ArticlesLatest

ಗುರು ಬ್ರಹ್ಮ ಗುರು ವಿಷ್ಣು ಗುರುದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇನಮಃ

ನಾಡಿನ ಶಿಕ್ಷಕ ಬಂಧುಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.. ಅಕ್ಷರದ ಕಾಳುಗಳನ್ನು ಎದೆಯಲ್ಲಿ ಬಿತ್ತಿದ ಅಕ್ಷರ ಬ್ರಹ್ಮರು, ಅರಿವೇ ಮಹಾಗುರು ಬದುಕ ಬೆಳಗಲು ದಾರಿ ತೋರುವ ದಾರಿದೀಪಗಳು, ಗುರು ಬ್ರಹ್ಮ ಗುರು ವಿಷ್ಣು ಗುರುದೇವೋ ಮಹೇಶ್ವರಃ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇನಮಃ

ಗುರುಗಳಾದವರು ತಾಯಿಯಂತೆ ಕಾರುಣ್ಯದ ಕಣ್ಣಿನಿಂದ ಅಕ್ಕರೆಯ ಬಸಿದು, ತಂದೆಯಂತೆ ಜವಾಬ್ದಾರಿ ಕಲಿಸಿ ಕಲಿಕಾರ್ಥಿಗಳನ್ನು ಒಂದು ಬದುಕಿನ ದಡ ಮುಟ್ಟಿಸಲು ಸದಾಕಾಲ ಹಂಬಲಿಸುವ ಹಾಗೂ ತಮ್ಮ ಸ್ವಂತ ಮಕ್ಕಳಿಗಿಂತ ವಿದ್ಯಾರ್ಥಿಗಳಿಗಾಗಿ ಜೀವವೀಣೆ ಮಿಡಿದು ಜೀವನ ಸಂಗೀತವನ್ನು ನುಡಿಸುವ ಗಾನ ಗಂಧರ್ವರು ಗುರುಗಳು ಈ ಎಲ್ಲಾ ಮಾತುಗಳು ಉಲ್ಲೇಖವಾಗಲು ಗುರುಗಳ ಮಹತ್ವ, ಅವರ ಮಹಿಮೆ ಎದ್ದು ನಿಲ್ಲುತ್ತದೆ.

ಗುರುವಿನ ಗುಲಾಮನಾಗುವ ತನಕ ದೊರಕದಣ್ಣ ಮುಕುತಿ ಎಂಬ ಮಾತು ಕೂಡ ಗುರುವಿನ ಸಾಮೀಪ್ಯದಿಂದ ಕಂಡುಕೊಳ್ಳ ಬೇಕಾಗಿರುವ ಬದುಕಿನ ಅಸ್ಮಿತೆಯನ್ನು ಸಾದರಪಡಿಸುತ್ತದೆ. ಅಂತೆಯೇ ಗುರು ಕಾರುಣ್ಯವಿಲ್ಲದೆ ಗುರಿ ತಲುಪಲಾಗದು ಅದಕ್ಕಾಗಿಯೇ ಎರಡು ಕೈಗಳನ್ನು ಜೋಡಿಸಿ ಏಕೋ ಭಾವದಿಂದತನ್ಮಯತೆಯಲ್ಲಿ ಮುಳುಗಿ ಬೇಡುವ ಹೆಬ್ಬಯಕೆ ಶ್ರೀ ಗುರುವೇ ಕೃಪೆಯಾಗು, ಅಲ್ಲದೆ ಆಚಾರ್ಯ ದೇವೋಭವ ಎಂಬ ಮಾತು ಕೂಡ ಗುರುದೇವರಿಗೆ ಸಮ ಎಂದು ಹೇಳಿ ಗುರುಗಳ ಸರ್ವ ಶ್ರೇಷ್ಠತೆಯನ್ನು ಎತ್ತಿ ಹಿಡಿಯುತ್ತವೆ.

