Sports

ಕ್ರಿಕೆಟ್ ಆಟವೋ.. ಬೆಟ್ಟಿಂಗ್ ದಂಧೆಯೋ… ಕ್ರೀಡಾ ಮನೋಭಾವ ಮಾಯವಾಯಿತಾ? ಐಪಿಎಲ್ ಹಿಂದಿನ ರಹಸ್ಯವೇನು?

ಎಲ್ಲರೂ ಇಷ್ಟಪಟ್ಟು ನೋಡುವ ಕ್ರಿಕೆಟ್ ಕೂಡ ಇತ್ತೀಚೆಗೆ ಜೂಜಾಗಿ ಪರಿಣಮಿಸುತ್ತಿದೆ. ಅಲ್ಲೆಲ್ಲೋ ಕ್ರಿಕೆಟ್ ನಡೆಯುತ್ತಿದ್ದರೆ, ಇಲ್ಲಿ ಸೋಲು ಗೆಲುವಿನ ಬಗ್ಗೆ ಬೆಟ್ಟಿಂಗ್ ನಡೆಯುತ್ತಿರುತ್ತದೆ. ಇದರ ಗೀಳು ಹತ್ತಿಸಿಕೊಂಡವರು ಮನೆ ಮಠ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಮತ್ತೆ ಕೆಲವರು ಸಾಲಗಾರರಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆಲ್ಲ ಕಾರಣವಾಗಿರುವುದು ಕ್ರಿಕೆಟ್ ಆಟನಾ? ಅಥವಾ ಅದನ್ನು ಕ್ರೀಡಾ ಮನೋಭಾವದಿಂದ ನೋಡದ ನಮ್ಮ ಮನಸ್ಥಿತಿಯಾ ಗೊತ್ತಿಲ್ಲ… ನಮ್ಮದೇ ತಪ್ಪಿಗೆ ಕ್ರಿಕೆಟ್  ಆಟದ ಬಗ್ಗೆ ಬೊಟ್ಟು ಮಾಡಿ ತೋರಿಸುವುದು ತಪ್ಪೇ.. ಆದರೂ ಕ್ರಿಕೆಟ್ ಆಟದಲ್ಲಿ ಅದರಲ್ಲೂ ಐಪಿಎಲ್ ನಲ್ಲಿ ಮ್ಯಾಚ್ ಫಿಕ್ಸಿಂಗ್, ಬೆಟ್ಟಿಂಗ್ ಮುಂತಾದ ದಂಧೆಗಳು ನಡೆಯುತ್ತಿರುವುದನ್ನು ತಳ್ಳಿಹಾಕಲಾಗದು… ಈ ಬಗ್ಗೆ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಅವರು ಇಲ್ಲಿ ಬರೆದಿದ್ದಾರೆ…

ಜಗತ್ತಿನ ಪ್ರಪ್ರಥಮ ಮ್ಯಾಚ್ ಫ಼ಿಕ್ಸಿಂಗ್ ಘಟನೆ 30.4.1898ರಂದು ವಿಕ್ಟೋರಿಯ ಗ್ರೌಂಡ್ ನಲ್ಲಿ ನಡೆದ ಫ಼ುಟ್ಬಾಲ್ ಟೆಸ್ಟ್ ಮ್ಯಾಚ್ ನಲ್ಲಿ ಜರುಗಿತು! 1999ರಲ್ಲಿ ಭಾರತ- ದ.ಆಫ್ರಿಕ ನಡುವಣ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯಗಳಲ್ಲಿ ಮ್ಯಾಚ್‌ ಫಿಕ್ಸಿಂಗ್ ಬೆಟ್ಟಿಂಗ್ ಹಗರಣ ಪ್ರಾರಂಭವಾಗಿ, ಹ್ಯಾನ್ಸಿಕ್ರೋನೆ ತಪ್ಪೊಪ್ಪಿಕೊಂಡು ನೀಡಿದ ಹೇಳಿಕೆ ಅನ್ವಯ ಆತನ ಜತೆಗೆ ಹರ್ಶಲ್‌ ಗಿಬ್ಸ್ ನಿಕಿಬೋಜ್ ಸೇರಿದಂತೆ ಮಹಮದ್‌ ಅಜರುದ್ದೀನ್ ಅಜಯ್‌ ಜಡೇಜ ಹಾಗೂ ಪಾಕಿಸ್ತಾನದ ಸಲೀಮ್‌ ಮಲಿಕ್ ಅವರುಗಳನ್ನು 4 ವರ್ಷ ಕಾಲ ಎಲ್ಲಾ ತರಹದ ಕ್ರಿಕೆಟ್ ಪಂದ್ಯಗಳಿಂದ ಬ್ಯಾನ್ ಮಾಡಿದ ಶಿಕ್ಷೆ ವಿಧಿಸಲಾಯ್ತು!

