LatestMysore

ಶ್ರೀರಾಮಸಕ್ಕರೆ ಕಾರ್ಖಾನೆಗೆ ಕಾಯಕಲ್ಪ ನೀಡದೆ ರೈತರು, ಕೂಲಿಕಾರ್ಮಿಕರಿಗೆ ಸಂಕಷ್ಟ

ಕೆ.ಆರ್.ನಗರ(ಸಂಘಟನೆ ಮಂಜುನಾಥ್): ಚುನಾಯಿತ ಜನಪ್ರತಿನಿಧಿಗಳು ಸರಕಾರದ ನಿರ್ಲಕ್ಷ್ಯದಿಂದ ಶ್ರೀರಾಮಸಕ್ಕರೆ ಕಾರ್ಖಾನೆ ಕಾಯಕಲ್ಪ ಆಗದ ಕಾರಣ ರೈತರು, ಕೂಲಿಕಾರ್ಮಿಕರು ನಷ್ಟ ಅನುಭವಿಸುವಂತಾಗಿದೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಹೊಸೂರುಕುಮಾರ್ ಆರೋಪಿಸಿದರು.

ಪಟ್ಟಣದ ಪ್ರವಾಸಿಮಂದಿರದಲ್ಲಿ ನಡೆದ ರೈತಸಂಘದ ತಾಲೂಕು ಸಮಿತಿ ಪುನಾರಚನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕ್ಷೇತ್ರದ ಈ ಹಿಂದಿನ ಮಾಜಿ ಶಾಸಕರು, ಈಗಿನ ಶಾಸಕರು ತಮ್ಮದೆ ಸರಕಾರ ಇದ್ದರೂ ಕಾರ್ಖಾನೆ ಪ್ರಾರಂಭಕ್ಕೆ ದೃಢವಾದ ಕ್ರಮ ಕೈಗೊಳ್ಳದ ಕಾರಣ ಸಹಕಾರ ಸಕ್ಕರೆ ಕಾರ್ಖಾನೆ ಸಾರ್ವಜನಿಕರಿಗೆ ಬಳಕೆಯಾಗದೆ ಪಾಳುಬೀಳುವಂತಾಗಿದೆ ಎಂದರು.

ಕೈಗಾರಿಕೆಗಳು ನಾಶವಾಗುತ್ತಿದ್ದು ಉದ್ದಿಮೆ ಸೃಷ್ಟಿಸಿ ಸಾರ್ವಜನಿಕವಾಗಿ ಕ್ಷೇತ್ರ ಉಳಿಸುವುದಾಗಿ ಹೇಳುವವರು ಆ ಬಗ್ಗೆ ಚಿಂತನೆ ಮಾಡದ ಕಾರಣ ಕಾರ್ಖಾನೆಗಳು ಪಾಳುಬೀಳುವಂತಾಗಿದೆ ಎಂದು ತೀವೃ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಕಾರ್ಖಾನೆ ಪ್ರಾರಂಭಿಸುವ ಮುನ್ನ ಅದಕ್ಕೆ ಬೇಕಾದ ಪೂರಕ ಉತ್ಪನ್ನಗಳ ಬಗ್ಗೆ ಚಿಂತಿಸದೆ ಏಕದಂ ಖಾಸಗಿಕರಣದ ಬಗ್ಗೆ ಮಾತನಾಡುತ್ತಿರುವುದರಿಂದ ಕಾರ್ಖಾನೆಗಳು ನಷ್ಟ ಸಂಭವಿಸಿ ರೈತರು ಕಬ್ಬುಬೆಳೆಗಾರರನ್ನು ಚಿಂತೆಗೀಡು ಮಾಡುವಂತೆ ಮಾಡಿದೆ ಎಂದರು.

ಈ ಬಗ್ಗೆ ರಾಜ್ಯಮ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕ್ರಮಕೈಗೊಂಡು ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭಿಸಲು ಮುಂದಾಗದಿದ್ದಲ್ಲಿ ರೈತರೊಡಗೂಡಿ ವಿಧಾನಸೌಧದ ಎದುರು ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಈಗಾಗಲೆ ರೈತಮುಖಂಡರನ್ನು ಕರೆದು ಬಜೆಟ್‌ ಪೂರ್ವ ಸಭೆ ನಡೆಸಿ ಹಲವು ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಆಶ್ವಾಸನೆ ನೀಡಿದ್ದಾರೆ. ಮುಂದಿನ ಬಜೆಟ್‌ನಲ್ಲಿ ರೈತ ಪರ ಬಜೆಟ್ ಮಂಡಿಸಿ ಚುಂಚನಕಟ್ಟೆ ಶ್ರೀರಾಮಸಕ್ಕರೆ ಕಾರ್ಖಾನೆಯನ್ನು ಪ್ರಾರಂಭಿಸುವ ಬಗ್ಗೆ ಘೋಷಣೆ ಮಾಡದಿದ್ದಲ್ಲಿ ರೈತವರ್ಗದಿಂದ ಉಗ್ರ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂಧರ್ಭದಲ್ಲಿ ಸಂಘದ ಜಿಲ್ಲಾ ಪಧಾನಕಾರ್ಯದರ್ಶಿ ಪಿ.ಮರಂಕಯ್ಯ, ತಾಲೂಕು ಅಧ್ಯಕ್ಷ ಎಂ.ಎಸ್.ನಟರಾಜ್, ಪ್ರಧಾನಕಾರ್ಯದರ್ಶಿ ಹರೀಶ್, ಗೌರವಾಧ್ಯಕ್ಷ ಬ್ಯಾಡರಹಳ್ಳಿಕುಬೇರ, ಉಪಾಧ್ಯಕ್ಷ ತಿಪ್ಪೂರುರಮೇಶ್, ಮಂಜಣ್ಣ, ಸಂಘಟನಾ ಕಾರ್ಯದರ್ಶಿ ಕಗ್ಗೆರೆಮಹದೇವ ನಿರ್ಗಮಿತ ತಾಲೂಕು ಅಧ್ಯಕ್ಷ ಎಂ.ಜೆ.ಮಲ್ಲೇಶ್, ರಾಜ್ಯ ಮಹಿಳಾಪ್ರಧಾನಕಾರ್ಯದರ್ಶಿ ನೇತ್ರಾವತಿ, ಸ್ವರಾಜ್ ಇಂಡಿಯಾ ಪಕ್ಷದ ತಾಲೂಕು ಅಧ್ಯಕ್ಷ ಕಾಳೇನಹಳ್ಳಿಸ್ವಾಮಿ, ತಿಪ್ಪೂರುಮಲ್ಲೇಶ್, ಹೊಂಬಾಳೇಗೌಡ, ಎಸ್.ಆರ್.ಶಿವರಾಂ, ತಾಲೂಕು ಮಹಿಳಾಧ್ಯಕ್ಷೆ ಮೀನಾರಾಜು, ವೀಣಾ, ಸುನೀತಾರಾಮೇಗೌಡ ಮತ್ತಿತರ ರೈತಮುಖಂಡರು ಹಾಜರಿದ್ದರು.

admin
the authoradmin

Leave a Reply

Translate to any language you want