CinemaLatest

ಚಂದನವನದ ಹಿರಿಯ ನಟಿ ಹರಿಣಿರವರ ಬಗ್ಗೆ ನಿಮಗೆ ಗೊತ್ತಾ? ಅವರ ಸಿನಿ ಜರ್ನಿ ಹೇಗಿತ್ತು?

ಇವತ್ತಿನ ತಲೆಮಾರಿಗೆ ಹಿರಿಯ ನಟಿ ಹರಿಣಿರವರ ಬಗ್ಗೆ ಗೊತ್ತಿರಲಿಕ್ಕಿಲ್ಲ.. ಆದರೆ ಚಂದನವನದ ಬಗ್ಗೆ ತಿಳಿಯುತ್ತಾ ಹೋದರೆ ಅಥವಾ ಹಳೆಯ ಚಿತ್ರಗಳನ್ನು  ನೋಡಿದರವರಿಗೆ ಅವರ ನಟನೆ ಗಮನಸೆಳೆದಿರುತ್ತದೆ. ಜತೆಗೆ ಮುಖ ಪರಿಚಯವೂ ಇದ್ದೇ ಇರುತ್ತದೆ. ಹೀಗಾಗಿ ಅವರ ಬಗ್ಗೆ ತಿಳಿಯುತ್ತಾ ಹೋದರೆ ನಮಗೆ ಹೆಮ್ಮೆ ಎನಿಸುತ್ತದೆ… ಇಂತಹ ಮೇರುನಟಿಯ ಬಗ್ಗೆ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ ಅವರು ಅಕ್ಷರಗಳ ಮೂಲಕ ಪರಿಚಯಿಸುವ ಕೆಲಸವನ್ನು ಇಲ್ಲಿ ಮಾಡಿದ್ದಾರೆ… ನೀವೊಮ್ಮೆ ಓದಿ ಬಿಡಿ….

ಇದನ್ನೂ ನೋಡಿ: ಚಂದನವನದಲ್ಲಿ ಮಿಂಚಿ ಮರೆಯಾದ ಹಿರಿಯ ನಟಿ ಕಮಲಾಬಾಯಿರವರ ಬಗ್ಗೆ ನಿಮಗೆಷ್ಟು ಗೊತ್ತು?

1936ರಲ್ಲಿ ದಕ್ಷಿಣ ಕನ್ನಡದ ಉಡುಪಿಯ ಸುಸಂಸ್ಕೃತ ಸತ್ಸಂಪ್ರದಾಯ ಕುಟುಂಬದ ಶ್ರೀಮತಿ ಭಾರತಿ ಮತ್ತು ಶ್ರೀನಿವಾಸ ಉಪಾಧ್ಯ ದಂಪತಿಗೆ 4ನೇ ಮಗುವಾಗಿ ಜನಿಸಿದರು ಹರಿಣಿ. ಹಾಲುಗಲ್ಲದ ಹಸುಳೆಯಾಗಿದ್ದಾಗ ಸ್ಪಷ್ಟವಾಗಿ ವೇಗವಾಗಿ ಕನ್ನಡ ಭಾಷೆಯನ್ನು ಹರಳು ಹುರಿದಂತೆ ಮಾತನಾಡಿ ಬಂಧು ಬಳಗ ಮಿತ್ರರು ನೆರೆಹೊರೆ ಮುಂತಾದವರ ತನುಮನ ಗೆದ್ದರು. 1946ರಲ್ಲಿ 9 ವರ್ಷದವಳಿದ್ದಾಗ ಬಾಲನಟಿಯಾಗಿ ‘ಶ್ರೀಮುರುಗನ್’ ಮತ್ತು ‘ಕನ್ನಿಕಾ’ ತಮಿಳು ಚಿತ್ರಗಳಲ್ಲಿ ನಟಿಸುವಾಗ ಉತ್ತಮ ರೀತಿಯ ತಮಿಳು ಡೈಲಾಗ್ ಡೆಲಿವರಿ ಮಾಡಿ ನಿರ್ಮಾಪಕರಿಂದಲೆ ಒಂದು[ಬೆಳ್ಳಿ] ರೂಪಾಯಿ ಬಹುಮಾನ ಪಡೆದುದು ಗತವೈಭವದ ಇತಿಹಾಸ!

