FoodLatest

ಹೀರೆಕಾಯಿ ಹಾಗೂ ಮಿಕ್ಸ್ ಮಸಾಲೆಗಳ ವಿಶೇಷ ದೋಸೆಯ ಸ್ಪೆಷಲ್… ಇದರ ತಯಾರಿ ಹೇಗೆ?

ಇತ್ತೀಚೆಗೆ ದೋಸೆ ಇಡ್ಲಿಗಳನ್ನು ತರಕಾರಿ ಸೇರಿಸಿ ಮಾಡೋದು ಹೆಚ್ಚು ಜನಪ್ರಿಯವಾಗಿದೆ. ಇದು ಆರೋಗ್ಯಕ್ಕೆ ಉತ್ತಮವಾಗಿದೆ. ಇದೇ ರೀತಿ ಹೀರೆಕಾಯಿ ದೋಸೆಯನ್ನು ಕೂಡ ಮಾಡಬಹುದಾಗಿದ್ದು, ಬಿಸಿಯಾಗಿದ್ದಾಗಲೇ ಬೆಣ್ಣೆ ಹಾಕಿಕೊಂಡು ಚಟ್ನಿಯಲ್ಲಿ ಸೇವಿಸಿದರೆ ಅದರ ಮಜಾವೇ ಬೇರೆಯಾಗಿರುತ್ತದೆ. ಹಾಗೆಯೇ ಮಿಕ್ಸ್ ಮಸಾಲೆಗಳ ದೋಸೆಯೂ ಸೇವಿಸಲು ಇಷ್ಟವಾಗುತ್ತದೆ. ಇದೆರಡು ದೋಸೆಗಳ ತಯಾರಿ ಬಗ್ಗೆ ಇಲ್ಲಿದೆ ಮಾಹಿತಿ

ಇಷ್ಟಕ್ಕೂ ಹೀರೆಕಾಯಿ ದೋಸೆ ಮಾಡುವುದು ಕಷ್ಟವೇನಲ್ಲ. ಬಹು ಸುಲಭವೇ. ಬೆಳಗ್ಗಿನ ತಿಂಡಿಗೆ ಅಥವಾ ಸಂಜೆಯ ಕಾಫಿಗೆ ಇದನ್ನು ಸೇವಿಸಬಹುದಾಗಿದೆ. ಹಾಗಾದರೆ ಹೀರೆಕಾಯಿ ದೋಸೆಗೆ ಬೇಕಾಗುವ ಪದಾರ್ಥಗಳು ಮತ್ತು ಹೀರೇಕಾಯಿದೋಸೆ ಮಾಡುವ ವಿಧಾನ  ಹೇಗೆ?

ಬೇಕಾಗುವ ಪದಾರ್ಥಗಳು: ಹೀರೆಕಾಯಿ-1 ಬೇಸನ್ ಪೌಡರ್- 3ಕಪ್, ಇಂಗು- ಚಿಟಿಕೆಯಷ್ಟು, ಉಪ್ಪು- ರುಚಿಗೆ ತಕ್ಕಂತೆ, ಕಾರದಪುಡಿ- ಸ್ವಲ್ಪ, ಜೀರಿಗೆ-1ಚಮಚ, ಎಣ್ಣೆ-ಸ್ವಲ್ಪ, ಬೆಣ್ಣೆ- ಅಗತ್ಯಕ್ಕೆ ತಕ್ಕಂತೆ

ಮಾಡುವ ವಿಧಾನ: ಮೊದಲಿಗೆ ಹೀರೆಕಾಯಿಯನ್ನು ಚೆನ್ನಾಗಿ ತೊಳೆದು ಚಿಕ್ಕದಾಗಿ ಕತ್ತರಿಸಿ ಅದನ್ನು ಮಿಕ್ಸಿ ಮಾಡಿಕೊಳ್ಳಬೇಕು. ಬಳಿಕ ತೆಗೆದು ಅದಕ್ಕೆ  ಬೇಸನ್, ಜೀರಿಗೆ, ಉಪ್ಪು, ಇಂಗು, ಕಾರದ ಪುಡಿ ಹಾಕಿ ಮಿಕ್ಸ್ ಮಾಡಿ ದೋಸೆ ಹಿಟ್ಟಿನಷ್ಟು ಹದ ಮಾಡಿಕೊಂಡು ತಾವಾದಲ್ಲಿ ಎಣ್ಣೆ ಸವರಿ ದೋಸೆ ಹಾಕಬೇಕು. ಬಳಿಕ ನಿಧಾನ ಉರಿಯಲ್ಲಿ ಚೆನ್ನಾಗಿ ಬೇಯಿಸಿ ತೆಗೆಯಬೇಕು.  ಬಿಸಿ ಇದ್ದಾಗಲೇ ಅದರ ಮೇಲೆ ಬೆಣ್ಣೆ ಹಾಕಿ ಚಟ್ನಿಯೊಂದಿಗೆ ಸವಿದರೆ ಅದರ ಮಜಾವೇ ಬೇರೆಯಾಗಿರುತ್ತದೆ.

