಭಾವನೆಯಿಂದ ಕ್ರೈಸ್ತ ಹೊಸವರ್ಷ 2026 ಸ್ವಾಗತಿಸುವುದರಲ್ಲಿ ಯಾವುದೇ ಅಭ್ಯಂತರವಿಲ್ಲ?!

ಹೊಸವರ್ಷ ಹೀಗೆ ಆಚರಿಸಬಾರದು ಅಲ್ಲವೆ? ಹೊಸವರ್ಷಾಚರಣೆ ಹೆಸರಲ್ಲಿ ಡೌಲು ಢಂಬಾಚಾರ ಮೋಸ ವಂಚನೆ ಸುಳ್ಳು ಕಳ್ಳತನ ಹಾದರ ದ್ರೋಹ ಇರಬಾರದು. ಅಧಿಕಾರ ಆಸ್ತಿ ಅಂತಸ್ತು ಸ್ನೇಹ ಸಂಬಂಧ ಅಗತ್ಯ ವಸ್ತುಗಳ ದುರುಪಯೋಗ ಇರಲೇಬಾರದು. ಅನ್ನಬಟ್ಟೆ ವಿದ್ಯೆಸೇವೆ ದಾನಧರ್ಮ ವೇಸ್ಟ್ ಮಾಡಬಾರದು. ಅಶ್ಲೀಲ ನೃತ್ಯ ಅಥವಾ ಅಸಹ್ಯ ಕುಣಿತ, ಕರ್ಕಶ ಸಂಗೀತ/ಆರ್ಕೆಷ್ಟ್ರ, ಮುಂತಾದ ಕೀಳುಮನರಂಜನೆ ಇರಬಾರದು. ಮಕ್ಕಳು-ಮಹಿಳೆ-ವೃದ್ಧ ರೊಡನೆ ಅಸಭ್ಯವಾಗಿ ನಡೆದುಕೊಳ್ಳಬಾರದು.ದುಷ್ಟರ ಮತ್ತು ದುಶ್ಚಟದ ದಾಸರಾಗದೆ, ಡ್ರಗ್ಸ್, ಕಾಕಕ ಟೇಲ್ ಪಾರ್ಟಿ, ವೀಲಿಂಗ್ ಮಾರಕಪಟಾಕಿ ಇತ್ಯಾದಿ ಪರಿಸರಮಾಲಿನ್ಯ ನಿಯಮಬಾಹಿರ ಹೇಯಕೃತ್ಯಕ್ಕೆ ಅವಕಾಶ ಇರಬಾರದು.
ಕಾನೂನು-ಸುವ್ಯವಸ್ಥೆಗೆ ಧಕ್ಕೆಯಾಗುವಂತೆ, ಕೋಮುಗಲಭೆಗೆ ಅವಕಾಶನೀಡುವಂತೆ, ಅನ್ಯಧರ್ಮದವರನ್ನು ನಿಂದಿಸುವಂತೆ, ಸರ್ಕಾರಿ/ಖಾಸಗಿ/ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ-ನಷ್ಟಆಗುವಂತೆ ಆಚರಿಸ ಬಾರದು. ಆರ್ಥಿಕ ರಾಜಕೀಯ ಮಾನವ ಸಂಪನ್ಮೂಲ, ರಾಷ್ಟ್ರೀಯ ಅಥವ ಪಾರಂಪರಿಕ ಸಂಪತ್ತು ಹಾಳಾಗುವಂತೆ ಹಾಗೂ ಪೊಲೀಸ್ ಸೂಚನೆ ಮತ್ತು ಆದೇಶ ಉಲ್ಲಂಘಿಸಿ ಆಚರಿಸಬಾರದು. ಕಾನೂನು ಕೈಗೆತ್ತಿಕೊಂಡು ಕ್ರಿಮಿನಲ್ಆಗಿ ಜೈಲು ಸೇರುವಂತೆ ಆಚರಿಸಬಾರದು?!

