ಸಾಲಿಗ್ರಾಮ(ಕೆ.ಟಿ.ಮೋಹನ್ ಕುಮಾರ್): ಮೈಸೂರು ಜಿಲ್ಲೆಯ ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರದ ಸಾಲಿಗ್ರಾಮ ಪಟ್ಟಣದಲ್ಲಿನ ಚಂದನ ಪಾಲಿ ಕ್ಲಿನಿಕ್ ವತಿಯಿಂದ ಜೆ ಎಸ್ ಎಸ್ ಆಸ್ಪತ್ರೆಯ ನುರಿತ ತಜ್ಞ ವೈದ್ಯರುಗಳಿಂದ ಪ್ರತಿ ಶನಿವಾರ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ರಕ್ತದೊತ್ತಡ ಮತ್ತು ಮಧುಮೇಹ ಉಚಿತ ತಪಾಸಣಾ ಶಿಬಿರಗಳನ್ನು ಆಯೋಜನೆ ಮಾಡಲಾಗಿದೆ ಅದರಂತೆ (ಜನವರಿ 31) ಎಂದು ಚಂದನ ಪಾಲಿ ಕ್ಲಿನಿಕ್ ನ ಗೋಪಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆಯನ್ನು ನೀಡಿ ಸಾಲಿಗ್ರಾಮ ಪಟ್ಟಣದ ಮಹಾವೀರ ರಸ್ತೆಯಲ್ಲಿರುವ ಚಂದನ ಪಾಲಿ ಕ್ಲಿನಿಕ್ ನಲ್ಲಿ ಸ್ತ್ರೀ ರೋಗ ಮತ್ತು ಪ್ರಸೂತಿ ತಜ್ಞ ವೈದ್ಯರಾದ ಡಾ.ಆರ್.ಪಿ.ಶೃಂಗ ಮತ್ತು ಫಿಜಿಷಿಯನ್ ಮತ್ತು ರಕ್ತದೊತ್ತಡ, ಮಧುಮೇಹ ತಜ್ಞ ವೈದ್ಯರಾದ ಡಾ.ಜೆ.ಶ್ರೀ ಹರ್ಷ ಅವರುಗಳಿಂದ ಪ್ರತಿ ಶನಿವಾರ ಮಧ್ಯಾಹ್ನ 12 ಗಂಟೆಯಿಂದ 2 ಗಂಟೆಯ ವರೆಗೆ ಒಂದು ತಿಂಗಳುಗಳ ಕಾಲ ಉಚಿತ ಆರೋಗ್ಯ ತಪಾಸಣಾ ಶಿಬಿರ, ರಕ್ತದೊತ್ತಡ ಮತ್ತು ಮಧುಮೇಹ ಉಚಿತ ತಪಾಸಣಾ ಶಿಬಿರಗಳನ್ನು ಆಯೋಜನೆ ಮಾಡಲಾಗಿದೆ. ಸಾರ್ವಜನಿಕರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಶಿಬಿರದ ಸಂಘಟಕ ಗೋಪಾಲ್ ಮನವಿ ಮಾಡಿದ್ದಾರೆ.
ಸಾಮಾಜಿಕ ಸೇವಾ ಕಾರ್ಯಗಳಿಗೆ ಕೈಜೋಡಿಸಲು ಮನವಿ ಮಾಡಿದ ಶ್ರೀ ರಾಮಾನುಜ ಜೀಯರ್ ಸ್ವಾಮೀಜಿ








