District

ಹಿಂದುಳಿದ ಜನಾಂಗದ ಅಭಿವೃದ್ಧಿಗೆ ಒತ್ತು: ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಲಕ್ಷ್ಮಣ್ ಉಪ್ಪಾರ

ಮೈಸೂರು: ರಾಜ್ಯದಲ್ಲಿ ಅಧಿಕಾರದಲ್ಲಿರುವ ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್  ನೇತೃತ್ವದ ಕಾಂಗ್ರೆಸ್ ಸರ್ಕಾರವು ಸಮುದಾಯದ ಮುತ್ಸದ್ದಿ ರಾಜಕಾರಣಿ ಪುಟ್ಟರಂಗಶೆಟ್ಟಿ ಅವರ ಆಶಯದಂತೆ   ಉಪ್ಪಾರ ಸಮುದಾಯದ   ಹಾಗೂ ಸೇರಿದಂತೆ ಹಿಂದುಳಿದ ಎಲ್ಲರನ್ನೂ ಆಯಾ ಅಭಿವೃದ್ಧಿ ನಿಗಮಗಳ ಮೂಲಕ ಆರ್ಥಿಕ, ಶೈಕ್ಷಣಿಕ ಹಾಗೂ  ಉದ್ಯೋಗಿಕವಾಗಿ ಮೇಲೆತ್ತಲು ಪ್ರಯತ್ನಿಸುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಬರಮಣ್ಣ ಲಕ್ಷ್ಮಣ್ ಉಪ್ಪಾರ ಹೇಳಿದರು.

ಮೈಸೂರಿನ ಜಿಲ್ಲೆಯ ಪ್ರವಾಸ ಸಂದರ್ಭ ನಗರದ ಖಾಸಗಿ ಹೋಟೆಲ್ ನಲ್ಲಿ  ಜಿಲ್ಲಾ  ಉಪ್ಪಾರ ಸಂಘದ ಅಧ್ಯಕ್ಷರಾದ ಕರಳಾಪುರ ನಾಗರಾಜ ನೇತೃತ್ವದಲ್ಲಿ ಏರ್ಪಡಿಸಲಾಗಿದ್ದ ಅಭಿನಂದನೆ ಹಾಗೂ ಅಹವಾಲು ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಜಿಲ್ಲಾಧ್ಯಕ್ಷ ಕರಳಾಪುರ ನಾಗರಾಜ ಮಾತನಾಡಿ ಹಿಂದುಳಿದ ವರ್ಗದ ಉಪ್ಪಾರ ಸಮುದಾಯದವರು ನಿಗಮದಲ್ಲಿ ಸಿಗುವ ಸವಲತ್ತುಗಳನ್ನು ತಿಳಿದುಕೊಂಡು ತಮ್ಮ ಕ್ಷೇತ್ರದ ಶಾಸಕರುಗಳ ಮೂಲಕ ಸರಿಯಾದ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿ ಕೃಷಿ ,ಮಕ್ಕಳ ಶಿಕ್ಷಣ ಹಾಗೂ ಸ್ವಯಂ ಉದ್ಯೋಗದ ಸವಲತ್ತುಗಳನ್ನು ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲಾ ಉಪ್ಪಾರ ಸಂಘದ ವತಿಯಿಂದ ಕರಳಾಪುರ ನಾಗರಾಜ್ ಹಾಗೂ ಸಂಘದ ಪದಾಧಿಕಾರಿಗಳು ನಿಗಮದ ಅಧ್ಯಕ್ಷರನ್ನು ಮೈಸೂರು ಪೇಟ , ಫಲ ತಾಂಬೂಲಗಳನ್ನು ನೀಡಿ ಆತ್ಮೀಯವಾಗಿ ಗೌರವಿಸಿದರು. ಇದೇ ಸಂದರ್ಭ ಕಾರ್ಯಕ್ರಮಕ್ಕೆ ಆಗಮಿಸಿದ್ದ ಜಿಲ್ಲೆಯ ವಿವಿಧ ತಾಲೂಕು ಹಾಗೂ ಹೋಬಳಿ ಉಪ್ಪಾರ ಸಮುದಾಯದ ಸಂಘಟನೆಗಳ ಪ್ರಮುಖರು ನಿಗಮದ ಅಧ್ಯಕ್ಷರನ್ನು ಗೌರವಿಸಿದರು.

ಕಾರ್ಯಕ್ರಮದಲ್ಲಿ ಇಂಜಿನಿಯರ್ ಸೋಮಶೇಖರಪ್ಪ, ನಿವೃತ್ತ ಪ್ರಾಂಶುಪಾಲ ನಂಜುಂಡಸ್ವಾಮಿ,, ನಂಜನಗೂಡು ಯುವ ಕಾಂಗ್ರೆಸ್ ಮುಖಂಡ  ವಿಜಯ್, ನಿವೃತ್ತ ಅರಣ್ಯ ಅಧಿಕಾರಿ ಮಲ್ಲಶೆಟ್ಟಿ, ನಂಜನಗೂಡು ಗೋವಿಂದರಾಜು, ಹೆಮ್ಮರಗಾಲ ಸೋಮಣ್ಣ,ಶಿವಕುಮಾರಸ್ವಾಮಿ, ಹದಿನಾರುಮೊಳೆ ಸಿದ್ದಶೆಟ್ಟಿ, ಕೋಟೆ ಮಹದೇವ್, ಸಿಂಹ ವಾಹಿನಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲೇಶ್, ಮೈಸೂರು ಜಿಲ್ಲಾ ಭಗೀರಥ ಉಪ್ಪಾರ ಕಟ್ಟಡ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಮಹದೇಶ ತಮ್ಮಡ, ಮಹಿಳಾ ಸಂಘಟನೆಯ ಪ್ರಮುಖರಾದ ಗೌರಮ್ಮ, ಡಾ.ಗೀತಾ, ಕವಿತಾ ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು.

admin
the authoradmin

Leave a Reply