ಮೈಸೂರು: ಮೈಸೂರು ಜಿಲ್ಲಾ ಅಖಿಲ ಭಾರತ ವೀರಶೈವ ಮಹಾಸಭಾ ಲಿಂಗಾಯತ ನೌಕರರ ಸಂಘದ ವತಿಯಿಂದ ಹಮ್ಮಿಕೊಂಡಿರುವ ಸಂಘದ ನೂತನ ಪದಾಧಿಕಾರಿಗಳ ಸೇವಾ ದೀಕ್ಷೆ ಸ್ವೀಕಾರ ಸೇರಿದಂತೆ ಸಮಾಜಮುಖಿ ಕಾರ್ಯಗಳಿಗೆ ಸಹಕಾರ ನೀಡುವ ಭರವಸೆಯೊಂದಿಗೆ ಹೊಸ ಮಠದ ಹಿರಿಯ ಶ್ರೀಗಳಾದ ಪೂಜ್ಯ ಚಿದಾನಂದ ಸ್ವಾಮೀಜಿ ಕೃಪಾಶೀರ್ವಾದದ ಶುಭ ಹಾರೈಸಿದ್ದಾರೆ.
ಮೈಸೂರು ಜಿಲ್ಲಾ ಅಖಿಲ ಭಾರತ ವೀರಶೈವ ಮಹಾಸಭಾ ಲಿಂಗಾಯತ ನೌಕರರ ಸಂಘದ ವತಿಯಿಂದ ಮಾರ್ಚ್ 21ರಂದು ಶಿವದೇವಾಲಯದ ಸಭಾ ಭವನದಲ್ಲಿ ನೂತನ ಸಂಘದ ನೂತನ ಪದಾಧಿಕಾರಿಗಳ ಸೇವಾ ದೀಕ್ಷೆ ಸ್ವೀಕಾರ ಕಾರ್ಯಕ್ರಮ ಹಮ್ಮಿಕೊಂಡಿದೆ.
ಈ ಕಾರ್ಯಕ್ರಮದ ಹಿನ್ನಲೆಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ವಧು ವರರ ಸಮಾವೇಶ ಮತ್ತು ಲಿಂಗಾಯತ ನಿರುದ್ಯೋಗಿಗಳಿಗೆ ಉದ್ಯೋಗ ಮೇಳ ಮತ್ತು ಬೃಹತ್ ಆರೋಗ್ಯ ಶಿಬಿರಗಳನ್ನ ವಿವಿಧ ಸಂಘಟನೆಗಳ ಸಹಕಾರದಲ್ಲಿ ಏರ್ಪಡಿಸಲಾಗಿದೆ.

ಈ ಸಮಾಜಮುಖಿ ಕಾರ್ಯಕ್ರಮಕ್ಕೆ ತಮ್ಮ ಕೃಪಾಶೀರ್ವಾದ ಸಹಾಯ ಸಹಕಾರ ಬೇಕೆಂದು ಅಖಿಲ ಭಾರತ ವೀರಶೈವ ಮಹಾಸಭಾ ಲಿಂಗಾಯತ ನೌಕರರ ಸಂಘವು ಶ್ರೀಗಳಿಗೆ ಮನವಿ ಮಾಡಿದ್ದು, ಇದಕ್ಕೆ ಸನ್ಮತಿ ನೀಡಿದ ಅವರು ಸಂಘದ ರಚನಾತ್ಮಕ ಚಟುವಟಿಕೆಗಳಿಗೆ ನೀವು ನಮ್ಮ ಮಠ ಮತ್ತು ಸಂಸ್ಥೆಯಿಂದ ಅಗತ್ಯ ಸಹಕಾರ ನೀಡುವುದಾಗಿ ಹೇಳಿದ್ದಲ್ಲದೆ, ಇಂತಹ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಕೇಳಿ ತುಂಬ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.
ಶ್ರೀಗಳ ಭೇಟಿಯ ಸಂದರ್ಭದಲ್ಲಿ ಮೈಸೂರು ಜಿಲ್ಲಾ ವೀರಶೈವ ಮಹಾಸಭಾ ನಿಕಟ ಪೂರ್ವ ಅಧ್ಯಕ್ಷರಾದ ಕಾನ್ಯ ಶಿವಮೂರ್ತಿ, ಅಖಿಲ ಭಾರತ ವೀರಶೈವ ಮಹಾಸಭಾ ಮೈಸೂರು ಜಿಲ್ಲಾ ಘಟಕದ ನಿರ್ದೇಶಕರಾದ ಕಲ್ಮಳ್ಳಿ ನಟರಾಜು, ಸಂಘದ ಗಣೇಶ್, ಅಧ್ಯಕ್ಷರಾದ ಬಿ.ಆರ್. ಶಿವಕುಮಾರ್, ಕಾರ್ಯದರ್ಶಿ ಮಹ ದೇವ ಪ್ರಸಾದ್, ಖಜಾಂಚಿ ಬಾಗಳಿ ಮಹೇಶ್ ಬಾನಹಳ್ಳಿ ನಿರ್ದೇಶಕರಾದ ಜಗದೀಶ್, ಡಾ ಕೆ ವಿ ಯೋಗೀಶ್, ಸಿದ್ದರಾಮೇಶ್ ಬಾಣಹಳ್ಳಿ ಸಂತೋಷ, ಗಜೇಂದ್ರ, ಉಪಸ್ತಿತರಿದ್ದರು
ಶಿವರಾತ್ರಿ ರಾಜೇಂದ್ರ ಕಲಾ ಬಳಗದ ಕಾರ್ಯಕ್ಕೆ ಮಹಾವಿದ್ಯಾಪೀಠದ ಕಾರ್ಯದರ್ಶಿ ಮಂಜುನಾಥ್ ಶ್ಲಾಘನೆ