1981ರ ‘ಆಶಸ್‌ ಕಪ್’ ಕ್ರಿಕೆಟ್ ಸರಣಿ ಪಂದ್ಯದಲ್ಲಿ ಇಂಗ್ಲೆಂಡ್- ಆಸ್ಟ್ರೇಲಿಯ ತಂಡದ ಕೆಲವು ಆಟಗಾರರು ಸಿಕ್ಕಿಬಿದ್ದು ದಂಡ ತೆರುವ ಜತೆಗೆ ಶಿಕ್ಷೆಯನ್ನೂ ಅನುಭವಿಸಿದ್ದು ದುರಂತ ಇತಿಹಾಸ! 1994ರ ಶ್ರೀಲಂಕ ಪ್ರವಾಸದಲ್ಲಿದ್ದ ಶೇನ್ ವಾರ್ನ್ ಮತ್ತು ಮಾರ್ಕ್‌ ವಾವ್ ಜೂಜು ಬುಕ್ಕಿಯೊಬ್ಬನಿಂದ ಹಣ ಪಡೆದುದು ರುಜುವಾತಾಗಿ 2 ವರ್ಷ ಬ್ಯಾನ್ ಹಾಗೂ ಸಾವಿರಾರು ಡಾಲರ್ ದಂಡ ತೆತ್ತರು. ಪಿಚ್ ಟ್ಯಾಂಪರಿಂಗ್ ಹಗರಣಗಳೂ ಸಾಕಷ್ಟಿವೆ. ಉದಾಹರಣೆ ಶ್ರೀಲಂಕಾ, ಆಸ್ಟ್ರೇಲಿಯ, ಇಂಗ್ಲೆಂಡ್ ತಂಡಗಳು 2016, 2017, 2018ರಲ್ಲಿ ಆಡಿದ ಟೆಸ್ಟ್, ಏಕದಿನ ಪಂದ್ಯಗಳಲ್ಲಿ ಪಿಚ್ ಫಿಕ್ಸಿಂಗ್ ಬೆಟ್ಟಿಂಗ್‌ನಿಂದಾಗಿ 9 ಆಟಗಾರರು ಟೂರ್ನಿಯಿಂದ ಡಿಸ್ಮಿಸ್ ಆಗಿದ್ದಕ್ಕೆ ಕಾರಣ ಐಸಿಸಿಯು ಇದನ್ನು ಗಂಭೀರವಾಗಿ ಪರಿಗಣಿಸಿ ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮದಿಂದ. ತತ್ಪರಿಣಾಮ ಅಂತಾರಾಷ್ಟ್ರ ಮಟ್ಟದಲ್ಲಿ ಬೆಟ್ಟಿಂಗ್ ಮ್ಯಾಚ್‌ ಫಿಕ್ಸಿಂಗ್ ದಂಧೆಯು ಸಧ್ಯಕ್ಕೆ ಇಲ್ಲವಾಗಿದೆ.

