LatestMysore

ರಾಜ್ಯದಲ್ಲಿ ಮತ್ತೊಮ್ಮೆ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ: ಜಿ.ಡಿ.ಹರೀಶ್ ಗೌಡ

ಹುಣಸೂರು(ಹಿರೀಕ್ಯಾತನಹಳ್ಳಿಸ್ವಾಮಿಗೌಡ): 2028ಕ್ಕೆ ಮತ್ತೊಮ್ಮೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ಬರುವುದು ಖಚಿತ ಎಂದು ಶಾಸಕ ಜಿ.ಡಿ.ಹರೀಶ್ ಗೌಡ ಭವಿಷ್ಯ ನುಡಿದರು.

ಹುಣಸೂರಿನ ಮುನೇಶ್ವರ ಕಾವಲ್ ಮೈದಾನದಲ್ಲಿ ನಡೆದ ಜನರೊಂದಿಗೆ ಜನತಾದಳ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜಕೀಯವಾಗಿ ಜನ್ಮ ನೀಡಿದ ಹುಣಸೂರು ಜನತೆಯ ಋಣ ತೀರಿಸುತ್ತೇನೆ ನಾನು ರಾಜಕಾರಣ ಮಾಡುವ ತನಕ ನಿಕಲ್ ಕುಮಾರಸ್ವಾಮಿ ಅವರ ಜೊತೆ ರಾಜಕಾರಣ ಮಾಡುತ್ತೇನೆ 2028ರ ಚುನಾವಣೆಯಲ್ಲಿ ಹುಣಸೂರಿನಿಂದ ಜೆಡಿಎಸ್ ನಿಂದಲೇ ಸ್ಪರ್ಧೆ ಮಾಡುತ್ತೇನೆ. ಕ್ಷೇತ್ರ ಬಿಟ್ಟು ಹೋಗುವ ಪ್ರಮಯವೇ ಇಲ್ಲ ನಾನು ಹುಣಸೂರು ಬಿಟ್ಟು ಹೋಗುವುದಿಲ್ಲ ಎಂದರು.ರಾಜ್ಯದಲ್ಲಿ ಮೈತ್ರಿ ಸರ್ಕಾರದಲ್ಲಿ ಎಚ್ ಡಿ ಕುಮಾರಸ್ವಾಮಿ ರವರು 26 ಸಾವಿರ ಕೋಟಿ ಸಾಲ ಮನ್ನ ಮಾಡಿದ ಕೀರ್ತಿ ಎಚ್ ಡಿ ಕುಮಾರಸ್ವಾಮಿ ಸಲ್ಲುತ್ತದೆ ಎಂದರು.

ಸಾಲ ಮನ್ನಾ ಮಾಡಲು ಯಾವ ಜಾತಿ ಧರ್ಮ ಪಕ್ಷ ನೋಡದೆ ಪ್ರತಿಯೊಬ್ಬ ರೈತರ ಸಾಲ ಮನ್ನಾ ಮಾಡಿದ ಏಕೈಕ ಮುಖ್ಯಮಂತ್ರಿ ಎಚ್ ಡಿ ಕೆ.  ಮೈಸೂರು ಜಿಲ್ಲೆಯಲ್ಲಿ 460 ಕೋಟಿ ರೂ ಸಾಲ ಮನ್ನಾ ವಾಗಿದೆ ಹುಣಸೂರು ತಾಲೂಕಿನಲ್ಲಿ 3ಸಾವಿರ ಕೋಟಿ ಸಾಲ ಮನ್ನವಾಗಿದೆ. ಹಿಂದೆ ಇದಕ್ಕೆ ಮೈಸೂರು ಡಿಸಿಸಿ ಬ್ಯಾಂಕ್ 28  ಕೋಟಿ ಸಾಲ ನೀಡುತ್ತಿತ್ತು ಸಾಲ ಮನ್ನಾ ಮಾಡುವ ಸಮಯದಲ್ಲಿ ನಾನು ಡಿಸಿಸಿ ಬ್ಯಾಂಕ್ ಅಧ್ಯಕ್ಷನಾಗಿದ್ದಾಗ 150 ಕೋಟಿ ಸಾಲ ನೀಡಿದೆ ಆದ್ದರಿಂದ ರೈತರ ಸಾಲ ಮನ್ನಾವಾಯಿತು.

