District

ಜೆಸಿಐ ನೂತನ ಪದಾಧಿಕಾರಿಗಳ ಪದಗ್ರಹಣ.. ಜೆಸಿಐ ತುಮಕೂರು ಅಧ್ಯಕ್ಷರಾಗಿ ಮಮತಾ ರಾಜ್

ತುಮಕೂರು: ಜೆಸಿಐ ತುಮಕೂರು ಮೆಟ್ರೋ ಘಟಕದ 35ನೇ ವರ್ಷದ ಪದವಿ ಸ್ವೀಕಾರ ಸಮಾರಂಭ ನಡೆದು ಜೆಸಿಐ ತುಮಕೂರು ಅಧ್ಯಕ್ಷರಾಗಿ ಮಮತಾ ರಾಜ್, ಕಾರ್ಯದರ್ಶಿಯಾಗಿ ಸುನೀತ್ ಆರ್ ಅವರು ತಮ್ಮ ತಂಡದೊಂದಿಗೆ ಅಧಿಕಾರ ವಹಿಸಿಕೊಂಡರು.

ಜೆಸಿಐ ವಲಯ 14ರ ಅಧ್ಯಕ್ಷ ಪ್ರಜ್ವಲ್ ಜೈನ್, ಉಪಾಧ್ಯಕ್ಷ ದರ್ಶನ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಹಾಗೂ ಜೆಸಿ ತುಮಕೂರು ಮಾಜಿ ಅಧ್ಯಕ್ಷ ಎನ್.ನರಸಿಂಹರಾಜು ಅತಿಥಿಯಾಗಿ ಭಾಗವಹಿಸಿದ್ದರು.

ಜ್ಯೂನಿಯರ್ ಚೇಂಬರ್ ಇಂಟರ್‌ನ್ಯಾಷನಲ್ (ಜೆಸಿಐ) ಅಂತರಾಷ್ಟ್ರೀಯ ಸಂಸ್ಥೆಯಾಗಿದ್ದು, 120ಕ್ಕೂ ಹೆಚ್ಚು ದೇಶಗಳಲ್ಲಿ ಘಟಕ ಹೊಂದಿದೆ. 34 ವರ್ಷಗಳ ಹಿಂದೆ ತುಮಕೂರಿನಲ್ಲಿ ಪ್ರಾರಂಭವಾದ ಜೆಸಿ ಆಗಿನಿಂದ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ಯುವ ನಾಯಕರನ್ನು ತಯಾರು ಮಾಡುತ್ತಿರುವ ಸಂಸ್ಥೆಯಾಗಿದೆ.

ಜೆಸಿ ರಾಷ್ಟ್ರೀಯ ಮಾಜಿ ಅಧ್ಯಕ್ಷ ಟಿ.ವಿ.ಎನ್.ಮೂರ್ತಿ, ಮುಖಂಡರಾದ ಸಿ.ನಾಗರಾಜ್, ಡಾ.ಶಿವಕುಮಾರಸ್ವಾಮಿ, ರುದ್ರಪ್ರಸಾದ್, ಬದರೀಶ್, ವೇಣುಗೋಪಾಲ್, ಯಶಸ್ವಿನಿ, ಕಲಾ ಮೊದಲಾದವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

admin
the authoradmin

Leave a Reply