ಹುಣಸೂರು: ಹುಣಸೂರು ಉಪ ವಿಭಾಗದ ನೂತನ ಉಪ ವಿಭಾಗಾಧಿಕಾರಿಯಾಗಿ ಕುಮಾರಿ ಕಾವ್ಯರಾಣಿ ಗುರುವಾರ ಅಧಿಕಾರ ಸ್ವೀಕರಿಸಿದರು.
ಈ ಹಿಂದೆ ಉಪ ವಿಭಾಗ ಅಧಿಕಾರಿಗಳಾಗಿದ್ದ ವಿಜಯಕುಮಾರ್ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಸರ್ಕಾರ ಕುಮಾರಿ ಕಾವ್ಯ ರಾಣಿ ಅವರನ್ನು ಹುಣಸೂರು ಉಪಾಧಿಕಾರಿಗಳಾಗಿ ನೇಮಿಸಿ ಆದೇಶ ಹೊರಡಿಸಿದ್ದು ಇಂದು ಗುರುವಾರ ಹುಣಸೂರು ಮಿನಿ ವಿಧಾನಸೌಧದ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ಗಾವಡಗೆರೆ ಹೋಬಳಿ ಕೇಂದ್ರದ ನಾಡಕಚೇರಿ ಉಪತಹಸಿಲ್ದಾರ್ ಯೋಗಾಸನ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿ ಕೇಂದ್ರದ ನಾಡಕಚೇರಿ ಉಪತಹಸಿಲ್ದಾರ್ ಯೋಗಾಸನದ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕ್ರೀಡಾಂಗಣದಲ್ಲಿ ಸಾಂಪ್ರದಾಯಿಕ ಯೋಗ ಸ್ಪರ್ಧೆಯಲ್ಲಿ ಉಪತಹಸಿಲ್ದಾರ್ ಅರುಣ್ ಕುಮಾರ್ ಸ್ಪರ್ಧಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾದವರು. ರಾಜ್ಯಮಟ್ಟಕ್ಕೆ ಆಯ್ಕೆಯಾದ ಅರುಣ್ ಕುಮಾರ್ ರವರನ್ನು ಹುಣಸೂರು ತಾಲೂಕು ತಹಶೀಲ್ದಾರ್ ಮಂಜುನಾಥ್, ಸರ್ಕಾರಿ ನೌಕರರ ಸಂಘದ ಮೈಸೂರು ಜಿಲ್ಲಾಧ್ಯಕ್ಷ ಅರುಣ್ ಕುಮಾರ್, ಹುಣಸೂರು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಶಿಕುಮಾರ್ ಗಾವಡಗೆರೆ ನಾಡಕಚೇರಿಯ ಸಹೂದ್ಯೋಗಿಗಳು ಇವರನ್ನು ಅಭಿನಂದಿಸಿದರು.