ರಾಜ್ಯದಲ್ಲಿ ಮತ್ತೊಮ್ಮೆ ರೈತ ಪರ ಸರ್ಕಾರ ಅಧಿಕಾರಕ್ಕೆ ಬರಬೇಕು. ಯಾವತ್ತೂ ಅಧಿಕಾರದ ಹಿಂದೆ ನಿಖಿಲ್ ಕುಮಾರಸ್ವಾಮಿಯವರು ಹೋದವರಲ್ಲ ಪಕ್ಷದ ಉಳಿವಿಗಾಗಿ ಸ್ಪರ್ಧೆ ಮಾಡಿದ ನಿಖಿಲ್ ಹಿಂಭಾಗದಿಂದ ರಾಜಕಾರಣ ಮಾಡದೆ ಪಕ್ಷದ ಉಳಿವಿಗಾಗಿ ಸ್ಪರ್ಧೆ ಮಾಡಿದರು. ಸೋತರು ಚಿಂತೆಗೆಡದೆ ಪಕ್ಷದ ಸಂಘಟನೆಗಾಗಿ ಈಗಾಗಲೇ 58 ತಾಲೂಕುಗಳಲ್ಲಿ ಜನರೊಂದಿಗೆ ಜನತಾದಳ ಕಾರ್ಯಕ್ರಮ ಮಾಡಿ ಕಾರ್ಯಕರ್ತರಲ್ಲಿ ಪಕ್ಷದ ಸಂಘಟನೆ ಮಾಡಿ ಕಾರ್ಯಕರ್ತರಿಗೆ ಶಕ್ತಿ ತುಂಬುತ್ತಿದ್ದಾರೆ ಪಕ್ಷದ ಮುಖಂಡರು ಕಾರ್ಯಕರ್ತರು ಪಕ್ಷದ ಮುಖಂಡರನ್ನು ಕೈ ಬಲಪಡಿಸಬೇಕು ಕಾರ್ಯಕರ್ತರು ಬೆನ್ನಿಗೆ ಚೆನ್ನಾಗಿ ನಿಲ್ಲಬೇಕಾಗಿದೆ

ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಕಾರ್ಯಕರ್ತರು ಪಕ್ಷದ ಅಭ್ಯರ್ಥಿಯ ಗೆಲ್ಲಿಸಿ ಗೆಲುವಿಗೆ ಇಂದಿನಿಂದಲೇ ಸಜ್ಜಾಗಬೇಕು. ಹುಣಸೂರು ಕ್ಷೇತ್ರವು ಸರ್ವ ಜನಾಂಗದ ತೋಟದ ಕ್ಷೇತ್ರವಾಗಿದ್ದು ಸಹಕಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಲು ಹುಣಸೂರಿನ ಜನರು ಕಾರಣ. ನಂತರ ಡಿಸಿಸಿ ಬ್ಯಾಂಕ್ ಅವಿರೋಧಕವಾಗಿ ಆಯ್ಕೆಯಾಗಿ ಸಹಕಾರ ಕ್ಷೇತ್ರಕ್ಕೆ ಕಾಲಿಡಲು ಸಹಕಾರಿಯಾಯಿತು. ಹುಣಸೂರಿಯ ತಾಲೂಕಿನ ಜನತೆಯ ಋಣ ತೀರಿಸಲು ಸಾಧ್ಯವಿಲ್ಲ. ತಂಬಾಕು ಸಮಸ್ಯೆಯನ್ನು ಶೀಘ್ರದಲ್ಲೇ ಕುಮಾರಸ್ವಾಮಿಯವರ ನೇತೃತ್ವದಲ್ಲಿ ರೈತರ ನಿಯೋಗವನ್ನು ಕೇಂದ್ರ ಸಚಿವರ ಬಳಿ ತೆಗೆದುಕೊಂಡು ಹೋಗಿ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದುಎಂದರು.