ಐಸಿಸಿ ಸಂಸ್ಥೆಯಂತೆ ಐಪಿಎಲ್ ಕೂಡ ಶಿಸ್ತು ಕ್ರಮ ಕೈಗೊಳ್ಳುವಲ್ಲಿ ಏಕೆ ವಿಫಲವಾಯ್ತು?! ಇದಕ್ಕೆ ಪ್ರಮುಖ ಕಾರಣ ದುರಾಸೆ, ದಾಕ್ಷಿಣ್ಯ! ಇನ್ನಾದರೂ ಪ್ರೇಕ್ಷಕರಿಗೆ ಮತ್ತು ಪ್ರತಿಭಾವಂತ ಆಟಗಾರರಿಗೆ ನ್ಯಾಯ ದೊರಕಿಸಿಕೊಡಲು ಇವರು ಬಿಸಿಸಿಐ ನೆರವು ಪಡೆದು ಎಲ್ಲ ಜೂಜು ಬುಕ್ಕೀಗಳನ್ನೂ ಮುಲಾಜಿಲ್ಲದೆ [ಸೆರೆ]ಮನೆಗೆ ಕಳಿಸುವಲ್ಲಿ ಸಂಬಂಧಪಟ್ಟ ಐಪಿಎಲ್‌ ಪದಾಧಿಕಾರಿಗಳು ಸೂಕ್ತ ಕಾನೂನು ಕ್ರಮ ಕೈಗೊಳ್ಳುವರೆ? ದೇಶೀಯ ಆಟಗಾರರ ಜತೆಗೆ ಅಂತಾರಾಷ್ಟ್ರ ಆಟಗಾರರನ್ನು ಸೇರಿಸಿ ನಡೆಸುವ ಐಪಿಎಲ್ ಪಂದ್ಯಾವಳಿಯಲ್ಲಿ ಕನಿಷ್ಠ ಘನತೆ ಗೌರವ ನೈತಿಕತೆ ನಿರೀಕ್ಷಿಸುವುದು ನ್ಯಾಯವಲ್ಲವೆ?

ಪ್ರಪಂಚದಲ್ಲೆ ಮೊಟ್ಟ ಮೊದಲು ಪ್ರಾರಂಭವಾದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಲೋಭಿ ಫ಼್ರಾಂಚೈಸಿಗೆ ಗಿರವಿ ಇಟ್ಟು ‘ಜೂಜು’ ಆಗಿಸಿದ್ದು ಯಾವ ಧರ್ಮ? ಕೇವಲ ಕ್ರೀಡೆಯನ್ನಾಗಿ ಮಾತ್ರ ಪರಿಗಣಿಸಬೇಕಾದ್ದು ಪ್ರತಿಯೊಬ್ಬನ ಕರ್ತವ್ಯ ಅಲ್ಲವೆ? ಐಪಿಎಲ್‌ ಅನ್ನು ಕಪಿಮುಷ್ಠಿಯಲ್ಲಿ ಇಟ್ಟುಕೊಂಡವರು ಆಡಿದ್ದೇ ಆಟ ಮಾಡಿದ್ದೇ ಮಾಟ! ಇವರಿಗೆ ಹೇ[ಕೇ]ಳೋರು, ಶಿಕ್ಷೆ ಕೊಡೋರು, ಬಿಗಿ ಕ್ರಮ ಜರುಗಿಸೋರು, ಯಾರೂ ಇಲ್ಲವೆ?