ಮಿಕ್ಸ್ ‘ಮಸಾಲ’ ದೋಸೆ ಸವಿದು ನೋಡಿ

ದೋಸೆಗಳನ್ನು ನಾನಾ ರೀತಿಯಲ್ಲಿ ತಯಾರಿಸಬಹುದಾಗಿದೆ. ಹೀಗೆ ತಯಾರಿಸಿದ ದೋಸೆಗಳು ಅದರದ್ದೇ ಆದ ರುಚಿಯನ್ನು ನೀಡುವುದು ಸಾಮಾನ್ಯವಾಗಿರುತ್ತದೆ. ಇಲ್ಲಿ ಪರಿಚಯಿಸುತ್ತಿರುವುದು ಮಾಮೂಲಿ ಮಸಾಲೆ ದೋಸೆ ಅಲ್ಲ. ಮಸಾಲೆಗಳನ್ನು ಹಾಕಿ ಮಾಡಿದ ಸ್ಪೆಷಲ್ ಮಿಕ್ಸ್ ಮಸಾಲ ದೋಸೆ.

ಬೇಕಾಗುವ ಪದಾರ್ಥಗಳು: ಅಕ್ಕಿ- ಒಂದು ಕಪ್, ಮೆಂತೆ- ಎರಡು ಚಮಚ, ಉದ್ದಿನಬೇಳೆ- ಕಾಲು ಕಪ್, ಕಡ್ಲೆಬೇಳೆ- ಅರ್ಧಕಪ್, ಈರುಳ್ಳಿ- ಒಂದು, ಶುಂಠಿ- ಸ್ವಲ್ಪ, ಹಸಿಮೆಣಸಿನಕಾಯಿ-4, ಕೊತ್ತಂಬರಿ ಸೊಪ್ಪು- ಸ್ವಲ್ಪ, ಉಪ್ಪು- ರುಚಿಗೆ ತಕ್ಕಂತೆ, ಕರಿಬೇವು- ಸ್ವಲ್ಪ.

ಮಾಡುವ ವಿಧಾನ: ಹಿಂದಿನ ರಾತ್ರಿಯೇ ಅಕ್ಕಿ, ಕಡ್ಲೆಬೇಳೆ, ಉದ್ದು, ಮೆಂತೆಯನ್ನು ನೆನೆಯಲು ಹಾಕಿಡಬೇಕು. ಬೆಳಗ್ಗೆ ಅದನ್ನು ತೆಗೆದುಕೊಂಡು ಮಿಕ್ಸಿ ಮಾಡಿಕೊಳ್ಳಬೇಕು. ಇನ್ನೊಂದೆಡೆ ಕರಿಬೇವು, ಶುಂಠಿ, ಮೆಣಸಿನ ಕಾಯಿ, ಈರುಳ್ಳಿ, ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿ ಮಿಕ್ಸಿ ಮಾಡಿ ನಂತರ ಅದನ್ನು ಮೊದಲು ಮಾಡಿಟ್ಟ ಸಂಪುಣನೊಂದಿಗೆ ಸೇರಿಸಿ ಮಿಕ್ಸ್ ಮಾಡಿ ಅಳತೆ ನೋಡಿಕೊಂಡು ಅಗತ್ಯವಿದ್ದರೆ ನೀರು ಸೇರಿಸಿ ಹೆಚ್ಚು ತೆಳ್ಳಗೆ ಮಾಡದೆ ಮಂದವಾಗಿಯೇ ರುವಂತೆ ನೋಡಿಕೊಳ್ಳಬೇಕು. ಬಳಿಕ ಎಣ್ಣೆ ಸವರಿ ದೋಸೆಕಲ್ಲಿನಲ್ಲಿ ಹೊಯ್ಯಬೇಕು. ಅಲ್ಲಿಗೆ ದೋಸೆ ಆದಂತೆಯೇ ಅದನ್ನು ಬಿಸಿಯಿರುವಾಗಲೇ ಚಟ್ನಿಯೊಂದಿಗೆ ಸೇವಿಸಬಹುದಾಗಿದೆ.

 

 

admin
the authoradmin

Leave a Reply