ರಾಜ್ಯ ಯುವ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಜನರೊಂದಿಗೆ ಇದ್ದೇನೆ. ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ನಿಂತು ಪಕ್ಷದ ಸಂಘಟನೆ ಮಾಡುತ್ತಿದ್ದೇನೆ ಹೊರತು  ಕೇಂದ್ರದ ಮಂತ್ರಿ ರಾಜ್ಯದ ಮಾಜಿ ಮುಖ್ಯಮಂತ್ರಿ ಮಗ ಎಂಬ ಗರ್ಭವಿಲ್ಲ.  ನಾನೊಬ್ಬ ಸಾಮಾನ್ಯ ಕಾರ್ಯಕರ್ತ ನಿಮ್ಮ ನಿಮ್ಮಂತೆ ನಿಮ್ಮಂಥವರಲ್ಲೊಬ್ಬ ನಾನು  ಹುಣಸೂರು ಕ್ಷೇತ್ರದ ಶಾಸಕ ಜಿ.ಡಿ. ಹರೀಶ್ ಗೌಡ ಮತ್ತು ನನ್ನ ಸ್ನೇಹ ರಾಜಕಾರಣಕ್ಕೂ ಮೀರಿದಂತದ್ದು ಜನರ ನಾಡಿ ಮಿಡಿತವನ್ನು ಇಬ್ಬರು ತಿಳಿದುಕೊಂಡು ರಾಜಕಾರಣ ಜೀವನವನ್ನು ಆರಂಭಿಸಿದ ಹಂತವಾಗಿದೆ ಪಕ್ಷಕ್ಕೆ ನಿಷ್ಠೆ. ಇರಬೇಕು  25 ವರ್ಷ ಪೂರೈಸಿದ ಪಕ್ಷವಾಗಿದೆ ಈಗಾಗಲೇ ಒಂಬತ್ತು ಸಾವಿರ ಕಿಲೋ ಮೀಟರ್ ಪ್ರವಾಸ ಮಾಡಿ ಪಕ್ಷದ ಸಂಘಟನೆ ಮಾಡುತ್ತಿದ್ದೇವೆ.

ನಮ್ಮ ಪಕ್ಷದ ಹಿರಿಯರು ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ರವರು ಕೇಂದ್ರದ ಮಂತ್ರಿಯಾದರು ಕರ್ನಾಟಕದ ರೈತ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದಾರೆ ರೈತರು ಉಳಿಸುವುದಕ್ಕೆ ಜನತಾದಳ ಪಕ್ಷ ಉಳಿದಿದೆ ರೈತರು ಧೃತಿಗೆಡಬೇಡಿ. 5 ತಾಲೂಕುಗಳಲ್ಲಿ ಹೊಗೆ ಸೊಪ್ಪು ಬೆಳೆಯುತ್ತಿರುವ ರೈತರಗೆ ಬೆಲೆ ಇಳಿಕೆಯಾಗಿದೆ. ತಂಬಾಕು ಬೆಳೆಗಾರರ ಸಮಸ್ಯೆಯನ್ನು ಶೀಘ್ರ ಎಚ್‍ಡಿ ಕುಮಾರಸ್ವಾಮಿಯವರು ಕೇಂದ್ರ ವಾಣಿಜ್ಯ ಸಚಿವರೊಂದಿಗೆ ತಮ್ಮ ನೋವನ್ನು ಅರ್ಥ ಮಾಡಿಸುವ ಕೆಲಸ ಮಾಡಿ ಮುದೂಂದು ದಿನಗಳಲ್ಲಿ ಉತ್ತಮ ಬೆಲೆ ಸಿಗುವ ರೀತಿ ನೋಡಿಕೊಳ್ಳುವ ವಿಶ್ವಾಸವಿದೆ.

ಎಸ್ ಟಿ ಪಿ ಎಸ್ ನ 37 ಸಾವಿರ ಕೋಟಿ ಹಣವನ್ನು ಬೇರೆ ಗ್ಯಾರಂಟಿ ಯೋಜನೆಗಳಿಗೆ ಉಪಯೋಗಿಸುತ್ತಿದೆ. ಇದರಿಂದ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಇಟ್ಟ ಹಣ ಬೇರೆ ಕಡೆಗೆ ಬಳಕೆಯಾಗುತ್ತಿದೆ ಈಅನ್ಯಾಯ ಮಾಡುತ್ತಿರುವ ರಾಜ್ಯ ಸರ್ಕಾರ ವನ್ನ ಮುಂದಿನ ಚುನಾವಣೆಯಲ್ಲಿ ಕಿತ್ತೊಗೆಯಿರಿ  ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿಲ್ಲ. ರಾಜ್ಯದಲ್ಲಿ 2 ಲಕ್ಷದ 85 ಸಾವಿರ ಹುದ್ದೆಗಳು ಖಾಲಿ ಇದ್ದರೂ ಭರ್ತಿ ಮಾಡದ ಸರ್ಕಾರ ಇದರ ವಿರುದ್ಧ ವಿದ್ಯಾರ್ಥಿಗಳು ಧಾರವಾಡದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ ಇವರಲ್ಲಿ ರೈತಪಿ ವರ್ಗದ ಮಕ್ಕಳೇ ಹೆಚ್ಚು.