1951ರಲ್ಲಿ ತೆರೆಕಂಡ ‘ಜಗನ್ಮೋಹಿನಿ’ ಕನ್ನಡ ಫಿಲಂ ಮೂಲಕ ತಮ್ಮ 14ನೇ ವಯಸ್ಸಿಗೆ ಹೀರೋಯಿನ್ಆಗಿ ಎಂಟ್ರಿ ಕೊಟ್ಟರು. ಈ ಚಿತ್ರವು ಬೆಳ್ಳಿ ಮಹೋತ್ಸವ ಪ್ರದರ್ಶನ ಕಂಡ ಕನ್ನಡದ ಚೊಚ್ಚಲ ಸಿನಿಮ ಎನಿಸಿತು! ಇದಾದ ನಂತರ ಮಲಯಾಳಂ [ಸ್ನೇಹಸೀಮ], ತಮಿಳು[ಪುಣ್ಯವತಿ] ಸೇರಿದಂತೆ ಸತತ ಐದಾರು ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಆಕಾಲಕ್ಕೆ ದಕ್ಷಿಣ ಭಾರತದ ಮೋಸ್ಟ್ ಡಿಮಾಂಡೆಡ್- ಬ್ಯುಸಿಯೆಸ್ಟ್ ಯಾಕ್ಟ್ರೆಸ್ ಎನಿಸಿದ್ದು ಇತಿಹಾಸ. ತಮ್ಮ 2ನೇ ಚಿತ್ರದ ಶೂಟಿಂಗ್ ಪ್ರಾರಂಭ ಆಗುವಷ್ಟರಲ್ಲಿ ಇವರ ಅಭಿಮಾನಿಗಳಿಂದ ಅಂದಿನ ಕಾಲಕ್ಕೆ ಸುಮಾರು 500ಕ್ಕೂ ಹೆಚ್ಚಿನ ಮೆಚ್ಚುಗೆ ಪತ್ರಗಳು ಚಿತ್ರೀಕರಣ ಸ್ಥಳಕ್ಕೆ ತಲುಪಿದ್ದು ನಿತ್ಯನೂತನ ದಾಖಲೆ! ಈ ಬಗ್ಗೆ ಭಾರತೀಯ ಅಂಚೆ ಇಲಾಖೆ ಪತ್ರಿಕಾ ಸುದ್ದಿ ನೀಡಿ ಇದೊಂದು ಅಚ್ಚರಿಯ ದಾಖಲೆ ಎಂದು ಬಣ್ಣಿಸಿತ್ತು! ಇಂಥದ್ದೊಂದು ದಾಖಲೆಯನ್ನು ಮುರಿಯಲು ಅಥವ ಸರಿಗಟ್ಟಲು ಇವತ್ತಿಗೂ ಆಗಲೇಇಲ್ಲ?!

ಇದನ್ನೂ ನೋಡಿ:ಆ ಕಾಲದ ತಾರಾಜೋಡಿ ಪ್ರತಿಮಾದೇವಿ- ಶಂಕರ್ ಸಿಂಗ್… ಪ್ರತಿಮಾದೇವಿಯ ಸಿನಿಮಾ ಬದುಕು ಹೇಗಿತ್ತು?