ಗುರು ಎಂಬ ಸಂಸ್ಕೃತ ಪದದಲ್ಲಿ ಗು ಎಂದರೆ ಕತ್ತಲು, ರು ಎಂದರೆ ದೂರ ಮಾಡುವ ಅಥವಾ ಕಳೆಯುವ ಅಂದರೆ ಅಂತರಂಗದಲ್ಲಿ ತುಂಬಿರುವ ಕಗ್ಗತ್ತಲನ್ನು ದೂರ ಮಾಡಿ ಸುಜ್ಞಾನದ ದೀವಿಗೆಯನ್ನು ಬೆಳಗಿಸುವ ದಾರಿದೀಪವೇ ಗುರು. ಅಂತೆಯೇ ಗುರುವನ್ನು ಶಿಕ್ಷಕ, ಉಪಾಧ್ಯಾಯ, ಮೇಷ್ಟ್ರು, ಅಧ್ಯಾಪಕ, ಕಲಿಸುವಾತ, ಮಾರ್ಗದರ್ಶಕ ಇತ್ಯಾದಿ ಹೆಸರುಗಳಿಂದಲೂ ಕರೆದರೂ ಗುರು ಎಂಬ ಪದವೇಯುಕ್ತವಾಗಿರುವುದು. ಆದರೆ ಇಂದು ಗುರು ಎಂಬ ಸಭ್ಯ ಪದವನ್ನು ಅಸಭ್ಯಗೊಳಿಸಿ ಸಂಕುಚಿತ ಅರ್ಥವಾಗಿ ಬಳಸಲಾಗುತ್ತಿರುವುದು ಮನಕೆ ದುಗುಡುವನ್ನು ತಂದಿದೆ.

ಶಿಕ್ಷಕರ ದಿನಾಚರಣೆಯ ಹಿನ್ನೆಲೆ ನೋಡಿದ್ದೇ ಆದರೆ, ಶಿಕ್ಷಕರನ್ನು ಹಿರಿಯಭಾವದಿಂದ ಗೌರವಿಸುವ ಉದ್ದೇಶದಿಂದ ಎಲ್ಲಾ ದೇಶಗಳ ಶಿಕ್ಷಕರ ದಿನವನ್ನು ಆಚರಿಸುವ ಸಂಪ್ರದಾಯವನ್ನು ಉಳಿಸಿಕೊಂಡು ಬಂದಿವೆ. ಬೇರೆ ಬೇರೆ ದೇಶಗಳು ಬೇರೆ ಬೇರೆ ದಿನದಂದು ಶಿಕ್ಷಕರ ದಿನಾಚರಣೆ ಆಚರಿಸಿದರೂ ಭಾರತದಲ್ಲಿ ಮಾತ್ರ ಸೆಪ್ಟೆಂಬರ್ 5 ತಾರೀಖಿನಂದು ಆಚರಿಸುವುದಕ್ಕೆ ಒಂದು ಮಹತ್ವಪೂರ್ಣವಾದ ಹಿನ್ನಲೆಯಿದೆ ಭಾರತದ ಎರಡನೇ ರಾಷ್ಟ್ರಪತಿಗಳಾದ ಡಾ. ಸರ್ವೆಪಲ್ಲಿ ರಾಧಾಕೃಷ್ಣನ್’ ಇವರು ಶಿಕ್ಷಣದ ಬಗ್ಗೆ ಅತ್ಯಂತ ಗೌರವ, ಪ್ರೀತಿ, ನಿಷ್ಠೆಯನ್ನು ಹೊಂದಿದ್ದರು.

ಸ್ವತಃ ಶಿಕ್ಷಕರಾಗಿ ಹಲವಾರು ವರ್ಷಗಳ ಕಾಲ ಸೇವೆಗೈದಿರುವ ಡಾ.ರಾಧಾಕೃಷ್ಣನ್, ಭಾರತ ಕಂಡ ಅಗ್ರಗಣ್ಯ ಶಿಕ್ಷಕರಲ್ಲಿ ಪ್ರಮುಖರಾಗಿದ್ದಾರೆ. ಶಿಕ್ಷಕರಾಗಿದ್ದ ‘ಡಾ. ಸರ್ವೆಪಲ್ಲಿ ರಾಧಾಕೃಷ್ಣನ್’ 1962 ರಲ್ಲಿ ಭಾರತದ ರಾಷ್ಟ್ರಪತಿಯಾದಾಗ ಇವರ ಶಿಷ್ಯರು ಮತ್ತು ಸ್ನೇಹಿತರು ಸೆಪ್ಟೆಂಬರ್ 5ರಂದು ಅವರ ಹುಟ್ಟಿದ ದಿನವನ್ನು ಆಚರಿಸಲು ಕೇಳಿದಾಗ ಶಿಕ್ಷಕ ಹುದ್ದೆಯನ್ನು ಅಪಾರ ಗೌರವಿಸುತ್ತಿದ್ದ ರಾಧಾಕೃಷ್ಣನ್ ನೀವು ನನ್ನ ಹುಟ್ಟಿದ ದಿನವನ್ನು ಬೇರೆಯಾಗಿಯೇ ಆಚರಿಸುವುದಾದರೆ ಇಂದಿನಿಂದ ಸೆಪ್ಟೆಂಬರ್ 5ನ್ನು ‘ಶಿಕ್ಷಕರ ದಿನ’ವನ್ನಾಗಿ ಆಚರಿಸಿ ಎಂದರು.