ಇಂಥ ಕೆಟ್ಟದಂಧೆಯ ಜೂಜು ಹಗರಣದ ಬಗ್ಗೆ ನಿರ್ಮಿಸಿದ ಹಿಂದಿ ಸಿನಿಮಾಗಳು:-2008ರಲ್ಲಿ ‘ಜನ್ನತ್’ 2009ರಲ್ಲಿ ‘99’ , 2015ರಲ್ಲಿ ‘ಕ್ಯಾಲೆಂಡರ್‌ ಗರ್ಲ್ಸ್’ 2016ರಲ್ಲಿ ‘ಅಜ಼ರ್’ 2018ರಲ್ಲಿ ‘ಇನ್‌ಸೈಡ್‌ ಎಡ್ಜ್’ ಮುಂತಾದವು. ಗ್ಯಾಂಬ್ಲಿಂಗ್ ಪೆಡಂಭೂತದ ಕ(ವ್ಯ)ಥೆಯನ್ನ ವಿವರವಾಗಿ ತೋರಿಸುತ್ತವೆ. ಹಿಂದೆ ಇದ್ದಂತೆ ಈಗ ಸಭ್ಯರ ಆಟವಾಗಿ ಉಳಿದಿಲ್ಲ ಕ್ರಿಕೆಟ್?! ಮ್ಯಾಚ್ ಫಿಕ್ಸಿಂಗ್ ರಕ್ಕಸನ ದರ್ಬಾರ್ ಮುಗಿವ ಸೂಚನೆಯೇ ಕಾಣುತ್ತಿಲ್ಲ.? ಲಾಸ್ಟ್ ಬಟ್ ನಾಟ್ ಲೀಸ್ಟ್ ಒಪಿನಿಯನ್:- Any Game must be a SPORT & not a GAMBLING. PLAYER shall not become GAMBLER!

ಅದ್ಭುತ ಆಶ್ಚರ್ಯದ ಅಂಕಿ ಅಂಶವನ್ನು ನೋಡಿದ್ದೇ ಆದರೆ *ಜಗತ್ತಿನಲ್ಲೆ ಅತಿಹೆಚ್ಚು ಕ್ರಿಕೆಟ್ ವೀಕ್ಷಕ, ಪ್ರೇಕ್ಷಕ ಅಭಿಮಾನಿಗಳಿರುವ ದೇಶ –ಭಾರತ. *ಇಡೀಭಾರತದಲ್ಲಿ ಅತಿಹೆಚ್ಚು ಕ್ರಿಕೆಟ್ ಪ್ರೇಕ್ಷಕ ಅಭಿಮಾನಿಗಳಿರುವ ರಾಜ್ಯ –ಕರ್ನಾಟಕ.  *ಪ್ರಪಂಚದ ಅತ್ಯಂತ ಶ್ರೀಮಂತ ಸರ್ಕಾರಿ ಸ್ವಾಮ್ಯದ ಕ್ರಿಕೆಟ್ ಬೋರ್ಡ್ –ಬಿಸಿಸಿಐ. *ಅತ್ಯಂತ ಹೆಚ್ಚು ಬೆಟ್ಟಿಂಗ್‌ದಂಧೆ-ಆದಾಯದ ಖಾಸಗಿ ಕ್ರಿಕೆಟ್ ಸಂಸ್ಥೆ –ಐಪಿಎಲ್. ಇಡೀ ಭಾರತದಲ್ಲಿ ಅತಿಹೆಚ್ಚು ಕ್ರಿಕೆಟ್ ಬೆಟ್ಟಿಂಗ್ ನಡೆವ, ಆದಾಯ ಕೊಡುವ ರಾಜ್ಯ –ಕರ್ನಾಟಕ. *ಪ್ರತಿವರ್ಷವು ಐಪಿಎಲ್‌ನ ಒಟ್ಟು ಆದಾಯದ ಶೇ.35ರಷ್ಟು ದೊರಕಿಸಿಕೊಡುವ ಟೀಮ್ –ಆರ್.ಸಿ.ಬಿ.!