1951ರಲ್ಲಿ ಪ್ರತಿಮಾದೇವಿ ನಿರ್ಮಾಣದ ಜಗನ್ಮೋಹಿನಿ ಚಿತ್ರವು 25 ವಾರ ಪ್ರದರ್ಶನ ಕಂಡ ಮೊಟ್ಟಮೊದಲ ಕನ್ನಡ ಫಿಲಂ. ಹರಿಣಿಯವರ ಮೊಟ್ಟಮೊದಲ ಈ ಚಿತ್ರದಲ್ಲಿ ‘ಸ್ವಿಮ್‍ಡ್ರೆಸ್’ ತೊಟ್ಟು ‘ಸೆನ್ಸಾರ್‍ಬೋರ್ಡ್’ ಕೆಂಗಣ್ಣಿಗೆ ಗುರಿಯಾದ ದೇಶದ ಪ್ರಪ್ರಥಮ ನಟಿ ಎನಿಸಿಕೊಂಡರು! ಇಂಥ ವಿನೂತನ ದಾಖಲೆ ಸೃಷ್ಟಿಸಿದ ಹರಿಣಿ ಒಂದೇ ರಾತ್ರಿಯಲ್ಲಿ ದೇಶಾದ್ಯಂತ ಫೇಮಸ್ ಆದರು! ಇಂಥ ದೃಶ್ಯ ಇರುವ ಪ್ರಪ್ರಥಮ ಕನ್ನಡ ಚಿತ್ರ ಎಂಬ ದಾಖಲೆ ನಿರ್ಮಿಸಿದ್ದೂ ಇತಿಹಾಸ?! ಧಿಡೀರನೆ ಕೋಟ್ಯಾಂತರ ಭಾರತೀಯರ ನಾಲಿಗೆಮೇಲೆ ಇವರ ಹೆಸರು, ಪಾತ್ರ ಹರಿದಾಡಿತು!

ಇವರ ಮೊಟ್ಟಮೊದಲ ಫಿಲಂ ಸಿಲ್ವರ್ ‍ಜ್ಯೂಬಿಲಿ ಆಚರಿಸಿ ಇವರ (ಹಿತ)ಶತ್ರುಗಳೂ ಬಾಯಿ ಮುಚ್ಚಿಕೊಳ್ಳುವಂತೆ ಮಾಡಿತು! ಚಿತ್ರದ ನಟ-ನಿರ್ಮಾಪಕ-ನಿರ್ದೇಶಕ ಡಿ.ಶಂಕರ‍ಸಿಂಗ್‍ ತಮ್ಮ ಪತ್ನಿ ಪ್ರತಿಮಾದೇವಿಯೂ ಇದರಲ್ಲಿ ನಟಿಸುವಂತೆ ನೋಡಿಕೊಂಡದ್ದು ಇನ್ನೊಂದು ವಿಶೇಷತೆ! ಈ ಚಿತ್ರವು 1978ರಲ್ಲಿ ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಇದೇ ಹೆಸರಿನಲ್ಲಿ ರಿಮೇಕ್ ಆಗಿ ಭರ್ಜರಿ ಸಕ್ಸಸ್ ಕಂಡಿತು!

ಈ ರೀತಿ ಧೂಳೆಬ್ಬಿಸಿದ ಚೊಚ್ಚಲ ಕನ್ನಡ ಚಿತ್ರ ಜಗನ್ಮೋಹಿನಿ ಹಲವಾರು ಹೊಸ ದಾಖಲೆಗಳನ್ನ ಸೃಷ್ಟಿಸಿತು! ಸುಮಾರು 31 ವರ್ಷದ ನಂತರ 2009ರಲ್ಲಿ ಮತ್ತೊಮ್ಮೆ ಸೇಮ್ ಟೈಟಲ್‍ನಿಂದ ಎರಡನೇ ಸಲವೂ ತಮಿಳು ಭಾಷೆಯಲ್ಲಿ ರಿಮೇಕ್‍ಗೊಂಡು ವಿದ್ಯುತ್ ಸಂಚಲನ ಉಂಟುಮಾಡಿದ ಏಕೈಕ ಕನ್ನಡ ಸಿನಿಮಾ ಒಂದುಕಾಲಕ್ಕೆ ಹರಿಣಿ- ರಾಜ್‍ಕುಮಾರ್ ಜೋಡಿಯು ಹತ್ತಾರು ಸಿನಿಮಾದಲ್ಲಿ ಅತ್ಯಂತ ಯಶಸ್ವಿಯಾಗಿತ್ತು! ಉದಾ. ನಾಂದಿ. ಈ ಚಿತ್ರದ “ಹಾಡೊಂದ ಹಾಡುವೆ ನೀಕೇಳು ಮಗುವೆ”ಹಾಡು ಇವತ್ತಿಗೂ ಸಹ ಜನಪ್ರಿಯ ಚಿತ್ರಗೀತೆ.

