News

ಯಮಹಾ ಮೋಟಾರ್ ಬೈಕ್ ಗಳ ಬೆಲೆಯಲ್ಲಿ ಇಳಿಕೆ… ಯಾವ ಬೈಕ್ ಗೆ ಎಷ್ಟು ಬೆಲೆ? ಇಲ್ಲಿದೆ ವಿವರ

ಬೆಂಗಳೂರು: ಜಿಎಸ್‌ಟಿ ಪರಿಷ್ಕರಣೆಯ ನಂತರ ದ್ವಿಚಕ್ರ ವಾಹನಗಳ ಬೆಲೆಯಲ್ಲಿ ಇಳಿಕೆಯಾಗಲಿದೆ ಎಂಬ ಸುದ್ದಿಯಿತ್ತು. ಅದರಂತೆ ಇಂಡಿಯಾ ಯಮಹಾ ಮೋಟಾರ್ (ಐವೈಎಂ) ಪ್ರೈ. ಲಿಮಿಟೆಡ್  ತನ್ನ ದ್ವಿಚಕ್ರದ ವಾಹನಗಳ ಮೇಲೆ ಜಿಎಸ್‌ಟಿ ಪರಿಷ್ಕರಣೆಯ ಸಂಪೂರ್ಣ ಲಾಭವನ್ನು ತನ್ನ ಗ್ರಾಹಕರಿಗೆ ಒದಗಿಸುವುದಾಗಿ ಘೋಷಿಸಿದೆ. ಅಲ್ಲದೆ ತಮ್ಮ ಸಂಸ್ಥೆಯಿಂದ ತಯಾರಾಗುವ ಬೈಕ್ ಗಳ ಬೆಲೆಯಲ್ಲಿ ಇಳಿಕೆ ಮಾಡಿದ್ದು, ಈ ಬೆಲೆ ಕಡಿತವು ಸೆಪ್ಟೆಂಬರ್ 22, 2025 ರಿಂದ ಜಾರಿಗೆ ಬರಲಿದೆ ಎಂಬುದಾಗಿ ಘೋಷಿಸಿದೆ.

ಈ ಕುರಿತಂತೆ ಮಾತನಾಡಿದ ಯಮಹಾ ಮೋಟಾರ್ ಇಂಡಿಯಾ ಗ್ರೂಪ್‌ನ ಅಧ್ಯಕ್ಷ ಇತಾರು ಒಟಾನಿ ಅವರು,  ದ್ವಿಚಕ್ರ ವಾಹನಗಳ ಮೇಲಿನ ಜಿಎಸ್‌ಟಿಯನ್ನು ಸಕಾಲದಲ್ಲಿ ಕಡಿಮೆ ಮಾಡಿದ ಭಾರತ ಸರ್ಕಾರಕ್ಕೆ ನಾವು ಧನ್ಯವಾದ ಹೇಳಲು ಬಯಸುತ್ತೇವೆ. ಈ ಕ್ರಮದಿಂದ ಹಬ್ಬದ ಸೀಸನ್‌ನಲ್ಲಿ ದ್ವಿಚಕ್ರ ವಾಹನಗಳ ಬೇಡಿಕೆ ಜಾಸ್ತಿಯಾಗುವ ನಿರೀಕ್ಷೆ ಇದೆ.

ದ್ವಿಚಕ್ರ ವಾಹನಗಳನ್ನು ಹೆಚ್ಚು ಕೈಗೆಟುಕುವ ಬೆಲೆಗೆ ದೊರಕುವಂತೆ ಮಾಡುವ ಮೂಲಕ ಯಮಹಾ ಗ್ರಾಹಕರಿಗೆ ನೇರವಾಗಿ ಲಾಭವನ್ನು ಒದಗಿಸುವುದರ ಜೊತೆಗೆ, ಒಟ್ಟಾರೆ ಬೇಡಿಕೆಯನ್ನು ಹೆಚ್ಚಿಸಲಿದೆ. ಯಮಹಾ ಸಂಸ್ಥೆಯು ಈ ಕಡಿತದ ಸಂಪೂರ್ಣ ಲಾಭವನ್ನು ಭಾರತದಾದ್ಯಂತ ನಮ್ಮ ಗ್ರಾಹಕರಿಗೆ ಒದಗಿಸಲು ಸಂತೋಷಪಡುತ್ತದೆ ಎಂದು ಹೇಳಿದ್ದಾರೆ.

ಯಮಹಾದ ದ್ವಿಚಕ್ರ ವಾಹನಗಳ ಶ್ರೇಣಿಯಲ್ಲಿ ಸಂಭಾವ್ಯ ಬೆಲೆ ಇಳಿಕೆಯು ಸೆಪ್ಟೆಂಬರ್ 22, 2025 ರಿಂದ ಜಾರಿಗೆ ಬರಲಿವೆ. ಗ್ರಾಹಕರು ಮುಂಬರುವ ಹಬ್ಬದ ಸೀಸನ್‌ನಲ್ಲಿ ಈ ಲಾಭವನ್ನು ಪಡೆಯಲು ಬೇಗನೇ ಬುಕ್ ಮಾಡಬಹುದಾಗಿದೆ ಎಂದು ಅವರು ತಿಳಿಸಿದೆ. ಯಾವ ಬೈಕ್ ಗೆ ಎಷ್ಟು ಬೆಲೆ? ಎಷ್ಟು ಇಳಿಕೆಯಾಗಿದೆ ಎಂಬುದರ ಮಾಹಿತಿ ಇಲ್ಲಿದೆ.

 

admin
the authoradmin

Leave a Reply