ಈ ಕಾರಣಕ್ಕೇನೋ ಆರ್‌ಸಿಬಿ ತಂಡವನ್ನು ಹೆಚ್ಚುಬಾರಿ(ಸೆಮಿ)ಫ಼ೈನಲ್ ಹಂತಕ್ಕೆ ಮಾತ್ರ ತಲುಪಿಸುವ ತಂತ್ರಗಾರಿಕೆ ಈ ಜೂಜು ಭೂತದ ಕಪಿಮುಷ್ಠಿಯಲ್ಲಿ ಸಿಲುಕಿತ್ತೇನೋ? 18 ವರ್ಷ ಪರ್ಯಂತ ಆರ್‌ಸಿಬಿ ತಂಡದಿಂದ ಅತಿಹೆಚ್ಚು ಲಾಭ ಗಳಿಸಬೇಕೆಂಬುದು ಪ್ರಾರಂಭದಲ್ಲೆ ನಿರ್ಧಾರವಾಗಿತ್ತೇನೋ?! ಯಾರು ಯಾವಾಗ ಹೇಗೆ ಔಟ್ ಆಗಬೇಕು ಅಥವ ಬಾಲ್ ಎಸೆಯಬೇಕು ಎಂಬುದನ್ನು ‘ಸನ್ನೆ’ ಗಳಿಂದ ಸೂಚಿಸಲಾಗುತ್ತದೆಯೇನೊ?! 2009, 2011 ಮತ್ತು 2016ರಲ್ಲಿ ಶೇ.100ರಷ್ಟು ‘ವಿನ್ನರ್’ ಆಗಬೇಕಾಗಿದ್ದ ಬೆಸ್ಟ್ ಆರ್.ಸಿ.ಬಿ. ತಂಡವನ್ನು ‘ರನ್ನರ್‌ಅಪ್’ ಆಗಿಸಿ ಗಳಿಸಿದ ನಿವ್ವಳ ಲಾಭ ದೊಡ್ಡಮಟ್ಟದಲ್ಲಿದೆ.

ಅದು ಅನುಕ್ರಮವಾಗಿ  ರೂ.3570ಕೋಟಿ, ರೂ.4250 ಕೋಟಿ ಹಾಗೂ 6580 ಕೋಟಿ! 2025ರಲ್ಲಿ ಆರ್.ಸಿ.ಬಿ.ತಂಡವನ್ನು ಗೆಲ್ಲಿಸಲೇಬೇಕೆಂದು ಈ ಮೊದಲೇ ನಿರ್ಧಾರವಾಗಿತ್ತೆ..? ಹಾಗೂ ಒಂದುವೇಳೆ ಆರ್.ಸಿ.ಬಿ. ಸೋತಿದ್ದರೆ, ಪೆಡಂಭೂತ ಜೂಜುಕಟ್ಟೆಗೆ ರೂ.1260 ಕೋಟಿ ನಷ್ಟವಾಗುತ್ತಿತ್ತೆ..? ಆರ್‌ಸಿಬಿ 2021ರಲ್ಲಿ ಐಪಿಎಲ್ ‘ವಿನ್ನರ್’ ಆಗಿದ್ರೆ ಬರುವ ಲಾಭ ರೂ.2500 ಕೋಟಿ? ‘ರನ್ನರ್‌ಅಪ್’ ಆದರೆ ಬರುವ ಆದಾಯ ರೂ.5500 ಕೋಟಿ? ‘ಗ್ಯಾಂಬ್ಲಿಂಗ್ ಘೋಸ್ಟ್’ ಏನು ಮಾಡಿತು?ಎಂಬುದು ಜಗತ್ತಿಗೇ ಗೊತ್ತು!

ಕ್ರೀಡಾ ಸುದ್ದಿ, ಲೇಖನಗಳಿಗಾಗಿ ಇದರ ಮೇಲೆ ಕ್ಲಿಕ್ ಮಾಡಿ…

admin
the authoradmin

22 ಪ್ರತಿಕ್ರಿಯೆಗಳು

ನಿಮ್ಮದೊಂದು ಉತ್ತರ

Translate to any language you want