ಇದನ್ನೂ ನೋಡಿ: ನಾಟಕರತ್ನ ಗುಬ್ಬಿವೀರಣ್ಣರ ಪತ್ನಿ ಮೇರು ನಟಿ ಬಿ.ಜಯಮ್ಮರವರ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಮಾಹಿತಿ..

ತಮಿಳು ತೆಲುಗು ಮಲಯಾಳಂ ಹಿಂದಿ ಭಾಷೆಯ ಚಿತ್ರಗಳಲ್ಲೂ ನಟಿಸಿದ ಪ್ರಪ್ರಥಮ ಪಂಚಭಾಷಾ ಕನ್ನಡ ನಟಿ! ಚಿತ್ರರಂಗದ ಇತಿಹಾಸದಲ್ಲೆ ಮೊದಲ ಬಾರಿ ಅತಿ ಕಿರಿಯ ವಯಸ್ಸಿಗೆ ಹೀರೋಯಿನ್ ಪಟ್ಟ ಗಿಟ್ಟಿಸಿದ ಹರಿಣಿ ಖ್ಯಾತ ಚಿತ್ರೋದ್ಯಮಿಗಳಾದ ವಾದಿರಾಜ್-ಜವಹರ್ ಬ್ರದರ್ಸ್ ಸಹೋದರಿ. ಅಚ್ಚಕನ್ನಡಿಗರಾದ ಈ ಮೂವರು ಒಡಹುಟ್ಟಿದವರು ಸುಮಾರು 50ಕ್ಕೂ ಹೆಚ್ಚು ಕನ್ನಡ ತೆಲುಗು ತಮಿಳು ಮಲಯಾಳಂ ಹಿಂದಿ ಸಿನಿಮಾಗಳನ್ನು “ವಿಜಯಭಾರತಿ” ಮತ್ತು “ಶ್ರೀಭಾರತಿಚಿತ್ರ” ಸಂಸ್ಥೆಗಳ ಬ್ಯಾನರ್ ಅಡಿಯಲ್ಲಿ ನಿರ್ಮಿಸಿ ಬೆಳ್ಳಿತೆರೆಗೆ ಅರ್ಪಿಸಿ ಭಾರತೀಯ ಚಲನಚಿತ್ರ ಕ್ಷೇತ್ರಕ್ಕೆ ಅಮೋಘ ಕೊಡುಗೆ ನೀಡಿದ್ದಾರೆ.