ಹೀಗೆ ಆಚರಿಸಬೇಕು…. ಹಿಂದೂ ಧರ್ಮ (ಗುರು) ಪ್ರತಿಪಾದಿಸುವ ಮಾನವಧರ್ಮಕ್ಕಿಂತ ಮಿಗಿಲಾದಧರ್ಮ ಇನ್ನೊಂದಿಲ್ಲ! ಎಂಬ ಸಿದ್ಧಾಂತ/ವೇದಾಂತ ವನ್ನೇ ಬೇರೆಲ್ಲಾ ಧರ್ಮ ಸಂಸ್ಥಾಪಕರು ಪುನರುಚ್ಛರಿಸಿದ್ದಾರೆ! ಈ(ಕಹಿ)ಸತ್ಯವನ್ನು ಧರ್ಮಾಂಧ ಭಯೋತ್ಪಾದಕರು ಮಾತ್ರ ಒಪ್ಪಿಕೊಳ್ಳುತ್ತಿಲ್ಲ? ತಂತಮ್ಮ ಸ್ವಾರ್ಥಕ್ಕೆ ಅನ್ಯಧರ್ಮೀಯರನ್ನು ಅನ್ಯಾಯವಾಗಿ ಮಾರಣಹೋಮ ಮಾಡುತ್ತ ಮಾನವ-ಮಾನವ ನಡುವೆ ರಕ್ತನದಿ ಹರಿಸುತ್ತಿದ್ದಾರೆ! ಭಯೋತ್ಪಾದಕ ರಕ್ಕಸರನ್ನು ಕ್ಷಮಿಸದೇ ಎಲ್ಲಧರ್ಮೀಯರೂ ಬಹಿಷ್ಕರಿಸೋಣ?!
ಪರಿಸ್ಥಿತಿ ಅರಿತು ಪ್ರಜ್ಞಾವಂತರಾಗಿ ಕೆರೋಲ್ಗೀತೆ ಬೈಬಲ್ ಪ್ರವಚನ/ಪಠನ ಕ್ರಿಸ್ಮಸ್-ಟ್ರೀ, ಸಂಪ್ರದಾಯ ನೃತ್ಯ, ಸತ್ಸಂಗ ಸುವಾರ್ತೆ, ಪ್ರಾರ್ಥನೆ, ಕ್ಯಾಂಡ್ಲ್-ಪೂಜೆ, ಗುಂಪುಗಾಯನ, ಅತಿಥಿಸತ್ಕಾರ, ಸಾಮೂಹಿಕಭೋಜನ, ಕೇಕ್ ವೈನ್ ಕ್ವಿಜ್ ಕ್ರೀಡೆ ಮುಂತಾದ ಸ್ಪರ್ಧೆ/ಪ್ರದರ್ಶನ ಏರ್ಪಡಿಸುವಾಗ, ಸಾಂತಕ್ಲಾಸ್ ಮೂಲಕ ಬಣ್ಣಬಣ್ಣದ ಪೀಪಿ ಟೋಪಿ ಗ್ರೀಟಿಂಗ್ಸ್ ಸ್ವೀಟ್ಸ್ ಹಂಚುವಾಗ, ಗೃಹಪ್ರವೇಶ ಮದುವೆ ನಾಮಕರಣ ಇತ್ಯಾದಿ ಕಾರ್ಯಕ್ರಮ ಕೈಗೊಳ್ಳುವಾಗ, ಎಚ್ಚರಿಕೆ ವಹಿಸಬೇಕು. ಸ್ಥಳೀಯ ಭಾಷೆ- ಸಂಸ್ಕೃತಿಯನ್ನೂ, ಕಾನೂನು ಕಾಯ್ದೆ ಅನುಗುಣವಾಗಿ ಮಹಿಳೆ ಮಕ್ಕಳು ವೃದ್ಧರನ್ನೂ, ಗೌರವಿಸಿ ಪರಿಸರ ಆರೋಗ್ಯ ಶುಚಿತ್ವ ಹಾಳಾಗದಂತೆ ಸ್ನೇಹ ಶಾಂತಿ ಪ್ರೀತಿ ವಿಶ್ವಾಸದಿಂದ ದುಂದುವೆಚ್ಚ ಮಾಡದಂತೆ ಆಚರಿಸಬೇಕು.