ಜೊತೆಗೆ ಗಂಗಾ ಕಲ್ಯಾಣ ಯೋಜನೆಯನ್ನು ಕಾಗದದಲ್ಲಿ ಮಾತ್ರ ಮಂಜೂರು ಮಾಡಿ ಹಣವಿಲ್ಲ ಎಂದು ಸರ್ಕಾರ ಯೋಜನೆ ಗೆ ಚಾಲನೆ ನೀಡುತ್ತಿಲ್ಲ. ರೈತರ ಜೊತೆ ಪ್ರತಿ ಹಂತದಲ್ಲೂ ಕಾಂಗ್ರೆಸ್ ಸರ್ಕಾರ ಆಟವಾಡುತ್ತಿದೆ ಮುಂದೊಂದು ದಿನ ಸರ್ಕಾರವನ್ನು ಕಿತ್ತೊಗೆಯುವ ದಿನ ಹತ್ತಿರ ಬರುತ್ತಿದ್ದೇವೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದರು.

ಸಭೆಯಲ್ಲಿ ಮೈಸೂರು ಜೆಡಿಎಸ್ ಜಿಲ್ಲಾಧ್ಯಕ್ಷ ಮಾಜಿ ಶಾಸಕ ಅಶ್ವಿನ್ ಕುಮಾರ್, ಮಾಜಿ ಶಾಸಕ ಸಾರಾ ಮಹೇಶ್. ಕೆ ಮಹದೇವ್ , ವಿಧಾನ ಪರಿಷತ್ ಸದಸ್ಯ ಮಂಜೇಗೌಡ, ಮೈಸೂರು ನಗರ ಜೆಡಿಎಸ್ ಅಧ್ಯಕ್ಷ ಎಸ್‌ಬಿಎಂ ಮಂಜು, ಮಾಜಿ ಮೇಯರ್ ರವಿಕುಮಾರ್, ಮೈಸೂರು ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಕೆಂಪನಹಳ್ಳಿ ಕುಮಾರ್, ಮಾಜಿ ನಿರ್ದೇಶಕ ಪ್ರಸನ್ನ, ಪಕ್ಷದ ಮುಖಂಡರಾದ ರಂಜಿತಾ ಚಿಕ್ಕಮಾದು, ಹರವೆ ಶ್ರೀಧರ್, ಗಣೇಶ್ ಗೌಡ, ಫಜಾಲ್ ವುಲ್ಲಾ, ಗೌರಿಶಂಕರ್, ಸತೀಶ್ ಪಾಪಣ್ಣ. ಶರವಣ, ಬಸವಲಿಂಗಯ್ಯ, ಕಿರಂಗೂರು ಬಸವರಾಜ್, ಸೇರಿದಂತೆ ಹಲವಾರು ಮುಖಂಡರು ವೇದಿಕೆಯ ಮೇಲೆ ಇದ್ದರು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಬಿಳಿಕೆರೆಯಿಂದ ಹುಣಸೂರಿನವರೆಗೆ ನಿಖಿಲ್ ಕುಮಾರಸ್ವಾಮಿಯವರನ್ನು ಬೈಕ್ ರಾಲಿ ಮೂಲಕ ಕರೆತಂದು ಹುಣಸೂರಿನ ಡಿ ದೇವರಾಜು ಅರಸು ಪ್ರತಿಮೆಗೆ ನಿಖಿಲ್ ಕುಮಾರಸ್ವಾಮಿ ಅವರು ಮಾಲಾರ್ಪಣೆ ಮಾಡಿದ ನಂತರ ವಿವಿಧ ಕಲಾ ತಂಡದೊಂದಿಗೆ ಹುಣಸೂರಿನ ಪಟ್ಟಣದಲ್ಲಿ ಮೆರವಣಿಗೆ ಮೂಲಕ ಮುನೇಶ್ವರ ಕಾವಲ್ ಮೈದಾನದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಅದ್ದೂರಿ ಮೆರವಣಿಗೆಯೊಂದಿಗೆ ಕರೆತರಲಾಯಿತು. ವೇದಿಕೆಯಲ್ಲಿ ನಿಖಿಲ್ ಕುಮಾರಸ್ವಾಮಿ ರವರಿಗೆ ಟಗರು ಮೀರಿ, ಕುರಿಕಂಬಳಿ ನೀಡಿ ಕಾರ್ಯಕರ್ತರು ಗೌರವಿಸಿದರು.

admin
the authoradmin

Leave a Reply

Translate to any language you want