ಅಂದಿನಿಂದ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲಾಗುತ್ತಿದೆ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಜನಿಸಿದ್ದು 5 ಸೆಪ್ಟೆಂಬರ್ 1888 ರಂದು ದಕ್ಷಿಣ ಭಾರತದ ತಮಿಳುನಾಡಿನ ತಿರುತ್ತಣಿ ಎಂಬ ಗ್ರಾಮದಲ್ಲಿ. ಸರ್ವೆಪಲ್ಲಿ ಎನ್ನುವುದು ಅವರ ಮನೆತನದ ಹೆಸರು. ತಂದೆ ಸರ್ವಪಲ್ಲಿ ವೀರಸ್ವಾಮಿ ತಾಯಿ ಸೀತಮ್ಮ ಅವರು ತಮ್ಮ ಮಗನನ್ನು ಅತ್ಯಂತ ಅಕ್ಕರೆಯಿಂದ ರಾಧಾಕೃಷ್ಣನ್ ಎಂದು ಕರೆದರು. ಮುಂದೆ ಭಾರತಾಂಬೆಯ ಹೆಮ್ಮೆಯ ಮಗನಾಗಿ ರಾಷ್ಟ್ರನಾಯಕರಾಗಿ, ಭಾರತರತ್ನವಾಗಿ ಕಂಗೊಳಿಸಿ ಶಿಕ್ಷಣ ಕ್ಷೇತ್ರದಲ್ಲಿ ಆರದ ದೀಪ- ಅನುಗಾಲ ಮಿನುಗುತಾರೆ ಗುರುತಿಸಿಕೊಂಡರು.

ನಮ್ಮ ಹುಟ್ಟಿನಿಂದ ಸಾವಿನವರೆಗೆ ಹಲವು ಗುರುಗಳು ನಮ್ಮ ಜೀವನದಲ್ಲಿ ಬಂದು ಒಂದಲ್ಲಾ ಒಂದು ರೀತಿಯಲ್ಲಿ ಬದುಕಿನ ಪಾಠವನ್ನು ಹೇಳಿಕೊಟ್ಟು ತೀರಿಸಲಾರದಷ್ಟು ಋಣವನ್ನು ನಮ್ಮ ಮೇಲೆ ಹೊರೆಸುತ್ತಾರೆ. ಅದಕ್ಕಾಗಿಯೇ  ಹೇಳಿರುವುದು ಏಕವರ್ಣಂ ಕಲಿಸಿದಾತ ಗುರು ಎಂದು ಗುರುಗಳು ತಮ್ಮ ಶಿಷ್ಯರಿಗೆ ನೈತಿಕತೆ, ಮಾನವೀಯತೆ, ಸಂಸ್ಕೃತಿ, ಸಂಸ್ಕಾರ, ಆಚಾರ-ವಿಚಾರ, ನಡೆನುಡಿಯೊಂದಿಗೆ ಕಲಿಸುತ್ತಾರೆ. ಕಲಿಸಿ ಒಂದು ಮಗುವಿನ ಭರವಸೆಯ ಕುಡಿನೋಟವನ್ನು ಚಿಗುರಿಸಲು ಪೂರಕವಾಗುತ್ತಾರೆ.