ಪ್ರಸ್ತುತ ಯುದ್ಧಭೀತಿ ಆವರಿಸಿ ದೇಶದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರದಲ್ಲಿ ಕಷ್ಟ-ನಷ್ಟದ ದುಷ್ಟ[ರ]ಕಾಲ ವಕ್ಕರಿಸಿರುವಾಗ! ಹ್ಯಾಪಿ ನ್ಯು ಇಯರ್ ಗಾಗಿ ದುಂದುವೆಚ್ಚ ಮಾಡುವುದು ಅನಗತ್ಯ? ರೈತ ಯೋಧ ವೈದ್ಯ ಶಿಕ್ಷಕ ಆರಕ್ಷಕ ಆರೋಗ್ಯಕಾರ್ಯಕರ್ತ ಮುಂತಾದ ನಿಸ್ವಾರ್ಥ ಸಮಾಜ ಸೇವಕರಿಗೆ ಸಾಥ್ ನೀಡೋಣ! ತ್ಯಾಗ ಮತ್ತು ಬಲಿದಾನ ಮನೋಭಾವವುಳ್ಳ ಪ್ರತಿಯೊಬ್ಬ ಭಾರತೀಯರಿಗೆ ಹ್ಯಾಟ್ಸಾಫ್! ನಾವು ಪರಿಸ್ಥಿತಿ ಅರ್ಥ ಮಾಡಿಕೊಂಡು ಮಿತಿಯಾಗಿ ಖರ್ಚು ಮಾಡಿ ಸಾಮಾಜಿಕವಾಗಿ ಸಾರ್ಥಕ ರೀತಿ ಹೊಸ ಕ್ರೈಸ್ತವರ್ಷ ಆಚರಿಸೋಣ? ಎಲ್ಲರಿಗೂ 2026 ಹೊಸ ವರ್ಷದ ಶುಭಾಶಯಗಳು!









First class article written by NATRAJ sir, thanks sir
Mr. Joseph & Mrs.Rosy Joseph, frazer town, Bengaluru
First class article written by NATRAJ sir, thanks sir
Mr. Joseph & Mrs.Rosy Joseph, frazer town, Bengaluru cantonment
Thank you so much Lava sir 💖
Excellent exciting work with truthful examples and comparative studies 👏 👌 thanks with greetings to the author NATARAJA sir and JANAMANA KANNADA e-newsletter
Samson Joseph sadhu, NR mohalla, Mysore
Excellent exciting work with truthful examples and comparative studies 👏 👌 thanks with greetings to the author NATARAJA sir and JANAMANA KANNADA e-newsletter, yours sincerely, Samson Joseph sadhu, NR mohalla, Mysore