1972ರಲ್ಲಿ ವಿವಾಹವಾದ ಹರಿಣಿ 12ವರ್ಷಕಾಲ ಸೌದಿ ಅರೇಬಿಯಾದಲ್ಲಿ ವಾಸವಿದ್ದು ಆ ನಂತರ ಮತ್ತೆ ಭಾರತಕ್ಕೆ ಹಿಂದಿರುಗಿ ತಮ್ಮ ಕುಟುಂಬದ ಸದಸ್ಯರೊಡನೆ ತುಂಬು ಜೀವನದ ಸಾರ್ಥಕ ಬದುಕು ಸಾಗಿಸುತ್ತ ಈಗಲೂ ಬೆಂಗಳೂರು ನಗರದಲ್ಲಿ ವಾಸ ಮಾಡುತ್ತಿದ್ದಾರೆ. ಪ್ರಸ್ತುತ ದ.ಭಾರತದ ಹಿರಿಯ ನಿರ್ಮಾಪಕಿ-ನಿರ್ದೇಶಕಿ-ನಟಿಯರಲ್ಲಿ ಈ ಕನ್ನಡತಿ ಅಗ್ರಗಣ್ಯರು. ಪದ್ಮಶ್ರೀ ಪ್ರಶಸ್ತಿ, ರಾಷ್ಟ್ರಪ್ರಶಸ್ತಿ, ಬೇರೆಬೇರೆ ರಾಜ್ಯದ ಪ್ರಶಸ್ತಿ, ಕರ್ನಾಟಕ ರಾಜ್ಯ ಶ್ರೇಷ್ಠನಟಿ ಪ್ರಶಸ್ತಿ, ಡಾ.ರಾಜಕುಮಾರ್ ಸ್ಮಾರಕ ಪ್ರಶಸ್ತಿ, ಡಾ.ಬಿ.ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿ, ಮುಂತಾದ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದ ಮೇರುನಟಿ ಹರಿಣಿಯು ಅತಿಹೆಚ್ಚು ಪ್ರಶಸ್ತಿಗಳನ್ನು ಪಡೆದ ಹೀರೋಯಿನ್ಸ್ ಪಟ್ಟಿಯ ಅಗ್ರಸ್ಥಾನದಲ್ಲಿದ್ದಾರೆ ಇಂಥ ಸ್ಮರಣೀಯ ಅಭಿನೇತ್ರಿಯನ್ನು ಪಡೆದ ಕನ್ನಡ ಚಿತ್ರರಸಿಕರು ಧನ್ಯರು!

ಇದನ್ನೂ ನೋಡಿ: ಕನ್ನಡ ಚಿತ್ರರಂಗದಲ್ಲಿ ನೆನಪಾಗಿ ಉಳಿದ ಹಿರಿಯ ನಟಿ ಲಕ್ಷ್ಮೀಬಾಯಿ… ಇವರ ಸಿನಿ ಬದುಕು ಹೇಗಿತ್ತು?

ಹರಿಣಿ ನಟಿಸಿದ ಕನ್ನಡ ಸಿನಿಮಾಗಳು ಯಾವುವು ಎಂದರೆ ಜಗನ್ಮೋಹಿನಿ, ದಲ್ಲಾಳಿ, ಮಂಗಳಗೌರಿ, ಸೌಭಾಗ್ಯಲಕ್ಷ್ಮಿ, ಕನ್ಯಾದಾನ, ರತ್ನಮಂಜರಿ, ಗಂಧರ್ವಕನ್ಯೆ, ವಿಚಿತ್ರಪ್ರಪಂಚ, ಪ್ರಭುಲಿಂಗಲೀಲೆ, ಧರ್ಮವಿಜಯ, ಆಶಾಸುಂದರಿ, ವಿಧಿವಿಲಾಸ, ನಾಗಾರ್ಜುನ, ನಂದಾದೀಪ, ನವಜೀವನ, ಕರುಣೆಯೇ ಕುಟುಂಬದಕಣ್ಣು, ಆನಂದಬಾಷ್ಪ, ಪತಿವ್ರತ, ಶಿವಗಂಗೆಮಹಾತ್ಮೆ, ಸರ್ವಜ್ಞಮೂರ್ತಿ, ಇದೇಮಹಾಸುದಿನ, ಸತಿಸುಕನ್ಯ, ನಾಂದಿ, ಮಂಗಳಮುಹೂರ್ತ, ಸುಬ್ಬಾಶಾಸ್ತ್ರಿ, ಸೀತಾ, ಮುಂತಾದವುಗಳಾಗಿವೆ..

admin
the authoradmin

1 Comment

Leave a Reply