ಬೆಂಗಳೂರು: ದೇಶ ಸೇವೆ ಮಾಡಲು ಇಚ್ಚಿಸುವ ಅಭ್ಯರ್ಥಿಗಳಿಗೆ ಅಗ್ನಿಪಥ್ ಯೋಜನೆಯಡಿ ನೇಮಕಾತಿ ನಡೆಸಿ ಅವಕಾಶ ನೀಡಲಾಗುತ್ತಿದ್ದು, ಇದಕ್ಕೆ ಅರ್ಜಿ ಸಲ್ಲಿಸಲು ಏ.1ರವರೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಅಗ್ನಿಪಥ್ ಯೋಜನೆಯಡಿಯಲ್ಲಿ 2026ನೇ ಸಾಲಿನಲ್ಲಿ ನಡೆಯಲಿರುವ ನೇಮಕಾತಿ ರಾಲಿಯಲ್ಲಿ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗಾಗಿ ಅಗ್ನಿವೀರ್ (ಜನರಲ್ ಡ್ಯೂಟಿ), ಅಗ್ನಿವೀರ್ (ಟೆಕ್), ಅಗ್ನಿವೀರ್ (ಕ್ಲರ್ಕ್ / ಸ್ಟೋರ್ ಕೀಪರ್ ಟೆಕ್ನಿಕಲ್), ಅಗ್ನಿವೀರ್ ಟ್ರೇಡ್ಸ್‍ಮನ್ (ಸೇನೆಯ ಎಲ್ಲಾ ವಿಭಾಗಗಳಿಗೆ 8ನೇ ತರಗತಿ ಮತ್ತು 10ನೇ ತರಗತಿ ಪಾಸಾದವರು), ಸೋಲ್ಜರ್ ಟೆಕ್, ನರ್ಸಿಂಗ್ ಅಸಿಸ್ಟೆಂಟ್, ಹವಲ್ದಾರ್ (ಎಜುಕೇಶನ್), ಜಿಸಿಓ ರಿಲಿಜೀಯಸ್ ಟೀಚರ್, ಸಿಪಾಯಿ (ಫಾರ್ಮಾ ಹಾಗೂ ಅಗ್ನಿವೀರ್ (ಜಿಡಿ) (ಮಹಿಳಾ ಮಿಲಿಟರಿ ಪೊಲೀಸ್) ಹುದ್ದೆಗಳಿಗಾಗಿ ನೇಮಕಾತಿ ನಡೆಯಲಿದೆ.

ನೇಮಕಾತಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಜಾಲತಾಣ www.joinindianarmy.nic.in ದಲ್ಲಿ ಪ್ರಕಟಿಸಲಾಗಿದೆ. 2026 ರ ಫೆಬ್ರವರಿ 13 ರಿಂದ ಏಪ್ರಿಲ್ 01 ರವರೆಗೆ ಜಾಲತಾಣದಲ್ಲಿ ನೋಂದಣಿ ಮಾಡಿಕೊಳ್ಳಲು ಕಲ್ಪಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಜಾಲತಾಣಕ್ಕೆ ಭೇಟಿ ನೀಡಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬಹುದು ಎಂದು ಬೆಂಗಳೂರಿನ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ನಿರ್ದೇಶಕರು ತಿಳಿಸಿದ್ದಾರೆ.