2026 ಹೊಸಕ್ಯೈಸ್ತ ವರ್ಷದ ಲೇಖನ ತುಂಬ ಅರ್ಥಪೂರ್ಣ ಮತ್ತು ಮಾರ್ಗದರ್ಶನ ನೀಡುವ ಉತ್ತಮ ಬರವಣಿಗೆಯ ಸಾಮಾಜಿಕ ಸಂದೇಶ. ಧನ್ಯವಾದ, ನಮಸ್ಕಾರ
ಪ್ರಮೀಳಾ ಜಯರಾಜ್, ಊರ್ಗಾಅಂ, kgf
2026 ನ್ಯು ಇಯರ್ ಆರ್ಟಿಕಲ್ ದಿ ಬೆಸ್ಟ್, ಥ್ಯಾಂಕ್ಯು ಸರ್
ಇಮಮ್ಮಾನ್ಯುಯೆಲ್, ಚಾಮರಾಜಪೇಟೆ, ಬೆಂಗಳೂರು 560004
ಹೊಸಕ್ಯೈಸ್ತ ವರ್ಷದ ಲೇಖನ 2026 ಮಾರ್ಗದರ್ಶನ ನೀಡುವ ಉತ್ತಮ ಬರವಣಿಗೆ, ಧನ್ಯವಾದ ಕುಮಾರಕವಿಯವರಿಗೆ
2026 ಹೊಸಕ್ಯೈಸ್ತ ವರ್ಷದ ಲೇಖನವು ಮಾರ್ಗದರ್ಶನ ನೀಡುವ ಉತ್ತಮ ಬರವಣಿಗೆ, ಧನ್ಯವಾದ ಕುಮಾರಕವಿಯವರಿಗೆ ಮತ್ತು ಪತ್ರಿಕೆಯವರಿಗೆ
ಕುಮಾರಕವಿಯವರ 2026 ನೇ ಹೊಸವರ್ಷದ ಲೇಖನವು ಇವತ್ತಿನ ಯುವ ಪೀಳಿಗೆಯ ಎಲ್ಲ ಧರ್ಮದವರಿಗೂ ಮಾದರಿಯಾಗಿದೆ. ಮಹಾದೇವ, ಮಹಾರಾಜ ಕಾಲೇಜು, ಸೂಪರಿಂಟೆಂಡೆಂಟ್, ಮೈವಿವಿ, ಮೈಸೂರು
2026 new year ಲೇಖನ ಪ್ರಕಟಿಸಿದ ಜನಮನ ಕನ್ನಡ ಪತ್ರಿಕೆಯವರಿಗೆ ಮತ್ತು ಉತ್ತಮವಾಗಿ ಮನ ಮುಟ್ಟುವಂತೆ ಬರೆದ ಕುಮಾರಕವಿಯವರಿಗೆ ಅನಂತಾನಂತ ಧನ್ಯವಾದ
Wonderful article by NATRAJ sir about NEW YEAR 2026. Thank you all., Pruthvi
ಈ ಹೊಸವರ್ಷ ಆಚರಿಸುವ ಬಗ್ಗೆ ಕುಮಾರಕವಿ ನಟರಾಜರವರು ತುಂಬ ಚೆನ್ನಾಗಿ ಬರೆದಿದ್ದಾರೆ.
ನವೀನ್ ಕುಮಾರ್, ಏರ್ ಪೋರ್ಟ್ ಕ್ಯಾಬ್ ಮಾಲೀಕ -ಚಾಲಕರು
ಈ 2026 ಮಾತ್ರವಲ್ಲ, ಸದಾ ಹೊಸ ವರ್ಷ ಆಚರಿಸುವ ಬಗ್ಗೆ ಕುಮಾರಕವಿ ನಟರಾಜರವರು ತುಂಬ ಚೆನ್ನಾಗಿ ಬರೆದಿದ್ದಾರೆ. ನವೀನ್ ಕುಮಾರ್, ಎಮ್.ಟಿ.
ಏರ್ ಪೋರ್ಟ್ ಕ್ಯಾಬ್ ಮಾಲೀಕ-ಚಾಲಕರು, ಕಲ್ಯಾಣನಗರ, ಬೆಂಗಳೂರು
ಹೊಸವರ್ಷ ಆಚರಣೆ ಹೇಗೆಮಾಡಬೇಕು, ಹೇಗೆಮಾಡಬಾರದು ಎಂಬುವ ಬಗ್ಗೆಲ್ಲ ಕವಿ ನಟರಾಜ ಅಣ್ಣಾವ್ರು ತುಂಬ ಅಚ್ಚುಕಟ್ಟಾಗಿ ಬರೆದಿದ್ದಾರೆ. ಶಾಂತಕುಮಾರ್, ಮಾದರಿ ರೈತ, ಮಂಡಕಳ್ಳಿ, ಮೈಸೂರು.