ವೃತ್ತಿ ಜೀವನವನ್ನು ಹೇಗೆ ಕಟ್ಟಿಕೊಳ್ಳಬೇಕು. ಎಂಬುದನ್ನು ಸಾಧಕ ಗುರುಗಳು ತಿಳಿಸಿ ಕೊಡು ತ್ತಾರೆ. ಅಂತೆಯೇ ಹಸಿ ಮಣ್ಣಿನಂತಿರುವ ನಮ್ಮನ್ನು ತಿದ್ದಿತೀಡಿ ರೂಪುರೇಷೆಗಳನ್ನು ರೂಪಿಸಿ ಒಂದು ವ್ಯಕ್ತಿತ್ವವು ನಿರ್ಮಾಣವಾಗಲು ಕಾರಣೀಭೂತರಾಗಿರುತ್ತಾರೆ. ಗುರುಗಳು ಒಬ್ಬ ವ್ಯಕ್ತಿಯ ಮೇಲೆ ಪ್ರಭಾವ ಬೀರಿ ವ್ಯಕ್ತಿಯನ್ನು ಒಂದು ಶಕ್ತಿಯಾಗಿ ಮಾಡಿ ಆಗಾದವಾದ ಸಾಧನೆಯ ಸೃಷ್ಟಿ ಮಹಾನ್ ಗುರುಗಳು ಹೇಗೆ ಎಂದರೆ ತಾವು ಮಾಡಲು ಸಾಧ್ಯವಿಲ್ಲ. ಸಾಧನೆಯನ್ನು ತನ್ನ ವಿದ್ಯಾರ್ಥಿಗಳು ಮಾಡಬೇಕು ಎಂಬ ಸಂಕಲ್ಪ ಬಲವನ್ನು ಅನುಗಾಲ ಹೊಂದಿರುತ್ತಾರೆ. ಅದರಂತೆ ಗುರುಗಳು ಸಂಕಲ್ಪ ಬಲವನ್ನುಶಿಷ್ಯರಾದವರು ತಮ್ಮ ಮನೆಗಳಲ್ಲಿ ನೆಲೆಗೊಳಿಸಿಕೊಂಡು ಸಿದ್ದಿಪಡೆದದ್ದೆ ಅತ್ಯಾನಂದವಾಗುವುದರಲ್ಲಿ ಎಳ್ಳಷ್ಟುಅನುಮಾನವಿಲ್ಲ. ಗುರುವಿನ ಗುಲಾಮನಾಗುವ ತನಕ ದೊರಕದಣ್ಣ ಮುಕುತಿ ಎಂಬ ವಾಸವಾಣಿನೆನಪಾಗುತ್ತಿದೆ.

ಇಲ್ಲಿ ಗುಲಾಮ ಎಂದರೆ ಸೇವಕ ಎಂಬ ಸಂಕುಚಿತ ಅರ್ಥ ಎಂದು ಪರಿಭಾವಿಸದೆ ಗುರುವಿನ ಸಾಮಿಪ್ಯದಲ್ಲಿ ಸದಾಕಾಲ ಇರುವುದು ಎಂದರ್ಥ. ಬಸವಣ್ಣನವರು ಶಿವಪಥವನ್ನು ಅರಿಯ ಬೇಕಾದರೆ ಗುರುಪಥವನ್ನು ಅರಿಯಬೇಕು ಎಂದಿದ್ದಾರೆ. ಶಂಕರಚಾರ್ಯರು ಹೇಳುವಂತೆ ಎಷ್ಟೇ ಸಂಪತ್ತಿದ್ದರೂ ಗುರುವಿನ ಬಗ್ಗೆ ಅಪಾರ ಶ್ರದ್ದೆ ನಂಬಿಕೆ ಇಲ್ಲದಿದ್ದರೆ ಆ ಸಂಪತ್ತೆಲ್ಲಾ ವ್ಯರ್ಥ ಎಂದಿದ್ದಾರೆ. ಈ ಎಲ್ಲಾ ಮಾತುಗಳು ಗುರುವಿನ ಮಹತ್ವವನ್ನು ಸಾರಿ ಹೇಳುತ್ತವೆ. ಮಹಾನ್ ಗುರುಗಳು ಚೇತನ ಗಳಾಗಿದ್ದು ಚೈತನ್ಯದ ಚಿಲುಮೆಯು ಆಗಿರುತ್ತಾರೆ. ಸದಾ ಉತ್ಸಾಹದಿಂದ ಇರುವ ಗುರುಗಳು ತಮ್ಮ ವಿದ್ಯಾರ್ಥಿಗಳಿಗೆ ಉತ್ಸಾಹದ ಅಮೃತಧಾರೆಯೆರೆದು ಸದಾ ಉತ್ಸಾಹದ ಬುಗ್ಗೆಗಳಾಗಿಸುವ ಜೀವಜಲದ ಜಲಪಾತವಾಗಿಸುವ ಶ್ರೇಷ್ಠಕಾರ್ಯ ನಿಜಕ್ಕೂ ಶ್ಲಾಘನೀಯ..

ಇದನ್ನೂ ಓದಿ: ಗುರುವಿಲ್ಲದ ಜ್ಞಾನ, ದಿಕ್ಕಿಲ್ಲದ ನಾವೆ… ಜ್ಞಾನವೇ ಬೆಳಕು, ಗುರುವೇ ಅದರ ದೀಪ…

admin
the authoradmin

Leave a Reply