ಹೊಸವರ್ಷ ಆಚರಣೆ ಹೇಗೆಮಾಡಬೇಕು, ಹೇಗೆಮಾಡಬಾರದು ಎಂಬುವ ಬಗ್ಗೆಲ್ಲ ಕವಿ ನಟರಾಜ ಅಣ್ಣಾವ್ರು ತುಂಬ ಅಚ್ಚುಕಟ್ಟಾಗಿ ಬರೆದಿದ್ದಾರೆ. ಶಾಂತಕುಮಾರ್ ಮಾದರಿ ರೈತ ಮಂಡಕಳ್ಳಿ ಮೈಸೂರು ಸಿಟಿ
ಕುಮಾರಕವಿಯವರ 2026 ನೇ ಹೊಸವರ್ಷದ ಲೇಖನವು ಇವತ್ತಿನ ಯುವ ಪೀಳಿಗೆಯ ಎಲ್ಲ ಧರ್ಮದವರಿಗೂ ಮಾದರಿಯಾಗಿದೆ. ಮಹಾದೇವ, ಮಹಾರಾಜ ಕಾಲೇಜು, ಸೂಪರಿಂಟೆಂಡೆಂಟ್, ಮೈವಿವಿ, ಮೈಸೂರು 570005
2016 ನ್ಯು ಇಯರ್ ಲೇಖನ ಬಹಳ ಇಷ್ಟವಾಯಿತು. ನನಗೆ ಮತ್ತು ನಮ್ಮ ಇಡೀಕುಟುಂಬಥ ಎಲ್ಲರಿಗೂ….ಧನ್ಯವಾದ ಸರ್
2016 ನ್ಯು ಇಯರ್ ಲೇಖನ ಬಹಳ ಇಷ್ಟವಾಯಿತು. ನನಗೆ ಮತ್ತು ನಮ್ಮ ಇಡೀ ಕುಟುಂಬದ ಎಲ್ಲರಿಗೂ….ಧನ್ಯವಾದ ಸರ್
ಭಾರತ ದೇಶದಲ್ಲಿ ಎಲ್ಲಾ ಧರ್ಮದವರೂ ಕಣ್ಮುಚ್ಚಿ ಅಥವ ಅನರ್ಥವಾಗಿ ಆಚರಿಸುವ ಕ್ರೈಸ್ತ ಹೊಸವರ್ಷದ ಬಗ್ಗೆ ವಿವರವಾದ ಅಂಕಿಅಂಶ ಸಹಿತ ಬರೆದ ಲೇಖನ ಸಿಂಪ್ಲೀ ಸೂ..ಪ..ರ್… ಆಗಿದೆ. ಲೇಖಕ ಕುಮಾರಕವಿ ನಟರಾಜ ಅವರಿಗೆ ಮತ್ತು ಜನಮನ ಪತ್ರಿಕೆಯವರಿಗೆ ಧನ್ಯವಾದಗಳು…..
ಭಾರತ ದೇಶದಲ್ಲಿ ಎಲ್ಲಾ ಧರ್ಮದವರೂ ಕಣ್ಮುಚ್ಚಿ ಅಥವ ಅನರ್ಥವಾಗಿ ಆಚರಿಸುವ ಕ್ರೈಸ್ತ ಹೊಸವರ್ಷದ ಬಗ್ಗೆ ವಿವರವಾದ ಅಂಕಿಅಂಶ ಸಹಿತ ಬರೆದ ಲೇಖನ ಸಿಂಪ್ಲೀ ಸೂ..ಪ..ರ್… ಆಗಿದೆ. ಲೇಖಕ ಕುಮಾರಕವಿ ನಟರಾಜ ಅವರಿಗೆ ಮತ್ತು ಜನಮನ ಪತ್ರಿಕೆಯವರಿಗೆ ಧನ್ಯವಾದಗಳು ಅಭಿನಂದನೆಗಳು